19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

umeshhubliwala ರವರ ಬ್ಲಾಗ್

ಬೆಳಗಿನ ಕೆಲ ಪಲಕುಗಳು....

November 14, 2009 - 10:45am
umeshhubliwala

೧) ನಿಶೆಯ  ಆ  ತೆಕ್ಕೆಯಲಿ
ಅದೋ ಆ ಮೊಗ್ಗಿನಲಿ  ಅನೇಕ
ಕನಸುಗಳು ಪಲ್ಲವಿಸುತಿವೆ….
ಬೆಳಕೆ ನೀ ತೂರಿ ಬಂದು
ಸ್ವಪ್ನಭಂಗ  ಮಾಡಬೇಡ…..

೨)   ಹೂ ಬೆಳದಿಂಗಳು ಬಿಟ್ಟು ಹೋದ
ದಾವಣಿ ಧರಿಸಿದೆ…
ರಾತ್ರಿಯಿಡೀ ಉದುರಿದ  ನಕ್ಷತ್ರ
ಇಬ್ಬನಿಯಾಗಿ ಹರಡಿದೆ..
ಹಾಸಿಗೆಯಲಿ ನಿನ್ನ  ಮಲ್ಲಿಗೆ  ಎಸಳು…
ಈ  ಬೆಳಗು ಮತ್ತೆ ರಾತ್ರಿಯ  ಧೇನಿಸಿದೆ….!

೩)  ನಿನ್ನ  ತೋಳಬಂದಿ  ಸಡಲಿಸಿದೆ..
ಮೈ ಇಡೀ ಆವರಿಸಿದ  ಗಂಧ  ಕಳಚಿದೆ..
ಬೆಳಕು ಸೂಸಿ  ನಿಶೆ  ಕಳೆದಿದೆ…
ಆದರೇನು  ನಶೆ  ಇಳಿಯದಾಗಿದೆ……!

೪) ತಂತಿ ಮೀಟಿ ಮೀಟಿ ನೀ ರಾತ್ರಿಯಿಡಿ ಹಾಡಿದೆ
ಗಜಲ್….
ನಿನ್ನ  ನಳಿದೋಳು,,,ಉಗುರಿನ  ಮೊನಚು…
ಬೆಳಗು  ಹರಿದಿದೆ  ನಿಜ… Read more about ಬೆಳಗಿನ ಕೆಲ ಪಲಕುಗಳು....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ದಾಖಲು..

November 9, 2009 - 10:17am
umeshhubliwala

                       ಅಲ್ಬಮ್ ತಿರುವಿದಾಗಲೆಲ್ಲ ಚಿತ್ತದಲ್ಲಿ ಹೊಳೆಯುತ್ತವೆ
                                      ಮರೆಯದ  ಅವೆ ಮುಖಗಳು..
                                       ಕಾಲನ ಗತಿಯಲೂ ಕುಂದದ ತಮ್ಮ ವಜನು
                                       ಉಳಿಸಿಹೋದ  ಚೆಹರೆಗಳು...
                                      ಅದಾರದೋ ಮದುವೆಯಲ್ಲಿ ಹೊಳೆಯುತ್ತಿರುವ
                                      ಅವ್ವಳ ಮೂಗುಬಟ್ಟು..
                                      ಅಕ್ಕಳ ಕೇದಗೆ ಜಡೆ ಹಿದಿದುಕೊಂಡ ಕನ್ನಡಿ..
                                       ಹೀಗೆ ಪುಟ ತೆರೆದಂತೆ ಸಾರಿನಿಲ್ಲುತ್ತದೆ  ಗತ. Read more about ದಾಖಲು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.

ಮೈಸೂರು ಮಲ್ಲಿಗೆ----ಕೆಲ ಪ್ರಶ್ನೆಗಳು

June 25, 2009 - 9:15am
umeshhubliwala
ಬಹಳ ಹಿಂದೆ ನೋಡಿದ ಸಿನೇಮ "ನಮಕ್ ಹರಾಮ್.." ಅದರಲ್ಲಿ ರಜಾ ಮುರಾದ ಓರ್ವ ಕವಿ..ಪ್ರತಿಭಾವಂತ ನಿಜ ಆದರೂ ದುರ್ದೈವಿ..ತನ್ನ ಕೇರಿಯ ಹುಡುಗರಿಗೆ ಗಾಳಿಪಟ ಮಾಡಿಕೊಡುತ್ತಿರುತ್ತಾನೆ...ಆತ ಸಾಯುವ ಸನ್ನಿವೇಶ --ರಾಜೇಶಖನ್ನಾ ಹಾಡುತ್ತಾನೆ .ಕಿಶೋರ್ ಹಾಡಿದ ಒಂದು ಅದ್ಭುತ ಹಾಡು "ಮೈ ಶಾಯರ್ ಬದನಾಮ್..."ಹಾಡು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆಷಾಢ--ವಿರಹ---ಮುಕ್ತಕಗಳು...

June 21, 2009 - 11:29am
umeshhubliwala
೧) ಈ ಆಷಾಢದ ಗಾಳಿಗಳೇಕೆ ಇಷ್ಟೊಂದು ಜೋರು... ನಿನ್ನ ನೆನಪು ಇವು ಹೊತ್ತು ತಂದಿರಲಾರವಷ್ಟೆ....! ೨) ಸುಂದರ ಸಂಜೆಗೆಂಪ ನುಂಗಿದ ಮೇಘ ಶಹನಾಯಿ ನುಡಿಸಿದ.. ೩) ಅಗಲಿಕೆಯ ಕಹಿಕಷಾಯ ಕುಡಿಸಿದ್ದಾನೆ ಹೊಸ ಮದುಮಕ್ಕಳಿಗೆ ಈ ಆಷಾಢ ಮಹಾರಾಯ...!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸಂವಾದ

May 30, 2009 - 9:41am
umeshhubliwala
ಬೊಗಸೆ ಕಂಗಳವು ಉದಕ ಸುರಿಸಿ ಕೇಳಿವೆ ಅದೇ ಪ್ರಶ್ನೆ ನನ್ನಂತರಂಗದ ತಿದಿಯನೊತ್ತಿ ಕಾಡಿದ ಪ್ರಶ್ನೆ...... "ವಂಶದ ಕುಡಿಯೋ ನಾನೆತ್ತಿ ತಂದ ಧೂಳೋ" ಉತ್ತರ ತರವಲ್ಲ ಹೇಳಲು ಪದಗಳಿಲ್ಲ ಭಾವನೆಗಳಿಗೆ ಭಾಷೆಯ ಬರಗಾಲವಿದೆ.... ಎರಡು ಜೀವ ತೇಯ್ದವು
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - umeshhubliwala ರವರ ಬ್ಲಾಗ್