ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಈ ದಿನದ ಕ್ರಿಕೆಟ್ ಸುದ್ಧಿ - ಹಾ! ಎಚ್ಚರ ಇವು ಒಳ್ಳೆಯ ಸುದ್ಧಿಗಳು

December 18, 2006 - 3:58pm — Sunil Jayaprakash

ಒಳ್ಳೆಯ ಸುದ್ಧಿಗಳನ್ನು ಕೇಳುವುದು ಅಪರೂಪವಾಗಿಬಿಟ್ಟಿದೆ. ಅದರಲ್ಲೂ ಕ್ರಿಕೆಟ್ಟಿಗೆ ಸಂಬಂಧಪಟ್ಟ ಸುಧ್ದಿಯಾದರೆ ಕೇಳುವುದೇ ಬೇಡ. ಆದರೆ ಇಂದು ಎರಡು ಒಳ್ಳೆಯ ಸುದ್ಧಿಯಿದ್ದುದರಿಂದ ಆದಷ್ಟು ಬೇಗ ನಿಮಗೆ ಹೇಳಿಬಿಡೋಣವೆಂದು ಆತುರಾತುರವಾಗಿ ಬ್ಲಾಗುತ್ತಿದ್ದೇನೆ.

೧. ಈ ರಣಜಿ ಋತುವಿನಲ್ಲಿ ಈಗಾಗಲೇ, ಎರಡು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ತಂಡದವರು ದೆಹಲಿ ವಿರುದ್ಧ ದಿಟ್ಟತನದ ಆಟ ಪ್ರದರ್ಶಿಸಿದ್ದಾರೆ.

ಕರ್ನಾಟಕ ಮೊದಲ ಇನ್ನಿಂಗ್ಸ್ - ೪೪೬, ರಾಬಿನ್ ಉತ್ತಪ್ಪ - ೧೬೧, ತಿಲಕ್ ನಾಯ್ಡು - ೧೨೨
ದೆಹಲಿ ಮೊದಲ ಇನ್ನಿಂಗ್ಸ್ - ೪೪ / ೪

ಬೇಸರದ ಸಂಗತಿಯೆಂದರೆ, ನಮ್ಮ ಟಿ.ವಿ.ಚಾನೆಲ್ಲುಗಳು ರಣಜಿ ಪಂದ್ಯಗಳ ವಿವರಗಳನ್ನು ಪ್ರಸಾರ ಮಾಡುವುದೇ ಇಲ್ಲ.

ಕರ್ನಾಟಕ ಮತ್ತು ದೆಹಲಿ ಪಂದ್ಯದ ಇತ್ತೀಚಿನ ವಿವರಗಳನ್ನು ತಿಳಿಯಲು ಇಲ್ಲಿ ಎಡತಾಗಿ.

೨. ದಕ್ಷಿಣ ಆಫ್ರಿಕಾ ನೆಲದಲ್ಲಿ, ತನ್ನ ಮೊಟ್ಟ ಮೊದಲ ಟೆಸ್ಟ್ ಗೆಲುವನ್ನು ದಾಖಲಿಸುವತ್ತ ಭಾರತ ತಂಡದ ಹಸಿದ ಹೆಬ್ಬುಲಿಗಳು ದಾಪುಗಾಲು ಹಾಕಿದ್ದಾರೆ. ದಕ್ಷಿಣ ಆಫ್ರಿಕಾದ ಒಂಭತ್ತು ಮಂದಿ ಈಗಾಗಲೇ ಔಟಾಗಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಪಂದ್ಯದ ಇತ್ತೀಚಿನ ವಿವರಗಳನ್ನು ತಿಳಿಯಲು ಇಲ್ಲಿ ಎಡತಾಗಿ.

ಗಂಗೂಲಿ ಮೋಡಿಯೋ, ಶ್ರೀಶಾಂತ ಕುಣಿತವೋ, ಕುಂಬ್ಳೆ ಗೂಗ್ಲಿಯೋ ಒಟ್ಟಿನಲ್ಲಿ ನಮ್ಮವರು ಗೆಲ್ಲುತ್ತಿದ್ದಾರಲ್ಲ ಅಷ್ಟು ಸಾಕು.

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 724 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 18, 2006 - 4:22pm — Sunil Jayaprakash

ಇದೀಗ ಬಂದ ಸುದ್ಧಿ

Sunil Jayaprakash's picture

ಇದೀಗ ಬಂದ ಸುದ್ಧಿ - ಸಮಯ ೩:೫೭, ಬರೆಯುತ್ತಿರುವವರು ಸುನಿಲ್.

ದಕ್ಷೀಣ ಆಫ್ರಿಕಾಆದಲ್ಲಿ ನಡೆಯುತ್ತಿರುವಆ, ಪ್ರವಾಸಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ, ಟೆಸ್ಟ್ ಪಂದ್ಯವನ್ನುಊ, ಭಾರತ.ಅ ಗೆದ್ದುಕೊಂಡಿದೇ. ಈ ಗ್ಗೆಲುವು ಭಾರತ ತಂಡಕ್ಕೆ ದಕ್ಷೀಣ ಆಫ್ರಿಕಾಆ ನೆಲದಲ್ಲಿ ಸಿಕ್ಕಆ ಮೊಟ್ಟ ಮೊದಲ್ಅ ಟೆಸ್ಟ್ ಗೆಲುವಾಗಿದೇ.

ಈ ಸುದ್ಧಿ ತಿಳಿಯುತ್ತಿದ್ದಂತೆಯೇ ಕ್ರಿಕೆಟ್ಟಿನ ಸಮಸ್.ತ ಅಭಿಮಾನಿಗಳು ಬೀದಿಗಿಳಿದು ವಿಜಯೋತ್.ಸವಆ ಆಚರಿಸುತ್ತಿದ್ದಾರೆ. ಇದೊಂದು ಐತೀಹಾಸಿಕ ಗೆಲುವು ಎಂದು ವಿವಿಧ ಕ್ಷೇತ್ರದ ಗಣ್.ಯರು ಬಣ್ಣಿಸಿದ್ದಾರೆ. ತಮ್ಮ ಆರಾಧ್ಯ ದೈವ ಬಂಗಾಳದ ಹುಲಿಯಿಂದಲೇ ಈ ಪನ್.ದ್ಯವನ್ನು ಗೆಲ್ಲಲು ಸಾಧ್ಯವಾಯಿತು ಎಂದು ಬಂಗಾಳದ ಬಾಂಧವರು ಸಾರಿದ್ದಾರೆ. ಈ ನಡುವೆ ಶಾಂತ ರೀತಿಯಲ್ಲಿ ವರ್ತಿಸಿದ ಶ್ರೀಶಾಂತರಿಂದಲೇ ಭಾರತ ಗೆದ್ದದ್ದು ಎಂದು ಮಲಯಾಳದ ಮಿತ್ರರು ಹರ್ಷಿಸಿದ್ದಾರೆ. ಇದೆಲ್ಲದರ ನಡುವೆ ಶ್ರೀಶಾಂತರಿಗೆ ಪಂದ್ಯ ಪುರುಷೋತ್ತಮನೆಂದು ಘೋಷಿಸುವುದು ಬಹುತೇಕ ಖಚಿತವಾಗಿದೆ.

ನಮ್ಮ ಮುಂದಿನ ಅಯ್ಯಯ್ಯೋ ಸುದ್ಧಿ, ಸಂಜೆ ಐದು ಗಂಟೆಗೆ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 18, 2006 - 8:07pm — hpn

ಡ್ಯಾನ್ಸ್ ನೋಡಿದ್ರಾ?

hpn's picture

ಶ್ರೀಶಾಂತ್ ಮಾಡಿದ ಡ್ಯಾನ್ಸ್ ನೋಡಬೇಕಿತ್ತು - ಎಲ್ಲ ಚ್ಯಾನಲ್ಲುಗಳಲ್ಲೂ ಅದನ್ನೇ ತೋರಿಸುತ್ತಿದ್ದಾರೆ. Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 18, 2006 - 10:15pm — prasa

Re: ಡ್ಯಾನ್ಸ್ ನೋಡಿದ್ರಾ?

prasa's picture

ಹ ಹ..ಶ್ರೀಶಾಂತ್ ಡ್ಯಾನ್ಸ್ ಸಕತ್ತಾಗಿತ್ತು..ನೋಡದವರು ಈ ಕೆಳಗಿನ ವೀಡಿಯೊ ನೋಡಿ:
http://www.youtube.com/watch?v=FNW0WTWlKSA

ಸೂಪರ್! Laughing out loud

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 18, 2006 - 10:16pm — Sunil Jayaprakash

ಕುಣಿಯೋಣು

Sunil Jayaprakash's picture

ಕುಣಿಯೋಣು ಬಾರಾ.ಆಆಆ ಕುಣಿಯೋಣು ಬಾ.ಆಆ. ಇಲ್ಲಿ ನೋಡಿರಿ ಎಲ್ಲರೂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 19, 2006 - 5:34pm — ರಘುನಂದನ

Re: ಕುಣಿಯೋಣು

ರಘುನಂದನ's picture

ನಾನು ನಿನ್ನೆ ಕ್ರಿಕೆಟ್ ಮ್ಯಾಚ್ ನೋಡ್ಲಿಕ್ಕೆ ಆಗ್ಲಿಲ್ಲ. ಆದ್ರೆ ಕೊನೆಗೆ ಪ್ರೈಜು ಕೊಡು ಫಂಕ್ಷನ್ನ್ನಲ್ಲಿ ಆ ಹುಡುಗಿ ಜೊತೆ ಮಾತಾಡ್ತಾ ಇರೋವಾಗ ಶ್ರೀಶಾಂತು ಬ್ರೇಕ್ಡ್ಯಾನ್ಸ್ ಬಗ್ಗೆ ಹೇಳ್ತಾ ಇದ್ದದ್ದು ನೋಡಿ ಓಹೋ ಏನೋ ಸ್ಪೆಷಲ್ ನಡೆದಿದೆ ಅನ್ನಿಸ್ತು. ಆಮೇಲೆ ನನ್ತಮ್ಮ "ಎರಡು ಮೂರು ಸಲ ತೋರ್ಸಿದ್ರಲ್ಲೋ ನೋಡಿಲ್ಲೇನು?" ಅಂದ, ಛ! ನಾನು ನೋಡ್ಲಿಲ್ವಲ್ಲಪ್ಪ ಅನ್ನಿಸ್ತು. ಆದರೆ ಸಂಪದದಲ್ಲಿ ಇದರ ಬಗ್ಗೆ ಯುಆರೆಲ್ ಸಮೇತ ಯಾರಾದ್ರೂ ಪೋಸ್ಟ್ ಮಾಡಿಯೇ ಮಾಡ್ತಾರಲ್ಲ ನೋಡಿದ್ರಾಯ್ತು ಅನ್ಕೊಂಡೆ. ಇಬ್ಬಿಬ್ಬ್ರು ಪೋಸ್ಟಿಂಗ್ ಮಾಡಿದಾರೆ. ಸಖಾತ್ತಾಗಿ ಡ್ಯಾನ್ಸ್ ಮಾಡಿದ್ನಲ್ಲ ಶ್ರೀಶಾಂತು? ಆಸ್ಟ್ರೇಲಿಯಾ ಹಾಗು ಇನ್ನಿತರೆ ಸೊಕ್ಕಿನ ತಂಡದವರೆದುರು ಹೀಗೇ ಛೇಡಿಸಬೇಕು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 19, 2006 - 7:44pm — Sunil Jayaprakash

ಉ: ಅಯ್ಯೋ ಜಯ ಕೈತಪ್ಪುವುದೇ

Sunil Jayaprakash's picture

ಎರಡು ದಿನಗಳಿಂದ ತುಂಬಾ ಚೆನ್ನಾಗಿ ಆಡಿದ್ದ, ಕರ್ನಾಟಕ ತಂಡದವರು ಇಂದೇಕೋ ಸ್ವಲ್ಪ ಸಡಿಲ ಬಿಟ್ಟಂತೆ ಕಾಣುತ್ತದೆ. ಆದರೆ ಕಡೇ ಪಕ್ಷ, ಮಹತ್ವವಾದ ಎರಡು ಪಾಯಿಂಟನ್ನು ಸಂಪಾದಿಸುವುತ್ತ ದಿಟ್ಟಹೆಜ್ಜೆಯಿಟ್ಟಿದ್ದಾರೆ.

ಮೂರನೇ ದಿನದಾಟದ ಅಂತ್ಯಕ್ಕೆ ದೆಹಲಿ ೩೦೮ ರನ್ನುಗಳಿಗೆ ಆಲೌಟಾಗಿದೆ. ನಮ್ಮವರು ಎರಡನೆಯ ಇನ್ನಿಂಗ್ಸಿನಲ್ಲಿ ೩೨ ರನ್ ಗಳಿಸಿ ೧ ವಿಕೆಟ್ ಕಳೆದುಕೊಂಡು ಒಟ್ಟಾರೆ ೧೭೦ ರನ್ನುಗಳ ಮುನ್ನಡೆ ಸಾಧಿಸಿದೆ. ಒಂದು ವೇಳೆ ಪಂದ್ಯ, ಡ್ರಾ ಆದರೆ, ಕರ್ನಾಟಕಕ್ಕೆ ಮಹತ್ವವಾದ ಎರಡು ಪಾಯಿಂಟ್ ಸಿಗಲಿದೆ. ಆದರೆ ಏನಾದರಾಗಲಿ, ನಾಳೆ ಕರ್ನಾಟಕ ಗೆಲ್ಲಲೇ ಬೇಕು ಎಂಬ ತೀವ್ರವಾದ ಆಸೆ ನನ್ನಲ್ಲಿ ಮನೆ ಮಾಡಿದೆ.

ಬನ್ನಿ, ನಾಳೆ, ಕರ್ನಾಟಕ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸೋಣ. ಕನಿಷ್ಟ ೨೭೫ ರನ್ನುಗಳ ಮುನ್ನಡೆ ಸಾಧಿಸಿ, ಡಿಕ್ಲೇರ್ ಮಾಡಿಕೊಂಡು, ದೆಹಲಿಗೆ ಬ್ಆಟಿಂಗ್ ಬಿಡಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಮತ್ತು ಸೌರಾಷ್ಟ್ರ ನಡುವಣ ರಣಜಿ ಪಂದ್ಯ
  • ಮತ್ತೊಮ್ಮೆ ಮ್ಯಾಚ್ ಫಿಕ್ಸಿಂಗ್ ಹೊಗೆ
  • ಕರ್ನಾಟಕ ಮತ್ತು ತಮಿಳನಾಡು ನಡುವಣ ರಣಜಿ ಪಂದ್ಯದ updateಗಳು
  • ಸೇಡು ತೀರಿಸಿದ ಕರ್ನಾಟಕ
  • ರಣಜಿ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
  • ಕ್ರುಶ್ಣಾನೀ ಬ್ಯಾಗನೆ ಬಾರೋ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕಿರಿಮಗ, ಕೊನೆಮಗ ಇದಕ್ಕೆ ಸಂಸ್ಕ್ರುತದಲ್ಲಿ ಏನು?
    October 7, 2008 - 2:22pm
  • createam
    ಉ: ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
    October 7, 2008 - 2:21pm
  • mahesha
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:16pm
  • savithasr
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 2:15pm
  • anivaasi
    ಉ: ಈ ಬ್ಲಾಗ್‌ ಪೋಸ್ಟಿಗೆ ಹೆಸರಿಲ್ಲ.
    October 7, 2008 - 2:08pm
  • mahesha
    ಉ: ಕಡೇಹುಟ್ಟು
    October 7, 2008 - 1:51pm
  • mahesha
    ಉ: ಕಡೇಹುಟ್ಟು
    October 7, 2008 - 1:48pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:45pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:39pm
  • mahesha
    ಉ: ಕ್ರುಶ್ಣಾನೀ ಬ್ಯಾಗನೆ ಬಾರೋ
    October 7, 2008 - 1:35pm
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 311 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator