ಮುಕ್ತ ಆಶಯದ ಸೋಲು ೧ - ಕೊಳ್ಳುಬಾಕ ಸಂಸ್ಕೃತಿಯ ಕುರಿತಾದದ್ದು
ಕೆಸರಿನ ಮಧ್ಯೆ ಕಮಲವು ಹುಟ್ಟುವಂತೆ, ಅನೇಕ ಅಡುಗೂಲಜ್ಜಿ ಧಾರಾವಾಹಿಗಳ ಮಧ್ಯೆ "ಮುಕ್ತ" ನಿಜಕ್ಕೂ ಕಮಲದಂತೆಯೇ ಶೋಭಿಸುತ್ತದೆ. ಇಂತಹ ಜತುನಗಳು ಎಷ್ಟು ನಡೆದರೂ ಜನರು ಅದನ್ನು
ಸ್ವೀಕರಿಸುತ್ತಾರೆ ಮತ್ತು ಸಮಾಜಕ್ಕೆ ಅದು ಒಳ್ಳೆಯ ಪರಿಣಾಮಗಳನ್ನು ಉಳಿಸಿ ಹೋಗುತ್ತದೆ. ಮುಖ್ಯವಾಗಿ "ತಂತ್ರಜ್ಞಾನ", "ಜಾಗತೀಕರಣ" ಇಂತಹ ವಿಷಯಗಳನ್ನು ಜನರಿಗೆ ಧಾರಾವಾಹಿಗಳ ಮೂಲಕ ತಿಳಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಆ ನಿಟ್ಟಿನಲ್ಲಿ ಮುಕ್ತ ನಿಜಕ್ಕೂ ಪ್ರಶಂಸನೀಯ.
ಆದರೆ ಕೊನೆಯ ಕಂತಿನಿಂದಾಗಿ "ಮುಕ್ತದ" ಪ್ರಯತ್ನಗಳು ನೀರಿನಲ್ಲಿ ಹೋಮ ಮಾಡಿದ ಹಾಗಾಯಿತೇನೋ, ಎಂಬ ಅನುಮಾನ ನನ್ನನ್ನು ಕಾಡುತ್ತಿದೆ.
ನಿಜ "ಮುಕ್ತ"ದಲ್ಲಿ ಬರುವ ಕೊಲಂಬಿಯಾ ಕಾಪರ್ ಅಂತಹ ಕಂಪೆನಿಗಳು, ಜಾಗತೀಕರಣದ ಫಲವಾಗಿ ಭಾರತದ ಮನೆ, ಮನ ಮತ್ತು ಮಾರುಕಟ್ಟೆಗಳನ್ನು ಪ್ರವೇಶ ಮಾಡಿದೆ. ನಮ್ಮಲ್ಲಿ "ಕೊಳ್ಳುಬಾಕ ಸಂಸ್ಕೃತಿ"ಯನ್ನು ಹುಟ್ಟುಹಾಕಿದೆ. "ಕೊಳ್ಳುಬಾಕ ಸಂಸ್ಕೃತಿ" ಎಂದರೆ ಕೃತಕ ಮಾರುಕಟ್ಟೆ ಸೃಷ್ಟಿ ಮಾಡುವುದು. "ಕೊಳ್ಳುಬಾಕ ಸಂಸ್ಕೃತಿ" ಜನರಿಗೆ ಏನು ಬೇಕು ಅದನ್ನು ನೀಡದೆ ಕಾರ್ಪೋರೇಟ್
ಜಗತ್ತಿನ ಲಾಭಕ್ಕೋಸ್ಕರ ಜನರಿಗೆ ಏನು ನೀಡಬಹುದೋ ಅದನ್ನು ಕೊಳ್ಳುವಂತೆ ಮಾಡುವುದು. ಮುಕ್ತ ಧಾರಾವಾಹಿಯುದ್ದಕ್ಕೂ "ಜಾಗತೀಕರಣ" ಮತ್ತು "ಕೊಳ್ಳುಬಾಕ ಸಂಸ್ಕೃತಿಯ" ಬಗ್ಗೆ ಚರ್ಚೆ ನಡೆದಿದೆ. ವಿಪರ್ಯಾಸವೆಂದರೆ ಇಡೀ ಧಾರಾವಾಹಿ "ಕೊಳ್ಳುಬಾಕ ಸಂಸ್ಕೃತಿಯ" ವಿರುದ್ಧ ಮಾತನಾಡಿದರೆ, ಧಾರಾವಾಹಿಯ ಪರಿಣಾಮಗಳು ಮಾತ್ರ "ಕೊಳ್ಳುಬಾಕ ಸಂಸ್ಕೃತಿಯ"ನ್ನು ಹೆಚ್ಚಿಸುತ್ತಾ ಹೋಗಿವೆ.
