"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

— ಕುವೆಂಪು ('ಕನ್ನಡ ದೀಕ್ಷೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│

Global

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
Americaದಲ್ಲಿ Europeನಲ್ಲಿ
Indiaದಲ್ಲಿ, ಎಲ್ಲೆಡೆಯಲ್ಲಿ
ಆಗುತ್ತಿದೆ ಆಗುತ್ತಿದೆ ಆಗುತ್ತಿದೆ
ಷೇರು ಸೂಚ್ಯಂಕದಲ್ಲಿ ಇಳಿತ
ಕೆಲಸಗಳ ಹಿಗ್ಗ ಮುಗ್ಗಾ ಕಡಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ಈಗೀಗ ಆಗಿದೆ ಆಗಿದೆ ತಣ್ಣಗಾಗಿದೆ
Party, Outingಗಳ ಮೊರೆತ
Bar-Pubಗಳಲ್ಲಿ ಅಬ್ಬರದ ಕುಣಿತ!

ಬಂದಿದೆ ಬಂದಿದೆ ಬಂದಿದೆ
ಪ್ರಬಲ ಆರ್ಥಿಕ ಹಿಂಜರಿತ│
ಯಾರನ್ನೂ ಮಾಡಲಾಗದು ದೂಷಣೆ
ಆದರೂ ಮಾಡಿಕೊಳ್ಳಬೇಕಿದೆ
ನಮ್ಮ ನಮ್ಮ ಕೆಲಸಗಳನ್ನು ರಕ್ಷಣೆ!
ನಮ್ಮಯ ದುಂದು ವೆಚ್ಚಕ್ಕೆ
ಇಂದೇ ನಾವ್ ಹಾಕೋಣ ಕಡಿವಾಣ!
ಕಾಯಕ ಕೈ ತಪ್ಪಿ ಹೋದವರಿಗೆ
ನುಗ್ಗಿ ಮುಂದೇ ಹೇಳೋಣ ಸಮಾಧಾನ│

ಬಂದಿದೆ ಬಂದಿದೆ ಬಂದಿದೆ│ ಆದರೂ ಆರ್ಥಿಕ ಹಿಂಜರಿತ│
ಅವರಿಗಾದರೇನು? ನಮಗಾದರೇನು? ಯಾರಿಗಾದರೇನು?
ಎಲ್ಲರ ಸಂಕಷ್ಟದಲ್ಲಿ ಸ್ವಲ್ಪವಾದರೂ ಸಹಭಾಗಿಯಾಗೋಣ
ಆರ್ಥಿಕ ಹಿಂಜರಿತವನು ಕಾಲಕ್ರಮೇಣ ಹಿಮ್ಮೆಟ್ಟಿಸೋಣ!

ರಚನೆ ಸುನಿಲ್ ಮಲ್ಲೇನಹಳ್ಳಿ

No votes yet
in

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│

nkumar's picture

Quote:
ಅವರಿಗಾದರೇನು? ನಮಗಾದರೇನು? ಯಾರಿಗಾದರೇನು?
ಎಲ್ಲರ ಸಂಕಷ್ಟದಲ್ಲಿ ಸ್ವಲ್ಪವಾದರೂ ಸಹಭಾಗಿಯಾಗೋಣ
ಆರ್ಥಿಕ ಹಿಂಜರಿತವನು ಕಾಲಕ್ರಮೇಣ ಹಿಮ್ಮೆಟ್ಟಿಸೋಣ!

ಬಹಳ ಇಷ್ಟವಾಯಿತು.

ಉತ್ತಮ ಕವನ ನಿಮ್ಮಿಂದ.

ಉ: ಬಂದಿದೆ ಬಂದಿದೆ ಬಂದಿದೆ│ಪ್ರಬಲ ಆರ್ಥಿಕ ಹಿಂಜರಿತ│

ಅರವಿಂದ್'s picture

ಅಬ್ಬಾ ! ಇನ್ನಾದರೂ ಪಬ್, ಕ್ಲಬಿನಲ್ಲಿ ಜನ ಕಡಿಮೆಯಾಗ್ತಾರೆ,

ಅರವಿಂದ್
:)