ಬಹಳ ಚಿಕ್ಕ ವಯಸ್ಸಿನಿಂದಲೂ ಮಹಾತ್ಮರ ತತ್ವಗಳು ನನ್ನ ಮನಸ್ಸಿಗೆ ನಾಟಿದ್ದವು . ಅವರ ಜೀವನ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟಾಸಾಧ್ಯವೆನಿಸುತ್ತಿತ್ತು .
ಆದರೂ ಪ್ರಯತ್ನ ಮಂದುವರೆದಿದೆ .
ಈ ಸಂಗತಿ ನಡೆದದ್ದು ೨೦೦೩ ನೇ ಇಸವಿಯಲ್ಲಿ ...
ಇವತ್ತು ಮಹಾತ್ಮರು ತೀರಿಕೊಂಡ ಪುಣ್ಯತಿಥಿ . ಹುತಾತ್ಮರ ದಿವಸವಾಗಿ ( martyr 's day ) ಕೂಡ ಆಚರಿಸುತ್ತಾರೆ . tuition ಹೊಸತರಲ್ಲಿ ನನ್ನ ಸ್ನೇಹಿತರು ಮಹಾತ್ಮರ ಬಗ್ಗೆ ಕೇವಲವಾಗಿ ಮತನಾಡಿದ್ದು ಜ್ನಾಪಕಕ್ಕೆ ಬರುತ್ತದೆ . (especially avinash bagur ...) . ಕಾಲೇಜಿನಲ್ಲೂ ಕೂಡ ( MES College) Prof . Venkatesh (ಸಂಸ್ಕೃತ lecturer ) ಬಾಯಿಗೆ ಬಂದ ಹಾಗೆ ಹಗುರವಾಗಿ ಮಾತನಾಡಿದ್ದುಂಟು . PUC ಮೊದಲನೇ ವರ್ಷವಾದ್ದರಿಂದ ದನಿಯೆತ್ತಲು ಅಂಜಿದ್ದೆ . ನನ್ನ frustraion suhas kumar suvarna ( ನನ್ನ ಸ್ನೇಹಿತ ) ಮೇಲೆ ಎತ್ತಿದ್ದೆ . ಆತ ಹೇಳು ನಿನ್ನ ಮಾತು ಎಂದು ಬಹಳ ಹೇಳಿದ್ದ . ವ್ಯರ್ಥ ಅಯ್ತು ಅವನ ಪ್ರಯತ್ನ .
ವಿಷಯಕ್ಕೆ ಬರೋಣ . ಮಾತಿನ ಚಕಮಕಿಗಳು ...
avinash : ಅವನೊಬ್ಬ loafer ...
ನಾನು : (!!!) ಯಾಕೋ ನಮ್ಮ ರಾಷ್ಟ್ರಪಿತಾ ಕಣೋ . ಸ್ವಾತಂತ್ರ್ಯ ಕೊಡಿಸಿದ ಪುಣ್ಯಾತ್ಮ ಅವರು ನಿಂಗೇನು ಮಡಿದ್ರೋ ... ?
avinash : ನಮ್ಮ ದೇಶ ಒಡೆದಿದ್ದು ಅವನಿಂದಲೇ ಕಣೊ ...
(most popular misconception)
ನಾನು : ಹೇಗೆ ಹೇಳ್ತಿಯಾ ?
avinash : ನೆಹರೂಗೆ ಅವನೇ "ಅಂತೆ" ಕಣೊ pressure ಹಕಿದ್ದು .
ನಾನು : ನಿನಗೆ "blood shed day" ಬಗ್ಗೆ ಗೊತ್ತ ...?
avinash : ಅದೆಲ್ಲ ಏನಿಲ್ವೊ ...!!??
ನಾನು : jinnah ( leader of muslim league ) "blood shed day" ಅಂತ ಮುಸ್ಲೀಮ ಬಾಂಧವರಿಗೆ ಕರೆ ಕೊಟ್ಟ . ಅಂದರೆ ಸಿಕ್ಕಿದ ಹಿಂದೂಗಳನ್ನು ಕೊಂದು ಹಾಕಿ ಅಂತ . ಅವರಿಗೆ ಪ್ರತ್ಯೆಕ ಮುಸ್ಲೀಮ ರಾಜ್ಯ ಬೆಕಾಗಿತ್ತು . ಇದರ ವಿರುದ್ಧ ಏಕೈಕವಾಗಿ ಹೊರಾಟವನ್ನು ಪಾದಯಾತ್ರೆಯಿಂದ ಮೂಲಕ ಮಾಡಿದ ಮಹಾನುಭಾವ ಗಾಂಧೀಜೀ . ಗಲಭೆ ಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ರು .ಅದು ಗೊತ್ತ ... ? ಇಲ್ಲ . ಆಗಲೇ ಬಾಪು ಉಪವಾಸ ಸತ್ಯಾಗ್ರಹ ನಿಲ್ಲಲಿ ಎಂದು ಕೇಳಿಕೊಂಡು ನೆಹರು , ಪಟೇಲರು , ಬಂದಿದ್ದರು . ಆಗಲೇ ಚರ್ಚೆಯಾಗಿ ಉಳಿದ ಮಾರ್ಗ ಕಾಣದೆ , ಬಂದ ವಿಷಯವೇ ಈ "partition" . ವಿಷಯ ಕೂಲಂಕುಷವಾಗಿ ಗೊತ್ತಿಲ್ಲದೆ ಅಂತೆ ಕಂತೆಗಳನ್ನು ಪುರಾವೆ ಇಟ್ಕೊಂಡು ಅವರನ್ನ ತೆಗಳುತ್ತೀಯಲ್ಲ ಸರೀನ ... ? ...
ಮಾತುಕತೆ ಸ್ಥಗಿತ ...
Prof Venkatesh : ಗಾಂಧೀಜೀ was a freedom beggar .(!!!) ಯಾರದ್ರೂ ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ್ರೆ ಅವರೆದುರು ಹೊರಾಡಬೇಕು .
ಅನೇಕರಿಂದ ನಗು ಪ್ರಶಂಸೆ .
ನಾನು : (frustrated ) ಲೋ ಸುಹಾಸ ಯಾಕೋ ಇವರು ಗಾಂಧೀಜೀ ಬಗ್ಗೆ ಇಷ್ಟು ಕೇವಲವಾಗಿ ಮತಾಡ್ತಾರೆ ... ? ಆಗ ನೇತಾಜಿ , ಭಗತ್ ಸಿಂಘ , ಆಜ಼ಾದ್ ಮುಂತಾದ revolutionaries ವಿಫಲವಾಗಿದ್ರು . ಇನ್ನೂ ಹೇಳಬೇಕು ಅಂದ್ರೆ ೧೮೫೭ ರಿಂದ ಎಲ್ಲಾ ಯುದ್ಧಗಳನ್ನು ನಮ್ಮನ್ನು ಅಳುತ್ತಿದ್ದ ಬ್ರಿಟೀಷರ ವಿರುದ್ಧ ಸೋತೆವು . ಯಾಕೆ ... ? ಒಗ್ಗಟ್ಟು ಇರಲ್ಲಿಲ್ಲ . ಸಾಮಾನ್ಯ ಜನರ participation nil . ಆಗ ಗೆದ್ದದ್ದು ಒಬ್ಬರೇ - ಗಾಂಧೀಜೀ "ಅಹಿಂಸಾ" ಮಾರ್ಗದಿಂದ . ಅಹಿಂಸಾ ಮಾರ್ಗ , ಸತ್ಯಾಗ್ರಹ is it begging ... ?
ಮಾತು ಸ್ಥಗಿತ ...
ಇವತ್ತಿಗೂ ಕುಡ ಮೌನ ಮೆರವಣಿಗೆ , ಚಲುವಳಿ , ರಾಸ್ತಾ ರೊಕೋ , ರೈಲ್ ರೊಕೋ , ಸತ್ಯಾಗ್ರಹ ... , ಇವೆಲ್ಲ ತಮ್ಮ ಹಕ್ಕುಗಳಿಗೆ ಹೊರಾಡಲು ಜನರ ಅಸ್ತ್ರಗಳು ಈ ನಮ್ಮ "Democracy"ನಲ್ಲಿ . is this begging..?
ಅವರ ಮೇಲೆ ಹಲವು ಹತ್ತು ತರಹದ ಅರೋಪಗಳು ಮಾಡಲಾಗಿವೆ . ಭಗತ್ ರನ್ನು ಉಳಿಸಲಿಲ್ಲ ಅಂತ , ಸಿದ್ಧಾಂತ ವಿರೋಧೀ ನಿಲುವು ಇದಕ್ಕೆ ಕಾರಣವಂತೆ . ಎಂದೂ ಹಿಂಸಾ ನೀತಿಯನ್ನು ಮಹಾತ್ಮರು ವಿರೋಧಿಸಿದರು , ನಿಜ ; ಆದರೆ ಅವರ ಹೇಳಿಕೆ - revoltionary ಜನರು ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರೆ ಅವರನ್ನು ತಬ್ಬಿ ಪ್ರಶಂಸಿಸುವವರಲ್ಲಿ ನಾನು ಮೊದಲಿಗ ... ಈ ಮಾತುಗಳು ಅವರ ನಿರ್ದಿಷ್ಟವಾದ ಗುರಿಯನ್ನು ತೋರಿಸುತ್ತದೆ . ವಿರೋಧ ನಿಲುವಾಗಿದ್ದರೂ ಭಗತ್ , ಆಜ಼ಾದ್ ರ ಮೇಲೆ ಅಪಾರ ಗೌರವವನ್ನು ಹೊಂದಿದ್ದರು . ಅವರೂ ಕೂಡ ಬಾಪುರನ್ನು ಗೌರವಿಸುತ್ತಿದ್ದರು .
ಕಾರಣ ಇಷ್ಟೆ ... ತಮ್ಮ ಜೀವನದ ಹಂಗನ್ನೇ ತೊರೆದು , ಸಂಸಾರ ಎಲ್ಲಾ ಬಿಟ್ಟು ಒಂದು ತುಂಡು ಬಟ್ಟೆ ಹಾಗು ಕೋಲು ಹಿಡಿದು ಹೊರಟಾಗ ಅವರ ಹಿಂದಿದ್ದ ಜನ ಮುರ್ಖರಲ್ಲ . ಅವರಲ್ಲಿದ್ದ ಅಪಾರ ವಿಷ್ವಾಸ ಹಾಗು ಅವರ ನಿಲುವಿನಲ್ಲಿದ್ದ ವಿಷ್ವಾಸ ... ಇವರು beggar..?
ಶೋಚನೀಯ ಅಂದ್ರೆ ನನ್ನ ಅನೇಕ ಸ್ನೇಹಿತರು ಮಹಾತ್ಮರ ತತ್ವಗಳ ವಿರುದ್ಧ . ಅವರ ಅಂತರಾರ್ಥ ತಿಳಿಯದೇ ಮಾತನಾಡುತ್ತಾರೆ . ಇದು ಕಲಿಯುಗ ಅಂತ ಗೊತ್ತಿತ್ತು ಆದರೆ "ಗೋಡ್ಸೆ - ಯುಗ" ಅಂತ ಗೊತ್ತಿರಲಿಲ್ಲ ...!









ಪ್ರತಿಕ್ರಿಯೆಗಳು
ಗಾಂಧಿ ಹಾಗು ಗೋಡ್ಸೆ
ಪ್ರಿಯ ಸುಪ್ರೀತರೆ,
ನಾನು ಸಹ ನಿಮ್ಮ ಹಾಗೆ ಗಾಂಧಿ ವಾದಿ, ಇಂತಹ ತರ್ಕಗಳು ನಾನು ಅನುಭವಿಸಿದ್ದೇನೆ, ೨ವರ್ಷಗಳ ಹಿಂದೆ ಪೂನಾಗೆ ಹೋಗಿ ನಾಥೂರಾಮ
ಗೋದ್ಸೆಯವರ ತಮ್ಮ ಗೋಪಾಲ ಗೋದ್ಸೆಯವರನ್ನು ಬೇಟಿಮಾಡಿದೆ, ಅವರು ಕೂಡಾ ೧೭ ವರ್ಷ ಜೈಲನುಭವಿಸಿದ್ದರು, ಇದೆ ವಿಷಯ ಸುಮಾರು ೩
ತಾಸು ಮಾತನಾಡಿದಿವಿ, ಅವರೋಂದು ಪುಸ್ತಕ ಬರೆದಿದ್ದಾರೆ ' ನಾನೇಕೆ ಗಾಂಧಿಜಿಯನ್ನು ಕೊಂದೆ' ಎಂದು ಇದನ್ನು ನೀವು ಸಹ ಓದಿ. ಆಗ ನನಗೆ
ಗೊತ್ತಾದದ್ದು ಗೋದ್ಸೆಯವರ ವ್ಯಕ್ತಿತ್ವದ ಪರಿಚಯ.
ನಮ್ಮ ಮಹಾತ್ಮರನ್ನು ಕೊಂದದ್ದು ನಮ್ಮ ನಾಯಕರ ಒಳಜಗಳ, ಪದವಿ ವ್ಯಾಮೋಹ, ವೈರಿಗಳ ಪಿತೂರಿ, ಜನಗಳ ಮೂರ್ಖತನ,ಹಾಗು
ಹಲವಾರು. ಆದುದರಿಂದ ನನಗನಿಸಿದ ಮಾತು ನಾ ಹೇಳುತ್ತೇನೆ, ರಾಮ ಭಕ್ತ ಮಹಾತ್ಮರನ್ನು ರಾಮರೇ ನಾಥೂರಾಮರಾಗಿ ಬಂದು ಇಂಥಹ
ನರಕ ವಿಮೋಚನೆಗಾಗಿ ತನ್ನ ಲೋಕಕ್ಕೆ ಕೊಂಡು ಹೋದರು.
ತಪ್ಪಿದ್ದರೆ ಮನ್ನಿಸಿ.
ಅಹೋರಾತ್ರ
ಅಹೋರಾತ್ರ
ಧನ್ಯವಾದಗಳು.
Supreeth
ಉ: ಗಾಂಧಿ ಹಾಗು ಗೋಡ್ಸೆ
ಅಹೋರಾತ್ರರೆ ಗೋಡ್ಸೆ ಬಗ್ಗೆ ಬಂದೆ ಒಂದು ವಿವರವಾದ ಲೇಖನ ಬರೆಯಲು ಸಾಧ್ಯವೆ.
ಉ: ಗೋಡ್ಸೆ ಯುಗ .
೧. ಗಾಂಧಿಯಿಂದಲೇ ಸ್ವಾತಂತ್ರ್ಯ ಬಂದಿದ್ದು ಅಂತ ಹೇಗೆ ಹೇಳ್ತೀರಿ?
೨. ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸುವುದೇ ಧರ್ಮವಾಗಿದ್ದರೆ ಬಾಪು ಪೂಜಿಸುತ್ತಿದ್ದ ಶ್ರೀರಾಮ ಭೂಮಿಯಲ್ಲಿ ಅವತರಿಸುವ ಅಗತ್ಯ ಏನಿತ್ತು?
೩. ಖಿಲಾಫತ್ ಚಳುವಳಿಯನ್ನು ಬೆಂಬಲಿಸಿದ ಗಾಂಧಿ ಒಂದು ಲಕ್ಷಕ್ಕೂ ಮಿಕ್ಕಿ ಹಿಂದೂಗಳನ್ನು ಕೊಂದ ಮೋಪ್ಲಾ ದಂಗೆಗೆ ಪರೋಕ್ಷವಾಗಿ ಕಾರಣರಲ್ಲವೇ?
೪. ಗಾಂಧೀಜಿ ನನಗೆ ಇಷ್ಟವಾಗುವುದು ಅವರ ಸಾಮಾಜಿಕ ಕಳಕಳಿ, ಆಧ್ಯಾತ್ಮಿಕ ಔನ್ನತ್ಯ, ಸರಳ ಜೀವನ, ಹಾಗೂ ಅವರ 'ಹಿಂದ್ ಸ್ವರಾಜ್' ದಲ್ಲಿ ಇರುವ ಭಾರತದ ಬಗೆಗಿನ ಅವರ ಕನಸುಗಳಿಂದ.
೫. ಗಾಂಧೀಜಿ ನನಗೆ ಇಷ್ಟವಾಗದಿರುವುದು ಅವರ ರಾಜಕೀಯ ನಿರ್ಧಾರಗಳಿಂದ
ಉ: ಗೋಡ್ಸೆ ಯುಗ .
ಗೋಡ್ಸೆ ಹಾಗೂ ಗಾಂಧಿ ಹತ್ಯೆಯ ಬಗೆಗೆ ವಸ್ತು ನಿಷ್ಠ ವಿವರಕ್ಕೆ ಓದಿ
"The Men Who killed Gandhi" by Manohar Malgonkar
ನಾರಾಯಣ
ಉ: ಗೋಡ್ಸೆ ಯುಗ .
ಆತ್ಮೀಯ
ಪ್ರದೀಪ್ ದಳ್ವಿ ಯವರ ಮೆ ನಾಥೂರಾಮ್ ಗೋಡ್ಸೆ ಬೋಲ್ತೋಯ್ ಓದಿದ್ದೀರಾ? ಒಮ್ಮೆ ಓದಿ ಅದರ ಕನ್ನಡ ಅನುವಾದ ಸ೦ಪದದಲ್ಲಿ ಬರಲಿದೆ.
ಹರಿ
ಉ: ಗೋಡ್ಸೆ ಯುಗ .
ರೀಡಿಫ್ ನಲ್ಲಿ ಇದರ ಬಗ್ಗೆ ಲೇಖನ ಬಂದಿತ್ತು. ನಾಟಕದ ತರ ಇತ್ತು ಅದು. ಹುಡೂಕಿ ನೋಡಿ ಸಿಗಬಹುದು.,..
ಉ: ಗೋಡ್ಸೆ ಯುಗ .
ಆತ್ಮೀಯ
ಅದರ ಸ್ಚಿಪ್ಟ್ ಸಿಕ್ಕಿದೆ ಜೊತೆಗೆ ನಾಟಕವೂ ಸಹ. ತು೦ಬಾ ಚೆನ್ನಗಿದೆ ನಿಷೇಶಿಧಿಸುವ೦ಥದ್ದು ಅದರಲ್ಲೇನೂ ಇಲ್ಲ. ಅದೇಕೆ ಅದನ್ನು ನಿಷೇಧಿಸಿದರೋ ಕಾಣೆ. ಗೋಡ್ಸೆ ಮತ್ತು ಅವನ ಮಾತುಗಳು ಪರಿಣಾಮಕಾರಿಯಗಿದೆ. ಗಾ೦ಧಿ ಕೊಡಿಸಿದ ೫೦ ಕೋಟಿ ರೂ ಸಾಲ ತ್ತು ಪಾಕೀಸ್ತಾನವನ್ನು ಬೇರ್ಪಡಿಸಿದ್ದು ಇವೆರಡ ವಿಷಯವನ್ನೇ ವಸ್ತುವಾಗಿಸಿಕೊ೦ಡಿರುವ೦ತಿದೆ.
ಹರಿ
ಉ: ಗೋಡ್ಸೆ ಯುಗ .
the Men who killed Gandhi :ನಿಜಕ್ಕೂ ಅದು ಒಳ್ಳೆ ಪುಸ್ತಕ : ಈ ಪುಸ್ತಕ ಕನ್ನಡದಲ್ಲೂ ಬಂದಿದೆ ಅನ್ನಿಸುತ್ತೆ: ರವಿ ಬೆಳಗೆರೆ ಅನುವಾದಿಸಿದ್ದು.