ಕುಂಟನಿ ಎಂಬ ವಿಸ್ಮಯ
ದ್ವೀಪದ
ನಡುವೆ ನಿಂತು
ಸುತ್ತಲೂ ನೋಡಿದೆ.
ನೀರನ್ನು ದಾಟದೇ
ಇನ್ನೊಂದು ನೆಲ ಮುಟ್ಟಲಾರೆ
ಎಂದು ದ್ವೀಪವೇ
ಹೇಳಿತು.
ಅವಳೇಕೆ ಇವನನ್ನು ಪ್ರೀತಿಸಿದಳು?
ಎಂಬ ಪ್ರಶ್ನೆಗೆ
ಈ ತನಕ
ಕುತೂಹಲ ಮಾತ್ರಾ
ಉತ್ತರವಾಗಿ ಉಳಿದಿದೆ.
ಪ್ರೀತಿಗೆ ಪ್ರಶ್ನೆಗಳೇ ಇರುವುದಿಲ್ಲ.
ಇವುಗಳನ್ನು ಓದಿದ ತಕ್ಷಣ ನನಗೆ ನೆನಪಾಗುವುದುದ್ ಲಂಕೇಶರ ’ನೀಲು’ಗಳು. ಕುಂಟಿನಿಯವರ ಬ್ಲಾಗಿನಲ್ಲಿ ನಾನು ಇಂತಹ ಅಸಂಖ್ಯ ಪದ್ಯವಲ್ಲದ ಪದ್ಯಗಳನ್ನು ಕಂಡಿದ್ದೇನೆ.
ಈ ಕುಂಟಿನಿ ಯಾರು ಎಂಬ ಸಹಜ ಆಸಕ್ತಿಯೊಂದಿಗೆ ಹುಡುಕಾಟಕ್ಕಿಳಿದಾಗ ತಿಳಿದದ್ದು. Most handsome man in the earth - ಎಂಬ ವಿವರಣೆ ಮಾತ್ರ. ಕುಂಟಿನಿ ಎಂಥಾ ಒಳ್ಳೆಯ ಹುಡುಗ ಎಂಬ ಅಭಿಪ್ರಾಯ ಮಾತ್ರ.
ಎಲ್ಲೋ ಕೆಲವೊಮ್ಮೆ ಕುಂಟಿನಿ, ಜಾನಕಿ, ಜೋಗಿ ಗೆಳೆಯರಂತೆ ಕಂಡು ಬಂದರೂ ಕುಂಟಿನಿ ಯಾರು ತಿಳಿಯಲಿಲ್ಲ. ಬಲ್ಲವರು ಈ ಬಲ್ಲಿದನಿಗೆ ಕುಂಟಿನಿಯ ಪರಿಚಯ ಮಾಡಿಕೊಟ್ಟರೆ ಈತ ಧನ್ಯ.
- uniquesupri's blog
- Login or register to post comments
- 1305 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಕುಂಟನಿ ಎಂಬ ವಿಸ್ಮಯ
ಗೋಪಾಲಕೃಷ್ಣ ಕುಂಟಿನಿ ಪುತ್ತೂರಿನ ಪತ್ರ ಕರ್ತ. ವಿಜಯ ಕರ್ನಾಟಕಕ್ಕೆ ಸುದ್ದಿಗಾರ ಆಗಿದ್ದು ನೆನಪಿದೆ. ಅಮೇಲೆನಾಯ್ತು ಎಂದು ಗೊತ್ತಿಲ್ಲ."ಕುಮಾರಧಾರ ಪಾತ್ರ ಬದಲಿಸಿದಾಗ" ಅವರ ಇತ್ತೀಚಿನ ಒಳ್ಳೆಯ ಕತೆಗಳಲ್ಲಿ ಒಂದು. ಜಾನಕಿ ಮತ್ತು ಜೋಗಿ ಒಬ್ಬರೇ. ಅವರೂ ಪುತ್ತೂರಿನವರೆ ಆಗಿರುವುದರಿಂದ ಕುಂಟಿನಿಯಾ ಒಡನಾಡಿಯಾಗಿದ್ದಿರಬಹುದು.
ಉ: ಕುಂಟನಿ ಎಂಬ ವಿಸ್ಮಯ
ಬಾಳಿಗರೇ,
ನಾನು ತಂಬಾ ಹಿಂದೆ ಕುಂಟಿನಿಯವರ ಬ್ಲಾಗು ಓದಲು ಶುರು ಮಾಡಿದ್ದಾಗ ಬರೆದ ಬ್ಲಾಗು ಇದು.
ಕುಂಟಿನಿ ಹಾಗೂ ಜೋಗಿಯವರು ಆಪ್ತ ಗೆಳೆಯರು. ಅವರ ಬರವಣಿಗೆಯ ಶೈಲಿಯೂ ಒಮ್ಮೆಮ್ಮೆ ಒಂದೇ ಅನ್ನಿಸಿಬಿಡುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://ontihakki.wor...
http://kalaravapatri...
http://ekshana.wordp...
http://oshohaadu.wor...