ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › tvsrinivas41 ರವರ ಬ್ಲಾಗ್

ಕಳಚಿ ಕೊಂಡಿದ್ದ ಕೊಂಡಿ

August 16, 2005 - 7:34pm — tvsrinivas41

ಕಾಲವು ಬದಲಾಗುತ್ತಿರುತ್ತಿದ್ದಂತೆ ನಾವು ಹೊಸ ಹೊಸ ಜನಗಳ ಪರಿಚಯ ಮಾಡಿಕೊಳ್ಳುತ್ತಿರುತ್ತೇವೆ ಹಾಗೆ ಹೊಸ ಸಂಬಂಧಗಳನ್ನೂ ಜೋಡಿಸಿಕೊಳ್ಳುತ್ತಿರುತ್ತೇವೆ. ಕೇವಲ ಹತ್ತಿರದ ಸಂಬಂಧಿಗಳ ಸಂಬಂಧಗಳು ಮಾತ್ರ ಚಿರಂತನವಾಗಿ ನಮ್ಮೊಡನೆ ಇರುತ್ತದೆ.

ಮೊದಲ ಸಲ ಶಾಲೆಗೆ ಹೋದಾಗ ಸ್ನೇಹಿತರಾದವರು ನಮ್ಮ ಸಂಬಂಧಿಗಳಂತೆಯೇ ಅಂದುಕೊಳ್ಳುತ್ತೇವೆ. ನಮ್ಮ ಮನೆಯಲ್ಲಿ ನಡೆಯುವುದನ್ನೆಲ್ಲಾ ಹಂಚಿಕೊಳ್ಳುತ್ತೇವೆ. ಯಾವುದನ್ನೂ ಮುಚ್ಚಟೆ ಮಾಡುವುದಿಲ್ಲ. ಅದೇ ಸ್ವಲ್ಪ ವರುಷಗಳ ತರುವಾಯ ಶಾಲೆ ಬದಲಾಗುವ ಸಾಧ್ಯತೆ ಇರುವಂತೆ ಸ್ನೇಹಿತರುಗಳು ಬದಲಾಗುತ್ತಾರೆ. ಸ್ವಲ್ಪ ಸ್ವಲ್ಪವಾಗಿ ನಾವು ಮನೆಯ ವಿಷಯಗಳನ್ನು ಮುಚ್ಚಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮುಂದೆ ಕಾಲೇಜುಗಳಲ್ಲಿ ಬರುವ ಸ್ನೇಹಿತರುಗಳೊಂದಿಗೆ ಚಿಕ್ಕ ವಯಸ್ಸಿನಲ್ಲಿ ಮನೆಯ ವಿಷಯಗಳನ್ನು ಹಂಚಿಕೊಂಡಷ್ಟು, ಎಲ್ಲ ವಿಷಯಗಳನ್ನೂ ಅಷ್ಟಾಗಿ ಹಂಚಿಕೊಳ್ಳುವುದಿಲ್ಲ. ಹೀಗೆ ಕಾಲಕ್ರಮೇಣ ನಮ್ಮ ಬಾಳಿನಲ್ಲಿ ಎಷ್ಟೋ ಸ್ನೇಹಿತರು ಬರುವರು ಹೋಗುವರು.

ತರುವಾಯ ಅವರು ಮತ್ತೆ ಆಕಸ್ಮಿಕವಾಗಿ ಸಿಕ್ಕಾಗ ನಮಗಾಗುವ ಆನಂದವೇ ಬೇರೆ. ಅದರಲ್ಲೂ ಹೆಚ್ಚಿನ ಸಮಯವಾದಷ್ಟೂ ಮತ್ತೆ ಸಿಕ್ಕ ಸಮಯದಲ್ಲಿ ಬಹು ಹತ್ತಿರವಾಗುವರು. ಆಗ ನಮ್ಮ ತಲೆಯಲ್ಲಿ ಅಲ್ಲಿಯವರೆಗಿನ ಎಲ್ಲ ವಿಷಯಗಳೂ ಒಮ್ಮೆಯೇ ಬರುವವು. ಯಾವುದನ್ನು ಮೊದಲು ಯಾವುದನ್ನು ನಂತರ ಹೇಳಬೇಕು, ಯಾವುದನ್ನು ಹೇಳಬಾರದು ಎನ್ನುವ ವಿವೇಚನೆಯೇ ಆಗುವುದಿಲ್ಲ. ಆ ಸಮಯದಲ್ಲಿ ಇವರುಗಳು ರಕ್ತ ಸಂಬಂಧಿಗಳಿಗಿಂತ ಹತ್ತಿರವಾಗುವರು. ಆದರೆ ಕೆಲ ಕಾಲ ಮಾತ್ರ. ಮತ್ತೆ ನಮ್ಮ ನಿತ್ಯ ಜೀವನದಲ್ಲಿ ತೊಡಗಿಕೊಳ್ಳುತ್ತೇವೆ, ಸಂಬಂಧಗಳಲ್ಲಿ ಸಿಲುಕಿಕೊಳ್ಳುತ್ತೇವೆ.

ಇದೇಕೆ ಹೇಳ್ತಿದ್ದೀನಿ ಅಂದ್ರೆ, ಎರಡು ತಿಂಗಳ ಹಿಂದೆ ನನ್ನ ಮೊದಲ ಕವನ ಅದುವೇಕನ್ನಡದಲ್ಲಿ (thatskannada.com) ಪ್ರಕಟವಾದಾಗ ನನಗೊಂದು ವಿ-ಅಂಚೆ ಬಂದಿತು. ಅದನ್ನು ಬರೆದದ್ದು ನನ್ನ ತಮ್ಮ ಅಂದರೆ ಚಿಕ್ಕಪ್ಪನ ಮಗ. ಹತ್ತು ವರುಷಗಳಿಂದ ಅವನ ಬಗ್ಗೆ ನನಗೇನೂ ವಿಷಯಗಳೇ ತಿಳಿದಿರಲಿಲ್ಲ. ಅಂದು ಅದೆಷ್ಟು ಸಂತೋಷವಾಯಿತೆಂದರೆ ಮಾತಿನಲ್ಲಿ ಹೇಳಲು ಸಾಧ್ಯವೇ ಇಲ್ಲ.
ಒಂದೇ ದಿನದಲ್ಲಿ ಒಂದರ ಮೇಲೊಂದರಂತೆ ೫-೬ ವಿ-ಆಂಚೆಗಳನ್ನು ಕಳುಹಿಸಿದ್ದೆ. ಚಾಟ್ ಮಾಡಿದ್ದೆ. ದುಡ್ಡಿನ ಖರ್ಚಿನ ಕಡೆ ಗಮನವೂ ಕೊಡದೆ (ಅವನು ಇರುವುದು ದೂರದೂರಿನಲ್ಲಿ), ದೂರವಾಣಿಯಲ್ಲೂ ಮಾತನಾಡಿದ್ದೆ. ಸ್ವಲ್ಲ್ಪ ಸಮಯದ ನಂತರ ಆ ಬಿಸಿ ನಿಧಾನವಾಗಿ ಇಳಿಯತೊಡಗಿತು.

ಅದೇ ತರಹದ ಇನ್ನೊಂದು ಸಂದರ್ಭ ಇಂದಾಯಿತು. ಇಂದು ಅದುವೇಕನ್ನಡದಲ್ಲಿ ಕುಂಕುಮದ ಬಗ್ಗೆ ನನ್ನ ಲೇಖನ ಪ್ರಕಟವಾಗಿದೆ. ಕೆಲ ಘಂಟೆಗಳ ಹಿಂದೆ ಒಂದು ವಿ-ಅಂಚೆ ಬಂದಿತು. ನನ್ನ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ (ಸ್ನೇಹಿತೆ) ಮದುವೆಯ ನಂತರ ಕೆಲಸ ಬಿಟ್ಟು ಪತಿಯೊಡನೆ ಅಮೆರಿಕಾಕ್ಕೆ ಹೋಗಿದ್ದರು. ಅವರು ಇಲ್ಲಿಯವರೆವಿಗೆ ಅದುವೇಕನ್ನಡ ಮತ್ತು ಕನ್ನಡಧ್ವನಿಯಲ್ಲಿ ಪ್ರಕಟವಾದ ನನ್ನ ಕವನಗಳನ್ನು ಮತ್ತು ಲೇಖನಗಳನ್ನು ಓದಿದ್ದಾರಂತೆ. ನನಗೆ ಅವರ ಬಗ್ಗೆ ನೆನಪಿರುವುದೋ ಇಲ್ಲವೋ ಎಂದು ಪತ್ರ ಬರೆದಿರಲಿಲ್ಲವಂತೆ. ಇಂದು ಪತ್ರ ಬರೆಯುವ ಧೈರ್ಯ ಮಾಡಿದ್ದಾರೆ. ನನಗಾದ ಸಂತೋಷ ಅಷ್ಟಿಷ್ಟಲ್ಲ. ಇಲ್ಲಿಯವರೆವಿಗೆ ನನ್ನ ಪ್ರಕಟನೆಗಳ ಬಗ್ಗೆ ಅಂಚೆಯ ಮೂಲಕ ಅನಿಸಿಕೆ ತಿಳಿಸಿದ ಹೆಚ್ಚಿನವರೆಲ್ಲರೂ ಮುಖಪರಿಚಯವಿಲ್ಲದವರೇ. ನನ್ನ ಜೊತೆಗೇ ೪-೫ ವರುಷಗಳು ಕೆಲಸ ಮಾಡಿ ಪತ್ರ ಬರೆದದ್ದು ನೋಡಿ ನನಗೆ ಮಾತೇ ಹೊರಡಲಿಲ್ಲ. ಅವರಿಗೆ ಉತ್ತರಿಸುವಾಗ, ಸದ್ಯಕ್ಕೆ ನನ್ನ ತಲೆಯಲ್ಲಿ ಏನೂ ಯೋಚನೆಗಳೇ ಬರುತ್ತಿಲ್ಲ, ಶೂನ್ಯವಾಗಿದೆ, ಸದ್ಯದಲ್ಲೇ ಮರುತ್ತರವನ್ನು ಮಾರುತ್ತರವಾಗಿ ಬರೆಯುವೆ ಎಂದು ತಿಳಿಸಿರುವೆ.

ಹೀಗೆ ನಮ್ಮ ಬದುಕಿನಲ್ಲಿ ಕೊಂಡಿಗಳು ಸೇರುತ್ತಿರುತ್ತವೆ, ಕಳಚಿಕೊಳ್ಳುತ್ತಿರುತ್ತವೆ. ಮತ್ತೆ ಸೇರುತ್ತಾ ಕಳಚಿಕೊಳ್ಳುತ್ತವೆ. ಜೀವನದಲ್ಲಿ ಈ ಕೊಂಡಿಗಳನ್ನು ಸೇರಿಸುವುದೇ ಆ ಸಂದರ್ಭದಲ್ಲಿ ಉಂಟಾಗುವ ಶಾಖದ ಬೆಸುಗೆಯೇ?

ಇಂತಹ ಸಂದರ್ಭಗಳು ಎಲ್ಲರ ಬಾಳಿನಲ್ಲೂ ಬಂದಿರುವುದಲ್ಲವೇ?

~.~
  • tvsrinivas41 ರವರ ಬ್ಲಾಗ್
  • Login or register to post comments
  • 1082 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 16, 2005 - 9:53pm — chitta

ಈ ತರಹದ ಘಟನೆಗಳು

chitta's picture

ಈ ತರಹದ ಘಟನೆಗಳು ಮನಸ್ಸಿಗೆ ಎಷ್ಟೊಂದು ಖುಷಿ ಕೊಡುತ್ತವೆ ಅಲ್ವಾ?... ನಾನು ಈಗ ತಾನೆ thatskannadaದಲ್ಲಿ ನಿಮ್ಮ ಲೇಖನ ನೋಡಿದೆ. ಒಳ್ಳೆಯ ಮಾಹಿತಿಯಿಂದ ಕೂಡಿದ ಲೇಖನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 3, 2005 - 7:38pm — tvsrinivas41

ಇನ್ನೊಂದು ಕೊಂಡಿಯ ಬೆಸುಗೆ

tvsrinivas41's picture

ಇದೇ ತರಹದ ಇನ್ನೊಂದು ಕೊಂಡಿಯ ಬೆಸುಗೆ ಇಂದಾಯಿತು. ಇಂದು ಮಾಸ ಪತ್ರಿಕೆ ಮಯೂರವನ್ನು ಕೊಂಡು ಪುಟಗಳನ್ನು ತಿರುವುತ್ತಿದ್ದಾಗ ೭೮ನೇ ಪುಟದಲ್ಲಿ ನನ್ನ ತಂಗಿಯ (ಚಿಕ್ಕಪ್ಪನಮಗಳು) ಭಾವಚಿತ್ರವನ್ನು ನೋಡಿದೆ. ಆಗಲೇ ತಿಲಿದದ್ದು ಅವಳದು ಎರಡು ಕವನ ಸಂಕಲನಗಳು ಬಿಡುಗಡೆ ಆಗಿವೆ ಮತ್ತು ಅವಳು 'ಅಭಿನವ' ಎನ್ನುವ ಒಂದು ಸಾಹಿತ್ಯ ಪಪ್ತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿ ಇದ್ದಾಳೆ ಅಂತ. ನನ್ನ ತಮ್ಮನೊಂದಿಗೆ (ಅವನೂ ಕವನ ಕಥೆಗಳನ್ನು ಬರೆಯುತ್ಟಾನೆ - ಮೊದಲು ರವಿ ಬೆಳಗೆರೆಯೊಂದಿಗೆ ಕೆಲಸ ಮಾಡುತ್ತಿದ್ದ) ಚಾಟ್ ಮಾಡಿದಾಗ ತಿಳಿದದ್ದು ಅವಳು ಮೊದಲಿನಿಂದಲೂ ಬರೆಯುತ್ತಿದ್ದಳು ಎಂದು.

===
ತವಿಶ್ರೀನಿವಾಸ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇದೇಕೆ ಹೀಗೆ?
  • ಪತ್ರ ಬರೆಯುವ ಬಗೆ
  • ಬರಹ ಕ್ರಾಂತಿ!
  • ರಜತೋತ್ಸವ ಭಾಗ ೪
  • ಕನಸು
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 103 ಅತಿಥಿಗಳು ಆನ್ಲೈನ್ ಇರುವರು.


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator