ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಸಿಗರೇಟು ಮತ್ತು ಆಟೋ ಚಾಲಕ

May 17, 2006 - 9:36am — Sunil Jayaprakash

ಬಿಡಲಾರೆ ನಾ ಸಿಗರೇಟು,
ಹುಡುಗಿ ನಿನ್ನಂತೆಯೇ ಅದು ಥೇಟು,
ಬಿಡಬಲ್ಲೆನೇ ನಾ ನಿನ್ನ ಚಿನ್ನ ಹಾಗೇ ಸಿಗರೇಟನ್ನ...

ಸಿಗರೇಟು ಹೊಗೆಯಾಗಿ ತುಳುಕಿ ಬಳುಕಿ ಗಾಳಿಯಲ್ಲಿ ಲೀನ.
ನೀನೋ ಘಮ್ಮಂತೆ ............................ವಸಂತಗಾನ.

ಈ ಹಾಡು ಎಲ್ಲೋ ಕೇಳಿದ ಹಾಗಿದೆಯೇ. ಯಾರು ಬರೆದದ್ದು, ಯಾರು ಯಾವಾಗ ಹಾಡಿದ್ದು ಎಂದು ನನಗೆ ತಿಳಿದಲ್ಲ. ಆದರೆ ಬಹಳ ಖುಷಿಕೊಡುತ್ತದೆ. ಸರಿ ಈಗೇಕೆ ಸಿಗರೇಟು ದ್ವೇಷಿಯೊಬ್ಬನ ಕೈಯಿಂದ ಸಿಗರೇಟಿನ ಬಗ್ಗೆ ಬ್ಲಾಗು ಎನ್ನುತ್ತಿದ್ದೀರಾ. ಇಲ್ಲಿ ಕೇಳಿ, ನೆನ್ನೆ ಸಿಗರೇಟಿನ ಬಗ್ಗೆ ಒಂದು ಸ್ವಾರಸ್ಯಕರ ವಿಷಯ ತಿಳಿಯಿತು ಅದೂ ಒಬ್ಬ ಆಟೋ ಚಾಲಕನಿಂದ.

ಸೂಚನೆ : ನಾನು ಪಕ್ಕಾ ಸಿಗರೇಟು ದ್ವೇಷಿ. ಸಿಕ್ಕಾಪಟ್ಟೆ ಅಸಹನೆ ನನಗೆ ಈ ಸಿಗರೇಟಿನ ಮೇಲೆ. ಅದನ್ನು ದೇಶದಿಂದ ಹೊರಗಿಡಬೇಕು ಎಂಬ ಕೂಗಿಗೆ ನಾನೂ ಸಹ ಜೊತೆಗೂಡಿಸುತ್ತೇನೆ. ಸಿಗರೆೇಟು ಸೇದುವವರು ಕೆಲವೊಮ್ಮೆ ಗೆಳೆಯರೇ ಆದರೂ ಈ ಸಿಗರೇಟಿನ ಕಾರಣದಿಂದ ನನಗೆ ಅವರ ಮೇಲೆ ಸಿಟ್ಟು.

ನೆನ್ನೆಯ ದಿವಸ, ಮಂಗಳವಾರ, ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಮಳೆ. ಬಸವನಗುಡಿ, ಶಾಂತಿನಗರ, ಜಯನಗರ, ಬನಶಂಕರಿ, ಮಲ್ಲೇಶ್ವರ, ಶ್ರೀನಗರ, ಹೀಗೆ ಎಲ್ಲೆಲ್ಲೂ ಮಳೆ. ನಾನು ಕೆಲಸದ ನಂತರ ಮನೆ ಸೇರಿದ ಮೇಲೆ, ರಾತ್ರಿ ೧೧:೦೦ ಯಾರೋ ಪುಣ್ಯಾತ್ಮರ ಮನೆಗೆ ನನ್ನ ಒಬ್ಬ ಅಣ್ಣನ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು. ಮಳೆಯಾಗುತ್ತಿದ್ದರಿಂದ ನಮ್ಮ ಬೈಕಿನಲ್ಲಿ ಹೋಗಲಾಗುತ್ತಿರಲಿಲ್ಲ. ಆದಕಾರಣ, ಆಟೋ ಹುಡುಕುತ್ತಾ ಹೊರಟೆವು. ಪುಣ್ಯಕ್ಕೆ ನಮಗೊಬ್ಬ ಆ ರಾತ್ರಿಯ ಮಳೆ, ಚಳಿಯಲ್ಲೂ ಸಹ ಹೆಂಡ, ಬೀಡಿ, ಸಿಗರೇಟಿನ ಮೊರೆ ಹೋಗಿರದಿದ್ದ ಆಟೋ ಚಾಲಕನೊಬ್ಬ ಸಿಕ್ಕಿದ. (ಆಟೋದವರೂ ಸಹ ಸೃಜನಶೀಲರಲ್ಲವೇ). ಸರಿ ಹತ್ತಿ ಕುಳಿತೆವು. ಸ್ವಲ್ಪ ಸಮಯದ ನಂತರ ಒಂದು ವಿಚಿತ್ರ ಗಮನಿಸಿದೆವು. ಆ ಆಟೋಗೆ, swiper ಇರಲಿಲ್ಲ. ಆದರೂ ಆ ಮಳೆಯಲ್ಲೂ ಸಹ ಹೊರಗಿನ ದೃಶ್ಯಗಳು ಆಟೋ ಗಾಜಿನ ಮೂಲಕ ಸ್ಪಷ್ಟವಾಗಿ ಕಾಣುತ್ತಿದ್ದವು.

ಊಹಿಸಿ, ಆಟೋ ಓಡುತ್ತಿದೆ, ಮಳೆ ಬರುತ್ತಿದೆ, ಆಟೋ ಗಾಜಿಗೆ swiper ಇಲ್ಲ, ಆದರೂ ಹೊರಗಿನ ದೃಶ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ . ಇದು ಹೇಗೆ ಸಾಧ್ಯ. ಸರಿಯೆಂದು ಚಾಲಕನನ್ನೇ ಕೇಳಿದೆವು. ಆತ ನೀಡಿದ ಉತ್ತರ ಬಹಳ ಸ್ವಾರಸ್ಯಕರವಾಗಿದೆ. ಆತ ಹೇಳಿದ, "ಸಿಗರೇಟು ತೊಗೊಂಡು, ಆಟೋ ಗಾಜಿಗೆ ಉಜ್ಜಿಟ್ಟಿದ್ದರೆ ಎಷ್ಟೇ ನೀರು ಬಿದ್ದರೂ ನಿಲ್ಲಲ್ಲ ಸಾರ್, ತಕ್ಷಣ ಹೊರಟುಹೆೋಗುತ್ತೆ."

ನಾವು ಮತ್ತೆ ಈ ಗಾಜಿನ ಬಗ್ಗೆ ಮಾತು ಮುಂದುವರಿಸಲಿಲ್ಲ. ಆದರೆ ಈ ವಿಷಯ ಕೇಳಿ ನನಗಂತೂ ದಂಗುಬಡಿದಂತಾಯಿತು. ಆತ ಹೇಳಿದ್ದು ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ ಆಟೋ ಮಧ್ಯದ ಗಾಜಿನಿಂದ ಹೊರಗಿನ ದೃಶ್ಯಗಳನ್ನು ಮಾತ್ರ ಸ್ಪಷ್ಟವಾಗಿ ನೋಡಬಹುದಿತ್ತು. ಅದೇ ಮಧ್ಯದ ಗಾಜಿನ, ಆಜುೂೂೂಬಾಜಿನಲ್ಲಿದ್ದ ಗಾಜುಗಳಿಂದ ಒಂದು ಚೂರು ನೋಡಲಾಗುತ್ತಿರಲಿಲ್ಲ. ಬಹುಶಃ ಆ ಗಾಜುಗಳಿಗೆ ಸಿಗರೇಟು ಉಜ್ಜಿರಲಿಲ್ಲ ಅನಿಸುತ್ತೆ.

ಈ ವಿಷಯ ನಿಮಗೆ ತಿಳಿದಿತ್ತೆ. ಯಾರಿಗೂ ಹೇಳಬೇಡಿ ಮತ್ತೆ, ಸಿಗರೇಟು ವ್ಯಾಪಾರಿಗಳು ಸುಗ್ಗಿಯಾಚರಿಸಿಯಾರು.

ಇಲ್ಲಿ ಹೀಗಾದರೆ ಅಲ್ಲಿ ದೂರದಲ್ಲಿ ಒಬ್ಬ ಬರ್ಮುಡಾ ಮತ್ತು ಬನಿಯನ್ ಹಾಕ್ಕೊಂಡು, ಮೈ ಕೈಗೆ ಚೈನು ಹಾಕಿಕೊಂಡು, ಕತ್ತಲಲ್ಲೂ ಕೂಲಿಂಗ್ ಗಾಜು (ಅಲ್ಲಲ್ಲ ಗ್ಲಾಸು) ಹಾಕಿಕೊಂಡು, ಕಾರಿನಲ್ಲಿ ಸಿಗರೇಟು ಸೇದುತ್ತಿದ್ದ, ಆ ಕ್ಷಣದಲ್ಲಿ, ಆ ಕಾರಿನವನಿಗಿಂತ ಈ ಆಟೋ ಚಾಲಕನು ನನಗೆ ಸಾವಿರ ಪಾಲು ಉತ್ತಮನಾಗಿ ಕಂಡನು.

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 634 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 17, 2006 - 10:38am — ಮಹೇಶ ಭೋಗಾದಿ

ಸಿಗರೇಟು ಪುರಾಣ

ಮಹೇಶ ಭೋಗಾದಿ's picture

ಸಕ್ಕತ್ತಾಗಿದೆ.. (ಸಖತ್ತಾಗಿದೆ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 17, 2006 - 10:58am — chandrakanthkg

ಹಾಡು

chandrakanthkg's picture

ತಾವು ಪ್ರಸ್ತಾಪಿಸಿದ ಹಾಡು ಸುಬ್ಬಾಭಟ್ಟರ ಮಗಳೆ ಎಂಬ ಧ್ವನಿಸುರಳಿಯಲ್ಲಿದೆ. ಇದರ ಕರ್ತೃ ಬಿ.ಆರ್. ಲಕ್ಷ್ಮಣರಾಯರು ಹಾಗೂ ಸಂಗೀತ ಸಂಯೋಜಕ ಸಿ. ಅಶ್ವಥ್. ತಾವು ಸುಲಭವಾಗಿ ಉಹಿಸಬಹುದಾದ ಕಾರಣಗಳಿಗಾಗಿ ನನಗೆ ಈ ಹಾಡು ಬಹಳ ಪ್ರಿಯ ಆದರೆ ನನ್ನ ಹೆಂಡತಿಗೆ ಸ್ವಲ್ಪ ಕಿರಿಕಿರಿ Smiling. ಅದೇನೊ ಕುಡುಕರು ಹೇಳ್ತಾರಲ್ಲ "ಸರ್ವ ರೋಗಕ್ಕೂ ಸರಾಯಿ ಮದ್ದು" ಅಂಥ, ಹಂಗೆ ನಿಮ್ಮ ಆಟೋ ಚಾಲಕ ಮಿತ್ರ "ಸರ್ವ ಕಷ್ಟಕ್ಕೂ ಸಿಗರೇಟು ಮದ್ದು" ಎಂದು ತಿಳಿದಿರಬಹುದು.

ಚಂದ್ರಕಾಂತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಯಸಿ-ಸಿಗರೇಟು
  • ದರಿದ್ರ ಜನಗಳ ದರಿದ್ರ ಅಭ್ಯಾಸಗಳು
  • ಗಾಂಧಿ ಮೀಟರ್ರು‍
  • ಯೋಚನೆಗಳು
  • ವಿಚಾರವಾದಿ ಕೆ.ರಾಮದಾಸ್ ಅನಂತದಲ್ಲಿ ಲೀನ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 122 ಅತಿಥಿಗಳು ಆನ್ಲೈನ್ ಇರುವರು.


ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator