ದೋಣಿ ನಿರ್ಲಿಪ್ತ
ದಡವಿನ್ನೂ ಕಂಡಿಲ್ಲ
ದಿಗಿಲು ನನಗೆ
ದೋಣಿ
ಶುದ್ಧ ನಿರ್ಲಪ್ತ
ಬಿರುಸು ಗಾಳಿಗೆ
ನೂರು ದಿಕ್ಕುಗಳ
ಗಮ್ಯ
ಅಡಿಯ ಅಲೆಗಳಿಗೆ
ಅರ್ಥವಾಗದ
ಮಮತೆ
ಭೋರ್ಗರೆವ ಮಳೆಗೆ
ದಾರಿ ತಪ್ಪಿಸುವ
ತವಕ
ದಡ ಕಾಣಿಸುವ
ಕಂದೀಲ
ಕರುಣೆಗೆ
ಹಾದ ಹಡಗಿಗೆ
ಕೆರಳಿಸುವ
ಗತ್ತು
ಒಬ್ಬಂಟಿ ನಾವಿಕ
ಮನದಲ್ಲಿ
ಸಂಶಯ
ನೆಟ್ಟ ಕಂಗಳಲ್ಲಿ
ಹಸಿವಿನ
ಸಂಕಟ
ಕ್ರೂರ ರಾತ್ರಿಗೆ
ಕೊಲೆಗಾರನ
ಉನ್ಮಾದ
ದೋಣಿ ನಿರ್ಲಿಪ್ತ.
- uniquesupri's blog
- Login or register to post comments
- 338 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ದೋಣಿ ನಿರ್ಲಿಪ್ತ
The Young Man and The Sea !
ಉ: ದೋಣಿ ನಿರ್ಲಿಪ್ತ
ಕವಿ ಯಂಗ್ ಮ್ಯಾನ್ ಎಂದು ಹೇಗೆ ನಿರ್ಧರಿಸಿದಿರಿ?
ಉ: ದೋಣಿ ನಿರ್ಲಿಪ್ತ
ಸಪ್ರೀತ್, ದೋಣಿ ನಿರ್ಲಿಪ್ತ ಎಂಬುದೊಂದೇ ಇಲ್ಲಿರುವ ಆಶಾವಾದ; ಉಳಿದಂತೆ ನಿರಾಶಾ ವಾದವೇ ತುಂಬಿವೆಯಲ್ಲಾ!? ಆದರೂ ಕವನ ಸರಳ ಹಾಗೂ ಸೊಗಸಾಗಿದೆ. ನನ್ನ ಹಾರೈಕೆ ಇಷ್ಟೆ: `ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ!'
...ಕಡಲೂ ನಿನ್ನದೇ; ಹಡಗೂ ನಿನ್ನದೇ; ಮುಳುಗದಿರಲಿ ಬದುಕು...!
ಉ: ದೋಣಿ ನಿರ್ಲಿಪ್ತ
ಕ್ರಿಕೆಟ್ ಕಪ್ತಾನನ ಬಗ್ಗೆ ಕವನ ಅಂದು ಕೊಂಡೆ.
ಉ: ದೋಣಿ ನಿರ್ಲಿಪ್ತ
:)
ಆತನ ಬಗ್ಗೆಯೂ ಹೀಗೇ ಹೇಳಬಹುದು : ಧೋನಿ ನಿರ್ಲಿಪ್ತ!
ಸಕತ್ ಕೂಲ್ ಕ್ಯಾಪ್ಟನ್ ಅವ್ನು.
ಉ: ದೋಣಿ ನಿರ್ಲಿಪ್ತ
ಈ ಕವಿತೆಯಲ್ಲಿ ನಿಮಗೆ ನಿರಾಶಾವಾದ ಕಂಡಿತೇ? ಕಂದೀಲ ಕರುಣೆ, ಅಲೆಗಳ ಮಮತೆ ಇವನ್ನೂ ಪರಿಗಣಿಸಿ. ಹೌದು ದೋಣಿ ನಿರ್ಲಿಪ್ತವಾಗಿ ಸಾಗಿಯೇ ಸಾಗುತ್ತದೆ. ಅದೇ ನನ್ನ ಕವಿತೆಯ ಭಾವ ಆದರೆ ಅದು ತಲುಪುವುದಕ್ಕೆ ಒಂದು ದಡವಿದೆಯೇ ಎನ್ನುವುದು ನನ್ನ ಪ್ರಶ್ನೆ!
ಉ: ದೋಣಿ ನಿರ್ಲಿಪ್ತ
ಸುಪ್ರೀತ್, ಏನು ಬೆಂಗ್ಳೂರಿನ ಛಳಿಯಲ್ಲಿ ಸಿಕ್ಕಾಪಟ್ಟೆ ಕವನಗಳನ್ನು ಬರೆಯೋಕ್ಕೆ ಶುರು ಮಾಡ್ಬಿಟ್ಟಿದ್ದೀರಲ್ಲಾ? ಯಾರು ನಿಮ್ಮ ಕವನಗಳಿಗೆ ಸ್ಫೂರ್ತಿ ? ಯಾಕೋ ಒಂದು ಸಣ್ಣ ಅನುಮಾನ ಕಾಡ್ತಾ ಇದೆ ಕಣ್ರೀ, ಇರ್ಲಿ, ಪರ್ವಾಗಿಲ್ಲ, ಆದ್ರೆ ನಿಮ್ಮ ಕವನಗಳು ಒಂದಕ್ಕಿಂತ ಒಂದು ಚೆನ್ನಾಗಿ ಬರ್ತಾ ಇವೆ. ಸಕತ್! ಹೀಗೇ ಮುಂದುವರೆಸಿ, ನಿಮ್ಮ ಕವನಗಳ ಹಬ್ಬವನ್ನ.
ಉ: ದೋಣಿ ನಿರ್ಲಿಪ್ತ
ಇದು ಹಿಂದೆಯೇ ಬರೆದಿದ್ದ ಕವಿತೆ. ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿತ್ತು. ಸಂಪದದಲ್ಲಿ ಪ್ರಕಟಿಸಿರಲಿಲ್ಲ.
>>> ಯಾಕೋ ಒಂದು ಸಣ್ಣ ಅನುಮಾನ ಕಾಡ್ತಾ ಇದೆ ಕಣ್ರೀ, ಇರ್ಲಿ, ಪರ್ವಾಗಿಲ್ಲ,
ನಿಮ್ಮನುಮಾನ ನನಗರ್ಥವಾಯಿತು. ಹಾಗೇನಿಲ್ಲ.
ಉ: ದೋಣಿ ನಿರ್ಲಿಪ್ತ
ತುಂಬಾ ಚೆನ್ನಾಗಿ ಬರೆದಿದ್ದೀರಿ ಸುಪ್ರೀತ್. ಒಳ್ಳೆ ಒಳ್ಳೆಯ ಕವನಗಳು ಮೂಡಿಬರುತ್ತಿವೆ. ‘ಬಿರುಸು ಗಾಳಿಗೆ ನೂರು ದಿಕ್ಕುಗಳ ಗಮ್ಯ’ ತುಂಬಾ ಇಷ್ಟವಾದ ಸಾಲು :-)
ಉ: ದೋಣಿ ನಿರ್ಲಿಪ್ತ
ನೀಡಿದ ಖುಷಿ ಹೊಸತಾದರೂ
ಕವಿತೆಗೆಲ್ಲೋ ಹಳೆಯ ಪುಟಗಳ ಗಂಧ
ಮತ್ತೆ ಮೆಚ್ಚುವ ತವಕ ಮನಕ್ಕೆ
ಆದರೆ ಕವಿತೆಗೆ ಹೊಗಳಿಕೆ
ಒಮ್ಮೆ ಕೇಳಿದ್ದೇ ಅಲ್ಲವ ಎಂಬ ಅಸಡ್ಡೆ
ಪುನಃ ಪುನಃ ಓದಿ ತೃಪ್ತವಾಯ್ತು ಮನಸು
ಆದರೆ ಕವಿ(ತೆ) ನಿರ್ಲಿಪ್ತ!
ಉ: ದೋಣಿ ನಿರ್ಲಿಪ್ತ
ಹೌದು ಸರಿಯಾಗಿ ಗುರುತಿಸಿದ್ದೀರಿ ಇದು ಹಳೆಯ ಕವಿತೆ.
ನಿಮಗೆ ಇದು ನೀಡಿದ ಖುಶಿ ಹೊಸತು ಎಂಬುದನ್ನು ಕೇಳಿ ಸಮಾಧಾನವಾಯ್ತ.
ಉ: ದೋಣಿ ನಿರ್ಲಿಪ್ತ
ರಂಜಿತ್, ನಿಮ್ಮ ಕವಿತೆ ಚೆನ್ನಾಗಿದೆ. ಹಾಡು ಹಳೆಯದಾದರೇನು, ಭಾವ ನವನವೀನ ಎಂಬ ಹಾಡು ನೆನಪಾಯಿತು
ಉ: ದೋಣಿ ನಿರ್ಲಿಪ್ತ
ಧನ್ಯನಾದೆ..:)