ದೀಪಾವಳಿಯು ಬಂದಿಹುದು..
ಎಲ್ಲರಿಗೂ ದೀಪಾವಳಿ ಹಬ್ಬದ ಮುಂಚಿತವಾದ ಶುಭಾಶಯಗಳು. ದೀಪಾವಳಿಯ ಹಬ್ಬಕೆಂದು ಒಂದು ಕವನ ಬರೆದಿರುವೆನು ಒಮ್ಮೆ ಓದಿರಿ.
ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು
ನಾಡಿಗೆಲ್ಲ ಸಂಭ್ರಮದ ಸಡಗರವ ಹೊತ್ತು ತಂದಿಹುದು
ಮನೆ ಮನೆಯಲಿ ಬೆಳಗೋ ಹಬ್ಬದ ಹುರುಪಿನ ದೀವಿಗೆ
ನವೀರು ಕಳೆಯ ತಂದಿಹುದು ನಮ್ಮಯ ಈ ಬಾಳಿಗೆ..
ಸುಜ್ಞಾನದ ಹಾದಿಯನು ತೋರಿರುವುದು ಜೀವನದ ನಾಳಿಗೆ..
ಹಬ್ಬ.. ಹಬ್ಬ.. ಬೆಳಕಿನ ಹಬ್ಬ ದೀಪಾವಳಿಯು ಬಂದಿಹುದು
ಬನ್ನಿ ಅರಿವಿನ ಸಂದೇಶವ ಕಳಿಸೋಣ ನರಕಾಸುರನೂರಿಗೆ
ಬನ್ನಿ ಭಾವಯೈಕ್ಯದ ಬೆಸುಗೆ ಹಾಗೋಣ ಬಲಿಯೂರಿನ ಪಾಲಿಗೆ..
ಬನ್ನಿ ಎಲ್ಲರು ಜಯಕಾರ ಹಾಕೋಣ ಮಹಾಲಕ್ಷ್ಮಿಗೆ..
ಬನ್ನಿ ಎಲ್ಲರು ಒಟ್ಟಾಗಿ ತಿನ್ನೋಣ ಏಕತೆಯ ಹೋಳಿಗೆ..
ಬನ್ನಿ ಎಲ್ಲರು ಗುಟ್ಟಾಗಿ ಬೆಂಕಿ ಇಡೋಣ ಅಂಧಕಾರದ ಬೇಲಿಗೆ..
- ನಿಮ್ಮ ಸುನಿಲ್ ಮಲ್ಲೇನಹಳ್ಳಿ
- sunilkumara.ms's blog
- Login or register to post comments
- 467 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಉ: ದೀಪಾವಳಿಯು ಬಂದಿಹುದು..
ಚನ್ನು! @_@
ಉ: ದೀಪಾವಳಿಯು ಬಂದಿಹುದು..
ಮಹೇಶ್ ಅವರೇ ಪ್ರತಿಕ್ರಿಯಿಸಿದ್ದಕ್ಕೆ ನನ್ನಿ..
ಸುನಿಲ್ ಮಲ್ಲೇನಹಳ್ಳಿ
ಉ: ದೀಪಾವಳಿಯು ಬಂದಿಹುದು..
ರಾಕೇಶ್ ಶೆಟ್ಟಿ
ಸುನಿಲ್,
ಸಕತ್ ಆಗಿದೆ, ಬಹಳ ಖುಷಿ ಆಯ್ತು ಓದೋಕೆ :)
ಹೀಗೆ ಮುಂದುವರೆಯಲಿ
ರಾಕೇಶ್ ಶೆಟ್ಟಿ :)
ಉ: ದೀಪಾವಳಿಯು ಬಂದಿಹುದು..
ರಾಕೇಶ್ ಅವರೇ..ಖಂಡಿತವಾಗಿಯೂ ಇನ್ನು ಮುಂದೆ ಒಳ್ಳೆ ಒಳ್ಳೆ ಕವನಗಳನ್ನು ಬರೆಯುತ್ತೇನೆ.
ಪ್ರತಿಕ್ರಿಯಿಸಿದ್ದಕ್ಕೆ ನನ್ನಿ
ಸುನಿಲ್ ಮಲ್ಲೇನಹಳ್ಳಿ
ಉ: ದೀಪಾವಳಿಯು ಬಂದಿಹುದು..
ಸುನಿಲ,
ಬಹಳ ಚೊಲೋ ಬರದೀರಿ...
ಮುಂಚಿತವಾಗಿ ನಿಮಗೆ ಹಾಗೂ ಎಲ್ಲ ಸಂಪದಿಗರಿಗೆ ದೀಪಾವಳಿಯ ನಲ್ಮೆಯ ಸವಿ ಶುಭಾಶಯಗಳು...
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ದೀಪಾವಳಿಯು ಬಂದಿಹುದು..
ಸುನಿಲ್,
ನಿಮ್ ಕವನ ಇಷ್ಟ ಆಯ್ತು.
ಸಂಪದ ಬಳಗದವರಿಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು (ಮುಂಚಿತವಾಗಿ).
ಇಂತಿ ನಿಮ್ಮ,
ಅನಿಲ್ ರಮೇಶ್.
ಉ: ದೀಪಾವಳಿಯು ಬಂದಿಹುದು..
ನನ್ನ ಪರವಾಗಿ ಮುಂಚಿತವಾಗಿ ಎಲ್ಲಾರಿಗೂ ದೀಪಾವಳಿಯ ಶುಭಾಶಯಗಳು....
ಸುನಿಲ್ ರವರೆ ತಮ್ಮ ಕವನ ತುಂಬಾ ಅದ್ಬುತವಾಗಿದೆ ಹಬ್ಬಕ್ಕೆ ಮುಂಚೆಯೇ ಒಳ್ಳೆ ಕವನ ಬರಿದಿರಿ ಅಂದಹಾಗೆ ದೀಪಾವಳಿ ಹಬ್ಬದಲ್ಲಿ ಹೋಳಿಗೆ ಮಾಡಲ್ವೇನೋ, ನೀವು ಹೋಳಿಗೆ ಸೇರಿಸಿದ್ದಿರಿ ಕಜ್ಜಾಯ ಸೇರಿಸಬಹುದಿತ್ತಲ್ವ :D
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ
ಉ: ದೀಪಾವಳಿಯು ಬಂದಿಹುದು..
ಅನಿಲ್ , ನಾಗರಾಜ್, ಗಿರೀಶ್ ಅವರೇ ಪ್ರತಿಕ್ರಿಯಿಸಿದ್ದಕ್ಕೆ ನನ್ನಿ.
ನಿಮ್ಮ ಸುನಿಲ್ ಮಲ್ಲೇನಹಳ್ಳಿ
ಉ: ದೀಪಾವಳಿಯು ಬಂದಿಹುದು..
’ಸುನಿಲ್ ಮಲ್ಲೇನಹಳ್ಳಿ’ ಅವರಿಗೆ ನಮಿಸುತ,
ಸ್ವೀಕರಿಸಿಕೊಳ್ಳಿ ನನ್ನ ತಲ್ಲೀನತೆ ತಿಣುಕುತ,
’ದೀಪಾವಳಿ’ ಕವನ ಮಙ್ಞನಾಗಿ ವಾಚಿಸುತ,
ದೀವಿಗೆಯ ಹಣತೆ ಕುಣಿವಂತೆ ತೊಡಗಿದೆ ತಿಣುಕುತ!
ಅದರ ಪರಿಣಾಮ ನವರೂಪ ಧರಿಸಿತು,
ಮೊದಲ ಪಲ್ಲವಿಗೆ ನವಾಲಂಕಾರ ಹೊರಿಸಿತು.
ಆಲೋಚನೆಯ ಪ್ರಚೋದನೆಗೆ ಇಟ್ಟುಕೊಂಡಿರಿ
ದಾರ್ಢ್ಯತೆಯ ಅವಿನತೆ ಎಂದು ಖಂಡಿಸದಿರಿ!
- ವಿ.ಶೀಲ
ಹಬ್ಬ ಹಬ್ಬ ಬೆಳಕಿನ ದೀಪಾವಳಿ ಹಬ್ಬ ಬಂದಿಹುದು
ಇಡಿ ನಾಡಿಗೆ ಸಂಭ್ರಮ ಸಡಗರ ಉಬ್ಬರ ತಂದಿಹುದು
ಮನೆಮನೆಗಳಲಿ ಹಬ್ಬದ ಹುರುಪನು ಬೆಳಗುವ ದೀವಿಗೆ
ಗುಡಿಗುಡಿಗಳಲಿ ಪೂಜೆಯ ಭಕ್ತಿಸಂಭ್ರಮ ನೇವಿಗೆ
ಸುಙ್ಞಾನದ ಹಾದಿಯ ತೋರುತ ಬಾಳಿನ ನಾಳೆಗೆ
ಅಙ್ಞಾನ ಮೋದವ ಕ್ಷಮಿಸಿ ಬಾಳನು ಬೆಳಗೆ!
- ಸು.ಮ.