25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಗಳ ಪ್ರಶ್ನೆ..

April 30, 2009 - 9:25am
umeshhubliwala
ಹಿಂಗ್ಯಾಕ ನಮ್ಮ ದೇಶದಾಗ ? ೮ ವರ್ಷದ ಮಗಳು ಕೇಳಿದ್ಲು ಆಫೀಸ ಮುಗಿಸಿ ಟಿವಿ ಹಚ್ಚಿದಾಗ ಚಾನಲ್ ನವರು ಕಸಬ್ ನ ಡಿಮಾಂಡ್ ಬಗ್ಗೆ ಹೇಳುತ್ತಿದ್ದರು. ಓದಲು ಪಾಕಿಸ್ತಾನಿ ಪತ್ರಿಕೆ ಬೇಕಂತೆ ಅವನಿಗೆ ಕೊಡೋಣ ಆದರೆ ನಾಳೆ ಮಲ್ಲಿಕಾ ಶೇರಾವತ್ ಬೇಕು ಎಂದು ಹಟ ಹಿಡಿದರೆ ಏನು ಮಾಡೋದು....ಇಷ್ಟಕ್ಕೂ ಅವ ನಮ್ಮ ಅತಿಥಿ ಅಲ್ಲ ಬಂಧು ಮೊದಲೇ ಅಲ್ಲ. ಬೇರೆ ಚಾನಲ್ ತಿರುಗಿಸಿದಾಗ ಕಸಬ್ ನ ಹೊಸಾ ಡಿಮಾಂಡ್ ಮೇಲೆ ಚರ್ಚಾ ನಡೆದಿತ್ತು ನೋಡುವವರು sms ಕಳಿಸುತ್ತಿದ್ದರು ಒಬ್ಬರು ಬರೆದಿದ್ದರು ಅವನನ್ನು ಜೇಲಿನಿಂದ ಬಿಡುಗಡೆಗೊಳಿಸಿ ೨೬/೧೧ ರ ದಿನ ಮಡಿದ ಸಂಬಂಧಿಗಳಿಗೆ ಒಪ್ಪಿಸಲಿ..! ಸಲಹೆ ಅತಾರ್ಕಿಕ ಅನಿಸಬಹುದು ಆದರೆ ಅದರ ಹಿಂದೆ ಅಡಗಿದ ಕಳಕಳಿ ಮೆಚ್ಚಬೇಕು.ಎಷ್ಟು ದಿನ ಅವನನ್ನು ಜೈಲಿನಲ್ಲಿ ಕೂಡಿಸಿ ಕೂಳು ಹಾಕೋದು ..ಅವ ಒಂದು ನಮೂನಿ vipಕೈದಿ ಅವನ ಕಡೆ ಕೆಲಸ ಮಾಡಸುವ ಹಾಗಿಲ್ಲ ಜೈಲಿನ್ಯಾಗ ಇದ್ದರೂ ಒಂಥರಾ ರಾಜಾನ ದರಬಾರ...! ಈಗ ಮಗಳು ಕೇಳಿದ ಪ್ರಶ್ನಿಗೆ ಬರ್ತೇನಿ ...ನಾ ಅಂದೆ ಬ್ಯಾರೆ ದೇಶದಾಗ ಆಗಿದ್ರ ಇಷ್ಟೊತ್ತಿನ್ಯಾಗ ಅವ ಹೆಣಾ ಆಗಿ ಹೋಗತಿದ್ದ . ಅದಕ್ಕ ಮಗಳು ಕೇಳಿದ್ಲು ನಮ್ಮ ದೇಶದಾಗ ಯಾಕ್ ಹಿಂಗ? ಉತ್ತರ ನಾ ಎಲ್ಲಿಂದ ಕೊಡಲಿ ಉತ್ತರ ಕೊಡಬೇಕಾದವರಿಗೆ ಅದರ ಚಿಂತಿ ಇಲ್ಲ..ಅವರು ನಾಳೆ ಸಿಗಲಿರುವ ವೋಟಿನ ಲೆಕ್ಕ ಹಾಕುತ್ತಿದ್ದಾರೆ...ಒಂದು ವೇಳೆ ಕಸಬ್ ನ ವಿಚಾರಣೆ ಹೀಗೆ ಐದು ವರ್ಷ ಜಗ್ಗಿದರೆ(ಅದರ ಎಲ್ಲ ಸಾಧ್ಯತಾ ಅದ...!) ಮುಂದಿನ ಸಾರಿ ಸಹ ಅವರ ಕುರ್ಚಿ ಭದ್ರ ಆಗಿರ್ತದ. ಪಾಪ ಮಗಳಿಗೇನು ಗೊತ್ತು ಇದು ಪ್ರಶ್ನಿ ಕೇಳಿದ್ಲು ಖರೇ ಉತ್ತರ ಕೊಡಲಿಕ್ಕೆ ನನಗೆ ಸಾಧ್ಯನ ಇಲ್ಲ ...ನೀವ್ಯಾರಾರು ಸಹಾಯ ಮಾಡಬಹುದೇನೋ?
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on
ಉಮೇಶ್ ದೇಸಾಯರಾ, ನಮ್ಮ ಮಗಳೂ ಇಂತ ಪ್ರಶ್ನಿ ಕೇಳ್ತಾ ಕೇಳ್ತಾ ಎಂಟರಿಂದ ಹದಿನೆಂಟಕ್ಕೆ ಬಂದಿದಾಳ್ರೀ.. ಆದರಾ.. ಆಕಿ ಕೇಳಿದ್ ಅದೆಷ್ಟೋ..ಪ್ರಶ್ನಿಗಳಿಗ್ ನಾನಿನ್ನೂ ಜವಾಬೇ ಕೊಟ್ಟಿಲ್ರೀ... ಏನೂ ಮಾಡಾಕ್ಕಾಗಲ್ರೀ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by umeshhubliwala on
ಬಹಳ ಮಾಡಿ ನನ್ನ ಮಗಳು ಹದಿನೆಂಟಕ್ಕ ಬಂದಾಗಲಾದರೂ ಇದಕ್ಕ ಉತ್ತರ ಸಿಗಬಹುದೇನೋ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.