ವರುಣ ಭಟ್
ಬ್ಲಾಗ್ ಪದದ ಅರ್ಥ ಏನು?
ವೇದಿಕೆ ಅಂತ ಇರಬಹುದೇ?
ಒಂದು ಕಹಿ ಅನುಭವ
ನಿನ್ನೆ ಒಂದು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಹೆಸರು "ಹೋಮ್ ನೀಡ್ಸ್" ಅಂತ.
ನನ್ನ ಮನೆ ಅಲ್ಲೆ ಹತ್ತಿರ ಇರೋದ್ರಿಂದ, ವಾರಕ್ಕೆ ೨-೩ ಸಲ ಸಾಮಾನು ತರಲು ಹೋಗುತ್ತೇನೆ ಅಲ್ಲಿಗೆ. ಅಲ್ಲಿ ಇರೋ ಕೆಲಸದವರು ಪರ್ವಾಗಿಲ್ಲ ಅನ್ನೋ ಹಾಗೆ ಕನ್ನಡ ಮಾತಾಡ್ಥಾ ಇದ್ರು. ನಾನು ಹೆಚ್ಚು ಪ್ರಶ್ನೆ ಕೇಳ್ತಾ ಇರಲಿಲ್ಲ ಅವರಿಗೆ, ಏನು ಬೇಕೋ ಅದನ್ನು ತಗೊಂಡು ಬರ್ತಾ ಇದ್ದೆ.
ಆದರೆ ನಿನ್ನೆ ನಾನು ಅಮ್ಮನ ಜೊತೆ ಹೋಗಿದ್ದೆ ಅಲ್ಲಿಗೆ. ಅಮ್ಮ ಅಲ್ಲಿದ್ದ ಒಂದು ತೋರಣದ ಬಗ್ಗೆ ವಿಚಾರಿಸೋಕೆ ಹೇಳಿದ್ರು. ನಾನು ಅಲ್ಲಿದ್ದ ಒಬ್ಬ ಕೆಲಸದವನನ್ನು ಕೇಳಿದೆ, ಅವನು ಇನ್ನೊಬ್ಬನನ್ನು ಕರೆದ, ಆ ಕೆಲಸದವನು ಇನ್ನೊಬ್ಬನನ್ನು ಕರೆದ. ೨-೩ ಜನ ಏನೋ ಚರ್ಚೆ ಮಾಡೋಕೆ ಶುರು ಮಾಡಿದ್ರು. ನಂಗೆ ಆಮೇಲೆ ಗೊತ್ತಾಯ್ತು. ಅವರ್ಯಾರಿಗು ನಾನು ಹೇಳಿದ್ದು ಅರ್ಥ ಆಗಿರ್ಲಿಲ್ಲ.
. ಆ ಅಂಗಡಿಯಲ್ಲಿ ಇದ್ದವರೆಲ್ಲ ಮಲಯಾಳಿಗಳು. ಇಷ್ಟು ದಿನ ಅವರು ನನ್ನ ಹತ್ತಿರ ಮಾತಾಡ್ತಾ ಇದ್ದಿದ್ದು ಬರಿ "ಹೋಗಿ", "ಬನ್ನಿ" ಇತ್ಯಾದಿ ಪದಗಳು ಅಷ್ಟೆ. ಇಲ್ಲಿ ಬಂದು ಇಷ್ಟು ದಿನ ಆದ್ರು ಒಂದು ಭಾಷೆ ಕಲಿಯೋ ಸೌಜನ್ಯ ಇಲ್ಲ ಅವರಿಗೆ.
ಬೆಂಗಳೂರಲ್ಲಿ (ಕರ್ನಾಟಕದ ರಾಜಧಾನಿ) ಬದುಕಲು ಕನ್ನಡದ ಅವಶ್ಯಕತೆಯೇ ಇಲ್ಲ ಅಂತ ಅನ್ನಿಸುತ್ತಿದೆ. ಇಲ್ಲೆ ಹುಟ್ಟಿ ಬೆಳೆದ ಎಷ್ಟೋ ಜನ ಪರ ಭಾಷೆಯವರು ಕನ್ನಡ ಕಲಿಯೋದಿಲ್ಲ, ಏಕೆಂದರೆ ಕನ್ನಡ ಇಲ್ಲದೇ ಬೆಂಗಳೂರಲ್ಲಿ ಆರಾಮಾಗಿ ಜೀವನ ನಡೆಸಬಹುದು.
ಹೀಗೆ ಆದ್ರೆ ಬೆಂಗಳೂರು ಗತಿ ಏನಾಗುತ್ತೋ ಗೊತ್ತಿಲ್ಲ ??

- varunbhatbm ರವರ ಬ್ಲಾಗ್
- Login or register to post comments
- 287 hits
- Email this blog





RSS:
ಪ್ರತಿಕ್ರಿಯೆಗಳು
ಉ: ಒಂದು ಕಹಿ ಅನುಭವ
ಹೋಮ್ ನೀಡ್ಸ್ - ಬನಶಂಕರಿ? ಇದು ಮಲ್ಯಾಳಿಗಳ ಸೂಪರ್ ಮಾರ್ಕೆಟ್ ಚೇಯ್ನು.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಒಂದು ಕಹಿ ಅನುಭವ
ಓಹ್... ಮಾರ್ಕೆಟ್ ಚೇಯ್ನಾ...??
ನಾನು ಹೇಳಿದ್ದು ಬಿ.ಟಿ.ಎಂ ಮಾರ್ಕೆಟ್...
ಲಾಭ ಮಾಡ್ಕೊಳ್ಳೋಕೆ ಬೇಕು ಬೆಂಗಳೂರು... ಭಾಷೆ ಮಾತ್ರ ಬೇಡ.
ವರುಣ ಭಟ್
ಉ: ಒಂದು ಕಹಿ ಅನುಭವ
ಬೆಂಗಳೂರಿನಲ್ಲಿ ಕನ್ನಡ ಉಳಿಸಿ ಅನ್ನೊ ಕೂಗು ಬಹಳ ಹಿಂದಿನಿಂದ ಇದೆ. ಕೂಗು ಜೋರಾದಷ್ಟು ಕನ್ನಡಕ್ಕೆ ಅವಮಾನ, ಅನಾದರ, ಅಪಚಾರ ಹೆಚ್ಹುತ್ತಿದೆ. ಅದರಲ್ಲೂ ಬೆಂಗಳೂರೀಗ "ಮೆಟ್ರೋ" ಎಂದು ಬಿಂಬಿಸಲ್ಪಡುತ್ತಿದೆ, ಅಲ್ಲಿಗೆ ಕನ್ನಡ ಪರದ ಕೂಗು, ಕೇವಲ ಬಾವಿಯಲ್ಲಿಯೇ ತಿರುಗುತ್ತಿರುವ, ಮೇಲ್ಬರಲು ಚೈತನ್ಯವಿರದ ಧ್ವನಿ ತರಂಗಗಳು ಆಗಬಹುದೆ ವಿನ: ಮತ್ತೇನೂ ಆಗಲಾರದು, ಎಂಬ ಆತಂಕವಿದೆ. ಇರಲಿ, ಇಂಥ ಪ್ರಸಂಗಗಳನ್ನು, ಕನ್ನಡಿಗರಾಗಿಯು ಕನ್ನಡ ಮಾತನಾಡಲೊಲ್ಲದ ಕೆಲವರ ಮೇಲೆ ಅಲ್ಪ ಪ್ರಭಾವ ಬೀರಿದರು ಸಾಕು.
ಉ: ಒಂದು ಕಹಿ ಅನುಭವ
ಹೌದು... ನಮ್ಮ ಸ್ನೇರಿತರಲ್ಲೇ ಎಷ್ಟು ಜನ ಕನ್ನಡ ಬಂದರೂ ಕೂಡ, ತಮಿಳು ಅಥವ ತೆಲುಗುನಲ್ಲಿ ಮಾತಾಡುತ್ತಾರೆ...
ಅಂಥವರಿಗೆ ಎಂದೂ ಬುಧ್ಧಿ ಬರೋದಿಲ್ಲ ...
-- ವರುಣ ಭಟ್