ಆತ್ಮೀಯರೇ,
ಗ್ರೀಷ್ಮ ಋತುವಿನ ಪುಷ್ಪಗಳ ಮೆರಗಿನೊಡೆ
ಜ್ಯೇಷ್ಠ ಮಾಸದ ಹೊಸತನದ ಹೊಸಲಿನಲಿ
ವಿವಾಹ ಮಂಟಪದಿ, ಮಂಗಳ ವಾದ್ಯದೊಳು
ಗೃಹಸ್ಥಾಶ್ರಮವ ಪ್ರವೇಶಿಸುವೆ ನಾನಿಂದು
ನನ್ನ ಮನದ ಹೂದೋಟದ ಸುಂದರ ಶ್ವೇತ
ಪುಷ್ಪಗಳಿಗೆ ತೇಜಸ್ಸಾಗುವ ಮಧುರ ದಿನ
ನಮ್ಮೀ ಜೀವನದ ಶುಭಸಂದರ್ಭಕೆ ನಮ್ಮನು
ಹರಸಲು ಮದುವೆಗೆ ಬನ್ನಿರಿ ನೀವೆಲ್ಲ, ನಿಮ್ಮ
ಆಗಮನದೊಂದಿಗೆ ಸಂತಸ ತನ್ನಿರಿ ನಮಗೆಲ್ಲ
- ತೇಜಸ್ವಿ.ಎ.ಸಿ
ಪ್ರಿಯ ಸಂಪದಿಗರೆ,
ನನ್ನ ವಿವಾಹವೂ ಇದೇ ಶನಿವಾರ, ಭಾನುವಾರ ದಿ: 11 ಹಾಗೂ 12-06-2011 ರಂದು ಶ್ವೇತಾರೊಂದಿಗೆ ನಡೆಯಲಿದ್ದು, ನನ್ನ ಜೀವನದ ಈ ಶುಭ ಸಂದರ್ಭಕ್ಕೆ ತಾವೆಲ್ಲರೂ ಆಗಮಿಸಿ ನವದಂಪತಿಗಳನ್ನು ಆಶೀರ್ವದಿಸಬೇಕಾಗಿ ಕೋರುತ್ತೇನೆ. ನನ್ನ ಈ ಆಮಂತ್ರಣವನ್ನು ವೈಯಕ್ತಿಕ ಆಮಂತ್ರಣವಾಗಿ ಭಾವಿಸಿ ತಾವೆಲ್ಲರು ತಪ್ಪದೇ ಆಗಮಿಸಿ ನಮ್ಮ ಮನ ಸಂತೋಷಪಡಿಸಬೇಕಾಗಿ ಕೋರುತ್ತೇನೆ.
ಇಂತಿ ನಿಮ್ಮ ಸಂಪದಿಗ
- ತೇಜಸ್ವಿ .ಎ.ಸಿ
ವಿವಾಹ ಸ್ಥಳ: ಆರತಕ್ಷತೆ: ಮಹೂರ್ತ:
ವಾಸವಿ ಮಹಲ್ ಕಲ್ಯಾಣ ಮಂಟಪ 11-06-2011, ಶನಿವಾರ 12-06-2011, ಭಾನುವಾರ
ರಾಜರಾಜೇಶ್ವರಿ ನಗರ ಆರ್ಚ್ ಮುಖ್ಯ ರಸ್ತೆ ಸಂಜೆ 7:00 ರ ನಂತರ ಬೆಳಿಗ್ಗೆ 9:45 ರಿಂದ 10:30
ರಾಜರಾಜೇಶ್ವರಿ ನಗರ, ಬೆಂಗಳೂರು - 98





ಪ್ರತಿಕ್ರಿಯೆಗಳು
ಉ: ವಿವಾಹ ಆಮಂತ್ರಣ
ಪ್ರಿಯ ತೇಜಸ್ವಿ,
ನಿಮ್ಮ ವೈವಾಹಿಕ ಜೀವನವು, ನಿಮ್ಮ ಬಾಳಿನಲ್ಲಿ ಸುಖ,ಸಂತೋಷ ,ಸಮೃದ್ಧಿ ನೀಡಲಿ.
ನಿಮ್ಮ
ಕಾಮತ್ ಕುಂಬ್ಳೆ
ಉ: ವಿವಾಹ ಆಮಂತ್ರಣ
ಪ್ರಿಯ ವೆಂಕಟೇಶ್,
ನಿಮ್ಮ ಹಾರೈಕೆಗೆ ಧನ್ಯವಾದಗಳು. ಮದುವೆಗೆ ತಪ್ಪದೆ ಬನ್ನಿ.
- ತೇಜಸ್ವಿ
ಉ: ವಿವಾಹ ಆಮಂತ್ರಣ
ತೇಜಸ್ವಿಯವರೇ
ನವ ಜೀವನಕ್ಕೆ ಕಾಲಿಡುತ್ತಿರುವ ನಿಮ್ಮೀರ್ವರಿಗೂ ಶುಭಾಶಯಗಳು
ವೀಕೆಂಡ್'ನಲ್ಲಿ ಆಗುತ್ತಿರುವ ಈ ಮದುವೆಯಂತೆ ನಿಮ್ಮ ಜೀವನವೂ ಹೆಚ್ಛು ಟೆನ್ಶನ್ ಇಲ್ಲದೆ ಆರಾಮವಾಗಿ ಸಾಗಲಿ
ಉ: ವಿವಾಹ ಆಮಂತ್ರಣ
ಧನ್ಯವಾದಗಳು ಶ್ರೀ ನಾಥ್ ರವರೇ.
ಉ: ವಿವಾಹ ಆಮಂತ್ರಣ
ತೇಜಸ್ವಿ ಅವರೇ ನವ ಜೀವನಕ್ಕೆ ಕಾಲಿಡುತ್ತಿರುವ ನವ ಜೋಡಿಗೆ ಶುಭಾಶಯಗಳು
ಉ: ವಿವಾಹ ಆಮಂತ್ರಣ
ಪ್ರಿಯ ಜಯಂತ್, ನಿಮಗೆ ಧನ್ಯವಾದಗಳು ಹಾಗು ನೀವು ತಪ್ಪದೆ ಬರಬೇಕು .
ಉ: ವಿವಾಹ ಆಮಂತ್ರಣ
ತೇಜಸ್ವಿಯವರೆ,
ವಿವಾಹ ಜೀವನದ ಶುಭಾಶಯಗಳು.
ಉ: ವಿವಾಹ ಆಮಂತ್ರಣ
ಪ್ರಿಯ ಭಾಗ್ವತರವರೆ, ನಿಮಗೆ ಧನ್ಯವಾದಗಳು ಹಾಗು ನೀವು ತಪ್ಪದೆ ಮದುವೆಗೆ ಬರಬೇಕು .
ಉ: ವಿವಾಹ ಆಮಂತ್ರಣ
ಪ್ರಿಯ ತೇಜಸ್ವಿ..
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ನಿಮಗೆ ನನ್ನ ಹಾರ್ದಿಕ ಶುಬಾಶಯಗಳು.
ನಿಮ್ಮ ವೈವಾಹಿಕ ಜೀವನವು ಸುಖ -ಸ೦ತೋಷಗಳಿ೦ಧ ತು೦ಬಿರಲೆ೦ದು ಶ್ರೀಮಾತೆಯವರಲ್ಲಿ ಪ್ರಾರ್ಥಿಸುತ್ತೇನೆ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ವಿವಾಹ ಆಮಂತ್ರಣ
ಪ್ರಿಯ ನಾವಡರವರೆ, ನಿಮಗೆ, ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು. ನೀವು ತಪ್ಪದೆ ಮದುವೆಗೆ ಬರಬೇಕು .
ಉ: ವಿವಾಹ ಆಮಂತ್ರಣ
ತೇಜಸ್ವಿ, "ಪುಷ್ಪಗಳಿಗೆ ತೇಜಸ್ಸಾಗುವ ಮಧುರ ದಿನ" - ಎಂದೆಂದಿಗೂ ಮಧುರವಾಗಿರಲಿ, ತಮಗೂ ಶ್ವೇತಾ ರಿಗೂ ಹೃತ್ಪೂರ್ವಕ ಹಾರೈಕೆಗಳು.
ಉ: ವಿವಾಹ ಆಮಂತ್ರಣ
ಪ್ರಿಯ ಅಬ್ದುಲ್ ರವರೆ, ನಿಮ್ಮ ಹಾರೈಕೆಗೆ ಧನ್ಯವಾದಗಳು. ನೀವು ತಪ್ಪದೆ ಮದುವೆಗೆ ಬರಬೇಕು.
ಉ: ವಿವಾಹ ಆಮಂತ್ರಣ
ತೇಜಸ್ವಿ, ಹೊಸಬಾಳಿನ ಹೊಸ್ತಿಲಲ್ಲಿ ನಿ೦ತಿರುವ ನಿಮಗೆ ಹಾರ್ದಿಕ ಶುಭಾಶಯಗಳು. ನಿಮ್ಮ ದಾ೦ಪತ್ಯ ಜೀವನ ಸುಖಕರವಾಗಿರಲಿ ಎ೦ದು ಹಾರೈಕೆಗಳು.
ಉ: ವಿವಾಹ ಆಮಂತ್ರಣ
ಪ್ರಿಯ ಮಂಜು ರವರೆ, ನಿಮ್ಮ ಹಾರೈಕೆಗೆ ಧನ್ಯವಾದಗಳು. ನೀವು ತಪ್ಪದೆ ಮದುವೆಗೆ ಬರಬೇಕು .
ಉ: ವಿವಾಹ ಆಮಂತ್ರಣ
ಪ್ರಿಯ ತೇಜಸ್ವಿರವರೆ
ನಿಮ್ಮ ವಿವಾಹಕ್ಕೆ ನನ್ನ ತುಂಬು ಮನದ ಶುಭ ಹಾರೈಕೆಗಳು
ವಿವಾಹನಂತರ ನಿಮ್ಮ ಶ್ರೀಮತಿಯವರನ್ನು ಸಂಪದಿಗರನ್ನಾಗಿ ಪರಿಚಯಿಸಿಬಿಡಿ
-ಪಾರ್ಥಸಾರಥಿ
ಉ: ವಿವಾಹ ಆಮಂತ್ರಣ
ಪ್ರಿಯ ಪಾರ್ಥ ರವರೆ, ನಿಮ್ಮ ಹಾರೈಕೆಗೆ ಧನ್ಯವಾದಗಳು. ನನ್ನ ಶ್ರೀಮತಿಯವರನ್ನು ಸಂಪದಕ್ಕೆ ಪರಿಚಯಿಸುತ್ತೇನೆ. ನೀವು ತಪ್ಪದೆ ಮದುವೆಗೆ ಬರಬೇಕು .
ಉ: ವಿವಾಹ ಆಮಂತ್ರಣ
ನಿಮ್ಮಿಬ್ಬರ ದಾಂಪತ್ಯ ಜೀವನಕ್ಕೆ ಆ ಪರಮಾಪ್ತ ತೇಜೋವಂತನ
ಆಶೀರ್ವಾದ ಸದಾ ಇರಲೆಂಬುದೆ ನಮ್ಮ ಹಾರೈಕೆ.
ರಾಮಮೋಹನ
ಉ: ವಿವಾಹ ಆಮಂತ್ರಣ
ಪ್ರಿಯ ರಾಮ ಮೋಹನ್ ರವರೇ, ನಿಮ್ಮ ಹಾರೈಕೆಗೆ ಧನ್ಯವಾದಗಳು. ನೀವು ತಪ್ಪದೆ ಮದುವೆಗೆ ಬರಬೇಕು.
ಉ: ವಿವಾಹ ಆಮಂತ್ರಣ
ತೇಜಸ್ವಿ,
ಜನುಮ ಜನುಮದ ಅನುಬಂಧ್
ಹ್ರುದಯ ಹ್ರುದಯಗಳ ಪ್ರೇಮಾನುಬಂಧ,
ಹೊಸ ಬಾಳಿನ ಹೊಸಿಲಲಿ ನಿಂತಿರುವ
ನವ ಜೋಡಿಗೆ ಶುಭವಾಗಲಿ,
ನಿಮ್ಮ ವಿವಾಹವು ಶುಭವಾಗಿ ನಡೆಯಲಿ, ನಿಮ್ಮ ನೂತನ ಸಂಸಾರವು ಎಂದೆಂದೂ ಅನಂದದಲಿ ತೇಲುತಿರಲಿ.
ವಂಡನೆಗಳು/ಮಧ್ವೇಶ್
ಉ: ವಿವಾಹ ಆಮಂತ್ರಣ
ಪ್ರಿಯ ಮಧ್ವೇಶ್, ನಿಮಗೆ ಧನ್ಯವಾದಗಳು. ತಪ್ಪದೆ ಮದುವೆಗೆ ಬರಬೇಕು.
ಉ: ವಿವಾಹ ಆಮಂತ್ರಣ
ತೇಜಸ್ವೇತಾ ( ಶ್ವೇತೇಜಸ್ವಿ) ಜೋಡಿಗೆ ಶುಭಾಶಯಗಳು.
-ಗಣೇಶ.
ಉ: ವಿವಾಹ ಆಮಂತ್ರಣ
ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು ಗಣೇಶ್. ತಪ್ಪದೆ ಮದುವೆಗೆ ಬನ್ನಿ.
ಉ: ವಿವಾಹ ಆಮಂತ್ರಣ
ತೇಜಸ್ವಿಯವರೇ
ನಿಮ್ಮ ವೈವಾಹಿಕ ಜೀವನವು ಸುಖಕರವಾಗಿರಲಿ
ಉ: ವಿವಾಹ ಆಮಂತ್ರಣ
ಧನ್ಯವಾದಗಳು ಚಿಕ್ಕು. ನೀವು ತಪ್ಪದೆ ಮದುವೆಗೆ ಬನ್ನಿ.
ಉ: ವಿವಾಹ ಆಮಂತ್ರಣ
ಶುಭ ಹಾರೈಕೆಗಳು, ತೇಜಸ್ವಿ.
ಉ: ವಿವಾಹ ಆಮಂತ್ರಣ
ಕವಿ ನಾಗರಾಜರಿಗೆ ಧನ್ಯವಾದಗಳು. ತಾವು ತಪ್ಪದೆ ಮದುವೆಗೆ ಬರಬೇಕು.
ಹಾರ್ದಿಕ ಶುಭಾಷಯಗಳು
ಮೊಗ್ಗಗಿ ಕಾಣುವ ಇ೦ದಿನ ದಿನ,
ಹೂವಾಗಿ ಅರಳುವ ಮು೦ದಿನ ದಿನ
ಸಿಹಿ ತು೦ಬಿದ ಜೀವನವಾಗಲಿ
ಹೊಸ ಬಾಳಿನ ಹೊಸಿಲಲಿ ನಿ೦ತಿರುವ. ಹೊಸ ಜೋಡಿಗೆ
ಸ೦ಪದ ಪರವಾಗಿ ಶುಭವಾಗಲಿ,
ಉ: ಹಾರ್ದಿಕ ಶುಭಾಷಯಗಳು
ಅನಂತ್ ರವರೇ, ನಿಮಗೆ ಧನ್ಯವಾದಗಳು. ತಾವು ನನ್ನ ಮದುವೆಗೆ ಬರಬೇಕು .
ಉ: ವಿವಾಹ ಆಮಂತ್ರಣ
ಹೊಸ ಜೀವನಕ್ಕೆ ಶುಭ ಹಾರೈಕೆಗಳು ತೇಜಸ್ವಿಯವರೇ
ಉ: ವಿವಾಹ ಆಮಂತ್ರಣ
ಧನ್ಯವಾದಗಳು ನಾಗರತ್ನ ರವರೇ, ತಾವು ತಪ್ಪದೆ ಮದುವೆಗೆ ಬರಬೇಕು.