ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಸುಪ್ರೀತ್.ಕೆ.ಎಸ್
ಪರಿಚಯ
ಹುಟ್ಟಿದ್ದು ಹರಿಹರದಲ್ಲಿ ಬೆಳೆದಿದ್ದದ್ದು ದಾವಣಗೆರೆಯಲ್ಲಿ. ಪ್ರೈಮರಿ ಹೈಸ್ಕೂಲುಗಳನ್ನು ಓದಿದ್ದು ದಾವಣಗೆರೆಯಲ್ಲಿ. ಪಿಯುಸಿ ಅಳಿಕೆಯಲ್ಲಿ. ಈಗ ಬೆಂಗಳೂರಿನ ಯು.ವಿ.ಸಿ.ಇ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಓದುತ್ತಿರುವೆ.
ಕನ್ನಡದಲ್ಲಿ ಬರೆಯುವುದರಲ್ಲಿ ಆಸಕ್ತಿಯಿದೆ.
ನನ್ನ ವಯಕ್ತಿಕ ಬ್ಲಾಗು
ಗೆಳೆಯರನೇಕರು ಸೇರಿ ನಡೆಸುತ್ತಿದ್ದ ಮಾಸ ಪತ್ರಿಕೆ ‘ಕಲರವ’ದ ಬ್ಲಾಗು
ಟ್ವಿಟರ್ ಪುಟ
ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ನೇರಾ ನೇರಾ ನಾಲ್ಕು ಬೈದೋ ಇಲ್ಲವೆ ಕೆನ್ನೆಗೆರಡು ಬಾರಿಸಿ ಹೋದರೂ ಚಿಂತೆಯಿಲ್ಲ ಆದರೆ ಸೊಟ್ಟಗೆ ಆಡಿದ ಮಾತು, ಕುಹಕ ಮನಸ್ಸಿಗೆ ಉಂಟು ಮಾಡುವ ಗಾಯ ಮಾಯುವುದು ಕಷ್ಟ. ನೇರವಾದ ಹಣಾಹಣಿ, ಸೆಣೆಸಾಟ ಹುಟ್ಟಿಸುವ ದಣಿವು, ಆಯಾಸಗಳನ್ನು ಹೇಗೋ ತಾಳಿಕೊಳ್ಳಬಹುದು. ಆದರೆ ಈ ಮರೆಯಲ್ಲಿನ ಏಟುಗಳು, ಕೊಂಕು ನೀಡುವ ಯಾತನೆ, ಹುಟ್ಟಿಸುವ ಅಸಹನೆಯನ್ನು ಸಹಿಸುವುದು ಕಷ್ಟ.
ಇಷ್ಟಕ್ಕೂ ಈ ಕುಹಕ ನಮಗ್ಯಾಕೆ ಅಷ್ಟು ತೊಂದರೆ ಕೊಡುತ್ತದೆ? ಎಷ್ಟು ಬಾರಿ ಕುಹಕಕ್ಕೆ ಉದಾಸೀನವೇ ಮದ್ದು ಎಂದಂದುಕೊಂಡು ಸುಮ್ಮನಿರುವ ಯಾವ ಪ್ರತಿಕ್ರಿಯೆಯನ್ನೂ ಕೊಡದಿರುವ ನಿರ್ಧಾರವನ್ನು ಕೈಗೊಂಡರೂ ಸಣ್ಣ ಕುಹಕದ ಮಾತಿಗೆ ಸಿರ್ರನೆ ಸಿಟ್ಟಿಗೆದ್ದು ನಮ್ಮ ನಿರ್ಧಾರಗಳನ್ನೇ ಕೈಬಿಡುವಷ್ಟು ಅಸಹಾಯಕರಾಗುವುದು ಏಕೆ?
ಜೋಕು, ಕಾಮಿಡಿಗಳಲ್ಲಿ ನಡೆಯುವ ಪ್ರಕ್ರಿಯೆಯೇ ಈ ಕುಹಕದಲ್ಲೂ ಅಡಗಿದೆಯಾ?
ನಾವೆಷ್ಟೇ ಪ್ರಜ್ಞಾಪೂರ್ವಕವಾಗಿ ನಮ್ಮ ಪ್ರತಿಕ್ರಿಯೆಯನ್ನು ನಿಯಂತ್ರಿಸಿಕೊಳ್ಳುವ ನಿರ್ಧಾರ ಮಾಡಿಕೊಂಡಿದ್ದರೂ ಸಹ ಜೋಕುಗಳು ನಮ್ಮನ್ನು ನಗಿಸುತ್ತವೆ. ಜೋಕುಗಳಲ್ಲಿ ಸಹಜವಾಗಿರುವ ನಮ್ಮ ಎಣಿಕೆಯನ್ನು ತಲೆ ಕಳಗು ಮಾಡುವ ಲಾಜಿಕ್ಕು ನಮ್ಮ ಮೆದುಳಿನಲ್ಲಿ ನಿರ್ದಿಷ್ಟ ಸಂಜ್ಞೆಗಳನ್ನು ಹುಟ್ಟಿಸಿ ನಮ್ಮನ್ನು ನಗಿಸಿಬಿಡುತ್ತದೆ. ಅದರ ಮೇಲಿನ ನಿಯಂತ್ರಣವೆನ್ನುವುದು ಗಾಳಿಯನ್ನು ಮುಷ್ಠಿಯಲ್ಲಿ ಬಂಧಿಸಿದಂತೆಯೇ.
ಈ ಕುಹಕಕ್ಕೂ ಇಂಥದ್ದೇ ಶಕ್ತಿಯಿದೆಯಾ? ಅದು ಎದುರಾಗುವ ಸೂಚನೆ ಸಿಕ್ಕರೂ, ಆ ಕುಹಕವನ್ನು ಸಂಯಮದಿಂದ ಎದುರಿಸುವ ಸಿದ್ಧತೆಯನ್ನು ಮನಸ್ಸು ಮಾಡಿಕೊಂಡರೂ, ಆ ಕಣಿವೆಯಲ್ಲಿ ಬೀಳದಿರುವ ಎಚ್ಚರವನ್ನು ತೆಗೆದುಕೊಂಡರೂ ಎಲ್ಲಾ ಪ್ರಯತ್ನಗಳನ್ನು ಅಪಹಾಸ್ಯಕ್ಕೀಡು ಮಾಡುವಂತೆ ಕುಹಕ ನಮ್ಮನ್ನು ತನ್ನ ಜಾಲಕ್ಕೆಳೆದು ಕೆಡವಿಕೊಂಡು ಬಿಡುತ್ತದೆಯಾ? ಕುಹಕದಲ್ಲಿರುವ ಯಾವುದೋ ಸರಳವಾದ ಲಾಜಿಕ್ಕಿಗೆ ನಮ್ಮ ಮೆದುಳು ನಿರ್ದಿಷ್ಟವಾಗಿ ತೋರುವ ಪ್ರತಿಕ್ರಿಯೆಯೇ ನಮ್ಮಲ್ಲಿ ಸಿಟ್ಟನ್ನು, ಅಸಹನೆಯನ್ನು ಹುಟ್ಟಿಸುತ್ತದೆಯಾ? ನಮ್ಮ ನೆಮ್ಮದಿಯನ್ನು ನಾಶಗೊಳಿಸುತ್ತದೆಯಾ?
ಹೌದೆನ್ನುವುದಾದರೆ, ನಾವು ಹೇಗೆ ನಗುವುದಕ್ಕಾಗಿ ಜೋಕು ಓದುತ್ತೇವೋ ಜೋಕಿನ ವಿಮರ್ಶೆಯನ್ನು ಮಾಡುತ್ತೇವೋ ಹಾಗೆಯೇ ನೆಮ್ಮದಿ ಕಳೆದುಕೊಳ್ಳುವುದಕ್ಕೆ ಕುಹಕಗಳನ್ನು ಎದುರಿಸಬಹುದೇನೋ!
- uniquesupri's blog
- Login or register to post comments
- 365 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ಹಿಡಿಸಿತು. !
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ಏನು ಹಿಡಿಸಿತು?
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ಸುಮ್ನೆ ಹಿಡಿಸಿತು ಎಂದು ಕಮೆಂಟು ಬರೆಯೋದು!
ಹೆ ಹೆ :)
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ಅದಕ್ಕೆ ಕೇಳ್ದೆ.
ಸುಮ್ನೆ ಅಂತಂದ್ರೆ ಚಿಂತಿಲ್ಲ.
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ಚಿಂತಿಲ್ಲ ಅಂದ್ರೇನು? ನನಗೆ ಚಿಂತು ಎಂಬ ಪದ ಗೊತ್ತಿಲ್ಲ.
ನಿಘಂಟು ನೆರವಾಗಲಿಲ್ಲ.
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ಚಿಂತೆ ಇಲ್ಲ ಅನ್ನೋದನ್ನ ನಾನು ಚಿಂತಿಲ್ಲ ಅಂತ ಬಳಸಿದ್ದೀನಿ.
ನಮ್ ದಾವಣಗೆರೆ ಕಡೆ ಭಾಷೆಯಲ್ಲಿ ಚಿಂತೆಯನ್ನ ಚಿಂತಿ ಅಂತಲೂ ಅಂತಾರೆ. ಚಿಂತಿಲ್ಲ ಅಂದ್ರೆ ಚಿಂತೆ ಇಲ್ಲ ಅಂತ.
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ಮತ್ತೆ ಮನಸ್ಯಾಕಿ, ನೋಯುತ್ತಿ ಮುಂತಾದವು ಆಗಿಲ್ಲ?
ನಿಮ್ ಬರಹ ಹಾಗು ಕಮೆಂಟು ಯಾವ ಬಗೆ ಕನ್ನಡದಲ್ಲಿದೆ?
ಬರಹದಲ್ಲಿ ಚಿಂತೆಯಿಲ್ಲ ಅಂತಾನೇ ಇದ್ಯಲ್ಲ?
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
>>> ಮತ್ತೆ ಮನಸ್ಯಾಕಿ, ನೋಯುತ್ತಿ ಮುಂತಾದವು ಆಗಿಲ್ಲ?
ಆಗಬಹುದೇನೋ, ನಾನು ಅಂತಹ ಬಳಕೆಯನ್ನು ಕೇಳಿಲ್ಲ
>>> ನಿಮ್ ಬರಹ ಹಾಗು ಕಮೆಂಟು ಯಾವ ಬಗೆ ಕನ್ನಡದಲ್ಲಿದೆ?
ಕನ್ನಡದಲ್ಲಿರುವ ಬಗೆಗಳೆಷ್ಟು ಎಂಬುದು ನನಗೆ ತಿಳಿದಿಲ್ಲ.
ನಾನು ಓದುವ, ನಾನು ಮಾತನಾಡುವ ಬಗೆಯ ಕನ್ನಡದಲ್ಲಿ ನನ್ನ ಬರಹ ಹಾಗೂ ಕಮೆಂಟುಗಳು ಇರುತ್ತವೆ.
>>> ಬರಹದಲ್ಲಿ ಚಿಂತೆಯಿಲ್ಲ ಅಂತಾನೇ ಇದ್ಯಲ್ಲ?
ಚಿಂತೆಯಿಲ್ಲ ಎಂದೂ ನಾನು ಬಳಸುತ್ತೇನೆ.
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
ಅಯ್ಯೋ ಪಾಪ!
ನಿಮ್ಮ ಕವನ ಚನ್ನಾಗಿದೆ
ಉ: ಕುಹಕಕ್ಕೆ ಮನಸ್ಯಾಕೆ ನೋಯುತ್ತೆ?
:)