ನಿಜವಾಗಿಯೂ ಆದೆನೆ ನಾನಿಂದು ಮುಕ್ತ ಮುಕ್ತ ಮುಕ್ತಾ.ಆಆಆ....
ಇಲ್ಲ, ಇಲ್ಲ, ಇಲ್ಲ. ಸ್ಪಷ್ಟವಾಗಿ ಹೇಳಿಬಿಡುತ್ತೇನೆ ಮುಕ್ತ ಧಾರಾವಾಹಿ ಈಗಷ್ಟೇ ಮುಗಿದಿರಬಹುದು. ಮುಕ್ತ ಮುಗಿದ ನಂತರ ಬಹುಶಃ ಮೊದಲ ಬ್ಲಾಗ್ ಇದಾಗಿರಬಹುದು ಆದರೆ ನಿಜವಾಗಿಯೂ ಮುಕ್ತರಾದೆವೇ ನಾವುಗಳು ಇದರ ಮೋಡಿಯಿಂದ, ಖಡಾಖಂಡಿತವಾಗಿ ಮತ್ತೊಮ್ಮೆ ಹೇಳುವೆ ಇಲ್ಲ, ಇಲ್ಲ, ಇಲ್ಲ. ಇಡೀ ಧಾರಾವಾಹಿ ಹುಟ್ಟಿಸಿದ ಕುತೂಹಲ, ನೀಡಿದ ಆನಂದ, ಸಂತೋಷ ಇವುಗಳನ್ನು ಮರೆಯಲು ಸಾಧ್ಯವೇ ಇಲ್ಲ. ಮೂರು ವರ್ಷದಿಂದ ನಮ್ಮೆಲ್ಲರನ್ನೂ ಮೋಡಿ ಮಾಡಿ, ಇದೀಗಷ್ಟೇ ಮುಗಿದ "ಈ ಮುಕ್ತ" ತಂಡಕ್ಕೆ ನನ್ನ ಸವಿಯೊದಗು.
ಸರಿ ಯಾವುದೇ ಘಟನೆ ಅಥವಾ ಸನ್ನಿವೇಶ ಆದ ನಂತರ, ಅದರ ಒಡಕು ಕೆಡುಕುಗಳ ಬಗ್ಗೆ ಜನರು ಚರ್ಚಿಸಬೇಕು ಎಂಬ ಕಾರಣಕ್ಕಾಗಿ ಬ್ಲಾಗುತ್ತಿದ್ದೇನೆ. ಸುಮಾರು 687 ಕಂತುಗಳಲ್ಲಿ 600ನ್ನಾದರೂ ನಾನು ನೋಡಿದ್ದೇನೆ ಎಂದು ಹೇಳಿದರೆ ಅದು ನಂಬುವಂತಹ ಮಾತೇ ಬಿಡಿ. ಸುಧಾದಲ್ಲಿ ಪ್ರಕಟವಾಗುವ ವೀಕ್ಷಕರ ಪೆಟ್ಟಿಗೆಯಲ್ಲಿ ಮುಕ್ತ ಕುರಿತಾದ ಪತ್ರಗಳೇ ಹೆಚ್ಚಿರುತ್ತಿದ್ದವು. ಇವು ಧಾರಾವಾಹಿಯ ಜನಪ್ರಿಯತೆಗೆ ಸಾಕ್ಷಿ. ನಾಳೆಯಿಂದ 9 ಘಂಟೆಗೆ ಏನು ಮಾಡಬೇಕು ತಿಳಿಯುತ್ತಿಲ್ಲ.
ಸರಿ ಕಡೆಯ ಕಂತನ್ನು ನೋಡಲಾಗದಿದ್ದವರಿಗೆ ಏನಾಯಿತು ಎಂದು ಹೇಳಿಬಿಡುತ್ತೇನೆ.
ಆದದ್ದು ಇಷ್ಟು, ಹೇಮಗರಿ ಸ್ವಾಮೀಜಿಗಳು ಮತ್ತೆ ನಿರಂಜನ ಸತ್ಯದೇವನಾಗಿ ಬದಲಾಗಿ ಗೌರಿಯನ್ನು ಮದುವೆಯಾಗುತ್ತಾನೆ. ಹಾಗೆಯೇ ಅವರು(ನು) ಬಹಿರಂಗಪಡಿಸುವ ವಿಚಾರವೆಂದರೆ
ಅವರು(ನು) ಸ್ವಾಮೀಜಿಯಾಗಿದ್ದಾಗ, ಅಂದರೆ ಧರ್ಮಪೀಠದಲ್ಲಿ ಇರುವಾಗಲೇ ಗೌರಿಗೆ ಗುಟ್ಟಾಗಿ ಪ್ರೇಮಪತ್ರವನ್ನು ಬರೆದಿದ್ದಾಗಿ ಹೇಳುತ್ತಾರೆ(ನೆ).
ಮುಕ್ತ ತಂಡದ ಪ್ರತಿಯೊಬ್ಬರಿಗೂ ನನ್ನ ಕೋಟಿ ಕೋಟಿ ಸವಿಯೊದಗು. ಮೂರು ವರ್ಷ ನಮಗೆ ಒಳ್ಳೆಯ ವಸ್ತುವನ್ನು ನೀಡಿದ್ದಕ್ಕಾಗೆ ಮತ್ತೊಮ್ಮೆ ಸವಿಯೊದಗು.
ಏನು, ಸವಿಯೊದಗು ಎಂದರೆ ಏನು ಅಂತ ಕೇಳಿದಿರೆ - ಸರಿಯಾದ ಸಮಯದಲ್ಲಿ ಒದಗಿಬಂದ ಸಹಾಯವನ್ನು ನೆನಪಿಸಿಕೊಳ್ಳುವಾಗ ನನ್ನಲ್ಲಿರುವ ಭಾವ. ಇದು ಅಚ್ಚಕನ್ನಡ ಪದ.
ಸವಿಯೊದಗು = ಧನ್ಯವಾದಗಳು = Thank you.
ಧಾರಾವಾಹಿ ಮುಗಿದ ನಂತರ ಯೋಚಿಸುತ್ತಿದ್ದೇನೆ, ಧಾರಾವಾಹಿ ನಿಜವಾಗಿಯೂ ಗೆದ್ದಿತೋ ಅಥವಾ ಸೋತಿತೋ ಎಂದು. ನಿಮ್ಮ ನಿಮ್ಮ ಅಭಿಪ್ರಾಯಗಳೇನೋ ನನಗೆ ತಿಳಿಯದು. ಆದರೆ ನನ್ನ ಪ್ರಕಾರ ಮೇಲು ನೋಟಕ್ಕೆ ಇದು ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿದೆ ಎಂದು ಹೇಳಬಹುದಾದರೂ ಎರಡೇ ಎರಡು ದೃಷ್ಟಿಯಲ್ಲಿ ಧಾರಾವಾಹಿ ಸೋತಿದೆ ಎಂದು ನಾನು ಅಭಿಪ್ರಾಯ ಪಡುತ್ತೇನೆ. ಈ ಎರಡು ವಿಷಯಗಳನ್ನು ನಂತರದ ಬ್ಲಾಗುಗಳಲ್ಲಿ ನಿಮ್ಮ ಮುಂದಿಡುತ್ತೇನೆ. ಅಲ್ಲಿಯವರೆಗೂ, ನಾವುಗಳಾಗಿಲ್ಲ ಮುಕ್ತ ಮುಕ್ತ ಮುಕ್ತ ಎಂದು ಗುನುಗುತ್ತಾ ಇರಿ.
ಈಗ ಸದ್ಯಕ್ಕೆ ನಿದ್ದೆ ಬರುತ್ತಿದೆ, ಮಲಗಬೇಕು, ಟಾಟಾ.

- Sunil Jayaprakash ರವರ ಬ್ಲಾಗ್
- Login or register to post comments
- 709 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: