ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Sunil Jayaprakash ರವರ ಬ್ಲಾಗ್

ಕೂರ್ ಬೇಕೇ ಕೂರ್ - ಭಾಗ ೧

July 21, 2007 - 9:25pm — Sunil Jayaprakash

ತೊದಲ್ನುಡಿ, ಈ ಬ್ಲಾಗಲ್ಲಿ ಸ್ವಲ್ಪ ಸಸ್ಪೆನ್ಸ್ ಇದೆ. ನೆನಪಿರಲಿ ಚಿತ್ರದ "ಕೂರಕ್ಕುಕ್ಕಳ್ಳಿ ಕೆರೆ" ಹಾಡನ್ನು ಕೇಳುತ್ತಾ ಈ ಬ್ಲಾಗನ್ನೋದಿ. ಸೀರಿಯಸ್ಲಿ ಗೆಳೆಯರೆ, ಅಲುಮಿನಿಯಮ್ ತಡಕುತ್ತಿದ್ದವನಿಗೆ ಒಮ್ಮೆಗೇ ಮಣಗಟ್ಟಲೆ ವಜ್ರ ಸಿಕ್ಕಿಬಿಟ್ಟರೆ ಏನಾಗುತ್ತೋ ಆ ಅನುಭವವಾಗ್ತಾ ಇದೆ ನನಗೆ. ಸಂತೋಷದ ಅಲೆಯಲ್ಲಿ ತೇಲುತ್ತಾ, ತೇಲುತ್ತಾ ಮತ್ತೂ ತೇಲುತ್ತಾ ಆಕಾಶದಲ್ಲಿ ಹಾರಾಡುವ ಹೀಲಿಯಮ್ ಬಲೂನಿನಂತಾಗಿದೆ ನನ್ನ ಮನಸ್ಸು. ನನ್ನ ಅನಿಸಿಕೆಯಲ್ಲಿ ಈ ಬ್ಲಾಗ್ ಇವರುಗಳಿಗೆ ಇಷ್ಟವಾಗಬಹುದು.

೧. ತುಂಬಾ ಮುಖ್ಯವಾಗಿ "LOVE" ಮಾಡುತ್ತಿರುವವರಿಗೆ ಅಂದರೆ ಕನ್ನಡದ ಗರ್ಲ್‌ಫ್ರೆಂಡ್ಸ್/ಬಾಯ್‌ಫ್ರೆಂಡ್ಸ್ ಇರುವವರಿಗೆ Eye-wink
೨. ಅಚ್ಚಗನ್ನಡದಲ್ಲಿ ಪ್ರೇಮವನ್ನು ತೋಡಿಕೊಳ್ಳಲು ತಿಣುಕಾಡುತ್ತಿರುವವರಿಗೆ.
೩. ವಿಜ್ಞಾನಕ್ಕೆ ಸಂಬಂಧಪಟ್ಟ ಅಚ್ಚಗನ್ನಡ ಪದಗಳ ಹುಡುಕಾಟದಲ್ಲಿರುವವರಿಗೆ.
೪. ಸರ್ವಜ್ಞನ ವಚನಗಳನ್ನು ಮೆಚ್ಚುವವರಿಗೆ.
೫. ಕಾವ್ಯ-ಕಲಾ ರಸಿಕರಿಗೆ...ಮರೆತಿಲ್ಲ ಸ್ವಾಮಿ ನಿಮಗೂ ಕೂಡ.

ಎಚ್ಚರಿಕೆ : ಈ ಬ್ಲಾಗಿನಲ್ಲಿ ಒಂದಕ್ಕೊಂದು ಸಂಬಂಧವೇ ಇರದ ಏನೇನೋ ವಿಷಯಗಳೂ ಅಲ್ಲಲ್ಲಿ ತೂರಿರುವಂತೆ ಭಾಸವಾಗಬಹುದು.

ಸರ್ವಜ್ಞ ಮತ್ತು ಹಂಸಲೇಖ

ಕಳೆದ ವಾರ ನಾನು ನನ್ನ ಜೀಮೇಯ್ಲ್ ಸ್ಟೇಟಸ್ಸಿನಲ್ಲಿ ' "ಕೂರ್" ಬೇಕೆ "ಕೂರ್" ' ಎಂದು ಹಾಕಿಕೊಂಡಿದ್ದೆ. ಹಾಗೆಂದರೇನು ಅಂತ ಪಿಂಗ್ ಮಾಡಿದ ಕೆಲವರನ್ನಂತೂ ಸಿಕ್ಕಾಪಟ್ಟೆ ಗೋಳುಹೊಯ್ದುಕೊಂಡುಬಿಟ್ಟಿದ್ದೇನೆ Eye-wink ನನ್ನಿಂದ ತೊಂದರೆಗೊಳಗಾದವರಲ್ಲಿ ನಲ್ಮೆಯ ಕ್ಷಮೆ ಕೋರುತ್ತಾ.....

ಕಳೆದ ವಾರ ಒಂದು ಸರ್ವಜ್ಞನ ವಚನ ಓದಿದೆ. ಹೀಗಿದೆ ಅದು.
ಮಲ್ಲಿಗೆಯ ಹೂ ಲೇಸು, ಬಲ್ಲವರ ಕೆಳೆ ಲೇಸು,
ನಿಲ್ಲದೇ ಕರೆವ ಹಸುಲೇಸು, ಕೂರ್ಪವಳ
ಸೊಲ್ಲು ಲೇಸೆಂದ ಸರ್ವಜ್ಞ

ಇಲ್ಲಿ ಕಷ್ಟವೆನಿಸುವ ಪದ ಎಂದರೆ "ಕೂರ್ಪವಳ ಸೊಲ್ಲು" - ಈ ಕೂರ್ಪವಳ ಎನ್ನುವದರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಅಲೆದಾಡುತ್ತಿದ್ದ ನನಗೆ ಕನ್ನಡದ ಮತ್ತೊಂದು ಅನರ್ಘ್ಯ ರತ್ನವೊಂದು (೧) ಸಿಕ್ಕಿತು. ಹಾಗೆಯೇ ಈ ರತ್ನದಿಂದ ಎಷ್ಟೆಲ್ಲ ಆಭರಣಗಳು ಸಾಣೆಹಿಡಿಯಲ್ಪಟ್ಟಿದೆಯೋ ತಿಳಿಯದು. ಕೆಲವೇ ಕೆಲವು ಮಣಿಗಳ ಪ್ರಸ್ತಾಪ ಇಲ್ಲಿ ಮಾಡುತ್ತೇನೆ.

ಕೂರ್ಪವಳು = ಕೂರ್ತಳು, ಪ್ರೀತಿಯವಳು, ನಲ್ಲೆ, ಪ್ರಿಯೆ.
ಕೂರ್ಪವನು = ಪ್ರೀತಿಸುವವನು, ವಲ್ಲಭ, ನಲ್ಲ, ದಯಿತ, ಪ್ರಿಯ, ಮಾರ.

ಇಷ್ಟೇ ಆಗಿದ್ದರೆ ಪರವಾಗಿಲ್ಲ, ಆದರೆ ಬುದ್ಧಿ ಕೇಳಬೇಕಲ್ಲ. ಸರಿ ಕೂರ್ಪವನು, ಕೂರ್ಪವಳು ಎಂಬ ಪದಗಳಿವೆ ಎಂದ ಮೇಲೆ ಕೂರ್ಪ ಎಂಬ ನಾಮಪದವೂ ಇರಬೇಕಲ್ಲವೇ, ನೋಡಿದರೆ ಆಶ್ಚರ್ಯ!!!!
ಕೂರ್ಪ = ನಲ್ಮೆ, ಪ್ರೇಮ, ಪ್ರಿಯ, ಪ್ರೀತಿಯವನು(ಳು), ಹುಬ್ಬುಗಳ ನಡುವಿನ ಸ್ಥಳ.
ಸರಿ ಕೂರ್ಪ ಎಂಬ ನಾಮಪದ ಇದ ಎಂದ ಮೇಲೆ ಅದರ ಮೂಲಪದವೂ ಇರಬೇಕಲ್ಲವೇ. ಯೋಚಿಸಿದಾಗ ಹೊಳೆದದ್ದು, "ಕೂರ್". ಈ ಯೋಚನೆ ಬಂದಾಗ ತನ್ನಷ್ಟಕ್ಕೆ ತಾನೇ ಸಿಕ್ಕಾಪಟ್ಟೆ ನಗು ಬಂತು. "ಏನ್ ತಿಕ್ಲಾನೋ ನೀನು ಸುನಿಲ, ಕೂರು ಅಂದರೆ ಕೂತ್ಕೋ ಅಲ್ವೇನೋ" ಅಂತ ನನ್ನ ಮನಸ್ಸು ನನ್ನನ್ನೇ ಗೇಲಿ ಮಾಡಿತು. ಆದರೂ ಏನಾದರಾಗಲಿ ಅಂತ ಹುಡುಕಿದರೆ, ಮತ್ತಷ್ಟು ಆಶ್ಚರ್ಯ!!!!!!!!!!!!!!!!!!!!!!!
ಕೂರ್ = ನಲ್ಮೆ, ಸ್ನೇಹ, ಒಲವು, ಅಕ್ಕರೆ.....

ಏನಾಶ್ಚರ್ಯ ಅಂತೀರಿ. ಕನ್ನಡದಲ್ಲಿ ಕೂರ್ ಎಂದರೆ ನಲ್ಮೆ, ಸ್ನೇಹ ಅಂತಲೇ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಒಂದು ವಜ್ರ ಸಿಕ್ತು ಅಂತ ಸುಮ್ಮನಾಗಿಬಿಡುತ್ತಿದ್ದೆ. ಆದರೆ ವಜ್ರದ ಗಣಿ ಸಿಗುವ ಅದೃಷ್ಟ ಇತ್ತು ಅಂತ ಕಾಣತ್ತೆ. ಮನಸ್ಸು ಬಿಡಲೇ ಇಲ್ಲ.

ಏನು ಆ ವಜ್ರದ ಗಣಿ. ನನಗೆ ಹೇಗೆ ಸಿಕ್ತು. ಸದ್ಯದಲ್ಲೇ ನಿರೀಕ್ಷಿಸಿ, ಈ ಬ್ಲಾಗಿನ ಎರಡನೆಯ ಕಂತು <ಮುಂದುವರಿಯುವುದು>

  • ಅಚ್ಚಗನ್ನಡ
  • ಗಣಿ
  • ರತ್ನ
  • ರಸಿಕ
  • ವಚನ
  • ವಜ್ರ
  • ವಿಜ್ಞಾನ
  • ಸರ್ವಜ್ಞ
~.~
  • Sunil Jayaprakash ರವರ ಬ್ಲಾಗ್
  • Login or register to post comments
  • 685 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 21, 2007 - 10:57pm — shashi

ಉ: ಕೂರ್ ಬೇಕೇ ಕೂರ್ - ಭಾಗ ೧

shashi's picture

ಲೈ ... ಅದು ಕುಕ್ಕಳ್ಳಿ ಅಲ್ರೀ!!!! Sad
ಕುಕ್ಕರಹಳ್ಳಿ !!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2007 - 2:44pm — ವೈಭವ

ಉ: ಕೂರ್ ಬೇಕೇ ಕೂರ್ - ಭಾಗ ೧

ವೈಭವ's picture

ಬಾಯ್ ಪ್ರೆಂಡ್ ಬದಲು 'ಇನಿಯ' ಬಳ್ಸಬಹುದು ಅಂತ ಒಮ್ಮೆ ನೀವೆ ಹೇಳಿದ್ರಲ್ಲ
ಗೆಳೆಯ-> ಇನಿಯ-> ಗಂಡ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2007 - 11:39pm — kishorpatwardhan

ಉ: ಕೂರ್ ಬೇಕೇ ಕೂರ್ - ಭಾಗ ೧

kishorpatwardhan's picture

ಕೂರ್ ಬಗ್ಗೆ ಪಿಂಗ್ ಮಾಡಿದವರಲ್ಲಿ ನಾನೂ ಒಬ್ಬ.
ಈ ಬ್ಲಾಗ್ ಗಾಗಿ ಕಾಯುತ್ತಿದ್ದೆ .
ಈಗ ತಿಳಿಯಾಯಿತು.

ನನ್ನಿ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2007 - 11:50am — Sunil Jayaprakash

ಉ: ಕೂರ್ ಬೇಕೇ ಕೂರ್ - ಭಾಗ ೧

Sunil Jayaprakash's picture

@ಶಶಿ,
ಅಳಬ್ಯಾಡ್ರಿ, ಅಣ್ಣಾ ಅಳ್ಬ್ಯಾಡ್ರಿ Sad ಹೋಗಲಿಬಿಡ್ರಿ ಸರ್ಆಆ..ಮನ್ನ ಮಾಡ್ರಿ. ಇಲ್ಲಿ ಹೆಚ್ಚು ಕೂರಿನ ಬಗ್ಗೆ ಮಾತನಾಡೋಣ. ನನ್ನ ಮೇಲೆ ನಿಮ್ಮ ಕೂರ್ ಸ್ವಲ್ಪ ಇರಲಿ ಅಣ್ಣಾವ್ರ..

@ವೈಭವ
ಗೆಳೆಯ -> ಇನಿಯ -> ಗಂಡ ಸೂಪರ್

@ಕಿಶೋರ್ ಪಟವರ್ಧನ್
ನನ್ನಿ. ಅಂದ ಹಾಗೆ ನೀವು ಬೇಜಾರ್ ಮಾಡ್ಕೊಳ್ಳಿಲ್ಲ ತಾನೆ Laughing out loud

@ಎಲ್ಲರೂ
"ಕೂರಿನ" ಬಗ್ಗೆ ಕೊರಿಯೋದು ಇನ್ನೂ ಸಿಕ್ಕಾಪಟ್ಟೆ ಇದೆ Laughing out loud. ಕಾತರದಿಂದಿರಿ, ನಿಮಗೆ ಖಂಡಿತ ಬೇಸರ ಆಗಲ್ಲ. ಬೇಸರವಾದರೆ ಏನನ್ನಾದರೂ ಹಿಂದಿರುಗಿಸುವ ಯೋಜನೆ ಹಾಕಿಕೊಳ್ಳೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2007 - 12:10pm — Sunil Jayaprakash

ಉ: ಕೂರ್ ಬೇಕೇ ಕೂರ್ - ಭಾಗ ೧

Sunil Jayaprakash's picture

ಬಾಯ್ ಪ್ರೆಂಡ್ ಬದಲು 'ಇನಿಯ' ಬಳ್ಸಬಹುದು ಅಂತ ಒಮ್ಮೆ ನೀವೆ ಹೇಳಿದ್ರಲ್ಲ

ನನ್ನಿ ವೈಭವ, ಎರಡನೆಯ ಕಂತಿನಲ್ಲಿ ಹಾಗೆಯೇ ಇರತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2007 - 1:21pm — mahesha

ಉ: ಕೂರ್ ಬೇಕೇ ಕೂರ್ - ಭಾಗ ೧

mahesha's picture

boy friendಗೆ ಕನ್ನಡದಲ್ಲಿ 'ಕಾದಲ' ಎಂದು ಅನ್ನಬೋದು!

Ka. kādal, kādalme affection, love;
kādala male friend, paramour;
kādale beloved female.

http://dsal.uchicago.edu/cgi-bin/philologic/getobject.pl?c.0:1:1451.burr...

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2007 - 12:45pm — mahesha

ಉ: ಕೂರ್ ಬೇಕೇ ಕೂರ್ - ಭಾಗ ೧

mahesha's picture

1897
Ka. kūr to mind, be attached to, love;
kūrpa, kūpa loving, beloved; lover, husband;
kūrpu, kūrme love. Te. kūrimi, kūrmi friendship, love, affection;
(K.) kūr(u)cu to be lovable, be coveted, be attached. DED 1577.
http://dsal.uchicago.edu/cgi-bin/philologic/getobject.pl?c.0:1:1905.burr...

1898
Ka. kūr sharpness, acuteness;
kūrike sharpness, pointedness;
kūritu, kūrittu that which is sharp;
kūrahu sword;
kūrida a sharp, acute, or brave man;
kūrpu sharpness, valour, a keen, penetrating look;
(Bark.) kūpi a barber's knife.
http://dsal.uchicago.edu/cgi-bin/philologic/getobject.pl?c.0:1:1906.burr...

1900
Ka. kūr to sit down;
kūrisu to cause to sit.
http://dsal.uchicago.edu/cgi-bin/philologic/getobject.pl?c.0:1:1908.burr...

====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2007 - 2:34pm — Sunil Jayaprakash

ಉ: ಕೂರ್ ಬೇಕೇ ಕೂರ್ - ಭಾಗ ೧

Sunil Jayaprakash's picture

ಮಹೇಶ ನನ್ನಿ, "ಕೂರ್"ಇನ ಅರ್ಥವನ್ನು ಇಂಗ್ಲೀಷಿನಲ್ಲಿಯೂ ಎಲ್ಲರಿಗೂ ತಿಳಿಯುವಂತೆ ಮಾಡಿದೆ. ಅಂದ ಹಾಗೆ ಇನ್ನೂ ಒಂದು "ಕೂರ್"ಇದೆ. ಅದು ಅಣಕದಂತಹ ಅರ್ಥ ಕೊಡತ್ತೆ Laughing out loud

ಹಂಸಲೇಖ ಹೇಳಿದ ಕೂರಕ್ಕುಕ್ಕಳ್ಳಿ ಕೆರೆ, ಯಾವ "ಕೂರೋ" ಗೊತ್ತಿಲ್ಲ. ಒಟ್ಟಿನಲ್ಲಿ ನಮಗೆ ಯಾವ "ಕೂರು" ಇಷ್ಟವೋ ಆ ಕೂರಿಗಾಗಿ ಕುಕ್ಕರಹಳ್ಳಿ ಕೆರೆಗೆ ಹೋಗಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2007 - 2:52pm — mahesha

ಉ: ಕೂರ್ ಬೇಕೇ ಕೂರ್ - ಭಾಗ ೧

mahesha's picture

ಲೊ ಚನ್ನೀಲ

ಅಲ್ಲಿ ಹಾಡಲ್ಲಿ "ಕೂರಕ್ಕೆ ಕುಕ್ರಳ್ಳಿ ಕರೆ" ಅಂತ ಇರೋದು. ಈ ಕುಕ್ರಳ್ಳಿ ಕರೆ ಪಕ್ಕ ಕುಂತೇ ಕುವೆಂಪು ಬಲು ಬರೆವಣಿಗೆ ನಡೆಸಿದ್ದಂತೆ. ಕುಕ್ರಳ್ಳಿ ಕರೆ ತಾವೇ ಕುವೆಂಪು ತೋಟವಯ್ತೆ.

ಇಲ್ಲಿರೋ "ಕೂರು" ಅಂದ್ರೆ "ಕುೞಿತುಕೊಳ್ಳು" ಅಂತ.

ಈ ಪಾಟ ನೋಡು

ಕೂರಕ್ಕೆ ಕುಕ್ರಳ್ಳಿ ಕರೆ ( ಇಲ್ಲಿ ದೋಣಿ ಇಲ್ಲ )
ತೇಲಕ್ಕೆ ಕಾರಂಜಿ ಕರೆ ( ಇಲ್ಲೇ ದೋಣಿ ಇರೋದು )

ಕಾರಂಜಿ ಕರೆ, ಮಯ್ಸೂರ ಕಾಸ್‌ಬಂಗಲೇ(zoo) ತಾವ ಇರೋದು.
====================================
ತಿಳಿದಷ್ಟು ತಿಳಿಯಾಗುವುದು ತಿಳಿವು !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 23, 2007 - 2:42pm — Sunil Jayaprakash

ಉ: ಕೂರ್ ಬೇಕೇ ಕೂರ್ - ಭಾಗ ೧

Sunil Jayaprakash's picture

ಗೆಳೆಯರೆ, ಒಂದು ಪ್ರಶ್ನೆ ಕನ್ನಡಿಗರ ಮದುವೆ ಹೇಗಿರತ್ತೆ. ಉತ್ತರಕ್ಕೆ ನೋಡಿ. ಕೂರ್ ಬೇಕೇ ಕೂರಿನ ಎರಡನೆ ಕಂತು.
ಕನ್ನಡಿಗರ ಮದುವೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)
  • ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ
  • ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು
  • ನಯಸೇನನ ಸಲೀಸಾದ ಸಾಲುಗಳು - ಬಿಡಿ 9 - ಸೊಗಸುಗಾರ ನಮ್ಮ ನಯಸೇನ
  • ಕೂರ್ ಬೇಕೇ ಕೂರ್ - ಭಾಗ ೩ (ಕನ್ನಡಿಗರ ಊಟ)
Syndicate content

ಲೇಖಕರು

Sunil Jayaprakash's picture

ಪೂರ್ಣ ಹೆಸರು
ನನ್ನಿ ಸುನಿಲ

ಪರಿಚಯ

ಸಹೃದಯಿ ಕನ್ನಡ ಗೆಳೆಯರಿಗೆ ನನ್ನ ನಮನಗಳು. "ನನ್ನಿ ಸುನಿಲ" ಎಂಬುದು ನನಗೂ ಇಷ್ಟವಾದ ಹೆಸರು. ಇರೋದು "ನಮ್ಮ ಬೆಂಗಳೂರಲ್ಲಿ". ಸೀಸಾ Eye-wink ಇಂಜಿನಿಯರ್ ಆಗಿ ಕೆಲಸ. ವಯೋಲೀನ್ ಕಲೆ ರೂಢಿಸಿಕೊಳ್ಳಬೇಕೆಂಬುದು ನನ್ನ ಒಂದು ಕಣಸು (ಧ್ಯೇಯ). ಇವುಗಳ ಮಧ್ಯೆ ಆಸೆಗಳು ಚಿಗುರೊಡೆಯುತ್ತಲೇ ಇರುತ್ತವೆ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಪುರಂದರದಾಸರ ಎರಡು ಪದಗಳು
    September 5, 2008 - 9:17pm
  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 98 ಅತಿಥಿಗಳು ಆನ್ಲೈನ್ ಇರುವರು.


ನಂಬಿದಂತಿರಬೇಕು, ನಂಬದಲೆ ಇರಬೇಕು |
ನಂಬಿದವ ಕೆಟ್ಟ ಸರ್ವಜ್ಞ ||

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator