ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ನೆನ್ನೆ ಕಂಡ ಕನಸು

January 21, 2006 - 12:11am — Sunil Jayaprakash

ಹಾಗೆ ನೋಡಿದರೆ ಎಷ್ಟೋ ಕನಸುಗಳು ಬರುತ್ತಿರುತ್ತವೆ. ಆದರೆ ಇಂದು (ಅಂದ ಹಾಗೆ ನೆನ್ನೆ ಎನ್ನಬೇಕೆ) ಕಂಡ ಕನಸಿನ ಬಗ್ಗೆ ಹೇಳಬೇಕೆನಿಸಿತು.

ನಾನು ನನ್ನ ಹೊಂಡಾ ಆಕ್ಟಿವಾ ದಲ್ಲಿ ಹೊರಟೆ, ಅದನ್ನು ಡಕೋಟ ಎನ್ನಬೇಕೆ ತಿಳಿಯುತ್ತಿಲ್ಲ ಆದರೆ ನನ್ನ ತಮ್ಮನ ಪ್ರಕಾರ ಅದು ಡಕೋಟ. ನನ್ನ ತಮ್ಮ ಯಾವಾಗಲೂ ಅಷ್ಟೇ ಸ್ವಲ್ಪ ಜೋಷ್ ಜಾಸ್ತಿ. ಸರಿ ಹೊರಟೆ, ಎಲ್ಲಿಗೆ ಎಂದು ಕನಸಿನಲ್ಲಿ ತಿಳಿಯಲಿಲ್ಲ. ಹಾಗೆಯೇ, ಗಮನಿಸುತ್ತಿದ್ದೆ, ನನ್ನ ತಮ್ಮ ಎಲ್ಲಿಂದಲೋ ಸಖತ್ತಾಗಿರೋ ಆಟೋ ತಂದ. ಇದೆಂಥಹ ಹುಚ್ಚು ಎಂದುಕೊಂಡೆ. ನೋಡ ನೋಡುತ್ತಿದ್ದಂತೆಯೆ ಆಕ್ಟಿವಾಗಿಂತ ವೇಗವಾಗಿ ಗಾಡಿಬಿಡಲಾರಂಭಿಸಿದ್ದ. ಈಗ ತಿಳಿಯಿತು ಆಟೋದಲ್ಲೇ ನಿನ್ನ ಆಕ್ಟಿವಾ ವೇಗವನ್ನು ಮೀರಿಸುತ್ತೀನಾದರೆ, ಇನ್ನು ಬೈಕ್ ಕೊಡಿಸಿದರೆ....ಹೇಗೆಂದು ಹೇಳಬಹುದು ಎಂದು. ಹಾಗಾಗಲಿಲ್ಲ. ಬದಲಾಗಿ, ಅವ ಆಟೋವನ್ನ ಅದ್ಯಾವುದೋ ಗೇಟ್ ಒಳಗೆ ನುಗ್ಗಿಸಿದ. ಈ ಗೇಟೇನು ಅಂಥಾ ಭವ್ಯವಾಗೇನಿರಲಿಲ್ಲ. ಆದರೂ ಇವ ಏಕೆ ಹೋದ ಎಂದು ತಿಳಿಯುವ ಕುತೂಹಲದಿಂದ ಹೋದೆ. ನೋಡಿದರೆ ಅಲ್ಲೊಂದು ಅಪರೂಪವಾದ ಜಿಂಕೆ ಆಕಡೆ ಮುಖ ಮಾಡಿ ಮಲಗಿದೆ. ಅದರ ಕಾಲುಗಳು, ಪಟ್ಟೆಗಳು ಕಾಣುತ್ತಿವೆ, ಆದರೆ ಮುಖ ಆಕಡೆ ತಿರುಗಿಸಿರುವ ಕಾರಣ ಮುಖ ಮಾತ್ರ ಕಾಣುತ್ತಿಲ್ಲ. ನನ್ನ ತಮ್ಮನನ್ನು ಇಲ್ಲಿಗೇಕೆ ಬಂದೆಯೆಂದು ಗದರಿಸಿ, ಪರೀಕ್ಷೆಗೆ ಓದಿಕೋ ಎಂದು ಬೈದು ಮನೆಗಟ್ಟಿದೆ. ಅವನನ್ನು ಪರೀಕ್ಷೆಗೆ ಓದಕ್ಕಾಗಿ ಮನೆಗೆ ಕಳುಹಿಸಿದ್ದು ಕೇವಲ ನೆಪಮಾತ್ರಕ್ಕೆ. ಆ ಮನಮೋಹಕ ಜಿಂಕೆಯ ಮುಖ ಒಬ್ಬನೆ ನೋಡುವ ಕುತೂಹಲ, ಸರಿ ಅವನು ಸಪ್ಪೆ ಮೋರೆ ಹಾಕಿಕೊಂಡು ಮನೆಗೆ ಹೊರಟ. ನಾನೇ ಈ ಜಿಂಕೆಯ ಮುಖವಿರುವ ದಿಕ್ಕಿಗೆ ಹೋಗುವ ಎಂದರೆ, ಜಾಗವಿಲ್ಲ, ಜಿಂಕೆಯೇ ತಿರುಗಬೇಕು. ನಾನು ಒಂದು ಕ್ಷಣವೂ ತಡಮಾಡಲ್ಲಿಲ್ಲ. ಸಣ್ಣ ಕಡ್ಡಿಯಿಂದ ಜಿಂಕೆಗೆ ಸವರಿದೆ, ಕಚಗುಳಿ ಇಡುವ ಹಾಗೆ.
ಗರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್, ಸಿಂಹ ಗರ್ಜನೆ, ಒಂದೆ ಸಲಿಗೆ ಓಟ ಕಿತ್ತೆ. ಈಗ ಪೊದೆಗಳ ನಡುವೆ ಅವಿತು ಕುಳಿತೆ. ಜಿಂಕೆ ನನ್ನನ್ನು ಅಟ್ಟಿಸಿಕೊಂಡು ಬರುವ ಹಾಗೆ ಕಾಣಿತು. ಈ ನೆಪದಲ್ಲಾದರು ಜಿಂಕೆಯ ಮುಖವನ್ನ ನೋಡುವ ಎಂದು ಇಣುಕಿದೆ. ಯಪ್ಪಾ, ಅದೊಂದು ಭಯಂಕರ ದೃಶ್ಯ. ಸಿಂಹ ಬರುತ್ತಿದೆ ನನ್ನೆಡೆ, ಜೂಪಾದ ಹಲ್ಲನು ತೋರುತ್ತಾ, ನನಗೆ ಹಿಂದೆ ಜಿಂಕೆಯನ್ನು ನೋಡಿದ ಸ್ಪಷ್ಟ ನೆನಪು. ನನ್ನ ಕಣ್ಣಗಳನ್ನೆ ನಂಬದಾದೆ. ಈಗ್ಗೆ ಕೆಲವು ದಿನಗಳ ಹಿಂದೆ, ನನ್ನ ಒಬ್ಬ ಸ್ನೇಹಿತ ಒಂದು ಚಿತ್ರ ಕಳುಹಿಸಿದ್ದ, ಅದರಲ್ಲಿ ನಾಯಿಗೆ, ಗರುಡದ ಮುಖವಿತ್ತು, ಅದೊಂದು ಚಿತ್ರ ಕಲಾವಿದನ ಕಲಾಕೌಶಲ್ಯ ಎಂದು ಸುಮ್ಮನಾಗಿದ್ದೆ. ಹಾಗೆಯೆ, ಬೆಳಗ್ಗೆ ಸುಧಾ ಓದುವಾಗ, ಸಿಂಹುಲಿಯ ಚಿತ್ರ ನೋಡಿದ್ದೆ, ಸಿಂಹ ಮತ್ತು ಹುಲಿಯ ಸಮಾಗಮದಿಂದ ಹುಟ್ಟಿದ ಪ್ರಾಣಿ, ಸಿಂಹುಲಿ, ಅದರ ಮುಖ ಸಿಂಹದ್ದು ಆದರೆ ದೇಹ ಹುಲಿಯದ್ದು. ಒಂದು ಕ್ಷಣ ಹೆದರಿಕೆಯಾಗಿಯಾಯಿತು. ನನ್ನ ದೃಷ್ಟಿ ಈಗ ನನ್ನೆಡೆ ಧಾವಿಸುತ್ತಿರುವ ಸಿಂಹದ ದೇಹದ ಮೇಲೆ ಹರಿಯಿತು. ಹೌದು ನನ್ನ ಊಹೆ ನಿಜವಾಯಿತು. ಅದೊಂದು ಸಿಂಕೆ. ಭಯ ಮತ್ತಷ್ಟು ಹೆಚ್ಚಾಯಿತು. ನೋಡನೋಡುತ್ತಿದ್ದಂತೆಯೆ ಸಿಂಕೆ ನಿಷ್ಪಾಪಿ ಯುವಕನಾದ ನನ್ನನ್ನು ತಿನ್ನಲು ಬಾಯಿ ತೆರೆಯಿತು. ತಕ್ಷಣ ಕಣ್ಣು ಬಿಟ್ಟೆ, ಮೈ ಬೆಚ್ಚಗಾಗಿತ್ತು ಬೆವರಿತ್ತು, ಸದ್ಯ ಬದುಕಿದೆಯಾ ಬಡಜೀವವೇ ಎಂದು ಹೇಳುತ್ತಾ ಮತ್ತೆ ಕಣ್ಣು ಮುಚ್ಚಿ ನಿದ್ರಿಸಿದೆ. ಆನಂತರ ಆ ಸಿಂಕೆಯು ಕನಸಿನಲ್ಲಿ ಕಾಣಿಸಲಿಲ್ಲ.

ಇದನ್ನು ಗಮನಿಸಿ, ನಮ್ಮ ಸುತ್ತಮುತ್ತಲಿನ ಆಗು ಹೋಗುಗಳು ಹೇಗೆ, ಎಷ್ಟೊಂದು ಪರಿಣಾಮ ಬೀರುತ್ತದೆ ಎಂದು ಅರ್ಥವಾಗುತ್ತದೆ. ಬೆಳಗ್ಗೆ ಓದಿದ ಲೇಖನ ಅದೂ ನಾನು ಸುಮ್ಮನೆ ತಿರುವಿ ಹಾಕಿದ ಪುಟ ಹೀಗೆ ನಿದ್ರೆಯಲ್ಲಿ ತೊಂದರೆ ಕೊಡುತ್ತೆದೆ ಎಂದರೆ ಏನು. ಈ ಮನಸ್ಸು ನಿಜಕ್ಕೂ ತುಂಬಾ ನಿಗೂಢ.
ಮತ್ತೊಂದು ವಿಷಯ, ಕನಸಿನಲ್ಲಿದ್ದಾಗ ಧುತ್ತನೆ ಎಚ್ಚರವಾಗುವುದು.
ನನ್ನ ಪ್ರಕಾರ, ಯಾವುದು ನಮ್ಮ ಅನುಭವಕ್ಕೆ ಬಂದಿರುವುದಿಲ್ಲವೋ ಅಂತಹ ಸನ್ನಿವೇಶ ಕನಸಿನಲ್ಲಿ ಬಂದರೆ ನಮಗೆ ತಕ್ಷಣ ಎಚ್ಚರವಾಗುತ್ತದೆ.
ಉದಾ: ನನ್ನನ್ನೇ ಯಾರೋ ತಿನ್ನುವುದು. ನಾನು ಜೀವಂತವಿರುವ ತನಕ, ಅಥವಾ ನನ್ನ ಜ್ಞಾನೇಂದ್ರಿಯಗಳು ಸರಿಯಾಗಿ ಕೆಲಸ ಮಾಡುವ ತನಕ ಇದು ನಡೆಯದ ಮಾತು. ಇಂತಹ ಘಟನೆ ನನ್ನ ಅನುಭವಕ್ಕೆ ಬರಲು ಸಾಧ್ಯವೇ ಇಲ್ಲ.
ಹಿಂದೆ ಹೀಗೆಯೆ ನಾನು ಒಂದು ಎತ್ತರದ ಬೆಟ್ಟದಿಂದ ಜಿಗಿದಿದ್ದೆ, ಆಗಲೂ ತಕ್ಷಣ ಎಚ್ಚರವಾಯಿತು.

ನಿಮಗೂ ಇಂತಹ ಕನಸು ಬಿದ್ದಿವೆಯೇ? ಬರೆದು ತಿಳಿಸಿ.

~.~
  • Sunil Jayaprakash ರವರ ಬ್ಲಾಗ್
  • Login or register to post comments
  • 751 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 21, 2006 - 12:22pm — tvsrinivas41

ಕನಸು

tvsrinivas41's picture

ಕನಸಿನಲ್ಲಿ ನಮ್ಮ ಸುಪ್ತ ಮನದಲ್ಲಿರುವ ಭಾವನೆಗಳು ವ್ಯಕ್ತವಾಗುತ್ತವೆ. ಎಚ್ಚರದಿಂದಿರುವಾಗ ವ್ಯಕ್ತಪಡಿಸಲಾಗದ ಅನಿಸಿಕೆಗಳು ಕನಸಿನಲ್ಲಿ ವ್ಯಕ್ತವಾಗುವುವು. ಆದರೆ ಅದರ ನೆನಪು ಸಾಮಾನ್ಯವಾಗಿ ಸ್ವಲ್ಪ ಕಾಲವಿರುತ್ತದೆ.
ಸುಧಾ ವಾರಪತ್ರಿಕೆಯಲ್ಲಿಯ ಸಿಂಹುಲಿ ಓದಿದ್ದೀರ ಅನ್ಸತ್ತೆ.
ನಿಮ್ಮ ತಮ್ಮನನ್ನು ಕೇಳಿ, ಅವರು ನಿಮಗೆ ತದ್ವಿರುದ್ಧವಾದ ಕನಸು ಕಂಡಿರಬೇಕು.

ಕನಸುಗಳನ್ನು ಬರೆದಿಡುವುದು ಒಳ್ಳೆಯ ಕೆಲಸ. ಆದರೆ ಎಲ್ಲವನ್ನೂ ಹೊರಗೆಡಹಬೇಡಿ. ಕೆಲವೊಮ್ಮೆ ನಿಮ್ಮ ಚಿಂತನೆಗಳ ಧಾಟಿಯ ಬಗ್ಗೆ ಇತರರಿಗೆ ತಿಳಿಯುವ ಸಾಧ್ಯತೆ ಇರುತ್ತದೆ.
ಕೆಲಸ ಇಲ್ಲದೇ ಇದ್ದಾಗ ಓದಲು ಚೆನ್ನಾಗಿರುತ್ತದೆ ಅಲ್ವಾ?
ನಾನೂ ಆಗಾಗ ನಾ ಕಂಡ ಕನಸುಗಳ ಬಗ್ಗೆ ಬರೆಯುತ್ತಿರುವೆ.
ಒಮ್ಮೆ ನಾ ಕಂಡ ಕನಸಿನಲ್ಲಿ, ಜಗತ್ತಿನಲ್ಲಿ ಎಲ್ಲೆಡೆ ಎಲ್ಲರೂ ಕನ್ನಡವನ್ನೇ ಬಳಸುತ್ತಿದ್ದಾರೆ. ಹೀಗೆ ಆದರೆ ಎಷ್ಟು ಚಂದ ಅಲ್ವಾ? ಎಷ್ಟೇ ಆಗಲಿ ಕನಸು ಕನಸೇ.

ಉಪನಿಷತ್ತಿನಲ್ಲಿ ಹೇಳ್ತಾರೆ - ಈ ಜೀವನವೇ ಒಂದು ಕನಸು. ಆ ಕನಸಿನಿಂದ ಆಚೆ ಬರುವವರೆವಿಗೆ ಅದು ಕನಸೆಂದು ತಿಳಿಯುವುದಿಲ್ಲ. ನಿಮಗೆ ಹಾಗೇ ಆಯ್ತಲ್ವೇ?

ಇನ್ನೊಮ್ಮೆ ನನ್ನ ಕನಸಿನಲ್ಲಿ ನನ್ನ ಶವವನ್ನು ಕಂಡಿದ್ದೆ. ಅಂದ್ರೆ ಆತ್ಮ ದೇಹ / ಶರೀರವನ್ನು ನೋಡ್ತಿತ್ತು ಅಂತಲಾ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನಸು
  • ನನ್ನ ಮುಖಚಿತ್ರ
  • ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
  • ರಾಜ ಮುದ್ದು ರಾಜ
  • ಬಯಕೆ
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anupkumart
    ಉ: ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
    September 5, 2008 - 9:57am
  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
  • hpn
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 3:11am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator