ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಈ ಪರ್ವ ಭಾವಸಾಗರ

November 13, 2006 - 2:18pm — Sunil Jayaprakash

ನೆನ್ನೆಯಷ್ಟೇ, ಎಸ್.ಎಲ್.ಭೈರಪ್ಪನವರ ಪರ್ವ ಕಾದಂಬರಿಯನ್ನು ಓದಿ ಮುಗಿಸಿದೆ.

ಮಹಾಭಾರಾತವನ್ನು ಆದರ್ಶದ ರೀತಿ ತಿಳಿದಿರುವವರು ಒಂದುವೇಳೆ ಈ ಕಾದಂಬರಿಯನ್ನು ಓದಿದರೆ ಕೆಲಹೊತ್ತು ತಳಮಳಗೊಂಡು ಕಳವಳಪಡುವುದು ಸಹಜವೆ.

ಎಂತೆಂಥ ನಿಕೃಷ್ಟವಾದ ಮಾತುಗಳಿವೆ ಅದರಲ್ಲಿ. ಯಪ್ಪಾ, ಮಜಾ ಅಂದರೆ ಈ ಪರ್ವವನ್ನು ಓದುವಾಗ ನಮ್ಮ ಅರಿವಿಗೆ ಬರುವುದೇನಪ್ಪಾ ಎಂದರೆ ಯಾರಿಗೂ ಯಾರನ್ನು ಕಂಡರೂ ಆಗದು. ಇದ್ದುದರಲ್ಲಿ ಕೃಷ್ಣ -ಅರ್ಜನ ಹಾಗು ದ್ರೌಪದಿ- ಭೀಮ ಇಬ್ಬರೇ ಪರವಾಗಿಲ್ಲ. ಇಡೀ ಕಾದಂಬರಿಯಲ್ಲಿ ಪದೇ ಪದೇ ಕಾಣಲು ಸಿಗುವ ಪದಗಳೆಂದರೆ ದಾಸಿ, ಆರ್ಯ, ಮತ್ಸರ, ಸುರೆ, ಧರ್ಮ, ವೇದ, ಯಾರು ಯಾರಿಗೆ ಎಷ್ಟೆಷ್ಟು ಮಕ್ಕಳು ಹೀಗೆ.

ಕಾದಂಬರಿ ಓದುತ್ತಿದ್ದಾಗ ನನಗೆ ತುಂಬಾ ನಗು ಬಂದು ಕೆಲವು ಸನ್ನಿವೇಶಗಳೆಂದರೆ,

೧. ದ್ರೌಪದಿ, ಮಕ್ಕಳೊಡನೆ ಮಾತನ್ನಾಡುವಾಗ, "ಆರ್ಯ ಧರ್ಮ ಎಂದರೇನು" ಎನ್ನುವ ಮಾತು ಬಂದಾಗ ಅವಳು ನೀಡುವ ಉತ್ತರ, ಸಖತ್ತಾಗಿದೆ, ಓದಿ ನೋಡಿ. ಅವಳ ಉತ್ತರ ಕೇಳಿದೊಡನೆ ಎಲ್ಲರೂ ಗಂಭೀರವದನರಾಗುತ್ತಾರೆ.
೨. ಧೃತರಾಷ್ಟ್ರ ತನ್ನ ದಾಸಿಗೆ ಎಷ್ಟು ವಯಸ್ಸು ಎಂದು ಕೇಳಿದಾಗ, ಅವಳು ಅರವತ್ತೈದು ಎನ್ನುವುದು.
೩. ದ್ರೋಣನು ಭೀಷ್ಮನನ್ನು, ಮನಸ್ಸಿನೊಳಗೇ, ಪದೇ ಪದೇ ಹಳಿಯುವುದು .

೪. ಭೀಷ್ಮನನ್ನು ಮುದುಕ ಮುದುಕ ಅಂತ ಕೆಲವರು ಕರೆಯುವುದು.
೫. ----ಮಗನೆ ಅಂತ ಮಹಾಭಾರತದ ಒಂದು ಆದರ್ಶ ಪಾತ್ರ ಮತ್ತೊಂದು ಆದರ್ಶ ಪಾತ್ರಕ್ಕೆ ಬಯ್ಯುವದು.

ನಾನು ಈ ಹಿಂದೆ, ಮಹಾಭಾರತದ ಮಹಾ ಪಾತ್ರಗಳು ಎಂಬ ಕಥೆ ಪುಸ್ತಕವನ್ನು ಓದಿದ್ದೆ. ಅಲ್ಲಿ ಪಾತ್ರಗಳನ್ನು ಕೇವಲ ಆದರ್ಶಗಳನ್ನಾಗಿ ನೋಡಲು ಮಾತ್ರ ಸಾಧ್ಯವಾಗಿತ್ತು. ಆದರೆ ಇಲ್ಲಿ ಅವುಗಳ ಆದರ್ಶದ ಜೊತೆಗೆ ಅವರ ಕಲ್ಯಾಣ ಗುಣಗಳನ್ನೂ Coolನೋಡಲು(ಓದಲು) ಸಾಧ್ಯವಾಯಿತು.Laughing

ಇಡೀ ಪುಸ್ತಕದಲ್ಲಿ ಬಹುಶಃ ಬೈಸಿಕೊಳ್ಳದೆ, ಇರುವವನು ಭೀಮನು ಮಾತ್ರವೇ ಅನ್ನಿಸುತ್ತೆ.

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 629 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 14, 2006 - 3:02pm — Sunil Jayaprakash

ರಾಮಾಯಣದ ರಸ್ಯರಹಸ್ಯಾರ್ಥಗಳು

Sunil Jayaprakash's picture

ಕಾಕತಾಳೀಯವೋ ಏನೋ, ನೆನ್ನೆ ಹೀಗೊಂದು ಪ್ರಸಂಗ ನಡೆಯಿತು. ನೆನ್ನೆ "ಗೋಖಲೆ ಸಾರ್ವಜನಿಕ ವಿಚಾರಣ ಸಂಕೀರ್ಣದಲ್ಲಿ" ಕಾಯುತ್ತಿದ್ದಾಗ, ಅಲ್ಲಿ, "ರಾಮಾಯಣದ ರಸ್ಯ ರಹಸ್ಯಾರ್ಥಗಳು" ಎಂಬುದರ ವಿಚಾರವಾಗಿ ಪ್ರವಚನ ನಡೆಯುತ್ತಿತ್ತು (ನಿಜಹೇಳಬೇಕೆಂದರೆ ೦೩ ಡಿಸೆಂಬರ್ ೨೦೦೬ರವರೆಗೆ ಈ ಪ್ರವಚನ ಮಾಲೆಯಿದೆ).

ಅಲ್ಲಿ, "ಅಧಿಕಾರ ಎನ್ನುವುದು ಮನುಷ್ಯನನ್ನು ಏನು ಮಾಡಲು ಬೇಕಾದರೂ ಪ್ರಚೋದಿಸುತ್ತದೆ" ಎಂಬುದಕ್ಕೆ ಕೈಕೇಯಿ ದಶರಥನನ್ನು ಉದಾಹರಣೆಯಾಗಿ ನೀಡುತ್ತಾ ಪ್ರವಚನ ಮಾಡುವವರು ನೆರೆದಿದ್ದವರಿಗೆ ಹೇಳುತ್ತಿದ್ದರು. ಕೈಕೇಯಿಗೂ, ದಶರಥನಿಗೂ ೪೦ ವರ್ಷಗಳ ಅಂತರವಂತೆ.Surprised ಹೀಗೆ ಮುಂತಾಗಿ ಮಾತನಾಡುವಾಗ, ಮಹಾಭಾರತದ ಗಾಂಧಾರಿ ಮತ್ತು ಧೃತರಾಷ್ಟ್ರನ ಪ್ರಸ್ತಾಪವೂ ಬಂತು.

ಪರ್ವ ಕಾದಂಬರಿಯಲ್ಲಿ, ಗಾಂಧಾರಿಯು ತಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಕ್ಕೆ ನೀಡುವ ಕಾರಣವನ್ನು, ಪ್ರವಚನಕಾರರು ತಪ್ಪು ಎಂದು ಹೇಳಿದರು. ಮಹಾಭಾರತದಲ್ಲಿ ಗಾಂಧಾರಿಯು ಧೃತರಾಷ್ಟ್ರನನ್ನು ಮದುವೆಯಾಗುವಾಗ ತಾನು ಸ್ವ-ಇಚ್ಚೆಯಿಂದ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳತ್ತೇನೆ ಅಂತ ನುಡಿಯುವಳಂತೆ. ಆದರೆ ಪರ್ವದಲ್ಲಿ ಗಾಂಧಾರಿಯು ಏನು ಹೇಳುತ್ತಾಳೆ ಎಂಬುದನ್ನು ನೀವೇ ಓದಿನೋಡಿ.

ಕಾಕತಾಳೀಯವೆಂದರೆ ಮೊನ್ನೆಯಷ್ಟೇ ಪರ್ವ ಕಾದಂಬರಿಯನ್ನು ಓದಿ ಮುಗಿಸಿದ್ದೆ. ನೆನ್ನೆ ಪರ್ವವನ್ನು ಉದಾಹರಿಸುತ್ತಾ ಪ್ರವಚನಕಾರರು ಇದನ್ನು ತಪ್ಪು ಎಂದರು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅತ್ಯಾಧುನಿಕ ತಂತ್ರಜ್ಞಾನದ ಪಾಯಿಖಾನೆಗಳು
  • iPod ಸೂಕ್ಷ್ಮೋ - ಇನ್ವಿಸಿಯೋ ?
  • ಇನಿ ದನಿ
  • ಅ೦ತರ
  • ವಿಮರ್ಶೆ ಮತ್ತು ಮೀಮಾಂಸೆ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator