Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › tvsrinivas41 ರವರ ಬ್ಲಾಗ್

ನಾ ಕಂಡದ್ದು

January 15, 2006 - 9:19pm — tvsrinivas41

ಇದು ನಿನ್ನೆಯ ಸಂಜೆ ನಾನು ನೋಡಿದ ಒಂದು ಘಟನೆ.

ಎಂದಿನಂತೆ ೬.೧೪ರ ಬೊರಿವಿಲಿ ಲೋಕಲ್ ಹಿಡಿಯಲು ಚರ್ಚ್‍ಗೇಟ್ ಸ್ಟೇಷನ್ನಿಗೆ ಬಂದೆ. ಅದೇ ಪ್ಲಾಟ್‍ಫಾರ್ಮ್‍ಗೆ ಮೊದಲು ಬರುವ ಗಾಡಿ ೬.೦೮ರ ಭಾಯಂದರ್ ಫಾಸ್ಟ್ ಲೋಕಲ್. ಪಕ್ಕದ ಪ್ಲಾಟ್‍ಫಾರ್ಂ‍ಗೆ ೬.೧೧ರ ವಿರಾರದ ಗಾಡಿ ಬರುತ್ತದೆ. ಇಲ್ಲಿಯ ಲೋಕಲ್ ಬಗ್ಗೆ ಒಂದು ಸಣ್ಣ ಪೀಠಿಕೆ.

ಚರ್ಚ್‍ಗೇಟ್ ಸ್ಟೇಷನ್ನಿನಿಂದ ನಾಲ್ಕು ಹಳಿಗಳ ಮೇಲೆ ಲೋಕಲ್ ಟ್ರೈನ್‍ಗಳು ಹೊರಡುವುವು. ಮೊದಲೆರಡು (೧-೨) ಹಳಿಗಳ ಮೇಲೆ ನಿಧಾನಗತಿಯ ಗಾಡಿಗಳು ಮತ್ತು ೩ - ೪ ರ ಹಳಿಗಳ ಮೇಲೆ ವೇಗದ ಗತಿಯ ಗಾಡಿಗಳು ಹೊರಡುವುವು. ಏಕ ಕಾಲಕ್ಕೆ ಒಂದು ನಿಧಾನ ಮತ್ತು ವೇಗದ ಗಾಡಿಗಳು ಹೊರಡುವುವು.

ಈ ಭಾಯಂದರ್ ಗಾಡಿ ಎಂದಿಗೂ ತುಂಬುವುದಿಲ್ಲ. ಸ್ವಲ್ಪ ಖಾಲಿಯಾಗೇ ಇರುತ್ತದೆ. ಜನರಿಗೆ ಪ್ರಯಾಣಿಸಲು ಆರಾಮೆನಿಸುವುದು. ಆದರೆ ಈ ವೇಗ ಗತಿಯ ಗಾಡಿಗಳು (ಬೊರಿವಿಲಿಯಿಂದ ಮುಂದೆ ಹೋಗುವುವು) ಬೊರಿವಿಲಿವರೆವಿಗೆ ಕೆಲವು ನಿಲ್ದಾಣಗಳಲ್ಲಿ ನಿಲ್ಲುವುವು ಮತ್ತು ನಾನು ಸೇರಬೇಕಿರುವ ಗೊರೆಗಾಂವಿನಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಆ ಗಾಡಿಯಲ್ಲಿ ನಾನು ಪ್ರಯಾಣಿಸುವಂತಿರಲಿಲ್ಲ. ಅಂದು ಆ ಗಾಡಿ ಪ್ಲಾಟ್‍ಫಾರಂಗೆ ಬಂದದ್ದು ೬.೦೭ಕ್ಕೆ. ಪ್ಲಾಟ್‍ಫಾರ್ಂ‍ನಲ್ಲಿ ಬಹಳ ಜನಸಂದಣಿ ಇದ್ದಿತ್ತು. ಗಾಡಿ ಬಂದು ನಿಂತು ಮೊಟರ್ ‍ಮನ್ ಮತ್ತು ಗಾರ್ಡ್‍ಗಳು ಬದಲಾಗಿ ಇನ್ನೊಂದು ನಿಮಿಷಕ್ಕೆ ವಾಪಸ್ ಹೊರಡಬೇಕಿತ್ತು. ಅಷ್ಟರೊಳಗೆ ಒಳಗಿದ್ದ ಜನರು ಇಳಿದು ಪ್ಲಾಟ್‍ಫಾರಂ ಮೇಲಿರುವ ಜನರು ಹತ್ತಬೇಕು. ಇಂತಹ ಸನ್ನಿವೇಶಗಳು ದಿನನಿತ್ಯದ ಸಾಮಾನ್ಯ ಸಂಗತಿ. ಎಂತಹ ಮಿಂಚಿನ ಕಾರ್ಯಾಚರಣೆ ನಡೆಯುವುದೆಂಬುದನ್ನು ಊಹಿಸುವುದರ ಬದಲು ಒಮ್ಮೆ ಕಣ್ಣಲ್ಲಿ ನೋಡಿದರೇ ಚಂದ.

೬.೦೭ಕ್ಕೆ ಸರಿಯಾಗಿ ಗಾಡಿ ಪ್ಲಾಟ್‍ಫಾರ್ಂನಲ್ಲಿ ಬರುತ್ತಿದ್ದಂತೆ ಇಳಿಯುವವರು ಹಾರುವ ಸಮಯಕ್ಕೆ ತಕ್ಕಂತೆ ಏರುವವರು ಒಳಕ್ಕೆ ಹಾರುವರು. ಆಗ ಒಬ್ಬ ಮನುಷ್ಯ ಒಂದು ಕ್ಷಣ ಇತ್ತ ನೋಡಿ ಅತ್ತ ಹಾರುವದರೊಳಗೆ ಕಂಪಾರ್ಟ್‍ಮೆಂಟಿನ ಬಾಗಿಲ ಮಧ್ಯದ ಕಬ್ಬಿಣದ ಕೋಲನ್ನು ಹಿಡಿಯಲಾಗಲಿಲ್ಲ. ಈ ಎಲ್ಲ ದೃಶ್ಯಗಳು ಸಾಮಾನ್ಯವಾದ್ದರಿಂದ ನನ್ನ ಗಮನ ಆ ಕಡೆಗೆ ಹೋಗಿರಲಿಲ್ಲ. ಇದ್ದಕ್ಕಿದ್ದಂತೆ ಧಡ್ ಎಂಬ ಶಬ್ದ ಕೇಳಿ ನಾ ಅತ್ತ ಕಡೆ ನೋಡಿದೆ. ಆತನ ತಲೆಯಿಂದ ಬಳಬಳನೆ ರಕ್ತ ಸುರಿಯುತ್ತಿತ್ತು. ಪ್ಲಾಟ್‍ಫಾರ್ಮ್‍ನ ಮೇಲೆ ಬಿಸಿ ರಕ್ತ ಹೆಪ್ಪುಗಟ್ಟಹತ್ತಿತ್ತು. ಗಾಡಿಯ ಕಬ್ಬಿಣದ ಬಾಗಿಲಿಗೂ ರಕ್ತದ ಗುರುತು ಹತ್ತಿತ್ತು. ರಕ್ತ ಎಷ್ಟು ಬೇಗ ಹೆಪ್ಪುಗಟ್ಟುವುದು ಎನ್ನುವದನ್ನೂ ಅಂದೇ ನಾ ನೋಡಿದ್ದು. ಆ ಮನುಷ್ಯ ಬೀಳುತ್ತಿದ್ದಂತೇ ಆ ಗಾಡಿಯೇರಬೇಕಾಗಿದ್ದ ಹಲವರಲ್ಲಿ ಕೆಲವರು ಕೆಳಗೇ ನಿಂತು ಆತನನ್ನು ಹಿಡಿದು ಪಕ್ಕಕ್ಕೆ ತಂದು ಬೆಂಚಿನ ಮೇಲೆ ಕುಳ್ಳಿರಿಸಿದರು. ನಂತರದ ಗಾಡಿಗಾಗಿ ಕಾಯುತ್ತಿದ್ದ ಕೆಲವರು ಆತನ ಕುಡಿಯಲು ನೀರನ್ನಿತ್ತು ಶುಶ್ರೂಷೆಗೆ ಅಣಿಮಾಡುತ್ತಿರುವಂತೆಯೇ - ಮೊದಲು ಆತನನ್ನು ಕರೆತಂದ ಜನರು ಓಡಿ ಗಾಡಿಯನ್ನು ಹಿಡಿದರು. ಕ್ಷಣಮಾತ್ರದಲ್ಲಿ ಗಾಡಿ ಏನೂ ಆಗದಂತೆ ಮುಂದೆ ಹೋಗಿತ್ತು. ಹಿಂದೆಯೇ ನಮ್ಮ ಗಾಡಿ ಬಂದು ನಾವೆಲ್ಲರೂ ನಮ್ಮ ನಮ್ಮ ಗೂಡಿಗೆ ತೆರಳಲು ಹತ್ತಿದೆವು. ಈ ಮಧ್ಯೆ ರೈಲ್ವೇ ಸಿಬ್ಬಂದಿ ತಳ್ಳುವ ಕುರ್ಚಿಯನ್ನು ತಂದು ಆತನನ್ನು ರೈಲ್ವೇ ವೈದ್ಯರ ಹತ್ತಿರಕ್ಕೆ ಕರೆದೊಯ್ದಿದ್ದರು. ಆತನಿಗಾದ ಘಾಸಿ ಎಷ್ಟರ ಮಟ್ಟಿನದೆಂದು ತಿಳಿಯಲಿಲ್ಲ. ನನ್ನ ಅನಿಸಿಕೆಯ ಪ್ರಕಾರ ಇನ್ನೊಂದೆರಡು ದಿನಗಳಲ್ಲಿ ಆತ ಮತ್ತೆ ಅದೇ ಗಾಡಿಗೆ ಬರುವನು ಮತ್ತು ಹಾಗೆಯೇ ಮತ್ತೆ ಗಾಡಿಯೊಳಕ್ಕೆ ಹಾರುವನು.

ಮುಂಬೈ ಜೀವನವೇ ಇಷ್ಟು. ಗಾಯವಾಗುತ್ತಲೇ ಇರುವುದು ಹಿಂದೆಯೇ ಮಾಗುವುದು.

  • ಅನುಭವ ಕಥನ
Ornamental seperator
  • tvsrinivas41 ರವರ ಬ್ಲಾಗ್
  • Login or register to post comments
  • 1294 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 16, 2006 - 1:00am — hpn

ಮುಂಬೈ ಜೀವನ

hpn's picture

tvsrinivas41 wrote:
ಮುಂಬೈ ಜೀವನವೇ ಇಷ್ಟು. ಗಾಯವಾಗುತ್ತಲೇ ಇರುವುದು ಹಿಂದೆಯೇ ಮಾಗುವುದು.

ಮುಂಬೈ ಜೀವನದಲ್ಲಿ resilience ಜಾಸ್ತಿ ಹಾಗೂ ಅತ್ಯವಶ್ಯಕ, ಅಲ್ವೆ? Smiling

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೃದಯವಂತಿಕೆ
  • 7.22 ಲೋಕಲ್
  • ಏಕೆ ಹೀಗಾಗುವುದು?
  • ಒಂದು ದಾರುಣ ಘಟನೆ - ಮನದಾಳದಿಂದ
  • ಮುಂಬೈ ಲೋಕಲ್ ಟ್ರೈನ್
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 10 ಅತಿಥಿಗಳು ಆನ್ಲೈನ್ ಇರುವರು.

ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator