21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹುಡುಗಿ ಪ್ರೀತಿಸುತ್ತಾಳೆ.....

February 7, 2009 - 11:58am
umeshhubliwala
ಹುಡುಗಿ ಪ್ರೀತಿಸುತ್ತಾಳೆ..... ಶ್ರೀಮಂತನ ಸೊಕ್ಕಿನಿಂದ ಉಬ್ಬಿ ನಿಂತ ಪರ್ಸ್ ಅನ್ನು ನಮ್ಮೂರ ಕರಿಯನ ಬತ್ತಲೆದೆಯಲ್ಲಿ ಅವನ ಮಕ್ಕಳು ಸುರಿಸಿದ ಕಣ್ಣೀರು ರಕ್ತವಾಗಿ ಹೆಪ್ಪುಗಟ್ಟಿದುದರ ಅರಿವಿಲ್ಲ ಅವಳಿಗೆ..... ಹುಡುಗಿ ಪ್ರೀತಿಸುತ್ತಾಳೆ..... ಹೊಂಡಾ ಸುಜುಕಿಗಳ ಸರದಾರರನ್ನು ,ತಮ್ಮದೇ ಲೋಕದಲ್ಲಿ ವಿಹರಿಸುವ ಸಾಫ್ಟವೇರ್ ಎಡಿಕ್ಟ್ ರನ್ನು ಚಪ್ಪಲಿಯಿಲ್ಲದೇ ಕಾಲೆಳೆಯುತ್ತ ಸಾಗಿದವ ಕಾಣುವುದಿಲ್ಲ ಅವಳಿಗೆ..... ಹುಡುಗಿ ಪ್ರೀತಿಸುತ್ತಾಳೆ..... ಟಿವಿ, ಫ್ರಿಜ್,ಮೊಬೈಲ್ ಗಳ ಕ್ರುತಕತೆ ಯನ್ನು ಆಭರಣಗಳ ಆಡಂಬರವನ್ನು.. ಈ ಮಣ್ಣ ಕಣಕಣವೂ ಬಡವನ ಎದೆಯಲ್ಲಿ ಪ್ರೀತಿಯಾಗಿ ಹಸಿರಾದುದರ ಅರಿವಿಲ್ಲ ಅವಳಿಗೆ.... ಹುಡುಗಿ ಪ್ರೀತಿಸುತ್ತಾಳೆ.... ಡೋನೆಶನ್ ಪೋಶಿತ ಡಾಕ್ಟರ್, ಇಂಜಿನೀಯರ್ ಲಂಚವಂತ ಪಿ ಎಸ್ ಐ ಗಳನ್ನು.... ಕೊಡಲು ಫೀಸಿಲ್ಲದೆ ಮುಸುರೆ ತೊಳೆಯುವವ ಪಾಪ ಕಾಣುವುದಿಲ್ಲ ಅವಳಿಗೆ.... ಹುಡುಗಿ ಪ್ರೀತಿಸುತ್ತಾಳೆ...... ಈಗಿನ ಹುಡುಗಿಯರು ಪ್ರೀತಿಸುವುದೇ ಹೀಗೆ......!
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gurubaliga on
ಜನರಲೈಸ್ ಮಾಡುವ ಕವನ. ಹುಡುಗಿಯರು ಬರೇ ಹಣವನ್ನು ಪ್ರೀತಿಸುತ್ತಾರೆ ಎಂದು ನೀವು ಪ್ರತಿ ಚರಣದಲ್ಲೂ ಮತ್ತೆ ಮತ್ತೆ ಹೇಳಿದ್ದಿರಿ. ಯಾಕೆ ಇಷ್ಟು ನೆಗೆಟಿವ್ ಆಗುತ್ತಿರಿ ಉದಯ್ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಸ್ವಾಮಿ ನಾನು ಉದಯ ಅಲ್ಲ ಉಮೇಶ ದೇಸಾಯಿ ನನ್ನ ನಾಮಧೇಯ ವಾಸ್ತವ ನಿಮಗೆ ನೆಗೆಟಿವ್ ಅನ್ನಿಸುವುದಾದರೆ ಬಣ್ಣದ ಚಾಳಿಸು ಹಾಕ್ಕೊರಿ.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಮೊದಲಿಗೆ ನಿಮ್ಮನ್ನು ಉದಯ್ ಎಂದು ತಪ್ಪಾಗಿ ಕರೆದದಕ್ಕೆ ಕ್ಷಮೆ ಇರಲಿ. ಬಣ್ಣದ ಚಾಲಿಸು ಓದುಗರು ಹಾಕ್ಕೊಂಡು ನಿಮ್ಮ ಕವನವನ್ನು ಓದಬೇಕು ಎಂದಾದರೆ ನಿಮ್ಮ ಮುಂದಿನ ಕವನದಲ್ಲಿ ಖಾಲಿ ಪುಟ ಬರೆದರೆ ಸಾಕು. ಅಕ್ಷರಗಳನ್ನೂ ನಾವೇ ಹಾಕ್ಕೊತೀವಿ. ಸರೀನಾ :-) ವಾಸ್ತವ ಎನ್ನುವುದು ಒಂದು ದೃಷ್ಟಿಕೋನ ಮಾತ್ರ ಎನ್ನುವುದನ್ನು ಕವಿಯಾದವನು ಮರೆಯಬಾರದು. ಓದುಗರು ಹೇಳಿದ್ದನ್ನು ಕೇಳಿಸಿಕೊಳ್ಳುವ ತಾಳ್ಮೆ ಇರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ಈಗಿನ ಹುಡುಗಿಯರು ಹೀಗೆ ಪ್ರೀತಿಸುತ್ತಾಳೆ ಅನ್ನುವ ಕೊನೇ ವಾಕ್ಯ ನನಗೇನೋ ಸರಿಯಾಗಿ ಕಾಣುವುದಿಲ್ಲ. ಹಿಂದೆಯೂ ಈ ತರಹ ಇದ್ದರು. ಏನಂತೀರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಇರಬಹುದೇನೋ ಯಾಕಂದ್ರ ಈ ಕವನ ಸುಮಾರು ಹದಿನೈದು ವರ್ಷ ಹಳೆಯದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ನೀವು ಹುಡುಗಿಯೇ ಅಲ್ಲವೇ ಅಂತ ಅನುಮಾನ ಬರ್ತಿದೆ ನಂಗೀಗ ;) ಇಂಚರಳ ವೇಶದ ಇಂಚರಣ್ಣನೇ? ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ನನ್ನನ್ನು ನಂಬಿ ಪ್ಲೀಸ್, ಪ್ಲೀಸ್ ;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Seetharmorab on
ನಿಮ್ಮ ರಚನೆಯಲ್ಲಿ ನಿರಾಶಾವಾದ ಎದ್ದು ಕಾಣುತ್ತದೆ. ಸೀತ ಆರ್. ಮೊರಬ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಮೇಡಮ್ ನಾ ಒಂದು ಚುಟುಕ ದಿಂದ ಉತ್ತರಿಸುವೆ.... ಪದ್ಯದಲಿ ಬರೀ ಗೋಳು,ನೋವು ತುಂಬಿಕೊಂಡಿದೆ ಎಂದು ನನ್ನ ದೂಷಿಸದಿರಿ .... ಜಗದಿಂದ ದೊರೆತದ್ದು ಇದೇ ತಾನೇ......!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅರವಿಂದ್ on
ಉಮೇಶ್ ನಿಮ್ಮ ಕವನದ ಉದ್ದೇಶವನ್ನು ಬದಲಾಯಿಸುತ್ತೀನಿ ಎಂಬ ಬೇಸರ ಬೇಡ, ಇದು ನಿಮ್ಮ ಕವನಕ್ಕೆ ನಾ ನೀಡಲು ಬಯಸುವ ಇನ್ನೊಂದು ಮುಖ ಎಂದೆಣಿಸಿದರೆ ಸಾಕು ಹುಡುಗಿ ಪ್ರೀತಿಸುತ್ತಾಳೆ..... >>ಶ್ರೀಮಂತನ ಸೊಕ್ಕಿನಿಂದ ಉಬ್ಬಿ ನಿಂತ ಪರ್ಸ್ ಅನ್ನು ನಮ್ಮೂರ ಕರಿಯನ ಬತ್ತಲೆದೆಯಲ್ಲಿ ಅವನ ಮಕ್ಕಳು ಸುರಿಸಿದ ಕಣ್ಣೀರು ರಕ್ತವಾಗಿ ಹೆಪ್ಪುಗಟ್ಟಿದುದರ ಅರಿವಿಲ್ಲ ಅವಳಿಗೆ.....>ಹೊಂಡಾ ಸುಜುಕಿಗಳ ಸರದಾರರನ್ನು ,ತಮ್ಮದೇ ಲೋಕದಲ್ಲಿ ವಿಹರಿಸುವ ಸಾಫ್ಟವೇರ್ ಎಡಿಕ್ಟ್ ರನ್ನು ಚಪ್ಪಲಿಯಿಲ್ಲದೇ ಕಾಲೆಳೆಯುತ್ತ ಸಾಗಿದವ ಕಾಣುವುದಿಲ್ಲ ಅವಳಿಗೆ.....>ಟಿವಿ, ಫ್ರಿಜ್,ಮೊಬೈಲ್ ಗಳ ಕ್ರುತಕತೆ ಯನ್ನು ಆಭರಣಗಳ ಆಡಂಬರವನ್ನು.. ಈ ಮಣ್ಣ ಕಣಕಣವೂ ಬಡವನ ಎದೆಯಲ್ಲಿ ಪ್ರೀತಿಯಾಗಿ ಹಸಿರಾದುದರ ಅರಿವಿಲ್ಲ ಅವಳಿಗೆ....>ಡೋನೆಶನ್ ಪೋಶಿತ ಡಾಕ್ಟರ್, ಇಂಜಿನೀಯರ್ ಲಂಚವಂತ ಪಿ ಎಸ್ ಐ ಗಳನ್ನು.... ಕೊಡಲು ಫೀಸಿಲ್ಲದೆ ಮುಸುರೆ ತೊಳೆಯುವವ ಪಾಪ ಕಾಣುವುದಿಲ್ಲ ಅವಳಿಗೆ....>ಈಗಿನ ಹುಡುಗಿಯರು ಪ್ರೀತಿಸುವುದೇ ಹೀಗೆ......!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಅರವಿಂದ್ ಧನ್ಯವಾದಗಳು. ತುಂಬಾ ಚೆನ್ನಾಗಿದೆ ಆದರೆ ಅಂತಹ ಹುಡುಗಿಯ ಅಡ್ರೆಸ್ ಗೊತ್ತಿದಿಯೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ranjith on
ಒಂದು ಲೇಖನ ಅಥವಾ ಕವಿತೆ ಎಲ್ಲವನು ಜನರಲೈಸ್ ಮಾಡಿ ಹೇಳುವುದಕ್ಕಲ್ಲ. ಒಂದೊಂದು ಕವಿತೆ ಒಂದೊಂದು ಕೋನವನ್ನು ಪರಿಚಯಿಸಿದರೆ ಸಾಕು ಅನ್ನುವುದು ನನ್ನಭಿಪ್ರಾಯ. ಹಣವನ್ನೇ ಮೆಚ್ಚುವ ಹುಡುಗಿಯರೇ ಬಹಳ. ಬಹುಶಃ ೯೦ ಶೇಕಡಾ ಅನ್ನಬಹುದಾದಷ್ಟು. ಒಂದು ವೇಳೆ ಹುಡುಗಿ ಹಣ ಬಯಸದಿದ್ದರೂ ತಂದೆ ತಾಯಿಯರು ಹಣವಿರುವವರಿಗೆ ಪ್ರಾಮುಖ್ಯತೆ ಕೊಡುವುದು ನಿಜವೇ ಅಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on
ಶೇ ೯೦! ಇನ್ನುಳಿದ ಹತ್ತು ಮಂದಿಗೆ ಅವರಿಗಿಷ್ಟವಿರದಿದ್ದರೂ ಹಣವಂತ ಗಂಡುಗಳೇ ಸಿಕ್ಕು ಬಿಡುತ್ತಾರೆ! ಅದೇ ದುರಂತ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಜನರಲೈಸ ಮಾಡಬಾರದು ನಿಜ ಆದರೆ ಇದು ಕಲ್ಪನೆ ಮಾತ್ರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅರವಿಂದ್ on
ಅದಕ್ಕೆ ಅಡ್ರೆಸ್ ಬೇಕಿಲ್ಲಾ ಉಮೇಶ್ ಸ್ವಲ್ಪ Sense of Humor ಇದ್ದು, ಒಂಚೂರು ಅವರಲ್ಲಿ ಆತ್ಮವಿಶ್ವಾಸ ಬೆಳೆಸಿದರೆ ಸಾಕು, ಮಿಕ್ಕಿದ್ದೆಲ್ಲಾ ಪ್ರೀತಿಗೆ ತಾನಾಗೆ ಸಿಗುತ್ತದೆ, ನಿಮ್ಮ ಸುತ್ತಮುತ್ತಲಿನಲ್ಲೇ ಒಮ್ಮೆ ಗಮನಿಸಿ. ಅರವಿಂದ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ಯಾರಿದು ಅರವಿಂದ್ ;-) ಪಾಪ ಉಮೇಶ್ ಅವರಿಗೂ ನಿಮಗೆ ಸಿಕ್ಕಂಥ ಹುಡುಗಿ ಸಿಕ್ಕಿದಿದ್ದರೆ ಅವರು ಈ ರೀತಿಯೇ ಬರೆಯುತ್ತಿದ್ದರು :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅರವಿಂದ್ on
ಹಾಗೇನಿಲ್ರಿ ನನ್ನ ಪ್ರೀತಿ ಇದಕ್ಕಿನಾ ಭಯಂಕರವಾಗಿತ್ತು, ಆದ್ರೆ ನಾನು ಅದನ್ನ ಪಾಸಿಟಿವ್ ಆಗಿ ತಗೊಂಡೆ, ಅದಕ್ಕೆ ನಾನೀಗ ಆರಾಮ್ :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ಪ್ರೀತಿನೂ ಭಯಂಕರವಾಗಿರುತ್ತಾ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅರವಿಂದ್ on
ಮತ್ತಿನ್ನೇನು ಇಂಚರಾ ಹೇಳೋದು ಕೇಳಿಲ್ವಾ ನಂದು ಭಯಂಕರ ಪ್ರೀತಿ ಅಂತಾ :) ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by inchara123 on
ನನಗೆ ಈಗ ಅರ್ಥವಾಗ್ತಿದೆ. ಯಾಕೆ ನೀವು ಅ.ಭಾ.ವಿ.ಸಂ. ಸೇರಿಕೊಂಡಿದ್ದೀರಿ ಅಂತಾ. ಪ್ರೀತಿ ಮತ್ತು ಭಯಂಕರ ಸರಿಯಾಗಿ ಹೊಂದಿಕೊಳ್ಳೋದಿಲ್ಲ. ಅದಕ್ಕೆ ಭಯಂಕರ ನಿಮಗೆ ಇರಲಿ ಅಂತಾ ನಿಮ್ಮ ಪ್ರೀತಿ ಹೋಗಿರಬೇಕು.:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅರವಿಂದ್ on
>>ನನಗೆ ಈಗ ಅರ್ಥವಾಗ್ತಿದೆ. ಯಾಕೆ ನೀವು ಅ.ಭಾ.ವಿ.ಸಂ. ಸೇರಿಕೊಂಡಿದ್ದೀರಿ ಅಂತಾ. ಪ್ರೀತಿ ಮತ್ತು ಭಯಂಕರ ಸರಿಯಾಗಿ ಹೊಂದಿಕೊಳ್ಳೋದಿಲ್ಲ. ಅದಕ್ಕೆ ಭಯಂಕರ ನಿಮಗೆ ಇರಲಿ ಅಂತಾ ನಿಮ್ಮ ಪ್ರೀತಿ ಹೋಗಿರಬೇಕು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ಎರಡೂ ಕಾಂಟ್ರಾಸ್ಟ್ ಕವನಗಳು ಚೆನ್ನಾಗಿವೆ ......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಅರವಿಂದ್ on
ಪ್ರತಿಕ್ರಿಯೆಗೆ ನಮಸ್ಕಾರಗಳು ಭವಾನಿ ಅರವಿಂದ್ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ನಿಮ್ಮ ಹುಡುಗಿ ನಿಮಗೆ ಕೈ ಕೊಟ್ಟಿರುವಂತಿದೆ? ;) ಇಷ್ಟೊಂದು ತಪ್ಪು ಕಲ್ಪನೆ ಒಳ್ಳೆಯದಲ್ಲ್ರೀ, ಎಲ್ಲ ಹುಡುಗಿಯರೂ ಒಂದೇ ತರಹ ಇರೋಲ್ಲ, ಹಾಗೇ ಹುಡುಗರೂ.... ಹುಡುಗರು ಪ್ರೀತಿಸುತ್ತಾರೆ, ಪ್ರಕೃತಿಯ ಜೊತೆ ಬೆಳೆದಿರುವ ಹಳ್ಳಿಹುಡುಗಿಯರು ಅವರ ಕಣ್ಣಿಗೆ ಕಾಣುವುದಿಲ್ಲ, ಆಗೆಲ್ಲಾ ಅವರು ಕುರುಡರು, ಪಟ್ಟಣದ ಮೇಕಪ್ ಬೆಡಗಿಯರನ್ನು ಕನಸಲ್ಲೂ ಕನವರಿಸುತ್ತಾರೆ, ಯಾಕೆಂದರೆ ಯಾವತ್ತಿಂದಲೂ ಪ್ರೀತಿಸುವುದೇ ಹಾಗೇ ಹುಡುಗರು ಇಲ್ಲದ ಕಡೆ ಪ್ರೀತಿಯನು ಹುಡುಕುವರು, ಸಿಗದೆ ಮರುಗುವರು, ಹುಡುಗಿಯರನ್ನು ಶಪಿಸುವರು.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vidhata on
ಇದು ಅರ್ಧ ಸಥ್ಯ.ಕೆಲವರು ನೀವು ಬರೆದ ಹಾಗೆ ಅಲ್ಲಿ ಇಲ್ಲಿ ಸಿಗಬಹುದು.ಆದರೆ ಎಲ್ಲಿ ಹೆಣ್ಣು ಮಕ್ಕಳಿಗೆ ಅರ್ಥಿಕ್ ಸ್ವಾತ೦ತ್ರ ಇಲ್ಲವೊ ಅಲ್ಲಿ ಈ ವಿಶಯ ಸಥ್ಯವಾಗುತ್ತದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by msudan86 on
ಹೌದಾ !! ಹೇಮಾರವರೆ , ಇಷ್ಟೊಂದು ಬೇಸರ ಮಾಡಿಕೊಂಡರೆ ಹೆಂಗಾ ,ಪ್ರಿತಿಯಲಿ ಕೈ ಕೊಡುವುದರಲ್ಲಿ ಹುಡುಗರು ಇರುತ್ತಾರೆ ,ಹುಡುಗಿಯರು ಇರುತ್ತಾರೆ ಅಲ್ಲವಾ ........... --ಗೌಡ್ರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಹೇಮ ಪವಾರ್ on
ಅಯ್ಯೋ ನಾನ್ಯಾಕ್ರೀ ಬೇಸರ ಮಾಡ್ಕೊಳ್ಳೀ, ಅವ್ರು ಹುಡುಗೀರನ್ನೆಲ್ಲ ಹಾಗೇ ಅಂದಿದ್ದಕ್ಕೆ ನಾವು ನೀವು ಹುಡಗರೂ ಹಾಗೆ ಅಂತ ಬರ್ದು ಸೇಡು ತೀರಿಸ್ಕೊಂಡ್ವಪ್ಪ ಅಷ್ಟೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಹೇಮಾ ಏಕೆ ಹಳೆಯ ನೆನಪು ತಂದು ಕೊಡುತ್ತೀರಿ....... ಇಲ್ಲ ನಾನ್ಯಾವ ಹುಡುಗಿಯ ಹಿಂದೆ ಬಿದ್ದಿರಲಿಲ್ಲ ಅಥವಾ viceversa !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಓದುಗ ಮಹಾಶಯರಿಗೆ ಧನ್ಯವಾದಗಳು. ನಿಜ ತಾಳ್ಮೆ ಬೇಕು ಆದರೆ ಯಾರಿಗೆ ಈ ಪ್ರಶ್ನೆ ಇದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.