ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ

August 20, 2007 - 2:58pm — Sunil Jayaprakash

ಸದರಿ ಬರಹ, ಕನ್ನಡದಲ್ಲಿ ವಿಜ್ಞಾನದ ವಿಷಯಗಳನ್ನು ಪಾಠ ಮಾಡುವವರಿಗೆ, ಕನ್ನಡದ ವೈಜ್ಞಾನಿಕ ಬರಹಗಾರರಿಗೆ, ಕನ್ನಡ ಸಾಹಿತ್ಯದ ಮೇಷ್ಟರುಗಳಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗಿಡ, ಮರಗಳನ್ನು ಇಷ್ಟಪಡುವವರಿಗೆ ಮೆಚ್ಚುಗೆಯಾಗಬಹುದು. ಸರ್ವಜ್ಞನ ವಚನಗಳ ಮೂಲಕ ನಾವು ಹೇಗೆ ಹುರುಪನ್ನು(Motivation) ಪಡೆದು ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನು ರೂಪಿಸಬಹುದು ಎಂಬುದನ್ನು ನಿರೂಪಿಸುತ್ತದೆ ಕೂರ್ ಬೇಕೇ ಕೂರಿನ ಕೊನೆಯ ಕಂತು, "ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜೀಸ್".

ಪೀಠಿಕೆ
ಹುಟ್ಟು ಈ ಜಗತ್ತಿನ ಒಂದು ಅತ್ಯಂತ ಸಂಕೀರ್ಣವಾದ ಚಟುವಟಿಕೆ. ಯಾವುದೇ ಜೀವಿಯಿರಲಿ, ಅದರ ಹುಟ್ಟು ನಿಜಕ್ಕೂ ವಿಸ್ಮಯ. ಸದರಿ ಬರಹದಲ್ಲಿ ನಾವು “ಹೂಗಿಡಗಳು ಹೇಗೆ ಪೆರ್ಚುತ್ತವೆ (ಸಂತಾನೋತ್ಪತ್ತಿ ಮಾಡುತ್ತವೆ)?”, “ಈ ಹೂಗಿಡಗಳ ಪೆರ್ಚಿಗೂ ಕನ್ನಡದ ಕಾನ್ಸೆಪ್ಚುಯಲೈಸೇಶನ್ನಿಗೂ ಏನು ಸಂಬಂಧ?”..ಹೀಗೆ ಹೂಗಿಡಗಳಿಗೆ ನಂಟಾದ ಒಂದು ವಿಷಯವನ್ನು ಚರ್ಚಿಸೋಣ. ಹಾಂ!!!!ಹೂವುಗಳಿಲ್ಲದ ಗಿಡಗಳೂ ಇವೆ. ಆದರೆ ಪ್ರಸ್ತುತ ಬರಹ ಕೇವಲ ಹೂಗಿಡಗಳಿಗೆ ನಂಟಾದದ್ದು.

ಹೂಗಿಡಗಳ ಪೆರ್ಚು(ಸಂತಾನೋತ್ಪತ್ತಿ)

ಚಿಕ್ಕವರಿದ್ದಾಗ ಬಹುಶಃ ನಾವೆಲ್ಲರೂ ಇದನ್ನು ಓದಿರುತ್ತೇವೆ, Pollination. ಬಹುತೇಕ ಗಿಡಗಳು ತಮ್ಮ ಸಂಕುಲವನ್ನು ಬಾಳಿಸಿಕೊಂಡು ಹೋಗುವುದು ಈ ಹೂವುಗಳಿಂದ. ಹೂವುಗಳು ಯಾವ ಜೀವಿಯನ್ನು ತಾನೇ ಆಕರ್ಷಿಸಿಲ್ಲ. ಚಿಕ್ಕಮಕ್ಕಳು, ಮದುಮಕ್ಕಳಿನಿಂದ ಹಿಡಿದು ಮುದುಕರಿಗೂ ಇಷ್ಟವಾಗುವಂತಹ ಹೂವುಗಳಿವೆ. ಕಾರಣ (ಪರಿಮಳ, ಆಕಾರ, ರಚನೆ, ರುಚಿ, ರಸ, ಅಂದ, ಬಣ್ಣ ಹೀಗೆ) ಎನೇ ಇರಬಹುದು ಹೂವುಗಳ ಸೆಳೆತದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹೂಗಿಡಗಳ ಸಂಕುಲ ಹೇಗೆ ಪೆರ್ಚುತ್ತದೆ. ಗಿಡಸಂಕುಲದ ಪೆರ್ಚಿಗೆ(ಸಂತೋನೋತ್ಪತ್ತಿಗೆ) ಪಾಲಿನೇಶನ್ (ಅಥವಾ ಸಂಸ್ಕೃತದಲ್ಲಿ ಪರಾಗಸ್ಪರ್ಷ) ಎನ್ನುತ್ತಾರೆ. Pollination ಎಂಬ ಕಾನ್ಸೆಪ್ಟನ್ನು ಕನ್ನಡದಲ್ಲಿ ಹೇಗೆ ಅರಗಿಸಿಕೊಳ್ಳಬಹುದು. Pollination, Pollen grains, Pollenಆಹಾ!! ಸರಿ ಈ ಕೂರ್ ಎಂದರೇನು ಅಂತ ಗಮನಿಸೋಣ. ಭಾಗ ೧, ಭಾಗ ೨, ಭಾಗ ೩ ರಲ್ಲಿ ನಾನು ಈಗಾಗಲೇ ಕೂರ್ ಪದದ ಬಗ್ಗೆ ಸಾಕಷ್ಟು ವಿವರಿಸಿರುವ ಹಾಗೆ. ಈ ಕೂರ್ ಗಳನ್ನು ಪರಸ್ಪರ ಪ್ರೀತಿ, ನಲ್ಮೆ, ಸ್ನೇಹವನ್ನು ಬೆಸೆಯುವ ಕಣಗಳು ಎಂಬುದಾಗಿ ತಿಳಿದುಕೊಳ್ಳಬಹುದಾದರೆ, ಕೂರುಗಳನ್ನು ಕಣಗಳ ರೀತಿ Pollen ಎಂಬುದಾಗಿ ಬಳಸಬಹುದು. ಎಲ್ಲಿ ಸ್ನೇಹದ ಬೆಸುಗೆ ಸಾಧ್ಯವೋ ಅಲ್ಲಿ ಸೆಳೆತ ಇದ್ದೇ ಇರುತ್ತದೆ. ನನಗನ್ನಿಸುವ ಹಾಗೆ ಹೇಳುವುದಾದರೆ, ಕೂರ್ ಎಂಬ ಕನ್ನಡದ ಪದವನ್ನು Pollen (ಸಂಸ್ಕೃತದಲ್ಲಿ-ಪುಷ್ಟಧೂಳಿ) ಎಂಬುದಾಗಿ ಬಳಸಬಹುದು. ನಾವುಗಳು ಕೂರ್ ಎಂಬುದನ್ನು Pollen ಎಂಬುದಕ್ಕೆ ಬಳಸಬಹುದಾದರೆ, Pollen grains (ಕೂರುಕಣ), Pollination(ಕೂರುಪರ್ವ) ಎಂಬುದಾಗಿ ಬಳಸುತ್ತಾ ನಮ್ಮ ಕನ್ನಡವನ್ನು ಗಟ್ಟಿಗೊಳಿಸಿಕೊಳ್ಳಬಹುದು.

ಒಂದೇ ಮಾತು (To Put it in a Nutshell)


“ಹೂವುಗಳ ಕೂರ್ ಕಣಗಳು ಒಂದರ ಒಳಗೊಂದು ಕೂತು, ಕಲೆತು, ಕೂಡಿ ಆಯಾ ಹೂಗಿಡಗಳ ಪೆರ್ಚಿಗೆ ಕಾರಣವಾಗುವ ಕ್ರಿಯೆಗೆ ಕೂರುಪರ್ವ ಎಂದು ಹೆಸರು” Sticking out tongue Laughing out loud

  • ಅಚ್ಚಗನ್ನಡ
  • ಕನ್ನಡಿಗರ ಊಟ
  • ಕನ್ನಡಿಗರ ಮದುವೆ
  • ಗಣಿ
  • ರತ್ನ
  • ರಸಿಕ
  • ವಚನ
  • ವಜ್ರ
  • ವಿಜ್ಞಾನ
  • ಸರ್ವಜ್ಞ
~.~
  • Sunil Jayaprakash ರವರ ಬ್ಲಾಗ್
  • Login or register to post comments
  • 601 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 20, 2007 - 3:04pm — Sunil Jayaprakash

ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ

Sunil Jayaprakash's picture

ಕೊನೆಯಲ್ಲಿ ಮತ್ತೊಮ್ಮೆ ಮುಖ್ಯಾಂಶಗಳು Eye-wink

ಗೆಳೆಯರೆ, ಕಳೆದ ಮೂರು ವಾರಗಳಿಂದ ನಾನು ಏನನ್ನು ಯೋಚಿಸುತ್ತಿದ್ದೆ, ಕನ್ನಡದ ಗಟ್ಟಿತನದ ಬಗ್ಗೆ ಅದೆಷ್ಟು ಹೆಮ್ಮೆನಿಸಿತ್ತು ಎಂಬುದನ್ನು, ನಾಲ್ಕು ಕಂತುಗಳಲ್ಲಿ ಕೂರ್ ಕುರಿತಾದ ನನ್ನ ಆಲೋಚನೆಗಳ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇನೆ. ಇಷ್ಟೆಲ್ಲ ಕೂರ್ ಎಳೆಗಳಿಗೆ (ಭಾಗ ೧ - ಸರ್ವಜ್ಞ ಮತ್ತು ಹಂಸಲೇಖ, ಭಾಗ ೨ - ಕನ್ನಡಿಗರ ಮದುವೆ, ಭಾಗ ೩ - ಕನ್ನಡಿಗರ ಊಟ ಮತ್ತು ಸದರಿ ಭಾಗ ೪ - ಅಪ್ಲೈಡ್ ಟರ್ಮಿನಾಲಜಿ ಕಾರಣವಾದ ಸರ್ವಜ್ಞನ ವಚನವನ್ನು ಮತ್ತೊಮ್ಮೆ ಹಾಕುತ್ತಿದ್ದೇನೆ.

ಮಲ್ಲಿಗೆಯ ಹೂ ಲೇಸು, ಬಲ್ಲವರ ಕೆಳೆ ಲೇಸು,
ನಿಲ್ಲದೇ ಕರೆವ ಹಸುಲೇಸು, ಕೂರ್ಪವಳ
ಸೊಲ್ಲು ಲೇಸೆಂದ ಸರ್ವಜ್ಞ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2007 - 3:17pm — mahesha

ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ

mahesha's picture

ಮಾರಾಯ

ದೂಳ್ ಇದು ಕನ್ನಡದ್ದೇ ಆದ ಒರೆ....
http://dsal.uchicago.edu/cgi-bin/philologic/getobject.pl?c.1:1:696.burro...

'ಪುಷ್ಪಧೂಳಿ' ಅನ್ನುವ ಬದಲು 'ಹೂದೂಳು' ಅಂದ್ರೆ ಮುಗಿದು ಹೋಗುವುದು.

ಅದೂ ಅಲ್ಲದೆ ಪುಡಿ ಅಂದ್ರೆ pollen ಅಂತ ಕೂಡ ಅರಿತವಿದೆ.
http://dsal.uchicago.edu/cgi-bin/philologic/getobject.pl?c.1:1:1899.burr...

ಬಂಡು ಅಂದ್ರೆ nectar or pollen of flowers
http://dsal.uchicago.edu/cgi-bin/philologic/getobject.pl?c.1:1:2657.burr...

