I ate nothing for 6 ಘಂಟೆ ಕಾಲ
ನಾವು ಪ್ರೀತಿಸುತ್ತಿದ್ದೇವೆ ಎನ್ನುವುದಕ್ಕಿಂತ ಪ್ರೀತಿಸುತ್ತಿೆದ್ದೇವೆ ಎನ್ನುವ ಭಾವನೆ ಹೆಚ್ಚು ಸಂತೋಷ ಕೊಡುತ್ತದೆ - ಬೆಳದಿಂಗಳ ಬಾಲೆ.
ಎಷ್ಟೋ ಸಿನಿಮಾಗಳನ್ನು ನೋಡಿರುತ್ತೇವೆ, ನೋಡುತ್ತಿರುತ್ತೇವೆ. ಆದರೆ ಪ್ರೇಕ್ಷಕ, ತನ್ನ ಭಾವನೆಗಳೊಡಗೂಡಿ ಸಿನಿಮಾದಲ್ಲಿ ತಲ್ಲೀನನಾಗುವಂತೆ ಮಾಡಿದ ಪ್ರಯತ್ನಗಳು ಕಡಿಮೆ. ಬೆಳದಿಂಗಳ ಬಾಲೆ ಕನ್ನಡದ ಒಂದು ಸರಳ ಸಿನಿಮಾ. ಏಕೆ ಸರಳವೆಂದರೆ ಇಲ್ಲಿ ಎಲ್ಲಿಯೂ ಕೂಡ ಅದ್ದೂರಿ ಆಡಂಬರವಿಲ್ಲ, ಮಧುರ ಭಾವನೆಗಳನ್ನು, ಸ್ನೇಹವಾಗಿ ಪರಿವರ್ತಿಸಿ, ಸ್ನೇಹವನ್ನು ಪ್ರೇಮದಲ್ಲಿ ಕೂಡಿಸಿ ನಂತರ "ನಿನಗಾಗಿ ಕಾಯುತ್ತಿರುತ್ತೇನೆ" ಎಂಬ ನಾಯಕಿ ಹೇಳುವ ಭಾವದಲ್ಲಿ ಚಿತ್ರ ಕೊನೆಗೊಳ್ಳುತ್ತದೆ.
ಇಲ್ಲಿ ಸ್ವಾರಸ್ಯಕರ ವಿಷಯವೆಂದರೆ ಸಿನಿಮಾದ ಕೊನೆಯಲ್ಲಿ ನಾಯಕ, ನಾಯಕಿಯ ಮಧುರ ಭಾವನೆಯ ನೆನಪೇ ಸಾಕು, ಅವಳನ್ನು ನೋಡುವುದಿಲ್ಲ ಎಂದು ಹೇಳಿ ಹೊರಟುಹೋಗುವುದು. ಇಡೀ ಸಿನಿಮಾದಲ್ಲಿ ನಾಯಕಿ ಎಲ್ಲಿಯೂ ಕಾಣಿಸುವುದಿಲ್ಲ. ಕೇವಲ ಬೆಳದಿಂಗಳ ಬಾಲೆಯಾಗಿ ಆಕೆಯ ಮಾತುಗಳಷ್ಟೇ ನಾಯಕ ಹಾಗು ಪ್ರೇಕ್ಷಕನಿಗೆ ಕೇಳಿಸುವುದು.
ಅಲ್ಲಿ ಬರುವ ಫೋನ್ ಗೆಳತಿ, ತಿಳಿದೊ ತಿಳಿಯದೇನೊ ನಾಯಕನಲ್ಲಿ ಅರಳಿಸುವ ಮಧುರ ಭಾವನೆಗಳು, ನಾಯಕನಿಗೆ ತುಂಬುವ ಆತ್ಮಸ್ಥೈರ್ಯ, ನಾಯಕನ ತುಡಿತ ಪ್ರೇಕ್ಷಕನನ್ನು ಖಂಡಿತ ನಿರಾಸೆ ಮಾಡುವುದಿಲ್ಲ. ಕನಿಷ್ಟಪಕ್ಷ ಚಣಕಾಲವಾದರೂ ಮನಸ್ಸಿಗೆ ಸಮಾಧಾನ, ಸಂತೋಷ ಕೊಡುತ್ತದೆ.
ಏಕೆ ಈ ಸಿನಿಮಾ ಜ್ಞಾಪಕಕ್ಕೆ ಬಂತೆಂದರೆ, ಕಳೆದ ಶನಿವಾರ ಚಂದನದಲ್ಲಿ ಈ ಸಿನಿಮಾ ಬರುತ್ತಿತ್ತು. ಅಲ್ಲಿ ನಾಯಕ ತನ್ನ ಗೆಳೆಯನ ಹೆಂಡತಿಗೆ ಹೇಳುವ ಮಾತು ನಿಜಕ್ಕೂ ಅರ್ಥಪೂರ್ಣವೆನಿಸಿ, ನಿಮ್ಮೊಡನೆ ಆ ಮಾತನ್ನು ಹಂಚಿಕೊಳ್ಳಲು ಸುಮ್ಮನೆ ಬ್ಲಾಗಿದೆ.
ಆ ಮಾತೆಂದರೆ,
ಮನುಷ್ಯ ತನ್ನ ಜೀವನದಲ್ಲಿ ನಾಲ್ಕು ಹಂತಗಳನ್ನು ದಾಟುತ್ತಾನೆ. ನೀನು(ಗೆಳೆಯನ ಹೆಂಡತಿ) Jamesಅನ್ನು (ನಾಯಕನ ಗೆಳೆಯ) ನಾಲ್ಕನೆಯ ಹಂತಕ್ಕೆ ಕರೆದೊಯ್ಯಬೇಕು ಎಂದು ನಾಯಕ ಹೇಳುವುದು. ಆ ನಾಲ್ಕು ಹಂತಗಳೆಂದರೆ.
೧. ನಾನೂ ಚೆೆನ್ನಾಗಿಲ್ಲ, ಜಗತ್ತೂ ಚೆನ್ನಾಗಿಲ್ಲ (ಎಲ್ಲರೂ ಲಂಚ ತಿನ್ನುವವರೇ, ನಾನು ಲಂಚ ತಿಂದರೆ ಏನು ತಪ್ಪು ಎನ್ನುವಂತಹ ಭಾವನೆ)
೨. ನಾನು ಚೆನ್ನಾಗಿಲ್ಲ, ಜಗತ್ತು ಚೆನ್ನಾಗಿದೆ (ಕೀಳರಿಮೆ ಇರಬಹುದೇ).
೩. ನಾನು ಚೆನ್ನಾಗಿದ್ದೇನೆ, ಜಗತ್ತು ಚೆನ್ನಾಗಿಲ್ಲ (ನಾವೇ great, others are stupid ಎನ್ನುವಂತಹ ನಮ್ಮ ಧಾಟಿ, ನಾವು ದಿನನಿತ್ಯ ಕೇಳುವ, ಲಂಚ, ಕಳ್ಳತನ, ದರೋಡೆ, ಇತ್ಯಾದಿ ಜಗತ್ತು ಚೆನ್ನಾಗಿಲ್ಲ ಎಂಬುದನ್ನು ಹೇಳುತ್ತದೇನೋ? ಆದರೆ ನಾನು ಲಂಚ ತೆಗೆದುಕೊಳ್ಳುವುದಿಲ್ಲ, ಹಾಗಾಗಿ ನಾನು great).
೪. ನಾನೂ ಚೆನ್ನಾಗಿದ್ದೇನೆ, ಜಗತ್ತೂ ಚೆನ್ನಾಗಿದೆ. (ಅಂದರೆ ನಾನು great, ಹಾಗೆಯೇ ನನ್ನಂತಹ ಉತ್ಕೃಷ್ಟ ಮನೋಭಾವದವರು ಬಹಳಷ್ಟು ಜನರಿದ್ದಾರೆ ಈ ಜಗತ್ತಿನಲ್ಲಿ ಎನ್ನುವಂತಹ ಭಾವನೆ).
ಅಂದಹಾಗೆ, ಬ್ಲಾಗಿನ ಶೀರ್ಷಿಕೆ ಅರ್ಥವಾಗಲಿಲ್ಲವೇ. ಇಡೀ ಸಿನಿಮಾ ಇರುವುದೇ ಅಲ್ಲಿ, ನಿಮಗೆ ಸಾಧ್ಯವಾದಲ್ಲಿ ಆ ಸಿನಿಮಾ ಒಮ್ಮೆ ತಪ್ಪದೇ ನೋಡಿ. ಖಂಡಿತ ನಿಮಗೆ ನಿರಾಸೆಯಾಗುುವುದಿಲ್ಲ.
ಅದ್ಸರಿ, ಈ ನಾಲ್ಕು ಹಂತದಲ್ಲಿ ನೀವು ಯಾವ ಹಂತದಲ್ಲಿದ್ದೀರಪ್ಪಾ...? ತುಸು ಯೋಚಿಸಿ ಉತ್ತರ ನೀಡಿ.
ಸವಿಯೊದಗು

- Sunil Jayaprakash ರವರ ಬ್ಲಾಗ್
- Login or register to post comments
- 830 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಬೆಳದಿಂಗಳ ಬಾಲೆಯ ಹೆಸರು
ಚಿತ್ರದಲ್ಲಿ ನಾಯಕನ ಹೆಸರು - ರೇವಂತ
ನಾಯಕಿ, ಕ್ಷಮಿಸಿ, ಬೆಳದಿಂಗಳ ಬಾಲೆಯ ಹೆಸರು - ರಮ್ಯ.
ಯೋಚಿಸುವಂತೆ ಮಾಡಿದ್ರಲ್ಲಾ....?
ಈ ಪ್ರಶ್ನೆ ಕೇಳಿ ಯೋಚಿಸುವಂತೆ ಮಾಡಿದ್ರಲ್ಲಾ...? ಬಹುಶಃ ನನ್ನದು ಎರಡನೇ ಹಂತವಿರಬಹುದು. ಮೂರನೇ ಹಂತಕ್ಕೆ ಹೋಗುವುದು ಕಷ್ಟ. ನಾಲ್ಕಕ್ಕೆ ನೇರವಾಗಿ ನೆಗೆಯಬಹುದೆಂದು ತೋರುತ್ತದೆ.
-ಅಸತ್ಯಾನ್ವೇಷಿ
ನಿಜಹೇಳಬೇಕೆಂದರೆ
"ನಿಜಹೇಳಬೇಕೆಂದರೆ" (ಹಾಗೆಂದ ಮಾತ್ರಕ್ಕೆ ಇಲ್ಲಿಯ ತನಕ ಹೇಳಿದ್ದು ಸುಳ್ಳೆಂದಲ್ಲ) ಮೂರನೆ ಹಂತದಲ್ಲಿಯೇ ನಾವು ಬಹಳವಾಗಿ ಬೆಸೆದು ಹೋಗಿರುತ್ತೇವೆ ಮತ್ತು ದಿನನಿತ್ಯವೂ ಹೆಣಗುತ್ತಿರುತ್ತೇವೆ. ಅದುವೇ ಅಹಂಕಾರದ ಸ್ಥಿತಿ.
೧. ನಾನು traffic rules ಎಷ್ಟು ಚೆನ್ನಾಗಿ ಪಾಲಿಸುತ್ತೇನೆ, ಬೇರೆಯವರು ಏಕೆ ಪಾಲಿಸುವುದಿಲ್ಲವೋ ನಾ ಕಾಣೆ.
೨. ನಾನು ಯಾರೋಡನೆಯೂ ವೃಥಾ ಜಗಳವಾಡುವುದಿಲ್ಲ. ಆದರೆ ಬೇರೆಯವರಿಗೆ ಮೂಗಿನ ತುದಿಯಲ್ಲೇ ಕೋಪವಿರುತ್ತದೆ.
೩. ನಾನು ಕೆಟ್ಟ ಮಾತುಗಳನ್ನಾಡುವುದಿಲ್ಲ. ಆದರೆ ಬೇರೆಯವರು ಬರೇ ಹೊಲಸು ಮಾತುಗಳನ್ನೇ ಆಡುತ್ತಾರೆ.
೪. ನಾನು ಎಷ್ಟು ಕಷ್ಟ ಪಡುತ್ತೇನೆ. ಬೇರೆಯವರು ಏನೂ ಕೆಲಸ ಮಾಡದಿದ್ದರೂ ದುಡ್ಡು ಸಂಪಾದಿಸುತ್ತಾರೆ.
೫. engg students - ನಾನೊಬ್ನೆೆ project ಸ್ವಂತವಾಗಿ ಮಾಡಿದೆ ಬೇರೆಯವರೆಲ್ಲರೂ ಎಲ್ಲಿಂದಲೋ ಎತ್ತಿದರು.
೬. ನಾನು ಮಾಡಿದ project ಎಷ್ಟು ಚೆನ್ನಾಗಿತ್ತು, ಆದರೆ ಬೇರೆಯವರ project ಒಂಚೂರೂ ಚೆನ್ನಾಗಿರಲಿಲ್ಲ.
ಹೀಗೆ..ಅಂತ್ಯವಿಲ್ಲದ ಪಟ್ಟಿ. ಒಟ್ಟಿನಲ್ಲಿ ನಾನು ನೋಡಿರುವುದೇ, ಕಂಡಿರವುದೇ, ಕೇಳಿರುವುದೇ ಸತ್ಯ. ಬೇರೆಯವರ ಅಭಿಪ್ರಾಯಗಳು ನಗಣ್ಯ ಎನ್ನುವಂತಹ ಮನಃಸ್ಥಿತಿ.
ಈ ರೀತಿಯ ಅಭಿಪ್ರಾಯಗಳನ್ನು ನಾವು ಒಂದಲ್ಲ ಒಂದು ದಿನ ನಮಗೆ ನಾವೇ ಹೇಳಿಕೊಂಡು ಜಗತ್ತನ್ನು ಬೈದಿರುತ್ತೇವೆ.
ಉ: ನಿಜಹೇಳಬೇಕೆಂದರೆ
ಯಾವುದೋ ಚಿತ್ರದಲ್ಲಿ ಉಪೇಂದ್ರ ಈ ಮೇಲಿನ ಸಂಭಾಷಣೆಯನ್ನು ಹೇಳಿದ್ದಾನೆ ಅನ್ನಿಸುತ್ತೆ..
ನಿಮ್ಮವ,
ಗಿರೀಶ ರಾಜನಾಳ