ಕನ್ನಡವನ್ನು ಕುರಿತಾದ ಇದೂ ಒಂದು ಬಗೆಯ ಕನಸೇ ?
ಓದುಗರಿಗೆ ಮೊದಲೇ ತಿಳಿಸುವುದೇನೆಂದರೆ, ಈ ಕನಸು ಕಂಡದ್ದು ಕಳೆದ ಮಂಗಳವಾರದ ಇರುಳಿನಲ್ಲಿ, ಅಂದರೆ ಸರಿಯಾಗಿ ಒಂದು ವಾರದ ಹಿಂದೆ, ಸೆಪ್ಟೆಂಬರ್ ೧೯, ೨೦೦೬. ಆದರೆ ಅದೇಕೋ ಎಲ್ಲರೊಡನೆ ಹಂಚಿಕೊಳ್ಳಲು ತುಸು ಹಿಂಜರಿದೆ. ನನಗೆ ಕಂಡ ಕನಸನ್ನು ಕೆಲವೇ ಕೆಲವು ಆಪ್ತ ಗೆಳೆಯರೊಡನೆ ಹಂಚಿಕೊಂಡೆ. ಕೆಲವರು ಸುಮ್ಮನೆ ಕೇಳಿಸಿಕೊಂಡರು ಮತ್ತು ಕೆಲವರು ನಕ್ಕು ಸುಮ್ಮನಾದರು. ಕೆಲವರು ಒಳ್ಳೆಯ ಸಲಹೆಗಳನ್ನೂ ನೀಡಿದರು. ಆದರೆ ಈಗ ಗಟ್ಟಿ ಮನಸ್ಸು ಮಾಡಿರುವೆ, ಅದನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳಲೇಬೇಕೆಂದು.
ಹಾ! ಒಂದು ನಿಮಿಷ, ನನ್ನ ಕನಸನ್ನು ತಿಳಿದುಕೊಳ್ಳುವ ಮುಂಚೆ, "ಬ್ಲಾಗಿನ ಮೊನಚು ಮತ್ತು ಸೊಗಸಿಗಾಗಿ (ಅಂದರೆ ಪೂರ್ವಭಾವಿಯಾಗಿ)", ಕೆಲವೊಂದು ಎಳೆಗಳನ್ನು ಮತ್ತು ಹಾಡುಗಳನ್ನು ನಿಮ್ಮ ನೆನಪಿಗೆ ತರಲು ಬಯಸುತ್ತೇನೆ. ನೀವುಗಳು ಇವುಗಳನ್ನು ತಿಳಿದಿಲ್ಲದಿದ್ದರೆ ದಯವಿಟ್ಟು ಓದಿ.
೧. ಜಿ.ಪಿ.ರಾಜರತ್ನಂ ರವರ "ಯೆಂಡ ಯೆಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ" ಕವನ.
೨. "ಅ ಆ ಇ ಈ ಎ ಏ ಐ ಒ ಓ ಔ ಅಂ ಅಃ - ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ" ಎಂಬ ಹಾಡು. ಇದು ಯಾವ ಚಿತ್ರ ನನಗೆ ನೆನಪಿಲ್ಲ, ಆದರೆ ಈ ಹಾಡಿಗೆ ಕೊಂಡಿಯನ್ನು ನೀಡುತ್ತೇನೆ. ಸಾಧ್ಯವಾದರೆ ಅದರ ಚರಣಗಳನ್ನು ಹಾಕುತ್ತೇನೆ.
೩. ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಓ.ಎಲ್.ಎನ್ ಸ್ವಾಮಿಯವರ - ಮಡಿ ಭಾಷೆ, ಮಡಿ ಭಾಷೆ ಎಂಬ ಬ್ಲಾಗು. ಅದರಲ್ಲಿ ಅವರು ತಪ್ಪುಗಳಿಗೆ ಜಯವಾಗಲಿ ಎಂದು "ಘೋಷಿಸಿದ್ದರು".
ಆ ಮಡಿ ಭಾಷೆ, ಮಡಿ ಭಾಷೆಯ ಸಾರಾಂಶ ಇಷ್ಟಾಗಿತ್ತು. ನಮ್ಮ ನುಡಿಯ ಬೆಳವಣಿಗೆಯ ಹಾದಿಯಲ್ಲಿ ಕೆಲವೊಂದು ತಪ್ಪುಗಳು ನಡೆದರೂ ಪರವಾಗಿಲ್ಲ. ತಪ್ಪುಗಳಿಂದ ನುಡಿಯು ಮತ್ತಷ್ಟು ಪರಿಷ್ಕರಣೆಗೆ ಒಳಗಾಗುತ್ತದೆ ಹಾಗಾಗಿ ಮತ್ತಷ್ಚು ಸುಂದರ ರೂಪವನ್ನು ಪಡೆಯುತ್ತದೆ. ಈ ಎಳೆಗೆ ಕೆಲವರು ದನಿಗೂಡಿಸಿ, "ತಪ್ಪುಗಳಿಗೆ ಜಯವಾಗಲಿ ಎಂಬ ದೀಕ್ಷೆಯನ್ನು" ಸ್ವೀಕರಿಸಿದ್ದರು!
.
ಮೂರನೆಯದು ಏಕೆ ತುಂಬಾ ಮಿಗಿಲಾದದ್ದು ಎಂದರೆ, ಈ ನನ್ನ ಕನಸು ಕೂಡ ತಪ್ಪುಗಳ ಸರಮಾಲೆಗೆ ಸೇರಬಹುದು.
ಈ ಬ್ಲಾಗ್ ಎತ್ತ ಸಾಗಬಹುದು ಎಂಬುದನ್ನು ನೀವು ಊಹಿಸಿರಬಹುದು. ಆದರೆ ನಾನು ಗ್ಯಾರೆಂಟಿಯಾಗಿ ಹೇಳುತ್ತೇನೆ, ನಿಮ್ಮ ಊಹೆಗಳೆಲ್ಲವೂ ತಪ್ಪಾಗುತ್ತವೆ.
ನಿಮೆಗೆಲ್ಲರಿಗೂ ಆಶ್ಚರ್ಯವೊಂದು ಕಾದಿದೆ. ನನ್ನನ್ ನಂಬಿ ಪ್ಲೀಸ್ ಪ್ಲೀಸ್ - ಸಮಾಜಸೇವಕಿ ಲಲಿತಾಂಬ ಶೈಲಿಯಲ್ಲಿ. (
ಕಣ್ಣು ಹೊಡೆಯುತ್ತಾ )
.
ಸವಿಯೊದಗು.

- Sunil Jayaprakash ರವರ ಬ್ಲಾಗ್
- Login or register to post comments
- 795 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮೊದಲ ಮೊನಚು - ಜಿ.ಪಿ.ರಾಜರತ್ನಂ
ಈ ಹಾಡನ್ನು ನಾನು ಮೊದಲ ಬಾರಿ ಕೇಳಿದ್ದು, ಒಂದನೇ ಕ್ಲಾಸಿನಲ್ಲಿದ್ದಾಗ. ನಮ್ಮ ತಂದೆಯವರು, ಹರಿಹರದ ಬಸ್ ಸ್ಟಾಂಡಿನಲ್ಲಿ, "ರತ್ನನ ಪದಗಳು" ಪುಸ್ತಕವನ್ನು ಕೊಂಡುಕೊಂಡಿದ್ದರು. ಹರಿಹರದಿಂದ ದಾವಣಗೆರೆಗೆ ಬಸ್ಸಿನಲ್ಲಿ ನಾವೆಲ್ಲರೂ ಹೋಗುತ್ತಿದ್ದಾಗ, ನಮ್ಮ ತಂದೆಯವರು ಇದನ್ನು ನಮಗೆ ಹೇಳಿಕೊಟ್ಟಿದ್ದರು. ಪದ್ಯವನ್ನು ಕೇಳಿ ಎಲ್ಲರೂ ಎದ್ದೂ ಬಿದ್ದೂ ನಕ್ಕಿದ್ದೆವು. ಈ ಪುಸ್ತಕ ಈಗಲೂ ನಮ್ಮ ಮನೆಯಲ್ಲಿದೆ. ಆದರೆ ಅಂದಿನಿಂದ ಇಂದಿನವರೆಗೂ ನನಗೆ ಈ ಪದ್ಯದಲ್ಲಿರಬಹುದಾದ ತೀವ್ರತೆಯನ್ನು ಗ್ರಹಿಸಲು ಸಾಧ್ಯವಾಗಿಲ್ಲ.
ಸರಿ, ಪೀಠಿಕೆಯಾಯಿತು. ಮೇಲಿನ ಬ್ಲಾಗಿನಲ್ಲಿ ತಿಳಿಸಿದಂತೆ ಆ ಪದ್ಯದ ಚರಣಗಳನ್ನು ಈ ಕಾಮೆಂಟಿನಲ್ಲಿ ಹಾಕುತ್ತಿದ್ದೇನೆ. ಓದಿ ಆನಂದಿಸಿ.
ಯೆಂಡಾ ಯೆಡ್ತಿ ಕನ್ನಡ್ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ,
ಬುಂಡೇನ್ ಎತ್ತಿ ಕುಡುದ್ ಬುಟ್ಟಾಂದ್ರೆ ತಕ್ಕೋ ಪದಗಳ್ ಬಾಣ.
ಬಗವಂತೇಂದ್ರಾ, ಬೂಮಿಗಿಳ್ದ್ ನಮ್ತಾಕ್ ಬಂದಾಂತನ್ನು,
ಪರ್ ಗಿರೀಕ್ಸೆ ಮಾಡ್ತಾನವ್ನು, ಬಕ್ತನ್ ಮೇಲ್ ಅವನ್ ಕಣ್ಣು.
"ಎಂಡಾ ಕುಡಿಯಾದ್ ಬುಟ್ ಬುಡ್ ರತ್ನಾ", ಅಂತ್ ಅವನೇನಾರಂದ್ರೆ,
ಮೂಗ್ ಮೂರ್ ಚೂರಾಗ್ ಮುರುಸ್ ಕೊಂತೀನಿ ದೇವರ್ ಮಾತಿಗ್ ಅಡ್ ಬಂದ್ರೆ.
"ಎಂಡ ಬುಟ್ಟೆ ಎಡ್ತೀನ್ ಬುಟ್ ಬುಡೇಂತ"ವನೇನಾರಂದ್ರೆ,
ಕಳ್ ದೋಯ್ತಂತ ಕುಣದಾಡ್ತೀನಿ ದೊಡ್ದೊಂದ್ ಕಾಟ ತೊಂದ್ರೆ.
"ಕನ್ನಡ್ ಪದಗಳ್ ಆಡಾದ್ನಲ್ಲಾ ನಿಲ್ಲಿಸ್ ಬಿಡ್ ಬೇಕ್ ರತ್ನಾ",
ಅಂತವ್ನೇನಾರಂದ್ರೆ, ದೇವ್ರಾದ್ರೇನು ಮಾಡ್ತೀನೌನ್ಗೆ ಖತ್ನ.
ಆಗ್ನೇ ಮಾಡೋ ಐಗೋಳೆಲ್ಲಾ ದೇವ್ರೆ ಆಗ್ಲೀ ಎಲ್ಲಾ,
ಕನ್ನಡ್ ಸುದ್ದೀಗೇನ್ರಾ ಬಂದ್ರೆ ಮಾನಾ ಉಳ್ಸಾಕಿಲ್ಲಾ.
ನರಕಕ್ಕೀಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲಾಸಾಕಿದ್ರೂನೆ,
ಮೂಗ್ ನಲ್ ಕನ್ನಡ್ ಪದವಾಡ್ತೀನಿ ನನ್ ಮನಸನ್ನೀ ಕಾಣೆ.
ಎಂಡಾ ಓಗ್ಲಿ, ಎಡ್ತೀ ಓಗ್ಲಿ, ಎಲ್ಲಾ ಕೊಚ್ ಕೊಂಡ್ ಓಗ್ಲಿ,
ಪರಪಂಚ್ ಇರೋತನ್ಕಾ ಮುಂದೆ ಕನ್ನಡ್ ಪದಗೋಳ್ ನುಗ್ಲಿ.
ಪರಪಂಚ್ ಇರೋತನ್ಕಾ ಮುಂದೆ ಕನ್ನಡ್ ಪದಗೋಳ್ ನುಗ್ಲಿ.
ಇಲ್ಲಿ ಗಮನಿಸಬೇಕಾದ ಅಂಶಗಳೆಂದರೆ, "ಪರ್ ಪಂಚ್ ಇರೋತನ್ಕಾ" ಎಂದು ಹೇಳುವಾಗ ಕನ್ನಡದ ಉಳಿವಿಗಾಗಿ ನಮ್ಮಲ್ಲಿ ಇರಬೇಕಾದ ತೀವ್ರತೆ ಮತ್ತು "ಮುಂದೆ ಕನ್ನಡ್ ಪದಗೋಳ್ ನುಗ್ಲಿ"
ಎನ್ನುವಾಗ ನಮ್ಮ ನುಡಿಯ ಬೆಳವಣಿಗೆಗೆ ನಮಗಿರಬೇಕಾದ ಕಾಳಜಿ ಮತ್ತು ಬದ್ಧತೆ.
ಸರಿ ಕನಸನ್ನು ಹೇಳಲು ಇನ್ನೂ ಸಮಯವಿದೆ. ಕಾಯುತ್ತಿರಿ.
ಸವಿಯೊದಗು.
ಎರಡನೆಯ ಮೊನಚು - ಅ ಆ ಇ ಈ ಹಾಡು
ಈ ಹಾಡನ್ನು ಕನ್ನಡಆಡಿಯೋ.ಕಾಂ ತಾಣದಿಂದ ಕೇಳಬಹುದು.
ನನ್ನನ್ ನಂಬಿ - ತುಂಬಾ ಮಜಾ ಕೊಡುತ್ತದೆ ಈ ಹಾಡು ಕೂಡ.
ಅದರ ಚರಣಗಳನ್ನು ದಾಖಲಿಸಲು ಜತುನಗೈದಿರುವೆ.
ಈ ಹಾಡಿನಲ್ಲಿ ಬರುವುದು, ಒಬ್ಬಳು ವಿದ್ಯಾರ್ಥಿನಿ, ಆಕೆಯ ಮೇಷ್ಟ್ರು ಮತ್ತು ಆಕೆಯ ಗೆಳೆಯ ಗೆಳತಿಯರು.
ಎಲ್ಲರೂ : ಅ ಆ ಇ ಈ ಎ ಏ ಐ ಒ ಓ ಔ ಅಂ ಅಃ
ಎಲ್ಲರೂ : ಆಹಾ, ಓಹೋ ಅಂಬೋಕೆ, ಏನು ತಿಳಿದೋರ್ ಮಹಾ..
ಎಲ್ಲರೂ : ಕ ಕಾ ಕಿ ಕೀ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಎಲ್ಲರೂ : ಕಾ ಕೊಂಬು ಕು ಎಂಬೋಕೇ <ಸರಿಯಾಗಿ ಕೇಳಿಸುವುದಿಲ್ಲ|
ಆಕೆಯು : ಓಯ್ ಕನ್ನಡ ಪಂಡಿತರೇ.
ಈತನು : ಏನ್ ಕನ್ನಡ ಕೂಸುಗಳೇ
ಆಕೆಯು : ಟ್ರೈನು, ಪ್ಲೇನು, ಫೋನು, ಫಾನು ಬೇಕಂತೀರಲ್ಲಾ,
ಆಕೆಯು : Sweaty Beauty English'ಅನ್ನ ಬ್ಯಾಡಂತೀರಲ್ಲಾ.
ಎಲ್ಲರೂ : ಮ ಮಾ ಮಿ ಮೀ ಮೆ ಮೇ ಮೈ ಮೊ ಮೋ ಮೌ ಮಂ ಮಃ
ಎಲ್ಲರೂ : ಮ್ಹಾನು ಮೂನು ಮುಟ್ಟಿದರೂ, <ಏನೆಂದು ಕೇಳಿಸಿಕೊಳ್ಳಲಾಗುವುದಿಲ್ಲ>
ಈತನು : ಓಯ್ ಕನ್ನಡ ಬೊಂಬೆಗಳೇ,
ಆಕೆಯು : ಏನ್ ಕನ್ನಡ ಶಿಲ್ಪಿಗಳೇ.
ಈತನು : ತಾಯಿ, ಮಣ್ಣು, ಗಾಳಿ, ನೀರು ಬೇಕಂತೀರಲ್ಲಾ. ತಾಯಿಭಾಷೆ ಮಾತ್ರ ಯಾಕೋ ಬೇಡಂತೀರಲ್ಲಾ..
ಈತನು : ಅ ಆ ಇ ಈ ಎ ಏ ಐ ಒ ಓ ಔ ಅಂ ಅಃ
ಈತನು : ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ
ಆಕೆಯು : Good Morning, Sir
ಈತನು : ಶುಭೋದಯ, ತಾಯಿ
ಆಕೆಯು : I want a clarification, Sir
ಈತನು : ಗೊತ್ತಿದ್ರೆ ಹೇಳ್ತೀವಿ..ಕೇಳಿ.
ಆಕೆಯು : MARKETನಿಂದ ಮಾರುಕಟ್ಟೆಯಿಂದ ಬಂತಾ, ಮಾರುಕಟ್ಟೆಯಿಂದ MARKET ಬಂತಾ.
ಈತನು : ಕಣ್ಣು ಮೂಗು ಹೋಲುವುದು ಅಂತ ಪರನಾರಿ ನಮ್ಮದಾಗುತ್ತಾ.
ಆಕೆಯು : Science, Maths ಮೊದಲಿಲ್ಲಿತ್ತಾ, ಇಲ್ಲ ಎಲ್ಲಾ ಅಲ್ಲಿಂದ್ಲೇ ಬಂತಾ.
ಈತನು : ಬ್ರಹ್ಮಗುಪ್ತನು ಗಣಿತ ಲೋಕಕೆ ಸೊನ್ನೆಯನ್ನಿತ್ತಾ ಎಂಬುದು ಗೊತ್ತಾ.
ಆಕೆಯು : India'ಗ್ ಯಾಕೋ English ಹೆಸರು.
ಈತನು : ಗುಲಾಮಗಿರಿಯ ಗುರುತಿಗೆ ತಾಯಿ.
ಆಕೆಯು : ಭಾರತಕ್ ಯಾಕೋ ನೂರೆಂಟು ಭಾಷೆ.
ಈತನು : ಸ್ವತಂತ್ರ ಭಾರತದ ಸಾಕ್ಷಿಗ್ ತಾಯೀ
ಆಕೆಯು : ಕನ್ನಡದ ಜನರು ಮೇಲೇರಲಿಲ್ಲ
ಈತನು : ನಿಮ್ಮಂತ ಕಪಿಗಳು ಕಾಲೆಳೆದಿರಲ್ಲ.
ಎಲ್ಲರೂ : ಅ ಆ ಇ ಈ ಎ ಏ ಐ ಒ ಓ ಔ ಅಂ ಅಃ
ಎಲ್ಲರೂ : ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ
ಆಕೆಯು : ಓಯ್ ಕನ್ನಡ ವಾದಿಗಳೇ
ಈತನು : ಏನ್ ಕನ್ನಡ ವೈರಿಗಳೇ.
ಆಕೆಯು : suit'u, boot'u, bangle, gaugle ಹಾಕೊಂತೀರಲ್ಲಾ.
ಆಕೆಯು : neat'u belt'u Englishಅನ್ನು ಬ್ಯಾಡಂತೀರಲ್ಲಾ.
ಎಲ್ಲರೂ : ಅ ಆ ಇ ಈ ಎ ಏ ಐ ಒ ಓ ಔ ಅಂ ಅಃ
ಎಲ್ಲರೂ : ಆಹಾ, ಓಹೋ ಅಂಬೋಕೆ, ಏನು ತಿಳಿದೋರ್ ಮಹಾ..
ಆಕೆಯು : ಸಾಆಆಆಆರ್.
ಈತನು : ಗುರುಗಳೇ,
ಆಕೆಯು : ಸಾಆಆಆಆರ್.
ಈತನು : ಮಾಸ್ತ್ರೇ.
ಆಕೆಯು : Jeans'u pant'u ಇಷ್ಟ, ಬಿಡುವುದಂತು ಕಷ್ಟ. ಹೇಗೆ ಬಾಳ್ಬೇಕು, ಏನ ಮಾಡ್ಬೇತು.
ಈತನು : ವಾರದಲ್ಲಿ ನಾಲ್ಕು ದಿನ ಕೊಡವೆ ಅಂಗಿ ಹಾಕು, ಮೂರು ದಿನ ರೇಷ್ಮೆ ಸೀರೆ ಉಡು ಸಾಕು.
ಆಕೆಯು : ಕನ್ನಡವು ಇಷ್ಟ, ಕಲಿಯೋದು ಕಷ್ಟ, english easy, ಎಲ್ಲರಿಗೂ choosy.
ಈತನು : ಕಷ್ಟವಂತು ಸ್ಪಷ್ಟ, ಸುಮ್ಮನಿದ್ರೆ ನಷ್ಟ, ಸರಳಮಾಡು ಭಾಷೆಯ ಮೆರೆಸು ನಮ್ಮ ಕೀರ್ತಿಯ.
ಆಕೆಯು : ಇಂಗ್ಲೀಷ್ ಭಾಷೆ ದೊಡ್ಡದಾಯ್ತ್ ಯಾಕೆ
ಈತನು : ತಾಯಿ ಭಾಷೆ ಅವರು ಪ್ರೀತಿ ಮಾಡಿದ್ದಕ್ಕೆ.
ಆಕೆಯು : ಕನ್ನಡದ ಭಾಷೆ ಚಿಕ್ಕದಾಯ್ತ್ಯಾಕೆ
ಈತನು : ಕೊಡ್ದೇನೆ ಬರೀ ತೆಗೆದುಕೊಂಡಿದ್ದಕ್ಕೆ.
ಆಕೆಯು : ಕೊಡೋದಕ್ಕೆ ನಮ್ಹತ್ರ ಏನಿದೆ ಇಲ್ಲಿ,
ಈತನು : ಸ್ವಾಭಿಮಾನ ತುಂಬಿಕೊಡು ನಿನ್ನ ಪ್ರೀತಿಯಲ್ಲಿ.
ಎಲ್ಲರೂ : ಅ ಆ ಇ ಈ ಎ ಏ ಐ ಒ ಓ ಔ ಅಂ ಅಃ
ಎಲ್ಲರೂ : ಅಮ್ಮನ ಹಂಬಲ ಅರಿತವರು ಆದರು ಲೋಕಪ್ರಿಯ
ಆಕೆಯು : ಓಯ್. ಕನ್ನಡ ತುತ್ತೂರಿಯೇ
ಈತನು : ಏನ್ ಕನ್ನಡ ಕಸ್ತೂರಿಯೇ
ಆಕೆಯು : ಮಕ್ಕಳ ಕೈಲಿ Mummy, Daddy ಬರೆಸೋದ್ಯಾಕಪ್ಪ, ಗಗನ ಮುಟ್ಟೋ Englishಗಿರಿಯ ಜರಿಯೋದ್ಯಾಕಪ್ಪಾ.
ಎಲ್ಲರೂ : ಕ ಕಾ ಕಿ ಕೀ ಕೆ ಕೇ ಕೈ ಕೊ ಕೋ ಕೌ ಕಂ ಕಃ
ಎಲ್ಲರೂ : ಕನ್ನಡ ಕಲಿಸಿ ಇಂಗ್ಲೀಷ ಕಲಿತರೆ ಅರಿಕೆಗೆ ಜಯ.
ಈತನು : ಓಯ್ ಕನ್ನಡ ಕಸ್ತೂರಿಯೇ
ಆಕೆಯು : ಏನ್ ಕನ್ನಡ ತುತ್ತೂರಿಯೇ
ಈತನು : ಲೋಕ ದೊಡ್ಡದು, ಕನ್ನಡ ಚಿಕ್ಕದು, ನಮಗೇ ಗೊತ್ತಮ್ಮ, ಹೆಸರೇಳ್ಹೋಕೆ ಕೈಯಿಗೆ ಒಂದು ಬಾವುಟ ಬೇಕಮ್ಮ.
ಎಲ್ಲರೂ : ಮ ಮಾ ಮಿ ಮೀ ಮೆ ಮೇ ಮೈ ಮೊ ಮೋ ಮೌ ಮಂ ಮಃ
ಎಲ್ಲರೂ : ಬಾರಿಸು ಬಾರಿಸು ಹೃದಯಶಿವ.ಆಆಆ ಕನ್ನಡ ಡಿಂಡಿಮವಾ..ಆಆಆ.
ಈ ಹಾಡಿನಲ್ಲಿ ಗಮನಿಸಬೇಕಾದ ಅಂಶವೆಂದರೆ,
ಆಕೆಯು : ಕನ್ನಡದ ಭಾಷೆ ಚಿಕ್ಕದಾಯ್ತ್ಯಾಕೆ
ಈತನು : ಕೊಡ್ದೇನೆ ಬರೀ ತೆಗೆದುಕೊಂಡಿದ್ದಕ್ಕೆ.
ಆಕೆಯು : ಕೊಡೋದಕ್ಕೆ ನಮ್ಹತ್ರ ಏನಿದೆ ಇಲ್ಲಿ,
ಈತನು : ಸ್ವಾಭಿಮಾನ ತುಂಬಿಕೊಡು ನಿನ್ನ ಪ್ರೀತಿಯಲ್ಲಿ.
ಬನ್ನಿ ಗೆಳೆಯರೆ, ನಮ್ಮ "ಪ್ರೀತಿಯಲ್ಲಿ" "ಸ್ವಾಭಿಮಾನವನ್ನು" ತುಂಬಿಕೊಡಲು ನಾವುಗಳು ಸಿದ್ಧರಾಗೋಣ. ಕನಸನ್ನು ಕುರಿತು ಆಮೇಲೆ ಮಾತನಾಡೋಣ.
ಮೂರನೆಯ ಮೊನಚು - ಮಡಿ ಭಾಷೆ. ಮಡಿ ಭಾಷೆ
ಮಡಿ ಭಾಷೆ, ಮಡಿ ಭಾಷೆಯನ್ನು ಓದಿ ನೋಡಿ. ತಪ್ಪುಗಳು ಹೇಗೆ ಮತ್ತು ಎಲ್ಲಿ ಮುಖ್ಯವಾಗುತ್ತದೆ ಎಂದು ತಿಳಿಯುತ್ತದೆ.
ನನ್ನ ಕನಸನ್ನು ತಿಳಿಯುವ ಮುಂಚೆ ಈ ಮೂರೂ ಮೊನಚುಗಳನ್ನು ನೀವು ಓದುವುದು ಮುಖ್ಯವಾದದ್ದು. ನಾಳೆ ನನಗೆ ಬಿದ್ದ ಕನಸನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.
ಸವಿಯೊದಗು.