"ಹಾಗಾಗಿ ಧಾರಾವಾಹಿಯ ಉದ್ದೇಶವನ್ನು ಧಾರಾವಾಹಿಯ ಪರಿಣಾಮಗಳು ಹಾಳುಗೆಡವಿದೆಯೇನೋ" ಎಂಬ ಗುಮಾನಿ ನನ್ನದು.
ಹೇಗೆ ಎಂದು ನಿಮ್ಮೊಡನೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ.
ನಾವು ಇಲ್ಲಿ ಕಾರ್ಟೋರೇಟ್ ಜಗತನ್ನು ಧಾರಾವಾಹಿ ಮತ್ತು ಟಿ.ವಿ.ವಾಹಿನಿಗೆ ಹೋಲಿಸೋಣ. ಜನರನ್ನು ಗ್ರಾಹಕರು ಎಂಬುದಾಗಿ ಪರಿಗಣಿಸೋಣ. ಈಗ ನೋಡಿ.
ಧಾರಾವಾಹಿಯ ಮಧ್ಯದಲ್ಲಿ ವೀಕ್ಷಕರಿಗೆ ಒಂದು ಎಸ್.ಎಮ್.ಎಸ್ ಕಾಂಟೆಸ್ಟನ್ನು ಏರ್ಪಡಿಸಿತ್ತು. ಗೌರಿ ಮತ್ತು ಹೇಮಗಿರಿ ಮಠದ ಸ್ವಾಮೀಜಿಗಳಾಗಬೇಕಿದ್ದ, ನಿರಂಜನ ಸತ್ಯದೇವರಿಗೆ ಮದುವೆ ಮಾಡಬೇಕೇ ಬೇಡವೇ ಎಂಬ ವಿಷಯದ ಕುರಿತಾಗಿ ಆ ಎಸ್.ಎಮ್.ಎಸ್ ಕಾಂಟೆಸ್ಟಿ ಏರ್ಪಡಿಸಲಾಗಿತ್ತು. ಕಡೆಯ ಕಂತಿನಲ್ಲಿ ಸೀತಾರಾಂ ರವರು ತಿಳಿಸಿದ ಹಾಗೆ ಆಗ ಅವರಿಗೆ "ಇಪ್ಪತ್ತು ಸಾವಿರ ಮದುವೆಯಾಗಬೇಕು" ಎಂದೂ "ಹದಿನೇಳು ಸಾವಿರ ಮದುವೆಯಾಗಬಾರದು" ಎಂದೂ ಬಂದಿತ್ತಂತೆ, ಆದರೆ ಕಥೆಯ ಮುಂದುವರಿಕೆಗಾಗಿ ಅವರು ಜನರಿಗೆ ತಪ್ಪು ಮಾಹಿತಿಯನ್ನು ನೀಡಿ , ಗೌರಿಗೆ ಆಗ ಮದುವೆ ಮಾಡಲಿಲ್ಲ ಎಂದು ಹೇಳಿದರು.
ಇದು ಒಂದು ರೀತಿಯಲ್ಲಿ ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸಿದ ಹಾಗೆ ಆಗಿದೆ. ಗಮನಿಸಿ ಆ ಎಸ್.ಎಮ್.ಎಸ್. ಕಾಂಟೆಸ್ಟ್ ಸಂದರ್ಭದಲ್ಲಿ ಉಂಟಾಗಿರಬಹುದಾದ ನೆಟ್ವರ್ಕ್ ಟ್ರಾಫಿಕ್, ಮತ್ತು ಆ
ನೆಟ್ವರ್ಕ್ ಟ್ರಾಫಿಕ್ ನಿಂದ ಮೊಬೈಲ್ ಕಂಪೆನಿಗಲು ಮಾಡಿಕೊಂಡಿರಬಹುದಾದ ಲಾಭ, ಇಡೀ ಧಾರಾವಾಹಿಯ ಆಶಯವನ್ನು ಹಾಳುಗೆಡವಿತೇನೋ ಎಂದು ನನಗೆ ಸಂಕಟವಾಗುತ್ತಿದೆ. ಇಷ್ಟಾಗಿಯೂ ಜನರಿಗೆ ಬೇಕಿದ್ದ ತೀರ್ಪು ಅವರಿಗೆ ಆಗ ಸಿಗುವುದಿಲ್ಲ. ಇದು ನನ್ನ ಪ್ರಕಾರ ಅತ್ಯಂತ ಘೋರ ಅಪರಾಧ. ಧಾರಾವಾಹಿ ತಂಡದವರು ಹೇಳಬಹುದು, "ಧಾರಾವಾಹಿ ಕಡೆಯದಾಗಿ ಮದುವೆಯಿಂದ ಕೊನೆಗೊಂಡಿತಲ್ಲ"
ಎಂದು, ಆದರೆ ಆಗಿದ್ದ ಸನ್ನಿವೇಶಕ್ಕೂ ಈಗಿನ ಸನ್ನಿವೇಶಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲ ಸನ್ನಿವೇಶದಲ್ಲಿ, ಜನರಿಗೆ ಗೌರಿ ಮತ್ತು ನಿರಂಜನ ಸತ್ಯವೇವರ ಮದುವೆ ಬೇಕಿತ್ತು, ಆದರೆ ಕಾರ್ಪೋರೇಟ್ ಜಗತ್ತಿಗೆ ಬೇಕಿರಲಿಲ್ಲ. ಹಾಗಾಗಿ ತಪ್ಪು ಮಾಹಿತಿಯನ್ನು ನೀಡಿ ತನ್ನು ಮಾರುಕಟ್ಟೆಯನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿತು. ಜನರಿಗೆ ಅವರು ಬಯಸಿದ್ದು ಸಿಗಲಿಲ್ಲ. ಧಾರಾವಾಹಿಯವರು ಕಡೆಯಲ್ಲೇವಾದರು ಎಸ್.ಎಮ್.ಎಸ್ ಕಾಂಟೆಸ್ಟ್ ಮಾಡಿದ್ದರೆ, ಜನರು ಖಂಡಿತವಾಗಿ ಸ್ವಾಮೀಜಿಗೆ ಬದಲಾಗಿ "ಗೌರಿ ಹಾಗು ಇನ್ಸಪೆಕ್ಟರ್ ದೇವಾನಂದರ" ಮದುವೆಯನ್ನು ಇಷ್ಟಪಡುತ್ತಿದ್ದರು.
ಹಾಗಾಗಿ, ಈ ನಿಟ್ಟಿನಲ್ಲಿ ಧಾರಾವಾಹಿ ಆಶಯವಾಗಿದ್ದ "ಕೊಳ್ಳುಬಾಕ ಸಂಸ್ಕತಿಯ ವಿರುದ್ಧ ಹೊರಾಡುವ ಆದರ್ಶ" ಸೋತಿದೆ ಎಂಬುದು ನನ್ನ ಅಭಿಪ್ರಾಯ. ಇಡೀ ಧಾರಾವಾಹಿ ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧ ಮಾತನಾಡಿದರೆ ಅದರ ಪರಿಣಾಮಗಳು ಮಾತ್ರ ಕೊಳ್ಳುಬಾಕ ಸಂಸ್ಕೃತಿಯನ್ನು ವಿಜೃಂಭಿಸಿತು.
ಇಷ್ಟಾಗಿಯೂ, ಜನರ ಮನಮುಟ್ಟುವಂತೆ, ಜಾಗತೀಕರಣದಂತಹ ವಿಷಯಗಳನ್ನು ಜನರಿಗೆ ಎಳೆ ಎಳೆಯಾಗಿ ವಿವರಿಸಿದ ಧಾರಾವಾಹಿ ತಂಡಕ್ಕೆ ನನ್ನ ಅಭಿನಂದನೆಗಳು.
ಸವಿಯೊದಗು.

- Sunil Jayaprakash ರವರ ಬ್ಲಾಗ್
- Login or register to post comments
- 661 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ನಮಸ್ಕರಾ ಸುನೀಲ್
ಮುಕ್ತ ಮೊದಲು ಚನ್ನಗಿತ್ತು... ಇವಗ ಸೊಲ್ಪ ಬೆಜಾರು...