ಕುಂಬ್ಳೆಗೆ ಒಂದು ಮುಗ್ಧ ಟಾಟಾ
ಸುಮಾರು ೧೭-೧೮ ವರ್ಷಗಳ ಸುದೀರ್ಘ ಕ್ರಿಕೆಟ್ ಪಯಣದಲ್ಲಿ ಸಾರ್ಥಕತೆಯನ್ನು ಕಂಡುಕೊಂಡ ಕರ್ನಾಟಕದ ಒಬ್ಬ ಕ್ರಿಕೆಟಿಗ ಒಂಡೇ ಕ್ರಿಕೆಟ್ಟಿಗೆ ಇಂದು ಹೋಗಿಬರುತ್ತೇನೆಂದು ಹೇಳಿರುವುದು ನಿಮಗೀಗಾಗಲೇ ತಿಳಿದಿರಬಹುದು.
ಕುಂಬ್ಳೆಯು ಆಡಿರುವ ಅನೇಕ ಪಂದ್ಯಗಳು ನೆನಪಿನಲ್ಲಿವೆಯಾದರೂ, ವಿದಾಯ ಹೇಳಿದ ಸುದ್ಧಿ ನೋಡಿದ ತಕ್ಷಣ ನೆನಪಿಗೆ ಬಂದದ್ದು, ನಾಲ್ಕು ಆಟಗಳು.
೧. ಹೌದು ಏನೆಲ್ಲಾ ಸಾಧನೆ ಮಾಡಿದ್ದರೂ ಇದೇ ಮೊದಲು ನೆನಪಿಗೆ ಬರುವುದು. ತಲೆಗೆ ಬ್ಯಾಂಡೇಜ್ ಕಟ್ಟಿಕೊಂಡು ಆಡಿದ ಆ ಪಂದ್ಯ. ಹೌದು. ಆ ಪಂದ್ಯವನ್ನು ಭಾರತ ಗೆಲ್ಲಲಿಲ್ಲ ನಿಜ, ಆದರೆ ಅಂದು ಕುಂಬ್ಳೆ ನೀಡಿದ ಕೆಚ್ಚೆದೆಯ ಪ್ರದರ್ಶನ ಮಾತ್ರ ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ.
೨. ನಂತರ ಬರುವುದು, ಪಾಕಿಸ್ತಾನದ ವಿರುದ್ಧ ಪಡೆದ ೧೦ ವಿಕೆಟ್ಟುಗಳು. ಇದರಿಂದಾಗಿ ಅನಿಲ್ ಕುಂಬ್ಳೆ ಸರ್ಕಲ್ ಎಂಬ ಅಚ್ಚಳಿಯದ ಗುರುತು ಬೆಂಗಳೂರು, ಕರ್ನಾಟಕಕ್ಕೆ ಸಿಕ್ಕಿತು.
೩. ದಕ್ಷಿಣಾ ಆಫ್ರಿಕಾದ ವಿರುದ್ಧ, ಅಜರುದ್ದೀನ್ ಜೊತೆಗೂಡಿ ೮೦+ ರನ್ ಗಳಿಸಿದ ಪಂದ್ಯ.
೪. ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಾವಗಲ್ ಶ್ರೀನಾಥಿಗೆ ಜೊತೆಯನ್ನು ನೀಡಿ, ಗೆಲುವನ್ನು ತಂದುಕೊಟ್ಟ ಪಂದ್ಯ.
ಹೋಗಿ ಬಾಪ್ಪಾ ಕುಂಬ್ಳೆ, ಉರ್ಫ್ ಕುಂಬಿ ಅಲಿಯಾಸ್ ನಮ್ ಕುಂಬಿ, ಒಳ್ಳೆಯದಾಗಲಿ. ಟಾಟಾ.

- Sunil Jayaprakash ರವರ ಬ್ಲಾಗ್
- Login or register to post comments
- 654 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಕುಂಬ್ಳೆಯ ನಿವೃತ್ತಿಯ ಬಗ್ಗೆ ಪ್ರಕಟವಾಗಿರುವ ಕೆಲವು ಸುದ್ಧಿಗಳು
ಯಾಹೂ ಕನ್ನಡ ಸುದ್ಧಿ, ಮಾಂಚೆಸ್ಟರ್ ನ್ಯೂಸ್, ರಿಡಿಫ್ ನ್ಯೂಸ್, ಡೈಲಿ ಟೆಲಿಗ್ರಾಫ್, ಯಾಹೂಂ ಇಂಗ್ಲೀಷ್ ನ್ಯೂಸ್, ಕ್ರಿಕೆಟ್ ನೆಕ್ಷ್ಟ್ ಸುದ್ಧಿ
ಉ: ಕುಂಬ್ಳೆಯ ನಿವೃತ್ತಿಯ ಬಗ್ಗೆ ಪ್ರಕಟವಾಗಿರುವ ಕೆಲವು ಸುದ್ಧಿಗಳು
ಯಾವುದೋ ಸೆಕೆಂಡ್ ಹ್ಯಾಂಡ್ ಸುದ್ದಿಗಳನ್ನೆಲ್ಲ ಲಿಂಕ್ ಮಾಡಿದಿಯಲ್ಲ ಮಾರಾಯ ಅಂತ ಬರೆಯೋಕೆ ಹೊರಟಿದ್ದೆ, ಮಾಝಿಲ್ಲಾ ಕ್ರಾಶ್ ಆಯ್ತು!
ಕೆಳಗೆ ಕೆಲವು ಲಿಂಕುಗಳು:
(Wisden Cricinfo) - Kumble announces retirement from one-dayers, 'I've always had the belief' - Kumble ಸ್ವತಃ ಕುಂಬ್ಳೆ ಧ್ವನಿ (ಆಡಿಯೋ), The man who wouldn't say no, 'I've never seen any bowler attack so ferociously' - Srinath (ಆಡಿಯೋ).
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಕುಂಬ್ಳೆಗೆ ಒಂದು ಮುಗ್ಧ ಟಾಟಾ
೫) ವಿಂಡೀಸ್ ವಿರುದ್ಧ ಫೈನಲ್ನಲ್ಲಿ ೬/೧೨ ತಗೊಂಡು ಹೀರೊ ಕಪ್ ಗೆಲ್ಲಿಸಿಕೊಟ್ಟಿದ್ದು ಇನ್ನು ನನಗೆ ನೆನಪಿನಲ್ಲಿ ಉಳಿದಿದೆ.
ಕುಂಬ್ಳೆ ನಿನಗೆ ನಮ್ಮೆಲ್ಲರ ಹಾರೈಕೆ,
ಉ: ಕುಂಬ್ಳೆಗೆ ಒಂದು ಮುಗ್ಧ ಟಾಟಾ
ಈಗ ತಾನೆ ಕುಂಬ್ಳೆ ವಿದಾಯದ ಸುದ್ದಿ CNN-IBN ಮತ್ತು tv9ನಲ್ಲಿ ನೋಡ್ತಾ ಇದ್ದೆ. IBNರವರು ಇವರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನೇ ಪ್ರಸಾರ ಮಾಡಿದ್ರು. ಶ್ರೀನಾಥ್, ಅಝರ್, ಕಪಿಲ್ ಇವರ ಬಗ್ಗೆ ಮಾತನಾಡಿದರು.
ಆದ್ರೆ tv9ನಲ್ಲಿ ಅವರ ಸಂದರ್ಶನ ತುಂಬಾ ಸಹಜವಾಗಿತ್ತು (ಕನ್ನಡದಲ್ಲಿದ್ದದ್ದಲ್ವೆ?)
ಸಂದರ್ಶನದ ಮಾತುಗಳಲ್ಲಿ ಅದ್ಯಾಕೊ ಅವರು ಅವರ ಅಮ್ಮ ಒಬ್ಬರನ್ನು ಬಿಟ್ಟು ಎಲ್ಲರನ್ನೂ ಸ್ಮರಿಸಿಕೊಂಡದ್ದು ಗಮನಿಸಬಹುದಿತ್ತು. ಕುಂಬ್ಳೆ ಅಝರ್ ಬಗ್ಗೆ ಮಾತನಾಡುತ್ತ "ಬಹಳ ಪ್ರೋತ್ಸಾಹ ನೀಡಿದರು" ಎಂದರು. "ಈ ಸಮಯದಲ್ಲಿ ಯಾರನ್ನು ಸ್ಮರಿಸಿಕೊಳ್ಳಲಿಚ್ಛಿಸುತ್ತೀರಿ" ಎಂಬ ಪ್ರಶ್ನೆಗೆ "ಅಪ್ಪನ ನೆನಪಾಗತ್ತೆ. ೨೦೦೩ ವರ್ಲ್ಡ್ ಕಪ್ ನಂತರ ಅವರನ್ನು ಕಳಕೊಂಡೆ" ಅಂತ ಉತ್ತರಿಸಿದ್ರು.
ಈ ಸಾರಿಯ ವಿಶ್ವಕಪ್ ನಲ್ಲಿ ಅವರನ್ನು ಪ್ರಮುಖ ಆಟಗಳಲ್ಲಿ ಕೈಬಿಟ್ಟದ್ದರ ಬಗ್ಗೆ ಅಸಮಾಧಾನ ಅವರಿಗಿರುವಂತಿದೆ. ಅದು ಬಹುಶಃ ಎಲ್ಲರಿಗೂ ಕಾಡಿದ ಪ್ರಶ್ನೆ (ವಿಶೇಷವಾಗಿ ಹರಬಜನ್ ಒಳ್ಳೆಯ ಫಾರ್ಮ್ ನಲ್ಲಿ ಇಲ್ಲದಿದ್ದರಿಂದ).
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ಕುಂಬ್ಳೆಗೆ ಒಂದು ಮುಗ್ಧ ಟಾಟಾ, ಅಥವ ಮುಗ್ದ ಕುಂಬಳೆಗೆ ಟಾಟಾ ನೊ ?
ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕದ್ದು ಯಾವಾಗಲೂ ಸಿಂಹಪಾಲು ! ಅದಕ್ಕೆ ಕಾರಣ ನಮ್ಮ ಬೊಲರ್ ಗಳ ಪರಿಶ್ರಮ. ಹಾಗೂ ಒಳ್ಳೆಯ ಪ್ರದರ್ಶನ. ಭೇಷ್ ! ಖಂಡಿತವಾಗಿಯೂ ಇವರಿಗೆ ಯಾವ God fathers ಇಲ್ಲ. ಚಂದ್ರಶೇಖರ್ ನಿಂದ ಅನಿಲ್ ವರೆಗೆ.
ನಮ್ಮವರು ಅದನ್ನು ಹಿಂದಕ್ಕೆ ಬಿಟ್ಟು ಮುಂದೆ ನುಗ್ಗಿ, ಕಾಮೆಂಟರಿ, ಆಟದ ವಿಶ್ಲೇಷಣೆ ಇಂತಹದರಲ್ಲಿ ಪಾಲ್ಗೊಳ್ಳಬೇಕು. ಒಳ್ಳೆಮಾತು ಚತುರತೆ, ಮೀಡಿಯಜೊತೆಗೆ ಹೊಂದಾಣಿಕೆ ಇವೆಲ್ಲ ಕಲಿಯಲೇಬೇಕು. ತಮಿಳುನಾಡಿನ ಶ್ರೀಕಾಂತ್, ಶಿವರಾಮಕೃಷ್ಣ, ಮಹಾರಾಷ್ಟ್ರದ ಸಂಜಯ್ ಮಾಂಜ್ರೇಕರ್ ನೋಡಿ. ಇಷ್ಟು ಸಾಲದು. ಮುಂದೆ ಬನ್ನಿ . ಅಂತ ನಾವ್ಹೇಳೋದು. ನಮ್ಮ ವೆಂಕಟೇಶ್ ಪ್ರಸಾದ್ ಒಬ್ಬ ಸಮರ್ಥ ವಿಶ್ಲೇಷಕ. ಕ್ರಿಕೆಟ್ ಆಯ್ಕೆ ತಂಡದಲ್ಲಿ ಸೇರಿಕೊಳ್ಳಿ.
ಕುಂಬ್ಳೆಯವರಿಗೆ ಒಂದು ಕಿವಿ ಮಾತು. ಬರಿ ಬೋಲಿಂಗ್ ಒಂದನ್ನೆ ಕ್ರಿಕೆಟ್ ಆಟ ಅಪೇಕ್ಷಿಸಲ್ಲ. ಸ್ವಲ್ಪ ತಕ್ಕಮಟ್ಟಿಗೆ ಫೀಲ್ಡಿಂಗ್, ಬ್ಯಾಟಿಂಗ್ ಮಾಡದಿದ್ದರೆ ಹೇಗೆ ? ಈಗ ನಮಗೆ ಸಾಕಷ್ಟು ಬೊಲರ್ಸ್ ಇದ್ದಾರೆ. ಆಲ್ ರೌಂಡರ್ಸ್ ಬೇಕಪ್ಪ !
ಅಂಪೈರ್ ಆಗಲು ಬಹುದು. ಒಳ್ಳೆಯ ಪತ್ರಿಕೆಗಳಲ್ಲಿ ಕ್ರಿಕೆಟ್ ಬಗ್ಗೆ ಬರೆಯಬಹುದು.
ಮುನ್ನುಗಿ, ಕರ್ನಾಟಕದ ಕುಂಬ್ಳೆಯವರೆ; ಮುನ್ನುಗ್ಗಿ.
ಟಿ: ಕುಂಬ್ಳೆಗೆ ಒಂದು ಮುಗ್ಧ ಟಾಟಾ, ಅಥವ ಮುಗ್ದ ಕುಂಬಳೆಗೆ ಟಾಟಾ ನೊ ?
ವೆಂಕಟೇಶರೇ ನಿಮ್ಮ ಟಿಪ್ಪಣಿ ತುಂಬಾ ಮೆಚ್ಚುಗೆಯಾಯಿತು. ನಿಮ್ಮ ಮಾತಿಗೆ ದನಿಗೂಡಿಸುತ್ತೇನೆ. ಈ ನಿಟ್ಟಿನಲ್ಲಿ ಶ್ರೀನಾಥ್ ಈಗಾಗಾಲೇ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕುಂಬ್ಳೆಯವರು ಮುನ್ನುಗ್ಗುತ್ತಾರೆಯೇ ನೋಡಬೇಕು. ಬಹುಶಃ ಟೆಸ್ಟಿನಿಂದಲೂ ಹೊರನಡೆದ ಮೇಲೆ ಇದರ ಬಗ್ಗೆ ಯೋಚಿಸುವರೋ ಏನೋ.
Re: ಕುಂಬ್ಳೆಗೆ ಒಂದು ಮುಗ್ಧ ಟಾಟಾ
ಶ್ರೀನಾಥ್ 'ಹಿಂದುಸ್ತಾನ್ ಟೈಮ್ಸ್' ಪತ್ರಿಕೆಯಲ್ಲಿ ಕುಂಬ್ಳೆ ಬಗ್ಗೆ ಚೆನ್ನಾಗಿ ಅಂಕಣ ಬರೆದಿದ್ದಾರೆ. ಇಲ್ಲಿ ಓದಬಹುದು.