19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕಲ್ಪನಾ ವಿಲಾಸ

May 12, 2009 - 8:11am
umeshhubliwala
ನನ್ನ ಕಲ್ಪನೆ ಹರಿಬಿಡುವನಿದ್ದೇನೆ ನಾನು ಜ್ಯೋತಿಷಿ ಅಲ್ಲ ಆದರೂ ಮೇ ೧೭ ರಂದು ಪತ್ರಿಕೆಗಳ ಹೆಡ್ ಲೈನ್ ಏನಿರುತ್ತೆ ಗೊತ್ತಿಲ್ಲ ಕಲ್ಪನೆ ಸಹ ಮಾಡಲಾಗುತ್ತಿಲ್ಲ ಏಕೆಂದರೆ ರಾಜಕೀಯ ಹಾಗೆ ತಾನೇ...! ಇರಲಿ ನಾನು ನಮ್ಮ ನೇತಾರರ ಪ್ರತಿಕ್ರಿಯೆ ಹೇಗಿರಬಹುದು ನಾ ಸಂದರ್ಶನ ಮಾಡಿದೆ ಅವರ ಹೇಳಿಕೆ ಹೀಗಿವೆ....! ದೇವೇಗೌಡ್ರು : ಈ ಸಲ ಹೆಂಡ ,ಜಾತಿ ,ಹಣದ ಕಾರುಭಾರು ಗೆದ್ದಿದೆ ನಾ ಸೋತಿಲ್ಲ ಈ ಗೌಡ ಸೋಲು ಒಪ್ಪಿಕೊಳ್ಳುವುದಿಲ್ಲ..... ಯಡಿಯೂರಪ್ಪ: ಅಪ್ಪ ಮಗನ ಪಕ್ಷ ಸೋತು ಧೂಳಿಪಟ ವಾಗಿದೆ ಜನತೆ ಬೆಂಬಲ ಕೊಟ್ಟಿದ್ದಾರೆ ಅಧಿಕಾರಿಗಳಿಗೆ ಈಗಾಗಲೆ ಆದೇಶ ನೀಡಿದ್ದೇನೆ ವಿಜಯೋತ್ಸವ ಪ್ರತಿ ಹಳ್ಳಿಗೂ ಮುಟ್ಟಬೇಕು....! ಕುಮಾರಸ್ವಾಮಿ: ನಾ ರಾಜೀನಾಮೆ ಕೊಡುತ್ತಿರುವೆ ಅಪ್ಪನ ಜತೆಗೆ ಸಂಸತ್ತು ಸೇರುವ ಆಸೆ ಇತ್ತು ಅವರಿಲ್ಲದ ಸಂಸತ್ತೂ ನನಗೂ ಬೇಡ....! ಲಾಲೂ: ಈ ಸಲ ಸೋಲಲು ಕಾರಣ ಸಿಂಪಲ್ ನಿತೀಶ್ ಕುಮಾರ್ ಕೊನೆ ಕ್ಷಣ ಈ ಸುಶೀಲ್ ಮೋದಿಬಿಟ್ಟು ನರೇಂದ್ರ ಮೋದಿ ಜತೆ ಕೈ ಗೂಡಿಸಿದ್ದು....ಬಿಹಾರದ ಜನತೆ ಕೃತಘ್ನರು....! ಅಡ್ವಾನಿ: ಜನತೆ ಮತ್ತೆ ಕೈ ಹಿಡಿದಿದ್ದಾರೆ ಆದರೆ ಪೂರ್ತಿಯಾಗಲ್ಲ ಇದೇ ಕಳವಳ....! ಸೋನಿಯಾ: ಬಿಜೆಪಿಗೆ ಜನ ಬೆಂಬಲ ಕೊಟ್ಟಿಲ್ಲ ಸರ್ಕಾರ ರಚಿಸುವ ನಮ್ಮ ಪ್ರಯತ್ನ ನಿಂತಿಲ್ಲ.....! ರಾಹುಲ್ : ಕೈ ಕತ್ತರಿಸುವವರ ಕೈ ನಮ್ಮದಲ್ಲ ಆದರೂ ಜನ ಕೈ ಕೊಟ್ಟರಲ್ಲ.....! ಕಾರಟ್ : ಮಮತಾರಿಂದ ನಮಗೆ ಸೋಲಾಗಿದೆ ಎಂಬುದು ಸರಿ ಅಲ್ಲ ಜನ ಬದಲಾವಣೆ ಬೇಡುತ್ತಿದ್ದಾರೆ.....! ಅನೇಕ ಜನ ಅಭಿಪ್ರಾಯ ಕೊಡದೇ ಸತಾಯಿಸಿದರು...ಕೆಲವರು ನನ್ನ ನೋಡಿ ಓಡಿಹೋದರು ನಮ್ಮ ಪಾಸ್ವಾನ್ , ಅಮರ್ ಸಿಂಗ್ ಮುಂತಾದವರು ನನಗೆ ಹೊಡೆಯೋಕ್ಕೆ ಬಂದರು....!
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Shashikanth. Birge on
>>ಇರಲಿ ನಾನು ನಮ್ಮ ನೇತಾರರ ಪ್ರತಿಕ್ರಿಯೆ ಹೇಗಿರಬಹುದು ನಾ ಸಂದರ್ಶನ ಮಾಡಿದೆ ಅವರ ಹೇಳಿಕೆ ಹೀಗಿವೆ....!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhavanilokesh mandya on
ದೇಸಾಯಿಯವರೇ... ಅವರೆಲ್ಲಾ ನಿಮ್ಮ ಕೈಗೆ ಸಿಕ್ಕಿದ್ದಾರಲ್ಲಾ ... ಅದೇ ಆಶ್ಚರ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಯಾಕ್ ಆಗಬಾರದು ನೋಡ್ರಿ ಯಾವ್ದೂ ಅಶಕ್ಯ ಅಲ್ಲಲ್ಲ? ನೋಡಿದ್ರಿಲ್ಲೋ ನಮ್ಮ ಕುಮಾರ್ ಮಾರಿ ಮುಚ್ಚಿಕೊಂಡು ಮೇಡಮ್ ಭೆಟ್ಟಿ ಆದ್ರು...!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.