ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › tvsrinivas41 ರವರ ಬ್ಲಾಗ್

ಮನೆ ಮನೆ ಮಾತಾಗುತ್ತಿರುವ ಸಂಪದ

September 7, 2005 - 10:13am — tvsrinivas41

ಸಂಪದದಲ್ಲೀಗ ೩೧೬ ಸದಸ್ಯರಿದ್ದಾರೆ ಎಂದರೆ ಆಶ್ಚರ್ಯವೇನಲ್ಲ. ಅದರಲ್ಲಿ ಸರಿ ಸುಮಾರು ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಯಾವುದೇ ತಾಣದಲ್ಲಿ ಸೇರುವ ಸದಸ್ಯರು ಆಗೊಮ್ಮೆ ಈಗೊಮ್ಮೆ ಮಾತ್ರ ಇಣುಕಿ ನೋಡಿ ಕಣ್ಮರೆಯಾಗುವರು. ಆದರಿಲ್ಲಿ ಇದಕ್ಕೆ ವ್ಯತಿರಿಕ್ತ ಪರಿಸ್ಥಿತಿ.

ಈ ಕೂಸಿಗಿನ್ನೂ ಒಂದು ತಿಂಗಳು ಕಳೆದಿಲ್ಲ. ಇದರ ಕರ್ತೃವಿಗೆ ತಾಣವನ್ನು ಸಂಭಾಳಿಸುವುದೇ ಸಮಸ್ಯೆ ಆಗಿದೆ. ಉಂಹೂಂ! ಹಣದ ಸಮಸ್ಯೆಯಲ್ಲ. ಬ್ಯಾಂಡ್‍ವಿಡ್ತಿನ ಸಮಸ್ಯೆ. ಇಷ್ಟು ಸದಸ್ಯರು ಬಂದು ಸೇರುವರೆಂದು ಕನಸು ಮನಸ್ಸಿನಲ್ಲೂ ಅವರು ಎಣಿಸಿರಲಿಲ್ಲ. ಮಧ್ಯೆ ಎರಡು ದಿನಗಳ ಕಾಲ ಸಂಪದ ತನ್ನಂತಾನೇ ರಜೆ ಘೋಷಿಸಿಕೊಂಡಿತು. ಆದರೂ ಬೇಜಾರುಪಟ್ಟುಕೊಳ್ಳದೇ ಸದಸ್ಯರು ಸಕ್ರಿಯವಾಗಿ ಅವರವರ ರುಚಿಗೆ ತಕ್ಕಂತೆ ಮಾತುಕತೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಕಳೆದ ತಿಂಗಳು ಮೂರು ಬಾರಿ ಬ್ಯಾಂಡ್‍ವಿಡ್ತನ್ನು ಹೆಚ್ಚಿಸಬೇಕಾಯ್ತು. ಕಾರಣವೇನು ಅಂತ ಕೇಳ್ತೀರಾ? ಸಂಪದದ ಕಂಪು ಹಾಗಿದೆ ಸ್ವಾಮಿ. ಸಂಪದ ಈಗ ಹುಟ್ಟಿದ ಕೂಸಾದ್ರೂ ಅದರ ಹಿರಿಯಣ್ಣ ಕನ್ನಡ ವಿಕಿಪೀಡಿಯ ಆಗಲೇ ಬಹಳ ದೊಡ್ಡ ಹೆಸರು ಮಾಡಿದೆ. ಇದರ ಬಗ್ಗೆ ಉದಯವಾಣಿ, ಅದುವೇಕನ್ನಡ (ದಟ್ಸ್‍ಕನ್ನಡ.ಕಾಂ) ಮತ್ತಿತರೇ ಜಾಲಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಇನ್ನು ಸಂಪದದ ಬಗ್ಗೆಯೇ ಒಂದು ವಿಶೇಷ ಲೇಖನವನ್ನು ಚಿಕ್ಕದಾಗಿ ಚೊಕ್ಕದಾಗಿ ಡಾ| ಪವನಜ ಅವರು ಸುಧಾ ವಾರಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಈ ಗಂಧದ ಮರವನ್ನು ಸ್ವಲ್ಪ ಚಿವುಟಿದರೂ ಸಾಕು, ಇಡೀ ಲೋಕಕ್ಕೇ ಇದರ ಸುಗಂಧ ಪರಿಮಳ ಹಬ್ಬಿ ಆ ಪರಿಮಳವನ್ನು ಆಘ್ರಾಣಿಸಲು ಸಹೃದಯರೆಲ್ಲರೂ ಇದರ ಕಡೆಗೇ ಓಡಿಬರುವರು.

ಆದರೆ ಲೋಕೋಕ್ತಿಯಂತೆ ಸರಸ್ವತಿ ಮತ್ತು ಲಕ್ಷಿ ಇಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೇ ಬಾಳೋದಿಲ್ಲವಂತೆ. ಹಾಗೆ ಈ ಸಾರಸ್ವತ ಲೋಕದಲ್ಲಿ ಲಕ್ಷ್ಮಿಯಿನ್ನೂ ಚಂಚಲೆ ಆಗಿದ್ದಾಳೆ. ಕೆಲವೇ ಕೆಲವು ಮಹಾನುಭಾವರ ದೇಣಿಗೆಯ ಸಹಾಯದಿಂದ ಈ ಚಕ್ರ ಓಡುತ್ತಿದೆ. ಆದರೆ ಸಂಪದಕ್ಕೆ ಹತ್ತು ಹಲವಾರು ಜನರಿಗೆ ಅನ್ನ ಹಾಕುವ ಶಕ್ತಿ ಹೊಂದುವ ಕಾಲ ದೂರವಿಲ್ಲ.

ಇದರಲ್ಲಿ ಅಂತಹ ಆಕರ್ಷಣೆ ಏನು? ಸಾಮಾನ್ಯವಾಗಿ ಮನಸ್ಸನ್ನು ಮುದಗೊಳಿಸುವಂತಹ ಹಾಡು, ಸಿನೆಮಾಗಳನ್ನು ಇಳಿಸಿಕೊಳ್ಳುವ ತಾಣಗಳಿಗೆ ಜನರು ಮುಗಿಬೀಳುವುದು ಸರ್ವೇ ಸಾಮಾನ್ಯ. ಆದರಿಲ್ಲಿ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ವಿಚಾರ ವಿನಿಮಯ, ಚರ್ಚೆ ನಡೆಯುತ್ತಿದೆ. ಅದರಲ್ಲೇ ಸದಸ್ಯರು ಮನ ಮುದಗೊಳಿಸಿಕೊಳ್ಳುತ್ತಿದ್ದಾರೆ. ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ ಸಂಪದದ ಅವಶ್ಯಕತೆ ಇತ್ತು ಅಂತ ಈಗ ತಿಳಿಯುತ್ತಿದೆ.

ಇದನ್ನು ರೂಪಿಸಿದ ಅತಿರಥ ಮಹಾರಥರು ಕನ್ನಡ ಸಾರಸ್ವತ ಲೋಕದಲ್ಲಿ ಹಬ್ಬಿಸುತ್ತಿರುವ ಕಂಪಿನಿಂದಲೇ ಸದಸ್ಯತ್ವ ಹೆಚ್ಚಾಗುತ್ತಿರುವುದು. ಓಎಲ್‍ಎನ್, ಡಾ| ಪವನಜ, ಇಸ್ಮಾಯಿಲ್, ವೆಂಕಟೇಶಮೂರ್ತಿ. ಓಹ್! ಜನಕ ಹರಿಪ್ರಸಾದರನ್ನೇ ಮರೆತೆ. ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅವರು ತಾಂತ್ರಿಕವಾಗಿಯೂ ನಿಪುಣರು, ಸಾರಸ್ವತ ಲೋಕದಲ್ಲೂ ನೈಪುಣ್ಯತೆ ಗಳಿಸಿರುವವರು. ಅವರಿಗೆ ಪವನಜರಂಥ ಗುರುಗಳಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ಪವನಜರಿಗೇ ತಮ್ಮದೇ ತಾಣವಿದ್ದರೂ ಅವರಲ್ಲಿ ಸಂಸ್ಕೃತಿಯ ಬೆಳವಣಿಗೆಗೆ ತನ್ನತನ ಮರೆತು ಕೆಲಸ ಮಾಡುತ್ತಿರುವ ಉನ್ನತ ವ್ಯಕ್ತಿತ್ವವನ್ನು ಕಾಣಬಹುದು. ಇನ್ನು ಓಎಲ್‍ಎನ್‍ರ ಬಗ್ಗೆ ನಾನೇನು ಹೇಳಬಲ್ಲೆ. ಎಲ್ಲರಿಗೂ ಗೊತ್ತಿರುವ ವಿಷಯವೇ. ಕನ್ನಡದಲ್ಲಿ ಅವರು ಅವರದ್ದೇ ಆದ ಛಾಪನ್ನು ಒತ್ತಿರುವರು.

ಇದೊಂದು ಹೈಬ್ರೀಡ್ ತಳಿ. ಬಹಳ ಬೇಗ ಬೆಳೆದು ಹೆಮ್ಮರವಾಗುತ್ತಿದೆ. ಬರೀ ಮರವಾಗೋದು ಬೇಡ ಆಲದ ಮರವಾಗಿ ಬಿಳಲು ಬಿಟ್ಟು ನೆಲವಿಡೀ ಬೇರನ್ನು ಹಬ್ಬಿಸಲಿ ಎಂದು ಆಶಿಸೋಣ.

~.~
  • tvsrinivas41 ರವರ ಬ್ಲಾಗ್
  • Login or register to post comments
  • 635 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 7, 2005 - 12:19pm — hpn

ಹೊಗಳಿಕೆ

hpn's picture

ಹೊಗಳಿ ಹೊಗಳಿ ಅಟ್ಟಕ್ಕೇರಿಸಿದ್ದೀರ Eye-wink

ಅಟ್ಟಕ್ಕೇರಿಸಿಕೊಂಡ ಸಂಪದ ಕೆಳಗೆ ಬೀಳದೆಂದು ಆಶಿಸೋಣ.

--

ಮುನ್ನೂರು ದಾಟಿದ್ದು ಸಂತಸದ ವಿಷಯವೇ, ಆದರೆ ಅದರಲ್ಲಿ ಬಹಳಷ್ಟು ಜನ ಲೇಖನಗಳನ್ನು ಓದುತ್ತಿದ್ದಾರೇ ಹೊರತು ಬರೆಯಲು ಪ್ರಯತ್ನಿಸುತ್ತಿಲ್ಲ. ಅಲ್ಲದೇ ಆರ್ಕುಟ್ ನಲ್ಲಿ ೧೨೦೦ ಕ್ಕೂ ಹೆಚ್ಚು ಜನರಿದದ್ದರಿಂದ ಇನ್ನೂ ಹೆಚ್ಚು ಮಂದಿ ಸಂಪದಕ್ಕೆ ನೊಂದಾಯಿಸಿಕೊಳ್ಳುವರೆಂಬ ಅನಿಸಿಕೆ ಇತ್ತು. ಆದರೆ ಸುಮಾರು ಜನ ನೋಡಿಯೇ ಇಲ್ಲ.

--

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 9, 2005 - 9:23am — olnswamy

ಥ್ಯಾಂಕ್ಸ್, ಆದರೆ..

olnswamy's picture

ನಿಮ್ಮ ಒಳ್ಳೆಯ ಮಾತಿಗೆ ಥ್ಯಾಂಕ್ಸ್. ಸಂತೋಷ ಆಯಿತು ಅನ್ನದಿದ್ದರೆ ಸುಳ್ಳಾಗುತ್ತದೆ. ಆದರೆ ಕೆಲಸ ಮುಖ್ಯವೇ ಹೊರತು ವ್ಯಕ್ತಿಗಳಲ್ಲ ಅನ್ನುವುದನ್ನು ನಾನು ಮರೆಯಬಾರದು ಅನ್ನುವ ಎಚ್ಚರವನ್ನೂ ನಿಮ್ಮ ಹೊಗಳಿಕೆ ಮನಸ್ಸಿಗೆ ತಂದಿದೆ.
ಸಂಪದಕ್ಕೆ ಬರೆಯುತ್ತಿರುವವರು ಕಡಮೆ ಅನ್ನುವ ಕೊರಗು ಬೇಕಿಲ್ಲವೇನೋ. ಬರವಣಿಗೆ ಮಾತಿನಷ್ಟು ಸಹಜವಲ್ಲ. ಆ ಶಿಸ್ತನ್ನು ಹಟ ಹಿಡಿದೇ ಪಡೆಯಬೇಕು. ಜೊತೆಗೆ ಬರೆಯುವವರಿಗೆ ಅಳುಕು ಬೇರೆ, ನಾನು ಹೇಳಿದ್ದು ಜನಕ್ಕೆ ಹಿಡಿಸುವುದೋ ಇಲ್ಲವೋ, ಸರಿಯೋ ತಪ್ಪೋ, ನನಗನಿಸಿದ್ದು ಏನು ಮಹಾ ಇತ್ಯಾದಿ ಅಳುಕು. ಜೊತೆಗೆ ಜನಕ್ಕೆ ಇಷ್ಟವಾಗುವಂಥದ್ದು ಮಾತ್ರ ಕೊಡಬೇಕು ಅನ್ನುವ ಸ್ವಕಲ್ಪಿತ ಒತ್ತಾಯ. ಬರೆಯುವುದನ್ನು ರೂಢಿಸಿಕೊಳ್ಳುವುದೆಂದರೆ ನಮ್ಮ ವ್ಯಕ್ತಿತ್ವವನ್ನು ಅಕ್ಷರದಂತೆಯೇ ತಿದ್ದಿಕೊಳ್ಳುವ ಕೆಲಸ.
ಸಂಪದದ ಮೂಲಕ ಹೊಸ ಲೇಖಕರ ಅಳುಕು ದೂರವಾದರೆ ಎಷ್ಟು ಚೆನ್ನ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 7, 2005 - 12:28pm — pavanaja

ಹೊನ್ನ ಶೂಲ

pavanaja's picture

ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದ್ದೀರಿ.

ಸಿಗೋಣ,
ಪವನಜ
-----------
Think globally, Act locally

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಈ-ಮೈಲ್ ನಿಂದ ಬ್ಲಾಗ್ ಪ್ರಕಟಣೆ!!!
  • ಸಂಪದದ ಸಾವಿರ ಸದಸ್ಯರು
  • ಸಂಪದದಲ್ಲೀಗ ೧೦೦ಕ್ಕೂ ಹೆಚ್ಚು ಸದಸ್ಯರು!
  • ಶುಭವಾಗಲಿ
  • ಕನ್ನಡಿಗರ ಅತಿದೊಡ್ಡ ಸಮಸ್ಯೆ
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 73 ಅತಿಥಿಗಳು ಆನ್ಲೈನ್ ಇರುವರು.


ಬರಹಗಾರನಿಗಿರಬೇಕಾದ ಅತ್ಯುಚ್ಚ ನಿಷ್ಠೆಯೆಂದರೆ ಭಾಷೆಗಿರುವ ಅವನ ಒಲವು.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator