ಸಾಹಿತ್ಯ ಸಮ್ಮೇಳನದ ವಿವರಗಳು ಬೇಕಾಗಿದೆ
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಲಿಚ್ಛಿಸುವ ಸಹೃದಯರು ಯಾರಾದರು ಇದ್ದಾರೆಯೇ ಸಂಪದದಲ್ಲಿ. ಯಾರಿಗಾದರು, ಕೆಳಕಂಡ ವಿವರಗಳು ಗೊತ್ತಿದ್ದರೆ, ತಿಳಿಸಬೇಕೆಂದು ಸವಿನಯ ಪ್ರಾರ್ಥನೆ.
೧. ಬೆಂಗಳೂರಿನಿಂದ ಸಮ್ಮೇಳನಕ್ಕೆ ಯಾವುದಾದರು ಸಾರಿಗೆ ವ್ಯವಸ್ಥೆ ಯಾಗಿದೆಯೇ.
೨. ಬೀದರಿನಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ವಿವರಗಳು.
ಇಷ್ಚೇ ಅಲ್ಲದೆ, ಸಾಮಾನ್ಯ ಜನರಿಗೆ ಉಪಯುಕ್ತವಾಗಬಹುದಾದ ಮತ್ತಿತರ ವಿವರಗಳಿದ್ದಲ್ಲಿ, ದೂರವಾಣಿ ಸಂಪರ್ಕಗಳು, ವಸತಿ ಸಮುಚ್ಳಯ, ಛತ್ರಗಳು, ಉದಾರಿಗಳು
, ಇತ್ಯಾದಿ ದಯವಿಟ್ಟು ತಿಳಿಸಿ.

- Sunil Jayaprakash ರವರ ಬ್ಲಾಗ್
- Login or register to post comments
- 837 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
Re: ಸಾಹಿತ್ಯ ಸಮ್ಮೇಳನದ ವಿವರಗಳು ಬೇಕಾಗಿದೆ
ನಾನು ಸಾಹಿತ್ಯ ಸಮ್ಮೇಳನದ ವಿವರ ಕೊಡುತ್ತಿಲ್ಲ. ಬದಲಿಗೆ ನನ್ನ ಬ್ಲಾಗ್ ಓದಿ ಎಂದು ಹೇಳುತ್ತಿದ್ದೇನೆ. ವಿವರ ಕೇಳಿದರೆ, ಗೊತ್ತಿದ್ದರೆ ಕೊಡುವುದು ಬಿಟ್ಟು ಇನ್ನೇನೋ ಬರೆದಿದ್ದಾನೆ ಎಂದು ಬೇಸರಿಸಬೇಡಿ.
ಸಿಗೋಣ,
ಪವನಜ
ವಿಷಯ ಸಾಹಿತ್ಯ
ನೀವು ಆ ಎಳೆಯನ್ನು ಓದಲು ಹೇಳಿದ್ದರಿಂದ ಖಂಡಿತ ಬೇಸರಿಸಿಕೊಳ್ಳಲಿಲ್ಲ. ನೀವು ವಿಷಯ ಸಾಹಿತ್ಯದ ಬಗ್ಗೆ ಬರೆದಿರುವುದು ಅತ್ಯಂತ ಸಮಂಜಸವಾಗಿದೆ. ನಾನು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಇಲ್ಲಿಯವರೆಗೆ ಭಾಗವಹಿಸಿದವನಲ್ಲ. ೨(ಅಥವಾ ೩ ಗೊತ್ತಿಲ್ಲ) ನೇ ತರಗತಿಯಲ್ಲಿದ್ದಾಗ ದಾವಣಗೆರೆಯಲ್ಲಿ ನಡೆದ ಸಮ್ಮೇಳನದಲ್ಲಿ (ನಮ್ಮ ಮನೆಗೆ ಹತ್ತಿರವಿತ್ತು ಆ ಮೈದಾನ) ದಿನಕ್ಕೊಂದು ಮಕ್ಕಳ ಕಥೆ ಕೊಂಡು ಕೊಳ್ಳಲು ಹೋಗಿದ್ದೆ ತಂದಯೊಡನೆ ಅಷ್ಟೆ. ಆದರೆ ಇಂತಹ ಸಮ್ಮೇಳನಗಳು ಹೇಗಿರುತ್ತವೆ ಎಂದು ಸ್ವತಃ ತಿಳಿದುಕೊಳ್ಳುವ ಇಚ್ಛೆ ನನಗೆ. ಮುಂದೆ ನಾನು ಯಾವುದಾದರು ವಾದ ಮುಂದಿಟ್ಟರೆ ಅದಕ್ಕೆ ಸ್ವಲ್ಪ ತೂಕವಿರಬೇಕಲ್ಲ.
ಸಾರ್ಥ ಕಾದಂಬರಿಯಲ್ಲಿ ವೈದಿಕ ಹಾಗು ಬೌದ್ಧ ಧರ್ಮಗಳ ವಾಗ್ವಾದದಲ್ಲಿ ಈ ಸ್ವಾನುಭವದ ಬಗ್ಗೆ ಸ್ವಾರಸ್ಯಕರ ಕಥಾನಕವಿದೆ. ಹಾಗೆಯೆ ಸ್ವತಂತ್ರನಾಗಿ ಬೀದರ್ ಹೇಗಿದೆ ಎಂದು ನೋಡುವಾಸೆ. ಈ ಸ್ವಾನುಭವಕ್ಕಾಗಿ ವಿವರಗಳನ್ನು ಕೇಳಿದೆ. ನೀವು ನಿಮ್ಮ ಲೇಖನದಲ್ಲಿ ಹೇಳಿರುವಂತೆ, ವೃತ್ತಿಯಿಂದ ಸಾಹಿತಿಗಳಲ್ಲದವರು ಸಾಹಿತ್ಯ ರಚನೆಗೆ ಮುಂದಾಗಬೇಕು ಎಂಬ ಕರೆಗೆ ನಾನು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇನೆ. ಶಾಲೆಯಲ್ಲಿ ಸಂದರ್ಭ ವಿವರಸಿ, ಗಾದೆ ವಿಸ್ತರಿಸಿ, ಪ್ರಬಂಧ ಬರೆಯಿರಿ, ಇತ್ಯಾದಿಗಳು ನನಗೆ ಅತ್ಯಂತ ಖುಷಿ ಕೊಡುತ್ತಿದ್ದ ಅಭ್ಯಾಸಗಳು. ಹಾ, ಅಂದ ಹಾಗೆ ನಾನೇನು ಯಾವುದೋ ವಿಷಯದಲ್ಲಿ ಪಾಂಡಿತ್ಯ ಪಡೆದಿಲ್ಲ. ಆದರೆ ಮುಂದೆ ಯಾವುದಾದರು ಕ್ಷೇತ್ರದಲ್ಲಿ ಪ್ರಬುದ್ಧನಾಗಬಹುದಲ್ಲ. ಆದ್ದರಿಂದ ಗೊತ್ತಿರುವ ವಿಷಯದ ಬಗ್ಗೆ ಬರೆಯುವ ಪ್ರಯತ್ನ ಮಾಡಲು ಹೊರಟಿರುವವನು. ಅಂದ ಹಾಗೆ ಇನ್ನು ಖಡಾ ಖಂಡಿತವಾಗಿ ಹೋಗೇ ಹೋಗುತ್ತೇನೆ ಎಂಬ ಭರವಸೆಯೂ ನನ್ನಲಿಲ್ಲ. ಹೋದರೂ ಹೋಗಬಹುದು ಇಲ್ಲಿದಿದ್ದರೆ ಇಲ್ಲ.
ಮುಂದೆ ಗುರಿಯಿರಲು ಹಿಂದೆ ಗುರುವಿರಲು,
ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆಮುಂದೆ,
ಹಿಗ್ಗದೆಯೆ ಕುಗ್ಗುದೆಯೆ ನುಗ್ಗಿ ನಡಮುಂದೆ.
ಅಂದಹಾಗೆ ಇಲ್ಲಿ ಯಾರೋ ಹೇಳುತ್ತಿದ್ದಾರೆ.
ಅರಿವೇ ಗುರು ಎಂದು.
ನಾ ಹೋಗುತ್ತಿದ್ದೇನೆ.
ನಾನು ಮುಂಬಯಿಯಿಂದ ಸಾಹಿತ್ಯ ಸಮ್ಮೇಳನಕ್ಕೆ ಹೋಗುತ್ತಿದ್ದೇನೆ. ಸಾಮಾನ್ಯವಾಗಿ ಸಾಹಿತ್ಯ ಪರಿಷತ್ತಿನವರುಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲಿಚ್ಛಿಸುವವರಿಗಾಗಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡುತ್ತದೆ. ಇದಕ್ಕೆ ಮೊದಲೇ ರೂ. 150 ರ ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಈಗಾಗಲೇ ಇದಕ್ಕೆ ಸಮಯ ಮೀರಿದೆ ಎಂದು ನನ್ನ ನಂಬಿಕೆ. ಕಾರಣ, ಹಿಂದೆ ನವೆಂಬರಿನಲ್ಲಿ ನಡೆಸಲು ತೀರ್ಮಾನಿಸಿದ್ದಾಗ, ಸೆಪ್ಟಂಬರಿನಲ್ಲಿ ಪ್ರಕಟಣೆ ಹೊರಡಿಸಿ, ಅಕ್ಟೋಬರ 20 ರ ವರೆಗೆ ಕಾಲಾವಕಾಶ ನೀಡಿದ್ದರು. ಆದರೆ ಸಮ್ಮೇಳನವನ್ನು ಮುಂದೂಡಿದ ನಂತರ ಹೊಸದಾಗಿ ಪ್ರಕಟಣೆ ಹೊರಡಿಸಿದ ಬಗ್ಗೆ ನನಗೆ ಮಾಹಿತಿಯಿಲ್ಲ. ಹೀಗಾಗಿ ನಾನು ನೋಂದಾಯಿಸಿಕೊಳ್ಳದೆಯೇ ಹೋಗುತ್ತಿದ್ದೇನೆ. ಬೆಂಗಳೂರಿನಿಂದ ಇಲ್ಲಿನ ಯಾರಾದರೂ ಬರುವುದಾದರೆ ನನಗೋ ಸ್ನೇಹಿತರೊಬ್ಬರು ಜೊತೆ ಸಿಕ್ಕಂತಾಗುವುದು. ಬೆಂಗಳೂರಿನಿಂದ ಬೀದರ್ ಗೆ ನೇರ ರೈಲು ಇಲ್ಲ. ಗುಲ್ಬರ್ಗಾಕ್ಕೆ ಹೋಗಿ ಅಲ್ಲಿಂದ 90 ಕಿಮೀ ಬಸ್ಸಿನಲ್ಲಿ ಪ್ರಯಾಣಿಸಬೇಕು, ಅಥವಾ ಹೈದರಾಬಾದಿಗೆ ಹೋಗಿ ಅಲ್ಲಿಂದ 150 ಕಿಮೀ ಬಸ್ಸು/ರೈಲು ಪ್ರಯಾಣ ಮಾಡಬೇಕಾಗುವುದು. ಬೀದರ್ ಗೆ ರಾಜ್ಯ ಸಾರಿಗೆಯ ವೇಗದೂತ/ಡೀಲಕ್ಸ್/ರಾಜಹಂಸ ಸೇವೆಗಳಿವೆ. ಬೆಂಗಳೂರಿನಿಂದ ಪ್ರಯಾಣದ ಅವಧಿ 12 ಗಂಟೆಗಳಿಗಿಂತ ಕಡಿಮೆಯಾಗಲಾರದು. ಇದಕ್ಕಿಂತ ಬೊಂಬಾಯಿಯಿಂದ ಬರುವುದೇ ಸುಲಭ. ಗುಲ್ಲಬರ್ಗಾಕ್ಕೆ 10 ಗಂಟೆ ರೈಲು ಪ್ರಯಾಣ ಮಾಡಿದರೆ ಅಲ್ಲಿಂದ ಬಸ್ಸು ಹಿಡಿಯ ಬಹುದು.
ಜೊತೆ
ಪ್ರಸನ್ನ ರೇವಣ್ಣ ಕೂಡ ಸಮ್ಮೇಳನ attend ಮಾಡ್ತಿದ್ದಾರಂತೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"