ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › tvsrinivas41 ರವರ ಬ್ಲಾಗ್

ಅತೀತ ಶಕ್ತಿ

March 18, 2006 - 6:58am — tvsrinivas41

ನಾನು ಆ ಕಛೇರಿಯ ಆಡಳಿತಾಧಿಕಾರಿಯಾಗಿ ಹೊಸದಾಗಿ ಬಂದಿರುವೆ. ಸರ್‍‍ಪ್ರೈಸ್ ಚೆಕ್ ಮಾಡಲೆಂದು ಮೊದಲನೆಯ ದಿನವೇ ಅಲ್ಲಿಯ ಕೇರ್‍‍ಟೇಕರ್ ಬಳಿಗೆ ಬೆಳಗಿನ ೭ ಘಂಟೆಗೆ ಬಂದಿದ್ದೇನೆ. ಸೀದಾ ಬಂದವನೇ ನಾನು ಅಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತೆ. ಕೇರ್‍‍ಟೇಕರ್ ಅಲ್ಲಿದ್ದ ಎಲೆಕ್ಟ್ರೀಷಿಯನ್ನಿಗೆ ಏನೋ ಸಾಮಾನನ್ನು ಕೊಡುತ್ತಿದ್ದ. ನನ್ನ ಕಡೆ ತಲೆ ಎತ್ತಿ ಕೂಡಾ ನೋಡಲಿಲ್ಲ. ಕಸ ಗುಡಿಸುವ ಹೆಂಗಸರು ಎಲೆ ಅಡಿಕೆ ಹೊಗೆಸೊಪ್ಪು ಜಗಿಯುತ್ತಾ ಅಲ್ಲಿಯೇ ಮೂಲೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು.

ಆಗೊಬ್ಬಳು ಹೆಂಗಸು ಚಲ್ಲು ಚಲ್ಲಾಗಿ ನಗುತ್ತಾ, ಮೈ ಕುಣಿಸುತ್ತಾ ಒಳಗೆ ಬಂದಳು. ಬಂದವಳೇ ನನ್ನ ಮುಂದಿದ್ದ ಕೇರ್‍‍ಟೇಕರನ ಕುರ್ಚಿಯಲ್ಲಿ ಕುಳಿತಳು. ಕೇರ್‍‍ಟೇಕರಿನಿಗೆ ನನ್ನ ಬಗ್ಗೆ ಏನನ್ನೋ ಕೇಳುತ್ತಿದ್ದಳು. ಅದೇನೆಂದು ನನಗೆ ಅರ್ಥವಾಗಿರಲಿಲ್ಲ. ಅವರ ಭಾಷೆ ತಿಳಿಯದಿದ್ದರೂ ಅಲ್ಪ ಸ್ವಲ್ಪವಾಗಿ ಅರ್ಥವಾಯಿತು. 'ಈ ಕುರಿ ಯಾರು? ಎಲ್ಲಿಂದ ಬಂದಿದೆ? ಇದಕ್ಕೆ ಇಲ್ಲಿ ಫ್ಲಾಟ್ ಅಲಾಟ್ ಆಗಿದೆಯೇ? ನಮ್ಮಗಳ ಬಗ್ಗೆ ನೀನೇನು ಹೇಳಿದ್ದೀಯೆ?' ಇತ್ಯಾದಿಯಾಗಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಳು.

ಅಷ್ಟು ಹೊತ್ತಿಗೆ ಮುಂಚೆ ನಮ್ಮಲ್ಲಿ ಡೆಪ್ಯುಟಿ ಟ್ರೆಶರರ್ ಆಗಿದ್ದ ಶ್ರೀ ಮಣಿಯವರು ಅಲ್ಲಿಗೆ ಬಂದಿದ್ದರು. ನನ್ನನ್ನು ಕಂಡು, 'ಏನಪ್ಪಾ ನೀನು ಈಗ ಅಸಿಸ್ಟೆಂಟ್ ಜನರಲ್ ಮ್ಯಾನೇಜರಾಗಿದ್ದೀಯಂತೆ. ಈಗ ಇಲ್ಲಿಗೇ ಇನ್-ಚಾರ್ಜ್ ಆಗಿ ಬಂದಿರುವಿಯಂತೆ. ನಿನ್ನ ಲಕ್ಕೇ ಲಕ್ಕು ನೋಡು. ಇಷ್ಟು ದಿನಗಳು ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಇಷ್ಟು ಚಿಕ್ಕ ವಯಸ್ಸಿಗೇ ದೇವರು ನಿನಗೆ ಒಳ್ಳೆಯ ಹುದ್ದೆಗೆ ಪ್ರಮೋಶನ್ ಕೊಡಿಸಿದ್ದಾನೆ' ಎಂದಿದ್ದರು. ಅಷ್ಟು ಹೊತ್ತಿಗೆ ಕೇರ್‍‍ಟೇಕರ್ ನನ್ನ ಕಡೆ ನೋಡಿ ಅತಿ ವಿಧೇಯತೆಯನ್ನು ತೋರಿಸಿ, 'ಕ್ಷಮಿಸಿ ಸಾರ್. ತಾವಾರೆಂದು ತಿಳಿಯದೇ ಹೋಯಿತು. ಇಲ್ಲಿಯವರೆವಿಗೆ ಹಿರಿಯ ಅಧಿಕಾರಿಗಳ್ಯಾರೂ ಇಲ್ಲಿಗೆ ಬಂದಿರಲಿಲ್ಲ. ನಿಮಗೇನಾದರೂ ಬೇಕಿದ್ದರೆ ನನ್ನನ್ನೇ ಕರೆಸಿದರಾಗಿತ್ತು', ಎಂದು ಅಲ್ಲಿ ಕುಳಿತಿದ್ದ ಹೆಂಗಸರನ್ನು ಬೈದು ಹೊರಗಟ್ಟಿದ್ದ. ಹಾಗೂ ಚಲ್ಲಮ್ಮನಿಗೆ ಚೆನ್ನಾಗಿ ಬೈದು ಹೊರಗೆ ಕಳುಹಿಸಿದ.

ನಂತರದ ದೃಶ್ಯ.

ಕಫ್ ಪೆರೇಡ್ ರಸ್ತೆಯಲ್ಲಿ ನಡೆದು ಹೋಗುತ್ತಿರುವೆ. ಎದುರಿಗೆ ಯಾರೋ ಮೀನುಗಳ ಬುಟ್ಟಿ ಹೊತ್ತ ಮನುಷ್ಯನೊಬ್ಬ ಬರುತ್ತಿದ್ದಾನೆ. ಅವನು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದಾನೆ. ನಾನು ಶೂನ್ಯವನ್ನರಸುತ್ತಿರುವೆ. ಇದ್ದಕ್ಕಿದ್ದಂತೆಯೇ ಏನೋ ನೆನಪಾಗಿ ತೋರು ಬೆರಳಿನ ಉಗುರನ್ನು ಆಚೆಗೆ ತೆಗೆದು ಹಿಂದೆ ಮುಂದೆ ತಿರುಗಿಸಿ ನೋಡಿ (ಕೈ ಉಂಗುರ ನೋಡಿದಂತೆ) ಮತ್ತೆ ಅದನ್ನು ಯಥಾಸ್ಥಾನದಲ್ಲಿರಿಸುತ್ತೇನೆ. ಸುತ್ತುಮುತ್ತಲಿನವರೆಲ್ಲರೂ ಬೆಕ್ಕಸ ಬೆರಗಾಗಿ ನೋಡುತ್ತಿದ್ದರಂತೆ. ನನ್ನ ಕಿವಿಯಲ್ಲಿ ನನ್ನ ಸ್ನೇಹಿತ ಹಸಬ್ನೀಸ್ ಈ ವಿಷಯವನ್ನು ಉಸುರಿದ್ದ. ನನ್ನ ಕಣ್ಣಿಗೆ ಅದೇನೂ ಕಾಣಿಸುತ್ತಿರಲಿಲ್ಲ. ಕಾಣಿಸಿದವ ಮೀನಿನ ಬುಟ್ಟಿ ಹೊತ್ತ ಆ ಮನುಷ್ಯ - ಅದೂ ಕೆಲವೇ ಕ್ಷಣಗಳು ಮಾತ್ರ ಮತ್ತು ಜೊತೆಗೆ ನಡೆಯುತ್ತಿರುವ ಹಸಬ್ನೀಸ್. ನನ್ನ ದೃಷ್ಟಿ ಎಲ್ಲವೂ ನನ್ನ ಬೆರಳಿನ ಉಗುರಿನ ಕಡೆ ಮತ್ತು ಶೂನ್ಯದತ್ತ ಮಾತ್ರ. ನನ್ನಲ್ಲಿ ಯಾವುದೋ ಅತೀತ ಶಕ್ತಿ ಆವಾಹನೆಯಾದಂತಿದೆ.

ಅಷ್ಟು ಹೊತ್ತಿಗೆ ಹಾಲಿನವನ ಕರೆಗಂಟೆ ಕೇಳಿಸಿ ಎದ್ದೆ. ಸ್ವಲ್ಪ ಹೊತ್ತು ನಾ ಕಂಡ ದೃಶ್ಯದ ಬಗ್ಗೆ ಯೋಚಿಸಿ ಬರೆಯುತ್ತಿರುವೆ. ಇದೆಂಥ ಕನಸು. ನೀವೂ ಇಂತಹ ಕನಸು ಕಂಡಿರುವಿರಾ?

  • ಪ್ರಬಂಧ
~.~
  • tvsrinivas41 ರವರ ಬ್ಲಾಗ್
  • Login or register to post comments
  • 746 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 18, 2006 - 8:46am — Sunil Jayaprakash

ಮುಂಜಾನೆಯ ಕನಸು

Sunil Jayaprakash's picture

ನಿಮ್ಮ ಕನಸಿನ ಆಶಯ ಬೇಗ ಕೈಗೂಡಲಿ ಎಂದು ಹಾರೈಸುತ್ತೇವೆ.

ನಿಮ್ಮ ಉಗುರಿನ ಶಕ್ತಿಯ ಅರಿತ ಮೇಲೆ ನಾನೂ ಕೂಡ ಸ್ವಲ್ಪ ಹೊತ್ತಿನಿಂದ ಉಗುರುಗಳನ್ನು ನೋಡುತ್ತಿದ್ದೇನೆ. ಏನೂ ಬದಲಾವಣೆ ಇಲ್ಲ. ಅಂದಹಾಗೆ ಜ್ಞಾಪಕಕ್ಕೆ ಬಂತು ಉಗುರು ಕತ್ತರಿಸಬೇಕು. ಇಲ್ಲಿವಾದರೆ ವಯೋಲೀನ್ ನುಡಿಸುವುದಕ್ಕೆ ಕಷ್ಟವಾಗುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 18, 2006 - 9:48am — tvsrinivas41

ಮುಂಜಾವಿನ ಕನಸು

tvsrinivas41's picture

ನಿಮ್ಮ ಆಶಯದಂತೆಯೇ ಆಗಲಿ. ಅಂದ ಹಾಗೆ ವಯಲಿನ್ ನುಡಿಸಲು ಅದೇನೋ ಕ್ಲಿಪ್ ಬರುತ್ತಲ್ವಾ? ಕೆಲವರು ವೀಣೆ ನುಡಿಸುವಾಗ ಬೆರಳಿಗೆ ಕ್ಲಿಪ್ ಹಾಕಿಕೊಳ್ಳುತ್ತಾರೆ.

ಮೊದಲರ್ಧ ನಿಜವಾದ ಮೇಲೆಯೇ ಕನಸು ಕಂಡಿರೋದು. ಇನ್ನು ಎರಡನೆಯ ಅರ್ಧ ಆಗುತ್ತಾ? ಅಂದ್ರೆ ಉಗುರನ್ನು ಸಂಪೂರ್ಣವಾಗಿ ಆಚೆ ತೆಗೆದು ಒಳಗೆ ಸೇರಿಸುವುದು ಮತ್ತು ಅಕ್ಕಪಕ್ಕದ ಆಗು ಹೋಗುಗಳು ತಿಳಿಯದಂತೆ ಚಿಂತನೆಗಳ ಲೋಕದಲ್ಲಿ ಮುಳುಗಿ ಹೋಗುವುದು.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನಸು
  • ಕನ್ನಡದಲ್ಲಿನ ಒತ್ತಕ್ಷರಗಳು
  • ನನ್ನದೊಂದು ಕನಸು
  • ಭಾಗ - ೫
  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೭)
Syndicate content

ಲೇಖಕರು

tvsrinivas41's picture

ಪರಿಚಯ

ಸಾಹಿತ್ಯಾಭಿಲಾಷಿ, ಕವನ ರಚಿಸುವ ಹುಚ್ಚು, ಕೆಲವು ಲೇಖನಗಳನ್ನೂ ಬರೆದಿರುವೆ, ಬರೆಯುತ್ತಿರುವೆ.
ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ಆಗಿರುವೆ. ಬೆಂಗಳೂರು ಶಾಖೆಯನ್ನು ೧೯೮೨ ರಲ್ಲಿ ಸೇರಿ ೧೯೮೯ರಲ್ಲಿ ಮುಂಬಯಿಗೆ ಬಂದಿರುವೆ.

ನನ್ನ ಅಂತರ್ಜಾಲ ತಾಣ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 66 ಅತಿಥಿಗಳು ಆನ್ಲೈನ್ ಇರುವರು.


ಆ ದೇವ ಈ ದೇವ | ಮಾದೇವನೆನಬೇಡ |
ಆ ದೇವರ ದೇವ ಭುವನದ ಪ್ರಾಣಿಗಳಿ - |
ಗಾದವನೆ ದೇವ ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator