ತಪ್ಪು ಒಪ್ಪುಗಳು
ಇದೀಗ ತಾನೆ. ಶ್ರೀವತ್ಸ ಜೋಶಿಯವರು ನನ್ನ ಒಂದು ತಪ್ಪನ್ನು ತಿದ್ದಿದ್ದನ್ನು ನೋಡಿದೆ.
http://sampada.net/node/27#comment-1075
ಉಚ್ಚಾರ ಪದವೇ ಸರಿಯಾದ ಬಳಕೆ, ಉಚ್ಛಾರ ಅಲ್ಲವೆಂದು ತಿಳಿಸಿದ್ದಾರೆ. ಪವನಜರು, ಸ್ವಾಮಿಯವರು ಸಹ ಅಲ್ಲಲ್ಲಿ ತಪ್ಪು ಒಪ್ಪುಗಳನ್ನು ತಿಳಿಸುತ್ತಾ ಇರುತ್ತಾರೆ. ಬಹಳ ಧನ್ಯವಾದಗಳು. ರವೀಶ್ ರವರು ಈ ದಿನ ಹಾಕಿರುವ ಕವನ "ಇದು ಪದ್ಯವಲ್ಲ" ಬಹಳ ಪ್ರಸ್ತುತವಾಗಿದೆ ಈ ಸನ್ನಿವೇಶದಲ್ಲಿ.
ತಪ್ಪುಗಳು ನಡೆದಾಗ (ದೊಡ್ಡದಾಗಿರಲಿ ಅಥವಾ ಎಷ್ಟೇ ಸಣ್ಣದಿರಲಿ) ಗೊತ್ತಿರುವವರು, ತಕ್ಷಣ ಅದು ತಪ್ಪೆಂದು ತಿಳಿಸಬೇಕು. ಹಾಗಾದಾಗಲೇ ಒಂದು ಭಾಷೆ ವಿಜೃಂಭಿಸುವುದು ಸಾಧ್ಯ.
ಅಂದ ಹಾಗೆ, ನಾವು ಈ ಸಂಪದದಲ್ಲೇಕೆ, ಈ ಒಂದು ತಪ್ಪು ಒಪ್ಪುಗಳ ಶೇಖರಣೆ ಮಾಡಬಾರದು. (ಅಥವಾ ಈಗಾಗಲೇ ಅಂತರ್ಜಾಲದಲ್ಲಿ ಈ ಮಾಹಿತಿ ಲಭ್ಯವಿದೆಯೆ?).
ಮತ್ತೊಂದು ಕಳಕಳಿಯ ಮನವಿಯೆಂದರೆ, ತಪ್ಪಾಗುತ್ತದೆಂದು ಬರೆಯುವುದನ್ನು ದಯವಿಟ್ಟು ನಿಲ್ಲಿಸಬೇಡಿ. 

- Sunil Jayaprakash ರವರ ಬ್ಲಾಗ್
- Login or register to post comments
- 971 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಒಪ್ಪುವಂಥ ಮಾತು...
ಸುನಿಲ್:
ನಾನು ೧೦೦% ವಸ್ತುನಿಷ್ಠವಾಗಿ ಸೂಚಿಸಿದ್ದ ಆ ತಪ್ಪೂಪ್ಪನ್ನು ನೀವು ೧೦೧% ವಸ್ತುನಿಷ್ಠವಾಗಿ ಪರಿಗಣಿಸಿದ್ದು ನನಗೆ ಬಹಳ ಇಷ್ಟವಾಯಿತು.
ನಿಮ್ಮ ಸಲಹೆ ಒಳ್ಳೆಯದಿದೆ; ತಪ್ಪು-ಒಪ್ಪು ಸಂಚಯವೊಂದನ್ನು ತಯಾರಿಸಿಟ್ಟರೆ ಅದೂ ಸಹ ಸಂಪದದ ಆರೋಗ್ಯಕರ ಬೆಳವಣಿಗೆಗೆ ನೆರವಾಗಬಲ್ಲದು.
ಇತಿ
ಶ್ರೀವತ್ಸ ಜೋಶಿ
ಶುದ್ಧಾಶುದ್ಧ ಕನ್ನಡ
ದಯವಿಟ್ಟು ಈ ಪುಟ ನೋಡಿ. ಆ ಪುಸ್ತಕವನ್ನು ಎಲ್ಲರೂ ಕೊಳ್ಳಬಹುದು. ಹೌದು. ಶುದ್ಧಾಶುದ್ಧ ಕನ್ನಡ ಬಗ್ಗೆ ಒಂದು ತಾಣ ಇದ್ದರೆ ಒಳ್ಳೆಯದು.
ಸಿಗೋಣ,
ಪವನಜ
-----------
Vishva Kannada
Think globally, Act locally