ಇನ್ನು grainಗೆ ಕನ್ನಡದಲ್ಲಿ ಕಾಳು, ಅವುಡು, ( ಮರಳು ಕಾಳು ಅಂತ ಬಳಕೆ ಇದೆ. )

ಇನ್ನು pollenationಗೆ ಹೂದೂಳು-ಕೂಡಿಕೆ, ಹೂದೂಳ-ಸೇರಿಕೆ, ಹೂದೂಳ-ಕಲೆತ ಅಂತ ಸುಲಬವಾಗೇ ಹೇಳಬೋದು.

ಇನ್ನು ಸಂತಾನೋತ್ಪತ್ತಿ/reproduction ಇದಕ್ಕೆ ಹೆರುವುದು, ಹಡೆವುದು, ಹೆರ್ತ, ಹಡೆತ, ಮಕ್ಕಳ ಮಾಡು, ಈ ಒರೆಗಳು ಆಗಲೇ ಬಳಕೆಯಲ್ಲಿವೆ.

ಪೆರ್ಚು = ಹೆಚ್ಚು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2007 - 3:28pm — Sunil Jayaprakash

ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ

Sunil Jayaprakash's picture

ಅಪ್ಪಾ ಮಹೇಶ, ನೀನು ಹೇಳಿದ ಯಾವುದನ್ನೂ ನಾನು ಇಲ್ಲ ಎನ್ನುವುದಿಲ್ಲ. ಬಹುಶಃ ನೀನು ಕೂರ್ ಕುರಿತಾದ ಬರಹಗಳನ್ನು ಸರಿಯಾಗಿ ಗ್ರಹಿಸಲಿಲ್ಲ ಅನ್ನಿಸುತ್ತೆ. ಎಲ್ಲದಕ್ಕೂ ಸಂಸ್ಕೃತ ಪದಗಳಿಗೆ ಮೊರೆ ಹೋಗುವ ನಾವುಗಳು, ನಮ್ಮದೇ ಸರ್ವಜ್ಞನ ವಚನಗಳಲ್ಲಿ (ಹಾಗು ಇತರ ಹಳಗನ್ನಡ ಸಾಹಿತ್ಯದಲ್ಲಿ) ಅಡಕವಾಗಿರಬಹುದಾದ ಅದೆಷ್ಟೋ ಕನ್ನಡ ಪದಗಳನ್ನು ಸರಿಯಾಗಿ ಪ್ರಚಾರಕ್ಕೆ ತರುವ ದಿಸೆಯಲ್ಲಿ ನಾವುಗಳು ಹೇಗೆ ಉಂಕಿಸಬಹುದು ಎಂದು ಹೇಳುತ್ತಿದ್ದೇನೆ ಅಷ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2007 - 3:33pm — mahesha

ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ

mahesha's picture

ನೀನು ಏ ಸರ್ವಜ್ನನ ವಚನದ ಬಗ್ಗೆ ಹೇಳಿರುವೆ?

ಕೂರ್‍ಗೂ pollinationಗೂ ನೀನು ಎಳೆ ನಂಟು ಕಗ್ಗಂಟಾಯ್ತು ನಂಗೆ!!
ಇರಲಿ, ಬೇರೆಯವರು ಅದನ್ನು ಅರಿತು ಹೇಳಿದ ಮೇಲೆ ನೋಡೋಣ!!

ನನಗಂತೂ ಇದು ಸರಿಯಾಗಿ ಅರಿತವಾಗಲಿಲ್ಲವೋ? ಇಲ್ವೇ ಬರಹವೇ ಗೋಜಲೋ? ನಾ ಕಾಣೆನು!
ಆದ್ರೆ pollen, pollination ಇವಕ್ಕೆಲ್ಲ ಸುಮ್ಸುಮ್ನೆ ನೀನು ತೀರಾ ಗೋಜಲು ಮಾಡಿಕೊಂಡಿದ್ದೀಯೆಂದನ್ನಿಸಿತೆನಗೆ!

ಅಡ್ಡಿಯಿಲ್ಲ, ನಂನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 20, 2007 - 4:04pm — Sunil Jayaprakash

ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ

Sunil Jayaprakash's picture

ಅಯ್ಯೋ ಮಹೇಶ, ಗೋಜಲೂ ಇಲ್ಲ, ಮಣ್ಣಾಂಗಟ್ಟೀನೂ ಇಲ್ಲ. ಕೂರ್->ಸ್ನೇಹವನ್ನು ಬೆಸೆಯುವುದು, ಪ್ರೀತಿ, ನಲ್ಮೆ, ಬೆಸುಗೆ (ಹಿಂದಿನ ಭಾಗಗಳನ್ನು ಓದಿದವರಿಗೆ ಇದು ಗೊತ್ತಾಗಿಯೇ ಇರುತ್ತದೆ). ಸರ್ವಜ್ಞನ ವಚನದಲ್ಲಿದ್ದ "ಮಲ್ಲಿಗೆಯ ಹೂ.....ಕೂರ್ಪವಳ ಸೊಲ್ಲಿನಿಂದ", ಆ ಕೂರ್ ಪದವನ್ನು ಒಂದು root ಆಗಿ ತೆಗೆದುಕೊಂಡು ಈಗಿನ ಸನ್ನಿವೇಶದಲ್ಲಿ ನಾವು ಹೇಗೆ ಬಳಸಬಹುದು ಅಂತ ತೋರಿಸಿದ್ದೇನೆ.

ಇದು ಪಾಲಿನೇಶನ್ನಿಗೆ ಮಾತ್ರವೇ ಅನ್ವಯಿಸಬೇಕು ಅಂತ ಏನೂ ಇಲ್ಲ. ನಾವು ನೀವು ಏನನ್ನಾದರು ಹೊಸತನ್ನು ಕಂಡುಹಿಡಿದರೆ ಇಂತಹ ಪದಗಳನ್ನು ಬಳಕೆಗೆ ತರಲು ಪರಿಗಣಿಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 24, 2007 - 2:55pm — Sunil Jayaprakash

ಉ: ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ

Sunil Jayaprakash's picture

ಈ ಬರಹಕ್ಕೆ ನಂಟಾದಂತಹ ಒಂದು ಸುದ್ಧಿ ನೆನ್ನೆಯ ಪ್ರಜಾವಾಣಿಯಲ್ಲಿ ಬಂದಿದೆ. ಎಲ್ಲರೂ ಓದಿ ಅದನ್ನು. ಹೊಸ ವಿಜ್ಞಾನ ಪದಗಳ ಅನ್ವೇಷಣೆ. ಇದರಲ್ಲಿ ಇರುವ ಒಂದು ವಾಕ್ಯ ಅದರ ಆಶಯದಿಂದಾಗಿ ತುಂಬಾ ಇಷ್ಟವಾಯಿತು. "ಶಬ್ದ ಮಡಿವಂತಿಕೆಯಿಂದ ಭಾಷಾ ಬೆಳವಣಿಗೆ ಸಾಧ್ಯವಿಲ್ಲ".

ಈ ಕೂರ್ ಎಳೆಗಳಲ್ಲಿ "ಕೂರ್->Pollen" ಎಂಬುದೇ ದೊಡ್ಡ ಚರ್ಚಾ ವಸ್ತುವಾಗಬೇಕಿಲ್ಲ. ಇದು ನಾವುಗಳು "ಕನ್ನಡವನ್ನು ಸೃಜನಶೀಲ ಸಾಹಿತ್ಯಕ್ಕೆ ಮಾತ್ರವೇ ಸೀಮಿತವಾಗಿಸಿ, ಮಿಕ್ಕ ಟೆಕ್ನಿಕಲ್ ವಿಷಯಗಳಿಗೆ ಬಂದಾಗ ಬರೀ ಅನುವಾದದ ದೃಷ್ಟಿಯಿಂದ ಸಂಸ್ಕೃತ ಪದಗಳ ಕೃತಕವಾದ ಬಳಕೆಗಳಿಗೆ ಮೊರೆಹೋಗಿ ಅಲ್ಪತೃಪ್ತರಾಗದೆ, ಕನ್ನಡದ್ದೇ (ಅದು ತುಳು, ಕೊಡವ, ಬಡಗ..ಹೀಗೂ ಇರಬಹುದು) ಪದಗಳ ಹರಿವು(ವ್ಯಾಪ್ತಿಯನ್ನು) ಹೆಚ್ಚಿಸಿಕೊಂಡು ಜಗತ್ತಿನ ಜ್ಞಾನವನ್ನು ಕನ್ನಡದಲ್ಲಿ ಕಾನ್ಸೆಪ್ಚುಯಲೈಸ್ ಮಾಡಲು ಏಕೆ ಪ್ರಯತ್ನಿಸಬಾರದು" ಅಂತ ಕಂಡುಕೊಳ್ಳುವುದು.

ಕೆಲವರಿಗೆ ಇಂತಹ ಹೊಸ ಪದಗಳ ಪ್ರಯೋಗ, ಹೊಸ ಪದಗಳನ್ನು ಹುಟ್ಟಿಸುವುದು ಕೇವಲ ಒಂದು ಟ್ರೆಂಡ್ ಅನ್ನಿಸಬಹುದು ಅಥವಾ ಮತ್ತೂ ಕೆಲವರಿಗೆ ಗಿಮಿಕ್, ಸ್ಟಂಟ್ ಅಂತಲೂ ಅನಿಸಬಹುದು. ಆದರೆ ಕೆಲವರಿಗೆ ಅದು ಹವ್ಯಾಸವಾಗಿರಬಹುದು, ಕೆಲವರಿಗೆ ಅದು ಕನ್ನಡದಲ್ಲಿ ಜ್ಞಾನದ ತುಡಿತವಿರಬಹುದು...ಒಟ್ಟಿನಲ್ಲಿ ಕನ್ನಡದ ಗಟ್ಟಿತನ ಎಲ್ಲರಿಗೂ ತಿಳಿಯುವುಂತಾಗಿ, ಪೊಳ್ಳು ಜೊಳ್ಳು (ಮಹೇಶ ಇವುಗಳ ಬಗ್ಗೆ ಪ್ರಸ್ತಾಪಿಸಿದ ಒಂದು ಬರಹ) ಅಂತ ಬೆಪ್ಪು ಬೆಪ್ಪಾಗಿ ಬಡಬಡಾಯಿಸದಿದ್ದರೆ ಸಾಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)
  • ಕೂರ್ ಬೇಕೇ ಕೂರ್ - ಭಾಗ ೩ (ಕನ್ನಡಿಗರ ಊಟ)
  • ಕೂರ್ ಬೇಕೇ ಕೂರ್ - ಭಾಗ ೧
  • ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು
  • ಎಲ್ಲರಿಗೂ ಸ್ವಾಗತ!
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸರಳ ಜೀವನ
  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ನಿನ್ನ ಪೂಜೆಗೆ ಬಂದ ಮಹದೇಸ್ವರಾ
    July 9, 2008 - 6:40pm
  • madhava_hs
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 6:36pm
  • ನೀತಾ
    ಉ: ಹಗಲು-ಇರುಳು
    July 9, 2008 - 6:33pm
  • ಸಂಗನಗೌಡ
    ಉ: ‘ಕಿವಿ’ ಕಡೆ ಗಮನ ಕೊಡಿ; ಇಲ್ಲದಿರೆ ಎಲ್ಲರಿಗೂ ‘ಕೈ’ ಕೊಡಬೇಕು!
    July 9, 2008 - 6:28pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 46 ಅತಿಥಿಗಳು ಆನ್ಲೈನ್ ಇರುವರು.


ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು ।
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು ।।
ಕ್ಷಿತಿ ಗರ್ಭಧರಿಸುವಳು ಮತ್ತುದಿಸುವುದು ಜೀವ ।
ಸತತ ಕೃಷಿಯೋ ಪ್ರಕೃತಿ -- ಮಂಕುತಿಮ್ಮ ।

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator