ನನ್ನ ಕವಿತೆ
ತಿಣುಕಿ ಕವಿಯಾದೇನು
ಕವಿತೆ ಮಗುವಾಗಬಲ್ಲದೆ
ಶಬ್ಧಗಳು ಶಬ್ಧ ಮಾಡಿದರೆ
ಕವಿತೆ ಸಸಿಯಾಗಬಲ್ಲದೆ
ಕ್ಷಣ ಭಂಗುರ ದಿವ್ಯತೆಗೆ
ಕವಿತೆ ಹೂವಾಗಬಲ್ಲದೇ
ಹಂಬಲಿಸಿ ಪತಿಯಾದೇನು
ಕವಿತೆ ಸತಿಯಾಗಬಲ್ಲದೇ
- uniquesupri's blog
- Login or register to post comments
- 377 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ನನ್ನ ಕವಿತೆ
ನಿನ್ನ ಕವಿತೆಗೆ ನೀ ಭಾವನೆಗಳ
ಜೊತೆಗೆ ನಿನ್ನ ಹೃದಯದ
ಪ್ರೀತಿಯನೂ ಧಾರೆ ಎರೆದು ನೋಡು
ತನ್ನ ಕಂದನ ಮೆಚ್ಚುವ
ಮಮತೆಯ ಆಗರವಾಗು
ನಿನ್ನ ಕವಿತೆ ಮಗುವಾದೀತು
ಪದಗಳು ಬರಿಯ ಶಬ್ದ ಮಾಡಿದರೆ
ಕವಿತೆ ಉಸಿರುಗಟ್ಟಿ ಅಸುನೀಗಬಹುದು
ಸಾಹಿತ್ಯ ಕೃಷಿಗೆ ಪಕ್ವತೆಯ ಗೊಬ್ಬರವೀಯೆ
ಕವಿತೆಯೆಂಬ ಸಸಿ ಬೆಳೆದು ಹೆಮ್ಮರವಾದೀತು
ಭಂಗುರದ ದಿವ್ಯತೆಗಲ್ಲ ಕವಿಯೇ
ಭಾವೆನಗಳ ಕಂಪಿನೊಂದಿಗೆ
ನಿನ್ನೀ ಕವಿತೆ ಹೂವಾಗಬಲ್ಲುದು
ಹಂಬಲಿಸಿ ಪತಿಯಾದರೇನು ಫಲ
ಪೋಷಿಸಿ ಪ್ರೀತಿಸಿ ಬಾಳಿಸುವವನಾಗು
ಕವಿತೆ, ಅಕ್ಕರೆಯ ಸತಿಯೂ ಆದೀತು
ಉ: ನನ್ನ ಕವಿತೆ
ನಿಂತ ನಿಲುವಲ್ಲೇ
ಕವನ ಸೃಜಿಸುವಷ್ಟು
ಫಲವತ್ತಾದ ಭೂಮಿ
ನಾನಲ್ಲ
ಬೀಳಬೇಕು ಎಲ್ಲಿಂದಲೋ
ಹಾರಿದ ಬೀಜ
ಯಾರೋ ಎರೆಯಬೇಕು
ತಣ್ಣಗೆ ನೀರ
ಪೋಷಣೆ ಒದಗಿಸಲು
ನೆಲದೆ ಅಗೋಚರ ಸೈನ್ಯ
ಶಕ್ತಿ ಸಂಚಯಿಸಬೇಕು
ಆದಿತ್ಯನ ಬೆಳ್ಳಿ ಕಿರಣ
ಅರೆಯುವ ಹಲ್ಲುಗಳಿಂದ
ಉಳಿಸಲೊಂದು ಬೇಲಿ
ಬೆನ್ನು ಬಾಗದಿರಲೆಂದೊಂದು
ನಿರ್ಜೀವ ಆಸರೆಗೋಲು
ಜೊತೆಗೆ ಹೋಗಿ
ಹೋಗಿ ಬರುವವರ
ಕಂಡು ನಲಿಯುವವರ
ಇಷ್ಟೇ ಇಷ್ಟು ಪ್ರೀತಿಯ ನೇವರಿಕೆ
ನಿಮ್ಮ ಕವಿತೆಗಳು!
ವಾಹ್,ವಾಹ್ !
ಹೆಗ್ಡೆ, ಸುಪ್ರೀತರು ಕವಿತಾಪ್ರೀತಿ, ಸ್ಪೂರ್ತಿಗಳನ್ನು ಪರಸ್ಪರ ಹಂಚಿಕೊಳ್ಳುವಂತೆ ಕಾಣಿಸುತ್ತಿದೆ.
ಉ: ನಿಮ್ಮ ಕವಿತೆಗಳು!
:)