22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ದಾಖಲು..

November 9, 2009 - 10:17am
umeshhubliwala

                       ಅಲ್ಬಮ್ ತಿರುವಿದಾಗಲೆಲ್ಲ ಚಿತ್ತದಲ್ಲಿ ಹೊಳೆಯುತ್ತವೆ
                                      ಮರೆಯದ  ಅವೆ ಮುಖಗಳು..
                                       ಕಾಲನ ಗತಿಯಲೂ ಕುಂದದ ತಮ್ಮ ವಜನು
                                       ಉಳಿಸಿಹೋದ  ಚೆಹರೆಗಳು...
                                      ಅದಾರದೋ ಮದುವೆಯಲ್ಲಿ ಹೊಳೆಯುತ್ತಿರುವ
                                      ಅವ್ವಳ ಮೂಗುಬಟ್ಟು..
                                      ಅಕ್ಕಳ ಕೇದಗೆ ಜಡೆ ಹಿದಿದುಕೊಂಡ ಕನ್ನಡಿ..
                                       ಹೀಗೆ ಪುಟ ತೆರೆದಂತೆ ಸಾರಿನಿಲ್ಲುತ್ತದೆ  ಗತ.
                                       ಆ ಡೌಲು, ನಗು  ಸುಖ  ಎಲ್ಲ  ದಾಖಲಿಲ್ಲಿ
                                       ಈ ಫೋಟೋಗಳ  ತುಂಬ  ಅವರದೇ ಪಾರುಪತ್ಯ.
                                       ಅಲ್ಬಮ್ಮಿನ ಈ ಮಿನುಗುವ ಚೆಹರೆಗಳಿಗೆ  ಇನ್ನೊಂದು ರೂಪ ಇದೆ
                                       ಚಿತೆಯ  ಮೇಲಿನ  ಪ್ರಶಾಂತ                        ದೇಹ..
                                       ಕೊರೆಯುವ  ಚಳಿನಡುವೆ ಛಿಟಿ ಛಿಟಿ ಉರಿದು ಹೋದ  ದೇಹ
                                       ಈ  ಚಿತ್ರ  ಯಾವ  ಅಲ್ಬಮ್ಮಿನಲೂ       ಇಲ್ಲ
                                       ಎದೆ ತುಂಬ ಮಾತ್ರ ಆ ಚಿತೆ, ಬೆಂಕಿ ಆ ಬೆಂಕಿಯ ನಡುವಿನ
                                       ಪ್ರಶಾಂತ  ಮುಖ  ಅಚ್ಚೊತ್ತಿದೆ....!   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by raji on

"ಚಿತೆಯ ಮೇಲಿನ ಪ್ರಶಾಂತ ದೇಹ..
ಕೊರೆಯುವ ಚಳಿನಡುವೆ ಛಿಟಿ ಛಿಟಿ ಉರಿದು ಹೋದ ದೇಹ
ಈ ಚಿತ್ರ ಯಾವ ಅಲ್ಬಮ್ಮಿನಲೂ ಇಲ್ಲ
ಎದೆ ತುಂಬ ಮಾತ್ರ ಆ ಚಿತೆ, ಬೆಂಕಿ ಆ ಬೆಂಕಿಯ ನಡುವಿನ
ಪ್ರಶಾಂತ ಮುಖ ಅಚ್ಚೊತ್ತಿದೆ....! "
ಈ ಪದಗಳು ನನಗೆ ತುಂಬಾ ಇಷ್ಟವಾಯಿತು. ಉಮೇಶ್ ರವರೆ ಚೆನ್ನಾಗಿದೆ.
ರಾಜಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vidya shetty on

ಯಾಕೋ ಸ್ವಲ್ಪ ನೋವಾಯ್ತು.
ಆದ್ರೆ ಪೂರ್ತಿ ಕವನ ಅರ್ಥ ಆಗಿಲ್ಲ ಸರ್,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by suresh nadig on

ಮನ ಮುಟ್ಟಿತು ಉಮೇಶ್, ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ.
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harishsharma.k on

ಮನ ಮುಟ್ಟಿತು ಕವನದಾವ್ಯಕ್ತ ಭಾವ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.