ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › taleharate ರವರ ಬ್ಲಾಗ್

ಭ್ರಷ್ಟಾಚಾರ ಕಾಣಿಸದಂತೆ 'ಕಾರ್ಯ' ನಿರ್ವಹಿಸಿ: ಮು ಮಂತ್ರಿ

May 21, 2006 - 6:45pm — taleharate

ವರ್ಗಾವಣೆ 'ಜಾತ್ರೆ'ಯಲ್ಲಿ ತಿಂದುಂಡು ತೇಗುತ್ತಿರುವ ಭ್ರಷ್ಟಾಸುರನ ರೌದ್ರ ನರ್ತನದ ಬಗ್ಗೆ ವಿ.ಕ ಪತ್ರಿಕೆಯು 'ವರ್ಗ:ದುಡ್ಡು ಮಾಡೋರ ಸ್ವರ್ಗ' ಹೆಸರಿನ ಎಫ್ ಐ ಆರ್ ದಾಖಲಿಸಿದನ್ನು(ಮೇ ೧೭,೨೦೦೬) ಕಂಡು 'ಎಚ್ಚೆತ್ತು'ಕೊಂಡಿರುವ ಮಾನ್ಯ ಮು.ಮಂತ್ರಿ ಅಧಿಕಾರಿಗಳೊಂದಿಗೆ ತುರ್ತು ಸಮಾಲೋಚನ ಸಭೆಯನ್ನು ನಡೆಸಿ ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆಂದು ಅದೇ ಪತ್ರಿಕೆ ವರದಿ ಮಾಡಿದೆ(ಮೇ ೧೮,೨೦೦೬). ಆದರೆ ಆ ಪತ್ರಿಕೆಯು ತನ್ನ ವರದಿಯಲ್ಲಿ ಸ್ಥಳ ಅಭವಾದಿಂದಲೋ ಅಥವ ಮುದ್ರರಾಕ್ಷಸನ ಹಾವಳಿಯಿಂದಲೋ ಬಹು ಮುಖ್ಯ ಮಾಹಿತಿಯನ್ನು ಕೈ ಬಿಟ್ಟು ಅಪೂರ್ಣ ವರದಿಯನ್ನು ನೀಡಿದೆ. ಪ್ರಕಟವಾಗಿರುವ ವರದಿಯು "ವರ್ಗಾವಣೆ ವಿಚಾರದಲ್ಲಿ ಕಟ್ಟೆಚ್ಚರ ವಹಿಸುವಂತೆ ಮು ಮಂತ್ರಿ ಹೆಚ್.ಡಿ.ಕೆ.ಸ್ವಾಮಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ" ಎಂಬ ಸಾಲಿನೊಂದಿಗೆ ಪ್ರಾರಂಭವಾಗಿ, "ಭ್ರಷ್ಟಾಚಾರ ಕಂಡು ಬಂದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು" ಎಂಬ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ. ಆದರೆ ತಲೆಹರಟೆ ಎಂಬ ಲದ್ದೀಗಾರನ ಪ್ರಕಾರ ವಿ.ಕ ದಲ್ಲಿ ಪ್ರಕಟವಾಗಿರುವ ಮೂಲ ವರದಿಯ ಪ್ರಾರಂಭಿಕ ಸಾಲು ಹೀಗಿದೆ:"ವರ್ಗಾವಣೆಗೆ ಸಂಬಂಧಿಸಿದ ಒಂದೂ 'ಕೇಸು' ಸಹ 'ಹೊರಗಿನ'ವರಿಗೆ ಗೊತ್ತಾಗದಂತೆ ಕಟ್ಟೆಚ್ಚರವಹಿಸುವಂತೆ ಮು.ಮಂತ್ರಿ ಅಧಿಕಾರಿಗಳಿಗೆ 'ತಾಕೀತು' ಮಾಡಿದ್ದಾರೆ".ಕೊನೆಯ ಸಾಲು "ಭ್ರಷ್ಟಾಚಾರ ಕಂಡು ಬಂದರೆ 'ತಪ್ಪಿತಸ್ಥರ' ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಭ್ರಷ್ಟಾಚರ ಕಂಡು ಬಾರದಂತೆ 'ಕಾರ್ಯ' ನಿರ್ವಹಿಸುವಂತೆ ಸೂಚಿಸಲು ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದರು". ಜೈ ಭ್ರಷ್ಟಾಸುರ!!!!!!!

www.tale-harate.blogspot.com 

~.~
  • taleharate ರವರ ಬ್ಲಾಗ್
  • Login or register to post comments
  • 538 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 25, 2006 - 12:22pm — venkatesh

ಭ್ರ್ಷಷ್ಟಾಚಾರ....

venkatesh's picture

ಶ್ರೀ ಕುಮಾರ ಸ್ವಾಮಿಯವರು ತಮ್ಮ ತೀರ್ಥರೂಪರವರನ್ನು ವಿಚಾರಿಸಿ ನಿಮಗೆ ತಿಳಿಸುತ್ತಾರೆ !
ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾಳೆ ನೀವೂ ಮಾಯ.............
  • ನೂರು ದಿನ ಪೂರೈಸಿದ `ಸರ್ಕಾರ್' `ಸಿನಿಮಾ'!!!
  • ನೀಳ್ಗತೆ
  • ಕನ್ನಡ "ಬರಹ" ಕೀ ಮ್ಯಾಪ ತಂತ್ರಾಂಶ ಲಿನಕ್ಸ ಬಳಕೆದಾರರಿಗೆ ಲಭ್ಯವಿದೆ
  • ಐಸ್ ಕ್ರೀಮ್ (Ice Cream) ಗೆ ಕನ್ನಡದಲ್ಲಿ ಸರಿಯಾದ ಪದ ಯಾವುದು?
Syndicate content

ಲೇಖಕರು

taleharate's picture

ಪರಿಚಯ

ಜನ ನನ್ನ ಗಂಭೀರ ಮಾತುಗಳನ್ನು ತಮಾಷೆಯಾಗಿ ಭಾವಿಸುತ್ತಾರೆ, ತಮಾಷೆ ಮಾತನ್ನು ಗಂಭಿರವಾಗಿ ಪರಿಗಣಿಸುತ್ತಾರೆ. ಅದೇ ನನ್ನ ಅಸಲಿ ಸಮಸ್ಯೆ!!!!!!!!!!
ನನ್ನ ಕನ್ನಡಕ ನೋಡಿ ನನ್ನನ್ನು ಬುದ್ದಿವಂತ ಅಂತಾರೆ ಜನ.ಜನಕ್ಕೇನು,ಏನು ಬೇಕಾದರು ಹೇಳುತ್ತಾರೆ.ನನ್ನ ದಡ್ಡತನಕ್ಕೆ ನಾನೇ ಸರಿಸಾಟಿ. ಪಿ ಯು ಸಿ ನಲ್ಲಿ ಸೆಕೆಂಡ್ ಕ್ಲಾಸ್,ಡಿಗ್ರಿ ಪಾಸ್ ಕ್ಲಾಸ್ ಅದೂ ಐದು ವರ್ಷದ ದೀರ್ಘ ದಂಡಯಾತ್ರೆಯ ನಂತರ.ಈಗ ಹೇಳಿ ನಾನು ಬುದ್ದಿವಂತನಾ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
  • hpn
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 3:11am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 5, 2008 - 2:34am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 84 ಅತಿಥಿಗಳು ಆನ್ಲೈನ್ ಇರುವರು.


ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator