ಬೆಳಗಾವಿ ನಮ್ಮದಾ?
ಈ ಪ್ರಶ್ನೆ ನಾನು ನಿನ್ನೆಯಿಂದ ಕೇಳಿಕೊಳ್ಳುತ್ತಿರುವೆ.....ಶನಿವಾರ ಮುಂಜಾನೆ ೯-೦೦ ಗಂಟೆಗೆ ಆ ಊರಲ್ಲಿ ಕಾಲಿಟ್ಟ ನಿಮಿಶ ದಿಂದ ಈ ಪ್ರಶ್ನೆ ಸುತ್ತಿಕೊಂಡಿತು.
ನಮ್ಮ ಸರ್ಕಾರ ಅಲ್ಲಿ ಅಧಿವೇಶನ ಮಾಡಿತು ಕೆಲವು ರಸ್ತೆಗಳು ಟಾರ್ ಕಂಡವು
ಆದರೆ ಬೆಳಗಾವಿಯ ಸಾಮಾನ್ಯ ಮನಿಶ್ಯಾನ ಅಭಿಪ್ರಾಯ ಕೇಳಿದರೆ ಇದೆಲ್ಲ
ನಿರುಪಯುಕ್ತ ಎಂದೆನ್ನಿಸುತ್ತದೆ. ಮರಾಟಿ ಜನ ಅವರ ಮಾತನಾಡುವ ಕನ್ನಡ
ಇದೆಲ್ಲ ವನ್ನು ಅವನು ಇಶ್ಟು ವರ್ಷ ಜೀರ್ಣಿಸಿಕೊಂಡಿದ್ದಾನೆ..ಅನಿವಾರ್ಯ ಕರ್ಮ
ಎಂದು ಕೊಂಡು ಬದುಕುತ್ತಿದ್ದಾನೆ. ರಸ್ತೆ ಬದಿಯ ವ್ಯಾಪಾರಿ,, ಹೊಟೆಲ್ ನ
ಮಾಣಿ .., ರಿಕ್ಸಾವಾಲಾ ಹೀಗೆ ಅನೇಕ ಜನ ಮೊದಲು ಮರಾಠಿ ಯಲ್ಲಿಯೇ
ನನ್ನೊಡನೆ ಮಾತನಾಡಲು ಶುರು ಇಟ್ಟಿದ್ದು ಪುಣ್ಯಕ್ಕೆ ನನಗೆ ಮರಾಠಿ ಚೆನ್ನಾಗಿ ಬರುತ್ತದೆ. ಹೀಗಾಗಿ ಹೆಚ್ಚಿಗೆ ತೊಂದರೆ ಆಗಲಿಲ್ಲ.
ನಾ ಹೇಳ ಹೊರಟಿರುವುದು ಇಷ್ಟೇ ಒಂದು ಊರು ಭಾವನಾತ್ಮಕ ವಾಗಿ
ಕನ್ನಡದ್ದು ಅಂತ ಅನ್ನಿಸಿಕೊಳ್ಳುವುದು ಅಲ್ಲಿಯ ಜನ ಸಹ ಸಾಥ ನೀಡಬೇಕು
ಆದರೆ ಇಬ್ಬಂದಿತನ ಬೆಳಗಾವಿ ಕನ್ನದಿಗನ ಹಣೆಬರಹ ಆದ ಹಾಗೆ ಇದೆ.
ಹಾಗಾದರೆ ಇದಕ್ಕೆನು ಪರಿಹಾರ ಸರ್ಕಾರ ಇನ್ನು ಮುಂದೆ ಬೆಳಗಾವಿಯ ಬಗ್ಗೆ
ಹೆಚ್ಚಿಗೆ ಗಮನ ಕೊಡಬೇಕು... ಅಲ್ಲಿಯ ಜನರಿಗೆ ಹೊಸ ಉದ್ಯೋಗ ಬೇಕು
ಕಿಷ್ಕಿಂಧೆ ಯಂತಿರುವ ಬೆಳಗಾವಿ ಸುಂದರ ನಗರ ವಾಗಿ ಹೊರಹೊಮ್ಮಬೇಕು.
ಸರ್ಕಾರ ಇದರ ಬಗ್ಗೆ ತೀವ್ರವಾಗಿ ಗಮನ ಹರಿಸಬೇಕು. ಸಾಧ್ಯವಾದರೆ ಓರ್ವ
ಮಂತ್ರಿ ಇದಕ್ಕಾಗಿ ನೇಮಿಸಬೇಕು....
ಭಾವನಾತ್ಮಕ ವಾಗಿ ಬೆಳಗಾವಿ ಕನ್ನಡಿಗ ಕಳೆದು ಹೋಗುತ್ತಿದ್ದಾನೆ ಅವನನ್ನು
ವಾಪಸ್ ಕರೆತರುವ ಏನಂತೀರಿ.....?
- umeshhubliwala's blog
- Login or register to post comments
- 333 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಬೆಳಗಾವಿ ನಮ್ಮದಾ?
>ರಿಕ್ಸಾವಾಲಾ ಹೀಗೆ ಅನೇಕ ಜನ ಮೊದಲು ಮರಾಠಿ ಯಲ್ಲಿಯೇ ನನ್ನೊಡನೆ ಮಾತನಾಡಲು ಶುರು ಇಟ್ಟಿದ್ದು
> ಪುಣ್ಯಕ್ಕೆ ನನಗೆ ಮರಾಠಿ ಚೆನ್ನಾಗಿ ಬರುತ್ತದೆ.
ಕುತೂಹಲಕ್ಕೆ...ನೀವು ಕನ್ನಡದಲ್ಲಿ ವ್ಯವಹರಿಸಲು ಪ್ರಯತ್ನಿಸಿದಿರೇ?
-ಶ್ರೀ
ಬೆಳಗಾವಿ ನಮ್ಮದೇ
ಮೊದಲಿಗೆ ನಮ್ಮ ಊರಿಗೆ ಬಂದಿದ್ದಕ್ಕಾಗಿ ಧನ್ಯವಾದಗಳು....ಇಲ್ಲಿ ನೀವು ಕನ್ನಡದಲ್ಲಿ ವ್ಯವಹರಿಸಿ ನೋಡಿ ಅವರೂ ಕನ್ನಡದಲ್ಲೇ ವ್ಯವಹರಿಸುತ್ತಾರೆ ಅಥವಾ ಮರಾಟಿಗರಾಗಿದ್ದರೆ ಹಿಂದಿಯಲ್ಲಿ ವ್ಯವಹರಿಸುತ್ತಾರೆ. ಬೆಳಗಾವಿ ಕನ್ನಡಿಗರನ್ನು ಜಾಗೃತಗೊಳಿಸಲು ಇಲ್ಲಿ ಕನ್ನಡಪರ ಕಾರ್ಯಕ್ರಮಗಳು ಮೇಲಿಂದಮೇಲೆ ಜರುಗಬೇಕು.... ಏನಂತೀರಿ?
ಶ್ರೀನಿವಾಸ
www.compuinkannada.c...
ಉ: ಬೆಳಗಾವಿ ನಮ್ಮದಾ?
ಕನ್ನಡ ಕೇವಲ ಬೆಳಗಾಂ ಪ್ರಶ್ನೆಯಲ್ಲ ಇದು ಸಮಸ್ತ ಕರ್ನಾಟಕದ ಪ್ರಶ್ನೆ. ಎಲ್ಲೋ ನನಗು ಕೂಡ ಬೆಂಗಳೂರಿಗೆ ಕಾಲಿಟ್ಟರೆ ನಮ್ಮ ರಾಜಧಾನಿ ಎನ್ನಿಸುವುದಿಲ್ಲ. ಕನ್ನಡಿಗರು ಹೃದಯವಂತರು, ಶಾಂತಿಪ್ರಿಯರು ಎಂಬ ಹಣೆ ಪಟ್ಟಿ ಕಟ್ಟಿ, ನಮ್ಮನ್ನೇ ಧೋಚುವ ಹುನ್ನಾರವೆ???
ಉ: ಬೆಳಗಾವಿ ನಮ್ಮದಾ?
ಸ್ವಾಮಿ ನಾ ಕನ್ನಡ ಮಾತನಾಡಿದೆ ಆದರೆ ನನ್ನ ಕೆಂಪು ಮಾರಿ ನೋಡಿ ಅವರು ನಾ ಮರಾಠಿಯವ ಅಂತ
ಅನ್ಕೊಂಡ್ರು. ನಾ ಏನು ಮಾಡಲಿ ನೀವ ಹೇಳ್ರಿ......