ಕನ್ನಡದ ಬ್ಲಾಗು ಎಡಿಟರ್‌ಗಳು ಯಾವುವು?
ಕನ್ನಡವನ್ನು ಸಂಪೂರ್ಣವಾಗಿ ಬೆಂಬಲಿಸುವಂತಹ ಬ್ಲಾಗ್ ಎಡಿಟರ್‌ಗಳು ಯಾವುವು ಎಂದು ತಿಳಿಯಬಯಸುತ್ತೇನೆ.
ಫೈರ್ ಫಾಕ್ಸ್ ಮಾದರಿಯಲ್ಲಿರುವ ಫ್ಲಾಕ್‌ನ್ನು ಬಳಸಿ ನೋಡಿದೆ ಆದರೆ ಅದರ ಕನ್ನಡ ಸರಿಯಾಗಿ ಕಾಣುವುದಿಲ್ಲ. ಮತ್ತೆ ಹಲವಾರು ತೊಂದರೆ ಕಾಣಿಸುತ್ತದೆ. ಮೈಕ್ರೊಸಾಫ್ಟ್ ವರ್ಡ್ ಕೂಡ ಅಷ್ಟು ಸಹಾಯಕವೆನಿಸಲಿಲ್ಲ.
ಬ್ಲಾಗ್ ಎಡಿಟರ್ ಯಾವುದಾದರೆ ಇದ್ದರೆ ತಿಳಿಸಿ...

- uniquesupri ರವರ ಬ್ಲಾಗ್
- Login or register to post comments
- 324 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಕನ್ನಡದ ಬ್ಲಾಗು ಎಡಿಟರ್‌ಗಳು ಯಾವುವು?
ಬರಹ ಒಂದು ಒಳ್ಳೆಯ ಬ್ಲಾಗ್ ಎಡಿಟರ್. ನೀವು, ಬರಹ IME ಕೂಡ ಬಳಸಬಹುದು. IME ಅಥವಾ Input Method Editor, ಇಂದ ನೇರವಾಗಿ ಬ್ಲಾಗ್ ಬರೀಬಹುದು...
ಲಿಂಕುಗಳು :
www.baraha.com
www.baraha.com/BarahaIME.htm
ಉ: ಕನ್ನಡದ ಬ್ಲಾಗು ಎಡಿಟರ್‌ಗಳು ಯಾವುವು?
ನಿಮ್ಮ ಪ್ರತಿಕ್ರಿಯೆಗೆ ನಾನು ಆಭಾರಿ. ಕನ್ನಡವನ್ನು ಟೈಪಿಸಲು ನಾನು ಬರಹವನ್ನೆ ಬಳಸುತ್ತಿದ್ದೇನೆ. ತುಂಬಾ ಸಲೀಸಾಗಿದೆ. ಆದರೆ ಕನ್ನಡದಲ್ಲಿ ಬರೆದ ಬ್ಲಾಗ್ ಬರಹವನ್ನು ವರ್ಡ್ ಪ್ರೆಸ್ ಅಥವಾ ಬ್ಲಾಗರ್ನಂತಹ ಸರ್ವೀಸ್ ಪ್ರೊವೈಡರ್ ಗಳಿಗೆ ಪೋಸ್ಟ್ ಮಾಡಲು ಒಂದು ಎಡಿಟರ್ ಬೇಕಿತ್ತು. ಈಗ ಒಂದೊಂದು ಬ್ಲಾಗಿನ ಅಕೌಂಟು ತೆರೆದು ಅಲ್ಲೇ ಪೇಸ್ಟ್ ಮಾಡುವ ಕ್ರಮ ಅಳವಡಿಸಿಕೊಂಡಿದ್ದೇನೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
ಉ: ಕನ್ನಡದ ಬ್ಲಾಗು ಎಡಿಟರ್‌ಗಳು ಯಾವುವು?
ಸುಪ್ರಿಯವರೇ, ನೀವು ಬರಹ ಬಳಸುತ್ತಿರೋದೇನೋ ಸರಿ, ಅದರಲ್ಲಿ Baraha Direct ಅಂತ ಇದೆ ನೋಡಿ. Windows ನಲ್ಲಿ Start ->Baraha -> Baraha Direct ಹೋಗಿ, Baraha Direct ಮೇಲೆ ಕ್ಲಿಕ್ ಮಾಡಿ. ನಿಮಗೆ System tray(ನಿಮ್ಮ ಡೆಸ್ಕಟಾಪ್‍ನ ಬಲ-ಕೆಳಗಿನ ಮೂಲೆಯಲ್ಲಿ ಚಿಕ್ಕ ಚಿಕ್ಕ ಐಕಾನುಗಳು ಕಣ್ತಾವಲ್ಲ, ಅದು)ನಲ್ಲಿ ಒಂದು ಹಳದಿ ಬಣ್ಣದ ಐಕಾನ್ ಕಾಣುತ್ತೆ. ಅದರ ಮೇಲೆ ರೈಟ್ ಕ್ಲಿಕ್ ಮಾಡಿ, Language > Kannada > kannada unicode ಮೇಲೆ ಕ್ಲಿಕ್ ಮಾಡಿ. ಅಸ್ಟೇ. ನೀವು ಈಗ ಯಾವುದೇ ಎಡಿಟರಿನಲ್ಲಿ ಹಾಗೇ ಡೈರೆಕ್ಟಾಗಿ ಬರಿರಿ, ಬರುತ್ತೆ. ಬರಲಿಲ್ಲ ಅಂದ್ರೆ ಹೇಳಿ
ಉ: ಕನ್ನಡದ ಬ್ಲಾಗು ಎಡಿಟರ್‌ಗಳು ಯಾವುವು?
ನನಗೆ ಅರ್ಥ ಆಗಿರುವ ಪ್ರಕಾರ, ನಿಮಗೆ ಬರೆದ ಲೇಖನ ಅಥವ ಬ್ಲಾಗ್ ಅನ್ನು ಪೋಸ್ಟ್ ಮಾಡುವ ಮುನ್ನ ಸಂಗ್ರಹಿಸಿಡಲು/ಬದಲಾಯಿಸಲು ಒಂದು ತಂತ್ರಾಂಶ ಬೇಕಾಗಿದೆ ಅಲ್ಲವೆ?
೧. ನೋಟ್ ಪ್ಯಾಡ್
options ನಲ್ಲಿ font ಅನ್ನು ತುಂಗಾ ಅಂತ ಸೆಲೆಕ್ಟ್ ಮಾಡಿ, ಬರಹ ಡೈರೆಕ್ಟ್ ಇಂದ ಯುನಿಕೋಡ್ ನಲ್ಲಿ ಟೈಪಿಸಿ. save as ಮಾಡುವಾಗ ಯುನಿಕೋಡ್ option ಸೆಟ್ ಮಾಡಿ.
೨. html ಎಡಿಟರ್
ಒಂದು ನೋಟ್ ಪ್ಯಾಡ್ ಅನ್ನು ಓಪನ್ ಮಾಡಿ ಈ ಕೆಳಗಿನಂತೆ ಟೈಪಿಸಿ html file ಆಗಿ ಸೇವ್ ಮಾಡಿ.(Eg Save As-> editor.html)
<textarea style="width:95%;height:100%;border:1px solid black;">
</textarea>
ಈಗ ಸೇವ್ ಮಾಡಿದ ಪುಟವನ್ನು IE/Firefox ನಲ್ಲಿ ಓಪನ್ ಮಾಡಿದಾಗ ಒಂದು ಎಡಿಟೇಬಲ್ ಏರಿಯಾ ಸಿಗುತ್ತೆ, ಬರಹ ಉಪಯೋಗಿಸಿ ಅದರಲ್ಲಿ ಟೈಪಿಸಬಹುದು. ಆದರೆ ಸೇವ್ ಮಾಡಲು ನೀವು ಬರೆದಿದ್ದನ್ನು ಕಾಪಿ ಮಾಡಿ ನೋಟ್ ಪ್ಯಾಡ್ ನಲ್ಲಿ ಸೇವ್ ಮಾಡಿಡ ಬಹುದು.
ಇನ್ನೂ ಬಹಳ ವಿಧಾನಗಳಿವೆ, ನಿಮಗೆ ಈ ವಿಧಾನಗಳಿಂದ ಪ್ರಯೋಜನ ಆಗದಿದ್ದರೆ ತಿಳಿಸಿ... ಉಳಿದದ್ದೂ ಪ್ರಯತ್ನಿಸೋಣ.
ನಿಮ್ಮವ
ಅರವಿಂದ
http://www.belaku.net
ಉ: ಕನ್ನಡದ ಬ್ಲಾಗು ಎಡಿಟರ್‌ಗಳು ಯಾವುವು?
_ನಿಮ್ಮೆಲ್ಲರ ಸಕಹೆಗಳಿಗೆ ಧವ್ಯವಾದಗಳು.
ನನಗೆ ಬರಹ ಡೈರೆಕ್ಟ್ ಪರಿಚಯವಿದೆ. ಕನ್ನಡದಲ್ಲಿ ಟೈಪಿಸಿಟ್ಟುಕೊಂಡ ಮಾಹಿತಿಯನ್ನು ನಮ್ಮ ಬ್ಲಾಗಿಗೆ ಲಾಗಿನ್ ಆಗಿ ಅಲ್ಲಿ ಪೋಸ್ಟ್ ಮಾಡದೆ ನೇರವಾಗಿ ಯಾವುದಾದರೂ ಎಡಿಟರ್ ಬಳಸುವ ಮೂಲಕ ಒಂದಕ್ಕಿಂತ ಹೆಚ್ಚು ಬ್ಲಾಗುಗಳಿಗೆ ಪೋಸ್ಟ್ ಮಾಡುವ ಸಮಸ್ಯೆ ನನ್ನದು. ಇದಕ್ಕೆ ಫ್ಲಾಕ್ ಎಂಬ ಹೆಸರಿನ ಎಡಿಟರ್ ಸಹಾಯಕವಾಗಿತ್ತು ಆದರೆ ಕನ್ನಡ ಅಂದರೆ ಅದಕ್ಕೆ ಯಾಕೂ ಸರಿ ಕಾಣಲಿಲ್ಲ.
ಈಗ ಗೂಗಲಿಸಿ ಇದನ್ನು ಪಡೆದಿದ್ದೇನೆ: http://www.zoundry.com/
______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com