23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

umeshhubliwala ರವರ ಬ್ಲಾಗ್

ಮಳೆ ಬರೆಯಿಸಿದ ಹನಿಗಳು.....

June 27, 2010 - 9:05am
umeshhubliwala

೧) ಬಿರಿದು ನಿಂತ ಭುವಿ ಬಾಯಾರಿಸಿಕೊಂಡು
ತಂಪಾಗಿದೆ..ನಕ್ಕಿದೆ...
ಅದೇ ಸೋನೆ ಮಳೆ ಜಿನುಗು ಎದೆಯಲ್ಲಿ
ಕಡ್ಡಿ ಗೀರಿ...ನಿನ್ನ ನೆನಪ ತಡಕಿದೆ...
ಮನ ಮಳೆಯಲ್ಲೂ ಅಳುತಿದೆ....!

೨) ಬಸವಳಿದ ಅವನಿಗೆ ಮಳೆಯ ಸ್ಪರ್ಶ
ಕೋಮಲ ಸಾಂತ್ವನ..ಪುಳಕ..
ಹರ್ಷ ಧಾರೆಯ...ಝಳಕ..
ಮಳೆಯ ಜೊತೆ ನಿನ್ನ ನೆನಪೂ ರಚ್ಚೆ
ಹಿಡಿಯಲೇಕೆ....ಇದಾರ ಕುಹಕ...?

೩) ಹಳೆ ಸಾಲ ತೀರಿಸಿದ ಮಳೆ..
ಈ ಭೂಮಿಯ ಮುಖಕೆಲ್ಲ ಕೆಸರು..ಹಸಿರು
ಹೊದ್ದು ಮೆದ್ದು ತೇಗಿ ತಂಪಾಗಿದೆ....
ನಿನ್ನ ನೆನಪು ಹಳೆಯದೇ....ಚಿಪ್ಪಲ್ಲಡಗಿತ್ತು..
ಮಳೆಯ ಸದ್ದಿಗೆ ಎದ್ದು ಕುಣಿದಾಡುತಿದೆ.....!

Read more about ಮಳೆ ಬರೆಯಿಸಿದ ಹನಿಗಳು.....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಚ್ಚನ್. ವಿ.ಕಾಂಗ್ರೆಸ್ಸು...

March 30, 2010 - 8:36am
umeshhubliwala

    ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತ ಈ ಹಾಡು ಅಮಿತಾಬ್ ಗುನುಗುನಿಸುತ್ತಿರಬಹುದು ಆಗಾಗ.ನಿಜ ನೆಹರು,ಇಂದಿರಾ ಹಾಗೂ ತೇಜಿಬಚ್ಚನರ ನಡುವೆ ಆತ್ಮೀಯತೆ ಇತ್ತು ಇದೇ ಆತ್ಮೀಯತೆಅಮಿತಾಬ್ ರಾಜಕೀಯಪ್ರವೇಶ ಮುಂದೆ ಸಂಸತ್ ಸದಸ್ಯನಾಗುವವರೆಗೂ ಮುಂದುವರೆಯಿತು....ಅದೇನೋ
ಬದಲಾವಣೆಯ ಗಾಳಿ ಸ್ವಲ್ಪ ಜೋರಾಗಿಯೇ ಬೀಸಿದೆ ಅಂತ ಕಾಣಿಸುತ್ತದೆ  ಈ ಪರಿ ವಿಮುಖರಾಗಿದ್ದಾರೆ. ಆಗಾಗ ತೆರೆಮರೆಯಲ್ಲಿ ಕಿತ್ತಾಟ ಇದ್ದಿದ್ದು ಈಗ ಬಟಾಬಯಲಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಚೈತ್ರ ಬರುವ ಕಾಲದಿ...

March 16, 2010 - 10:35am
umeshhubliwala

 ನಿನ್ನೆ ಟಿವಿಯಲ್ಲಿ ಮಾಯಾವತಿ ನೋಟುಗಳ ಮಾಲೆ ಧರಿಸಿದ್ದನ್ನು ನೋಡಿದಾಗಿಂದ
ಈ ಯುಗಾದಿಯ ಸಂಭ್ರಮಕ್ಕೆ ಮಂಕುಬಡಿದಿದೆ. ಇದು ನಮ್ಮ ಸೋಲು ಅಂತಲೇ ನಾ ಅಂದುಕೊಳ್ಳೋದು ಯಾಕೆಂದರೆ
ಮಾಯಾವತಿ ಅಂತಹವರನ್ನು ಆರಿಸಿ ತಂದಿರೋದು ನಾವಲ್ಲವೆ..,ನಮ್ಮ ಈ ಮಂಪರು ಕಳೆದು ಹೊಸಾ ಯುಗಾದಿ ಬರೋದೆಂದು
ಅಥವಾ ಆ ನಿರೀಕ್ಷೆಯೇ ಹುಸಿಯೇ..... ಮಾಯಾವತಿ ದಲಿತ ದೀನರ ಹೆಸರು ಹೇಳಿಕೊಂಡು ಕುರ್ಚಿ ಗಳಿಸಿದಳು. ಆರಿಸಿ ಬಂದದ್ದೇ
ತಡ ತನ್ನ ಹಿರಿಮೆ ಸಾರುವ ಪ್ರತಿಮೆ ನಿರ್ಮಾಣಮಾಡಿದಳು. ಸರ್ವೋಚ್ಚ ನ್ಯಾಯಾಲಯಕ್ಕೂ ಕಿಮ್ಮತ್ತು ಕೊಡದೆ..... ನಿನ್ನೆ ನೋಡಿ Read more about ಚೈತ್ರ ಬರುವ ಕಾಲದಿ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಮೂರು "ಪಂಚಕ"ಗಳು....

January 27, 2010 - 6:55pm
umeshhubliwala

                                       ೧)  ಸಕ್ರೆ ಬೆಲೆ ಇಳಿಕೆ--ಆಯ್ತು ಮರೀಚಿಕೆ
                                             ನಾನೊಬ್ನೆ ದೋಷಿ ಅಲ್ಲ...
                                             ಪವಾರ್ ಸಾಹೇಬರ  ಅಳಲು..
                                             ಬ್ಯಾಟು ಹಿಡಿದ ಕೃಷಿಮಂತ್ರಿ ಯ ಮುಂದ್ಗಡೆ
                                             ನೇಗಿಲ್ಹಿಡಿದ ರೈತ ದೇಶದ್ತುಂಬಾ ಬಲೇ ದಿಗಿಲು....!

                                        ೨) ಪ್ಯಾಟೆ ಹೊತ್ತಿ ಉರೀತಾದೆ... ಕೇಳ್ತೀರಾ
                                            ಗೋಣಿತುಂಬಾ ದುಡ್ಡೊಯ್ದು ಕ್ಯಾರಿಯಲ್ಲಿ Read more about ಮೂರು "ಪಂಚಕ"ಗಳು....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.4 (7 votes)
To prevent automated spam submissions leave this field empty.

ಐಪಿಎಲ್ ಮೂರು-ಪಂಚಕಗಳು...

January 20, 2010 - 7:11pm
umeshhubliwala

೧) ಐಪಿಲ್ನಲ್ಲಿ ನಾವ್ಯಾಕಿಲ್ಲ
    ಕೇಳ್ತವ್ನೆ ಅಫ್ರಿದಿ
    ಗುಂಡ್ ಹಾರ್ಸಾವ್ರ ಜತೆ
    ಚೆಂಡಾಡಂಗಿಲ್ಲ ಅನ್ನೋದಾ
    ಮೋದಿ....!

೨) ಆಟ್ದಲ್ಲಿ  ರಾಜಕೀಯ ಬೇಡ
    ಬೊಬ್ಬೆಹೊಡೀತಾನೆ...
     ಪಕ್ಕದ  ಊರವ್ನು..
   ನಮ್ ಮನೆಗೆ ಬೆಂಕಿ ಹಾಕಿ ಸುಖ
   ತಗೊಳ್ತಾನವ್ನು...!

೩)  ಆಯ್ತು ನಮ್ದು ಮಾನ
     ಮೂರು ಕಾಸಿಗೆ ಹರಾಜು
     ಬೊಬ್ಬೆ ಹೊಡೀತು ಪಾಕಿಸ್ತಾನು
     ನಮ್ಮವ್ರ ರಕ್ತ ಕುಡದ್ ತೇಗಿದ್ರೂ
     ಅದಕ್ಕಿಲ್ಲ ಗರಜು....!   
  
Read more about ಐಪಿಎಲ್ ಮೂರು-ಪಂಚಕಗಳು...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

Pages

Subscribe to RSS - umeshhubliwala ರವರ ಬ್ಲಾಗ್