ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ದುಡಿದು,ದುಡಿದು'ಸಾಯುತ್ತಿದ್ದೇವೆ';ಬದುಕುವ ಸಲುವಾಗಿ!

May 14, 2007 - 9:34am — taleharate

DºÁ!! ¤£Éß (13.05.2007) CªÀÄä£À ¢£À CAvÉ? bÉ! ¤£Éß ¸ÀAqÉ CAzÀÄPÉÆArzÉÝ.  ಮುಂದೆ ಓದಿ »

~.~
  • Login or register to post comments
  • 292 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

Hard disk ಗೌಡರ ಮೌನವೄತ ಮತ್ತು ಮಾಜಿಯ 'ಕಾವೇರಿ'ದ ಜೋಕು!!!!

February 9, 2007 - 11:20pm — taleharate

ಕಾವೇರಿ ವಿಷಯದಲ್ಲಿ ಯಾರ್ ಯಾರು ಎಷ್ಟೆಷ್ಟು ಉಗ್ರವಾಗಿ ಖಂಡಿಸುತ್ತಿದ್ದಾರೆಂದು ಅವರವರೆ ವಿಷ್ಲೇಶಿಸಿಕೊಳ್ಳುತ್ತಿರುವ ಈ 'ಕಾವೇರಿ'ದ ಸಂದರ್ಭದಲ್ಲಿ, ಹಾಲಿ 'ಮಾಜಿ ಪ್ರಧಾನಮಂತ್ರಿ' Hard disk(H D) ದೇವೆಗೌಡರು ಮೌನ ವ್ರತ ಆಚರಿಸುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆಯೆಂದು ತಿಳಿದು ಬಂದಿದೆ. ಆದರೆ ಇದನ್ನು ಅರ್ಥ ಮಾಡಿಕೊಳ್ಳದೆ 'ವೄತ್ತಿಪರ' ವಿರೋಧಿಗಳು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆಂದು ಗೌಡರು ತಮ್ಮ ಮೌನ ಹೇಳಿಕೆಯ ಮೂಲಕ ದೂರಿದ್ದಾರೆ.

ಈ ಮಧ್ಯೆ, ಕಾವೇರಿಗೆ ಸಂಬಂಧಿಸಿದ ಕರ್ನಾಟಕದೊಂದಿಗಿನ ತನ್ನ ವ್ಯಾಜ್ಯಕ್ಕೆ 'ಪರಿಹಾರ' ದೊರೆತ ನಂತರ ತಮಿಳುನಾಡಿನಲ್ಲಿ ಅಲ್ಲಿಯ ಮಾಜಿ ಮತ್ತು ಹಾಲಿ ಮುಖ್ಯ ಮಂತ್ರಿಗಳ ಮದ್ಯೆ ಇದೇ ವಿಷಯ ಹೋಸ ತಿರುವು ಪಡೆದುಕೊಂಡಿದೆ. ಕಾವೇರಿ ತೀರ್ಪು ತಮಗೆ ಸಮಾಧಾನ ತಂದಿಲ್ಲ ಎಂದು 'ಮಾಜಿ'ಯು ತರಲೆ ತೆಗೆದಿರುವುದಕ್ಕೆ 'ಹಾಲಿ'ಯು, " 'ದೊಡ್ಡ' ಜನರಿಗೆ ಎಷ್ಟು ಕೊಟ್ಟರು ಸಾಲುವುದಿಲ್ಲ. ಮಾಜಿಯ ತಗಾದೆಯನ್ನು ಜೋಕ್ ಆಗಿ ತೆಗೆದುಕೊಳ್ಳಿ" ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲಿ 'ದೊಡ್ಡ' ಪದವು ಮಾನಸಿಕ ಅರ್ಥದಲ್ಲಿ ಬಳಕೆಯಾಗಿದೆಯೋ ಅಥವ 'ದೈಹಿಕ' ಅರ್ಥದಲ್ಲಿ ಬಳಕೆಯಾಗಿದಿಯೋ ಎಂಬುದು ಇದುವರಗೆ ತಿಳಿದು ಬಂದಿಲ್ಲ.  ಮುಂದೆ ಓದಿ »

~.~
  • Login or register to post comments
  • 440 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಐಶ್ ಮದುವೆಯ multi effects!!!!!

January 30, 2007 - 5:57pm — taleharate

2010ರಲ್ಲಿ ವಿಶ್ವದಾದ್ಯಂತ ದೂರ ಸಂಪರ್ಕ ಸ್ಥಗಿತಗೊಳ್ಳುತ್ತದೆಯಂತೆ. ಸೂರ್ಯನ ಉಜ್ವಲ ಕಿರಣದಿಂದಾಗಿ ಹೀಗಾಗುತ್ತದೆಯೆಂದು ಹೇಳಲಾಗಿದೆ. ಆದರೆ ಈ ಫೆಬ್ರವರಿ 27 ರಂದು ನಮ್ಮ ಸುದ್ದಿ ಮಾಧ್ಯಮಗಳ ಮೇಲೆ ಪ್ರಭಾವ ಬೀರಬಲ್ಲ ಘಟನೆಯ ಬಗ್ಗೆ ಎಲ್ಲೂ ವರದಿಯಾಗಿಲ್ಲ.

ಅಂದು 'ಐಶ್ ಮದುವೆ' ಎಂಬ ಘಟನೆಯ ತೀಕ್ಷಣ ಪ್ರಭಾವದಿಂದಾಗಿ ಇತರೆ ಎಲ್ಲಾ ಸುದ್ದಿಗಳು ಪತ್ರಿಕೆಗಳಲ್ಲಿ, ಟಿ ವಿ ಚಾನೆಲ್ ಗಳಲ್ಲಿ ಮೂಲೆಗುಂಪಾಗಲಿವೆ. ರಾಜಕಾರಣಿಗಳು,ನೇತಾರರು ಅಂದು ಯಾವುದೇ ಹೇಳಿಕೆಗಳಾಗಲಿ, ವಿರೋಧಿಗಳ ವಿರುದ್ದ ಆರೋಪ ಮಾಡುವುದಾಗಲಿ, ಹೊಸ ಯೋಜನೆ,ಯೋಚನೆಗಳನ್ನು ಪ್ರಕಟಿಸುವುದಾಗಲಿ ಮಾಡುವುದಿಲ್ಲವಂತೆ. 'ಐಶ್ ಮದುವೆ'ಯ ಮಂಗಳ ವಾದ್ಯದ ಅಬ್ಬರದಲ್ಲಿ ಇವರ ಕಿರುಚಾಟ ಕೇಳಿಸುವುದಿಲ್ಲವಾದ್ದರಿಂದ ಎಲ್ಲರೂ ಸರ್ವಸಮ್ಮತದಿಂದ ಈ ನಿರ್ಣಯ ಕೈಗೊಂಡಿದ್ದಾರೆ.

ಈ ಮಧ್ಯೆ, 'ಅಖಿಲ ಭಾರತ ವಿರಹಿಗಳ ಪಕ್ಷ' ಅಸ್ತಿತ್ತ್ವಕ್ಕೆ ಬಂದಿದ್ದು ಹಾಲಿ ನಟ ಹಾಗು ಮಾಜಿ 'ಐಶ್ ಪ್ರೇಮಿ' ಸಲ್ಮಾನ್ ಖಾನ್ ಈ ಪಕ್ಷದ ಅಧ್ಯಕ್ಷರಾಗಿ ಹಾಗು ಇನ್ನೊಬ ನಟ ವಿವೇಕ್ ಒಬೆರಾಯ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಪಕ್ಷದ ಕರ್ನಾಟಕ ರಾಜ್ಯ ಘಟಕಕ್ಕೆ ರವಿ ಬೆಳಗೆರೆ ಸಾರಥ್ಯ ವಹಿಸಿಕೊಂಡಿದ್ದಾರೆ.

ನಿನ್ನೆ ಮುಂಬಯಿ ಯಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಪಕ್ಷದ ಕಾರ್ಯಕ್ರಮಗಳ ಬಗ್ಗೆ ಮಾತಾಡುತ್ತ ರಾಷ್ಟ್ರಧ್ಯಕ್ಷರು, ಫೆಬ್ರವರಿ 14(ಪ್ರೇಮಿಗಳ ದಿನ)ನ್ನು ಕರಾಳದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ಅಂದು ಬೆಂಗಳೂರಿನಲ್ಲಿ ವಿರಹಿಗಳಿಗೆ ಸಾಂತ್ವನದ ಮಾತುಗಳಿರುವ ಸಿ ಡಿಯನ್ನು ರವಿ ಬೆಳಗೆರೆ ಬಿಡುಗಡೆ ಮಾಡಲಿದ್ದಾರೆ ಎಂದೂ ತಿಳಿಸಿದರು.

ಈ ಬಾರಿಯ ಪ್ರೇಮಿಗಳ ದಿನವನ್ನು ಕರಾಳ ದಿನವನ್ನಾಗಿ ಆಚರಿಸಲು ಕರೆ ನೀಡಿರುವುದರಿಂದ ಅಂದು ಆಗಲಿದ್ದ ಭರ್ಜರಿ ವಹಿವಾಟಿಗೆ ಕೊಡಲಿ ಪೆಟ್ಟು ಬಿದ್ದಿದೆ. ಪ್ರೇಮಿಗಳ ದಿನವನ್ನು ಬಂಡವಾಳವಾಗಿಸಿಕೊಂಡಿದ್ದ ವಾಣಿಜ್ಯ ಸಂಸ್ಥೆಗಳು ಅಪಾರ ನಷ್ಟ ಅನುಭವಿಸುವ ಸೂಚನೆ ಕಂಡು ಬಂದಿದೆ.

ಹೊಸದಾಗಿ ಪ್ರಾರಂಭ ಆಗಿರುವ 'ಅಖಿಲ ಭಾರತ ವಿರಹಿಗಳ ಪಕ್ಷ' ದೇಶದ ರಾಜಕಾರಣದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಿದೆ. ಇದರಿಂದ ರಾಜಕೀಯ ಕ್ಷೇತ್ರದಲ್ಲಿ ಯಾವ ತರಹ ಬದಲಾವಣೆಗಳಾಗಬಹುದೆಂದು ಕಾದು ನೋಡಬೇಕಾಗಿದೆ ಎಂದು ರಾಜಕೀಯ ವಿಮರ್ಶಕರು, ಚಿಂತಕರು,ಚಿಂತಿತರು ಅಭಿಪ್ರಾಯ ಪಟ್ಟಿದ್ದಾರೆ.  ಮುಂದೆ ಓದಿ »

~.~
  • ೧ ಪ್ರತಿಕ್ರಿಯೆ
  • 372 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಆಷ್ಟ್ರೇಲಿಯನ್ನರು: ಭಾರತದ ಜನಸಂಖ್ಯೆ ಹೆಚ್ಚಳಕ್ಕೆ ಕಾರಣರು

June 6, 2006 - 11:12pm — taleharate

ತಲೆಹರಟೆ ಹೆಸರಿನ ಈ ಲದ್ದಿಗಾರನಿಗೆ ಬಹಳ ಸಂತೋಷವಾಗಿದೆ. ತನ್ನ ಗಂಭೀರ ಮಾತುಗಳನ್ನು ತಮಾಷೆಯಾಗಿ, ತಮಾಷೆ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂದು ಸಿಕ್ಕಸಿಕ್ಕವರೆಲ್ಲಾ ಬಳಿ ಗೊಣಗುತ್ತಿದ್ದವನಿಗೆ ಇತ್ತಿಚಿಗೆ ಸಿಕ್ಕ ಪುಟ್ಟ ಸುದ್ಧಿಯೊಂದು ಈ ಸಂತೋಷಕ್ಕೆ ಕಾರಣ.

ಪೀಟರ್ ಕಾಸ್ಟಿಲ್ಲೊ ಎಂಬ ಆಸ್ಟ್ರೇಲಿಯದ ಪ್ರಮುಖ ವ್ಯಕ್ತಿ ಒಬ್ಬ ೧೯೯೨ ರಲ್ಲಿ ಆಸ್ಟ್ರೆಲಿಯನ್ ಜನತೆಯನ್ನು ಕುರಿತು "ದಂಪತಿಗಳು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಬೇಕು. ಒಂದು ಮಗು ಪಪ್ಪನಿಗೆ, ಒಂದು ಮಮ್ಮಿಗೆ ಇನ್ನೊಂದು ದೇಶಕ್ಕೆ.." ಎಂದು ತಮಾಶೆಗೆ ಹೇಳಿದ ಮಾತು ಈಗ ಗಂಭೀರ ಸಮಸ್ಯೆ ಉಂಟುಮಾಡಿದೆ!!

೧೯೯೨ ರಿಂದ ಈಚೆಗೆ ೨೦೦೫ರಲ್ಲಿ ಮೊದಲಬಾರಿಗೆ ೨೬೧೪೦೦ ಮಕ್ಕಳು ಇಲ್ಲಿ ಜನಿಸಿದ್ದಾರೆ. ಇದು ಅಲ್ಲಿಯ ಸರಕಾರಕ್ಕೆ ತಲೆನೊವಾಗಿ ಪರಿಣಮಿಸಿದೆ. ಹೀಗಾಗಿ ಅಲ್ಲಿಯ ಸರ್ಕಾರ "ರಾಷ್ಟ್ರದ ಹಿತದೃಷ್ಟಿಯಿಂದ ಹಾಗು ರಾಷ್ಟ್ರ ಪ್ರೇಮದ ಸಲುವಾಗಿ ಒಂದೇ ಮಗು ಪಡೆಯಿರಿ" ಎಂದು ತನ್ನ ಜನತೆಯಲ್ಲಿ ವಿನಂತಿಸಿಕೊಂಡಿದೆ.

ಈ ಮಧ್ಯೆ,ಆಷ್ತ್ರೇಲಿಯನ್ ಜನತೆ ತನ್ನ ತಮಾಷೆ ಮಾತನ್ನು ಇಷ್ಟು ಗಂಭೀರವಾಗಿ ತೆಗೆದುಕೊಡಿರುವುದು ತನಗೆ ಆಶ್ಚರ್ಯವಾಗಿದೆ ಎಂದು ಪೀಟರ್ ಕಾಸ್ಟಿಲ್ಲೊ ಹೇಳಿಕೊಂಡಿದ್ದಾನೆ. ಆಶ್ಟ್ರೇಲಿಯನ್ ಸರ್ಕಾರದ 'ಒಂದೇ ಮಗು ಸಾಕು' ಎಂಬ ಗಂಭೀರ ಕರೆಯನ್ನು ಅಲ್ಲಿಯ ಜನ ತಮಾಷೆ ಎಂದು ಭಾವಿಸದಿರಲಿ ಎಂಬುದು ತಲೆಹರಟೆಯ ಆಶಯ.

(೨೦೦೫ ರಲ್ಲಿ ಭರತದ ಜನಸಂಖ್ಯೆ ಎಂದಿಗಿಂತ 'ಅತಿ' ಹೆಚ್ಚಾಗಿದ್ದರೆ ಅದಕ್ಕೆ ಭಾರತಿಯರಾದ ನಾವು ಕಾರಣರಲ್ಲ! ಏಕೆಂದರೆ  ಜನಸಂಖ್ಯಾ ತಜ್ಞರ ಪ್ರಕಾರ ಭಾರತದ ಜನಸಂಖ್ಯೆಗೆ ಪ್ರತಿವರ್ಷ ಒಂದು ಆಸ್ಟ್ರೇಲಿಯ ಸೇರ್ಪಡೆಯಾಗುತ್ತಿದೆಯಂತೆ. ಹಾಗಾಗಿ ಆಶ್ತ್ರೇಲಿಯದ ಜನಸಂಖ್ಯೆ ಹೆಚ್ಚಾದರೆ ಸಹಜವಾಗಿ ಭಾರತದ ಜನಸಂಖ್ಯೆಯೂ ಅಷ್ಟೇ ಹೆಚ್ಚಬೆಕಲ್ಲವೇ?)  ಮುಂದೆ ಓದಿ »

~.~
  • Login or register to post comments
  • 597 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಗೌಡರ ತುಟಿಯಂಚಿನಲ್ಲಿ ತುಂಟನಗೆ?

May 27, 2006 - 8:27pm — taleharate

ಹಾಲಿ ಮಾಜಿ ಪ್ರಧಾನಿ ಡಿ ಗೌಡರಿಗೆ ಪತ್ರಕರ್ತರೆಂದರೆ ಅಷ್ಟಕಷ್ಟೆ. ಅವರ ಪ್ರಕಾರ ಪತ್ರಕರ್ತರೆಲ್ಲಾ ತಲೆಹರಟೆಗಳು. ಅದರಲ್ಲೂ ನನ್ನ ಹೆಸರೇ ತಲೆಹರಟೆ ಎಂದಿರುವಾಗ ಕೇಳಬೇಕೆ? ಅಂತು ಇಂತು ಕಷ್ಟಪಟ್ಟು ಸಂದರ್ಶನ ಪಡೆಯುವಷ್ಟರಲ್ಲಿ ನನ್ನ ತಲೆ ಹನ್ನೆರಡಾಣೆ ಆಗಿ 'ತಲೆಹರಟೆ'ಗೆ ತಲೆಯೇ ಇಲ್ಲ ಎನ್ನುವ ಹಾಗಾಗಿದೆ. ಆದರೆ ಸಂದರ್ಶನ ವೇಳೆ ಆಡಿದ ಮಾತುಗಳೆಲ್ಲಾ ಆಫ್ ದಿ ರೆಕಾರ್ಡ್!! ಆದರೂ ಧೈರ್ಯ ಮಾಡಿ ಸಂದರ್ಶನದ ಒಂದೆರಡು ತುಣುಕುಗಳನ್ನು ಇಲ್ಲಿ ನೀಡಿದ್ದೀನಿ.

ತಲೆಹರಟೆ: ಗೌಡ್ರೇ ನಿಮ್ಮ ಇದುವರೆಗಿನ ಮಹತ್ತರ ಸಾಧನೆ ಯಾವುದು?

ಗೌಡ್ರು: ಮಗನನ್ನು ಸಿ ಎಮ್ ಮಾಡಿದ್ದು. ಇದು ಆಫ್ ದಿ ರೆಕಾರ್ಡ್. ಪತ್ರಿಕೆಯಲ್ಲಿ ಪ್ರಕಟಿಸಬೇಡಿ.

ತಲೆಹರಟೆ: ನೀವು ಕೆಲವು ತಿಂಗಳ ಹಿಂದಿನವರೆಗೂ ಸರಾಸರಿ ದಿನಕ್ಕೊಂದು ಪತ್ರ ಬರೆಯುತ್ತಿದ್ದರಲ್ಲ. ಈಗೇಕೆ ನಿಮ್ಮ ಪತ್ರಗಳು ಅಪರೂಪ ಆಗಿಬಿಟ್ಟಿದೆ.

ಗೌಡ್ರು: ವಯಸ್ಸಾಯಿತು. ಪತ್ರ ಬರೆದು ಬರೆದು ಸುಸ್ತಾಗಿದ್ದೀನಿ. ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಸುಮ್ಮನಾಗಿದ್ದೀನಿ. ಹದಿನಾರು ತಿಂಗಳು ರೆಸ್ಟ್. ಆಮೇಲೆ ನೋಡಿ ಮತ್ತೆ ಪ್ರಾರಂಭ ಆಗುತ್ತೆ ನನ್ನ ಪತ್ರಾವಳಿ! (ಪತ್ರ ಹಾವಳಿ? ಆಡಳಿತ ಹಂಚಿಕೆ ಸೂತ್ರದ ಪ್ರಕಾರ ಇನ್ನು ಹದಿನಾರು ತಿಂಗಳ ನಂತರ ಮಂಡಿಊರಿ-ಯಡಿಯೂರಿ ಅಲ್ಲ-ಎಂಬುವವರು ಮುಖ್ಯ ಮಂತ್ರಿ ಆಗಲಿದ್ದಾರೆ....ಸಂದರ್ಶಕ).

ತಲೆಹರಟೆ: ನೀವು ಸೋನಿಯಾಗೂ ಪತ್ರ ಬರೆಯುತ್ತಿದ್ದರಲ್ಲಾ ಆಗ ನಿಮ್ಮ ಧರ್ಮಪತ್ನಿ ಏನು ಅನ್ನುತಿರಲ್ಲಿಲ್ಲವಾ?

ಗೌಡ್ರು: ..............................(ಗೌಡರ ತುಟಿಯಂಚಿನಲ್ಲಿ ತುಂಟನಗೆಯೊಂದು ಮಿಂಚಿ ಮಾಯವಾಯಿತು)  ಮುಂದೆ ಓದಿ »

~.~
  • Login or register to post comments
  • 762 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
12ಮುಂದಿನ ›ಕೊನೆಯ »
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 23 ಅತಿಥಿಗಳು ಆನ್ಲೈನ್ ಇರುವರು.


ಕರ್ಮ ಮಾರ್ಗ ಪ್ರಕೃತಿ ಪರಾಯಣ, ಜ್ಞಾನಮಾರ್ಗ ಆತ್ಮ ಪರಾಯಣ ಮತ್ತು ಭಕ್ತಿಮಾರ್ಗ ಪ್ರಭು ಪರಾಯಣವಾಗಿರುತ್ತದೆ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator