ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Vasanth Kaje ರವರ ಬ್ಲಾಗ್

ರಿಮೋಟ್ ಅರಣ್ಯೀಕರಣ (ಭಾಗ ೨)

December 2, 2007 - 6:21pm — Vasanth Kaje

ನನ್ನ ಈ (http://www.sampada.net/blog/vasanth-kaje/29/11/2007/6456) ಬ್ಲಾಗಿಗೆ ಹಲವಾರು ಧನಾತ್ಮಕ ಪ್ರತಿಕ್ರಿಯೆಗಳೂ, ತೀವ್ರ ಋಣಾತ್ಮಕ ಪ್ರತಿಕ್ರಿಯೆಗಳೂ ಬಂದಿವೆ. ಎಲ್ಲರಿಗೂ ವಂದನೆಗಳು.
hpn, ಫೊಟೊ ಮೇಲೆ ಕಟ್ ಆಗಬಾರದಿತ್ತು ಅನ್ನುವುದು ನಿಜ. ನನಗೇ ಹಾಗೆ ಅನ್ನಿಸಿದೆ. ನೀವು ಚಿತ್ರಗಳನ್ನು ಚೆನ್ನಾಗಿ ವಿಮರ್ಶಿಸುತ್ತೀರಿ.
ಮುರಳಿಯವರ ಪ್ರತಿಕ್ರಿಯೆಯ ಬಗ್ಗೆ, ಸ್ವಲ್ಪ ಬರೆಯುವುದು ಇದೆ. ಆದ್ದರಿಂದ ಇದನ್ನು ಹೊಸ ಬ್ಲಾಗ್ ಆಗಿ ಪೋಸ್ಟುತ್ತಿದ್ದೇನೆ.
ಮುಂದುವರೆದ ದೇಶಗಳು ಕಲ್ಮಶವನ್ನು ನಮ್ಮಲ್ಲಿಗೆ ಸಾಗಹಾಕುತ್ತವೆ ಎನ್ನುವುದನ್ನು ನಾನೂ ಕೇಳಿದ್ದೇನೆ. ಸುಧಾದ ಸುದ್ದಿ ಸ್ವಾರಸ್ಯದಲ್ಲಿ ಓದಿದ ನೆನಪು. ತಮಿಳ್ನಾಡಿನಲ್ಲಿ ಪ್ರಪಂಚದಲ್ಲಿಯೇ ಅತಿ ದೊಡ್ಡ ಪಾದರಸ ಆಧಾರಿತ ಥರ್ಮಾಮೀಟರ್ ಕಾರ್ಖಾನೆ ಇದೆಯಂತೆ - ಸಂತೋಷ ಪಡುವ ವಿಷಯವಲ್ಲ - ಏಕೆಂದರೆ, ಮುಂದುವರೆದ ದೇಶಗಳು ಪಾದರಸದ ಉಪಯೋಗವನ್ನು ಬಿಟ್ಟು ಬೇರೇನೋ ಉಪಯೋಗಿಸಿದ ಥರ್ಮಾಮೀಟರ್ ಉತ್ಪಾದಿಸುತ್ತಿವೆ ಮತ್ತು ಅಲ್ಲಿಂದ ಪಾದರಸ (ಇತರ ಮೂಲಗಳಿಂದ ಬಿಸಾಡಲ್ಪಟ್ಟದ್ದು) ನಮ್ಮಲ್ಲಿಗೆ ರಫ್ತಾಗುತ್ತಿದೆ!. ಆದ್ದರಿಂದ ಮುರಳಿಯವರ ಈ ಆರೋಪವನ್ನು ಅಲ್ಲಗಳೆಯಲಾಗದು.
ಆದರೆ, ನನ್ನ ಗೆಳತಿ ರಶ್ಮಿಯ ಪ್ರಾಮಾಣಿಕ ಮತ್ತು ನಿಷ್ಕಲಂಕವಾದ ಹಸುರು ಪ್ರೀತಿಯನ್ನು ನೀವು ಗುರುತಿಸಿಲ್ಲ ಎಂಬುದು ನನಗೆ ಬಹಳ ನೋವು ತಂದಿದೆ. ಕರ್ನಾಟಕದ ಕೊಡಗಿನಲ್ಲಿ ಹುಟ್ಟಿ ಬೆಳೆದು ಈಗ ಹೆಚ್ಚಿನ ಕಲಿಕೆ ಮತ್ತು ಅವಕಾಶಗಳ ನಿಮಿತ್ತ ಅಮೆರಿಕೆಯಲ್ಲಿರುವ ಅವಳಿಗೆ ಎಲ್ಲಿಯೋ ದೂರದ ಅಮೆರಿಕದ ಕಾಡುಗಳಲ್ಲಿ ಗಿಡನೆಡುವುದು ಖಂಡಿತ ಸಂತೃಪ್ತಿ ನೀಡಲಾರದು. ಆದ್ದರಿಂದ ಅವಳು ನನ್ನ ಮೂಲಕ ಗಿಡ ನೆಡುವ ಕಾರ್ಯಕ್ಕೆ ಹೊರಟಿದ್ದಾಳೆಯೇ ಹೊರತು, ಅವಳಿಗೆ ಅಮೆರಿಕ ಮಾಡುವ ತಪ್ಪುಗಳ ಬಗ್ಗೆ ಯಾವುದೇ ಪಶ್ಚಾತ್ತಾಪ ಇಲ್ಲ!. ಏಕೆಂದರೆ ಅವಳು ಭಾರತೀಯಳು.
ಅಲ್ಲದೆ,
"ಅದೂ ಅಲ್ಲದೇ ಇವೆಲ್ಲಾ "ಪಾಶ್ಚಾತ್ತ್ಯ ದೇಶದ ಮನೋಬುದ್ಧಿಯ" ಪಶ್ಚಾತ್ತಾಪದ ಕಾರ್ಯಗಳೇ ಹೊರತು , ದಾರಿ/ದರ್ಶನ ಮೂಡಿಸುವ ಕೆಲಸಗಳಲ್ಲಾ.." -
ಒಳ್ಳೆಯ ವಿಷಯಗಳನ್ನು ನಾವು ಯಾರಿಂದಲಾದರೂ ಕಲಿಯಬಹುದು; ಪಾಶ್ಚಾತ್ಯರು ಪಶ್ಚಾತ್ತಾಪ ಪಟ್ಟು ಯಾವುದಾದರೂ ಒಳ್ಳೆಯ ಕೆಲಸವನ್ನು ಮಾಡಿದರೂ ಸರಿಯೇ - ಅದು ಸರಿಯಾದ ದಾರಿಯೆಂದಾದರೆ ಅನುಸರಣೀಯ.
ಹಾಗೂ,
"ಆಮೇಲೆ ಮರ ಗಿಡ ಬೆಳೆಸೋಕ್ಕೆ "ಡಾಲರ್ " ಸಹಾಯ ಬೇಕಿಲ್ಲಾ ಅ೦ದ್ಕೊ೦ಡಿದ್ದೇನೆ."
ನಾನು ’ಅಮೆರಿಕದವರು ದುಡ್ಡು ಕೊಟ್ಟು ನಾವು ಗಿಡ ಬೆಳೆಸುವ’ ಒಂದು general model of afforestation ಅನ್ನು ಇಲ್ಲಿ advocate ಮಾಡಿಲ್ಲ. ನನ್ನ ಗೆಳತಿ ರಶ್ಮಿ ತನ್ನೂರಿನಲ್ಲಿ ಈ ರೀತಿ ಗಿಡ ಬೆಳೆಸಲು ಬಯಸುತ್ತಾಳೆ ಎಂದಷ್ಟೇ ಹೇಳಿದ್ದೇನೆ.
ಆದರೆ, ಇನ್ಯಾರಾದರೂ ಪ್ರಾಮಾಣಿಕವಾಗಿ ಸದುದ್ದೇಶದಿಂದ ಸಹಾಯ ಮಾಡಲು ಬಂದರೆ ನಾವು ಏಕೆ ಬೇಡ ಎನ್ನಬೇಕು?. ನಮ್ಮ ಸಂಪದದಲ್ಲಿ ’ನಿಮ್ಮ ಸಹಾಯದ ಅಗತ್ಯವಿದೆ’ ಎಂದು ಬರೆದು ಸಂದಾಯವಾದ ಮೊತ್ತವನ್ನು ’ಡಾಲರ್’ ನಲ್ಲಿ ಬರೆದಿದೆ. ಭಾರತೀಯರು ಮಾತ್ರ (ಬಹುಶ: ಕನ್ನಡಿಗರು ಮಾತ್ರ!) ಸಹಾಯ ಮಾಡಬಹುದು ಎಂದು ಬರೆದಿದೆಯೇ?. ಒಳ್ಳೆಯ ಕೆಲಸಕ್ಕೆ ಸಹಾಯ ಎಲ್ಲಿಂದಾದರೂ ಹರಿದು ಬರಲಿ, ನಮಗೇನು?. ನೀವು ಈ ಬಗ್ಗೆ ಸುಮ್ಮನೆ ಮಕ್ಕಳಂತೆ ರೊಚ್ಚಿಗೇಳುತ್ತಿದ್ದೀರಿ.
"ಪ್ರಕೃತಿಗೆ ತನ್ನದೇ ಆದ ಶಕ್ತಿ ಚೈತನ್ಯವಿದೆ - ಗಮನಿಸಿ."
ಇದು ನನಗೆ ಅತ್ಯಂತ ಆತಂಕ ಉಂಟು ಮಾಡಿದ ವಾಕ್ಯ. ನೀವೇನನ್ನುತ್ತೀರಿ?. ಅರಣ್ಯ ನಾಶ ಆಗುತ್ತಾ ಹೋಗಲಿ, ಕೈಕಟ್ಟಿ ಕೂರೋಣ ಅನ್ನುತ್ತೀರೋ?. ಪ್ರಕೃತಿ ತನ್ನಿಂತಾನಾಗಿ ಸರಿಪಡಿಸಿಕೊಳ್ಳ ಬಲ್ಲದು - ಆದರೆ ಅವಳಿಗೆ ತನ್ನದೇ ಆದ ಒಂದು ಮಿತಿ ಇದೆ. ನಿನ್ನೆ London eye ಮೇಲೆ ನಿಂತಿದ್ದೆ, ಕಣ್ಣಿಗೆ ಕಾಣಿವಷ್ಟು ದೂರವೂ ಮಾನವ ನಿರ್ಮಿತ! (ಕಟ್ಟಡಗಳು, ವಾಹನಗಳು ಇತ್ಯಾದಿ). ಈ ಸಂಖ್ಯೆಯಲ್ಲಿ ಇನ್ನಾವ ಪ್ರಾಣಿ/ಪಕ್ಷಿ/ಗಿಡ/ಮರ ಭೂಮಿಯಲ್ಲಿ ಹಬ್ಬಿದೆ?.ಪ್ರಕೃತಿ ತಾನೇ ಇಷ್ಟೆಲ್ಲವನ್ನು ಹೇಗೆ ಸರಿಪಡಿಸಿಕೊಂಡಾಳು?.
ಅಲ್ಲದೆ, ನಿಮ್ಮ ಈ ವಾಕ್ಯ ’ನಾವು active ಆಗಿ ಇವನ್ನೆಲ್ಲ ಸರಿಪಡಿಸಬೇಕಾಗಿಲ್ಲ, ಪ್ರಕೃತಿ ತಾನೇ ಮಾಡಿಯಾಳು’ ಎಂಬರ್ಥ ದಲ್ಲಿದ್ದರೆ ಅದಕ್ಕಿಂತ ಮೊದಲು ನೀವೇ ’ಅ೦ದರೆ ಇಲ್ಲಿಯ ಜನಕ್ಕೆ ಯಾವುದಕ್ಕೂ ಆಸ್ತೆ ಇಲ್ಲಾ...ಎಲ್ಲಕ್ಕೂ ನಿರ್ಲಕ್ಷ್ಯ ಇದಕ್ಕಿನ್ನಾ ಶೋಕದಾಯಕವಾದದ್ದು ಯಾವುದಿದೆ ?’ ನಿರ್ಲಕ್ಷ್ಯ ಸಲ್ಲದು ಎನ್ನುವ ಥರ ಬರೆದಿದ್ದೀರಿ!.
ನಾನಿಷ್ಟೇ ಹೇಳಲು ಬಯಸುತ್ತೇನೆ. ಪರಿಸ್ಥಿತಿ ನಿಧಾನವಾಗಿಯಾದರೂ ನಮ್ಮ ಕೈಮೀರಿ ಹೋಗುತ್ತಿದೆ. ನಮ್ಮ ಪ್ರಕೃತಿಯ ರಕ್ಷಣೆ ನಮ್ಮ  ಕೈಯಲ್ಲಿದೆ. ಸಾಧ್ಯವಾದಷ್ಟು ಬೇಗ ಇದನ್ನು ಪ್ರಪಂಚ ಅರ್ಥಮಾಡಿಕೊಳ್ಳಬೇಕಿದೆ.
ವಂದನೆಗಳು,
 ವಸಂತ್ ಕಜೆ.
  • ಅರಣ್ಯೀಕರಣ
~.~
  • Vasanth Kaje ರವರ ಬ್ಲಾಗ್
  • Login or register to post comments
  • 465 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 3, 2007 - 2:04am — kalpana

ಉ: ರಿಮೋಟ್ ಅರಣ್ಯೀಕರಣ (ಭಾಗ ೨)

kalpana's picture

ತಾವು ಮಾಡದಿದ್ದರೆ ಸರಿ, ಬೇರೆಯವರು ಒಂದು ಒಳ್ಳೆಯ ಕಾರ್ಯ ಮಾಡಿದರೆ ಹೀಗೆಳೆಯುವುದು ಏಕೆ? ಹೇಗೋ ಏನೋ, ರುಪಾಯಿ ಬಲದಿಂದಲೋ, ಡಾಲರ್ ಬಲದಿಂದಲೋ, ಅಂತೂ ಭೂಮಿ ಹಸಿರಾದರೆ ಸಾಕಲ್ವೆ? Anyway, ಈ ಎಲ್ಲ controversy ನಡುವೆ ನನಗೆ ಸಾಲು ಮರದ ತಿಮ್ಮಕ್ಕ ನೆನಪಾದಳು. ಯಾರ ಮೆಚ್ಚುಗೆ, ಟೀಕೆಗೂ care ಮಾಡದೆ ಎಂತಹ ಮಹತ್ಕಾರ್ಯ ಮಾಡಿದ್ದಾಳೆ. ಹಾಗೇನೇ, ನಮಗೆ ಒಳ್ಳೆಯ ಕೆಲಸ ಅಂತ ತೋರಿದ್ದನ್ನು ಮಾಡ್ತಾ ಹೋಗ್ಬೇಕು ಅನ್ಸತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 3, 2007 - 2:24am — hpn

ಉ: ರಿಮೋಟ್ ಅರಣ್ಯೀಕರಣ (ಭಾಗ ೨)

hpn's picture

ಬಹುಶಃ ಚರ್ಚೆ ಬೇರೆಡೆ ಹೊರಳಿತಾದ್ದರಿಂದ ತೀವ್ರ ಋಣಾತ್ಮಕವೆನಿಸಿರಬಹುದು. ಪಾಶ್ಚಾತ್ಯರ ಬಗ್ಗೆ ಚರ್ಚಿಸುವಾಗ ಬಹುಶಃ ಯಾರೂ ಅನಿವಾಸಿ ಭಾರತೀಯರನ್ನು ಸೇರಿಸಿ ಚರ್ಚಿಸಿರಲಿಕ್ಕಿಲ್ಲ - ಶ್ಯಾಮ ಬರೆದಿದ್ದರಲ್ಲಿ ಒಟ್ಟೂ ನಗರವಾಸಿಗಳು ಎಂದಿದ್ದರೆ ನಾನು ಬರೆದದ್ದು ಪಾಶ್ಚಾತ್ಯರ ಒಟ್ಟು ಚ್ಯಾರಿಟಿ attitude ಬಗ್ಗೆ.

ಆದರೆ ಅಲ್ಲಿದ್ದು ಸ್ವದೇಶದ ಬಗ್ಗೆ, ಭಾಷೆಯ ಬಗ್ಗೆ ಕಾಳಜಿ ಇಟ್ಟುಕೊಂಡು ನಡೆಯುವ ಭಾರತೀಯ ಹೃದಯಗಳ ಕೆಲಸ ಶ್ಲಾಘನೀಯ, ಅನುಕರಣೀಯ.

"ಗಿಡಮರ ಬೆಳೆಸೋದಕ್ಕೆ ಡಾಲರ್ ಸಹಾಯ ಬೇಕಿಲ್ಲ" ಎನ್ನುವುದು ಎರಡು ಅರ್ಥದಲ್ಲಿ ಕೇಳಿಬರುತ್ತದೆ. ನನಗೆ ಮೊದಲು ಓದಿಕೊಂಡಾಗ ಅದರರ್ಥ ಅನಿಸಿದ್ದು ಈ ರೀತಿಯಲ್ಲಿ - ಭಾರತದಲ್ಲಿ ಇನ್ನೂ ಗಿಡ ನೆಡಲು (ಊರುಗಳ ಕಡೆ) ದುಡ್ಡು ತೆಗೆದುಕೊಳ್ಳುವುದು ಅಷ್ಟಾಗಿ ಇಲ್ಲ. ಈ ಸಂದರ್ಭಕ್ಕೆ ಅನ್ವಯಿಸಿ ಡಾಲರ್ ಹಣವಿಲ್ಲದೇ ಗಿಡ ನೆಡಬಹುದು ಎಂಬುದು.
ಮತ್ತೊಂದು ರೀತಿಯಲ್ಲಿ - ಭಾರತದಲ್ಲಿ ಗಿಡ ನೆಡಲು ಎನ್ ಆರ್ ಐ ಗಳ ಸಹಾಯ ಬೇಕಿಲ್ಲ ಎಂಬಂತಿರುವ ಅರ್ಥ - ಇದು ಸ್ವಲ್ಪ radical approach ಆಗಬಹುದು.

ಸಂಪದ ದೇಣಿಗೆ ಪುಟದಲ್ಲಿ ಡಾಲರ್ ಲೆಕ್ಕ ಇರುವುದರ ಹಿಂದೆ ಒಂದು ಬಹುಮುಖ್ಯ ಉದ್ದೇಶವಿದೆ Smiling 'ಸಂಪದ'ವನ್ನು host ಮಾಡಿರುವ ಸರ್ವರ್ ಇರುವುದು ಅಮೇರಿಕೆಯಲ್ಲಿ. 'ಸಂಪದ' ಉಳಿಸಿಕೊಂಡು, ನಡೆಸಿಕೊಂಡು ಹೋಗುವುದರಲ್ಲಿ ಪ್ರಮುಖ ಖರ್ಚು ತಗಲುವುದು ಇದರ ಮತ್ತು ಇದರ ಬ್ಯಾಕಪ್ ನ ಬಿಲ್ ಪಾವತಿ ಮಾಡುವುದರಲ್ಲೇ. ಈ ಬಿಲ್ ಅಮೇರಿಕೆಯ ಡಾಲರುಗಳಲ್ಲಿ ಪೇ ಪಾಲ್ ಮೂಲಕ ಪಾವತಿ ಮಾಡುತ್ತೇವಾದ್ದರಿಂದ ಸುಲಭವಾಗಲೆಂದು ಲೆಕ್ಕ ಇರುವುದೂ ಡಾಲರ್ ಲೆಕ್ಕದಲ್ಲೇ. Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 3, 2007 - 8:45pm — muralihr

ಉ: ರಿಮೋಟ್ ಅರಣ್ಯೀಕರಣ (ಭಾಗ ೨)

muralihr's picture

OK .. OK ..ಆಯ್ತು ಬಿಡಿ - ನಾನು ನಿಮ್ಮೂರಿಗೆ ಬರ್ತೀನಿ ಒ೦ದೆರಡು ಸಸಿ ನೆಟ್ಟು ..ಒಟ್ಟಿಗೆ ಮಾತಾಡೋಣಾ .... ಯಾಕ೦ದರೆ ಇದು ಬ್ಲಾಗ್ ನಲ್ಲಿ ಚರ್ಚೆ ಮಾಡೋ ಅಷ್ಟು ಸಣ್ಣ ವಿಷಯವಲ್ಲಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 3, 2007 - 11:06pm — Vasanth Kaje

ಉ: ರಿಮೋಟ್ ಅರಣ್ಯೀಕರಣ (ಭಾಗ ೨)

Vasanth Kaje's picture

ಹೋಗ್ಲಿ ಬಿಡಿ ಯಾರೂ ಬೇಜಾರು ಮಾಡ್ಕೋಬೇಡಿ.

ಜೀವನದಲ್ಲಿ ಇದಕ್ಕಿಂತ ದೊಡ್ಡ ವಿಷಯಗಳಿವೆ, ತಲೆಬಿಸಿ ಮಾಡೋದಕ್ಕೆ.

ಅಂದ ಹಾಗೆ, ನಾನೂ ಕಾಯ್ತಾ ಇದ್ದೇನೆ ಗಿಡ ನೆಡುವ ಮುಂದಿನ ಸೀಸನ್ ಗೆ Smiling

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಿಮೋಟ್ ಅರಣ್ಯೀಕರಣ
  • ಪ್ರಕೃತಿಯ ಸೊಬಗು
  • ಸುದ್ದಿಪುಟಗಳಲ್ಲಿ 'ಸಂಪದ'
  • ನಾಳೆ ನೀವೂ ಮಾಯ.............
  • ಲಿನಕ್ಸ್‌ನಲ್ಲಿ ಕನ್ನಡ
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 21 ಅತಿಥಿಗಳು ಆನ್ಲೈನ್ ಇರುವರು.


ನನಗೆ ಯಾರೂ ಶತ್ರುಗಳಿಲ್ಲ. ಅವರೆಲ್ಲರೂ ಈಗಾಗಲೇ ಸತ್ತಿದ್ದಾರೆ

— ವಿನ್ ಸ್ಟನ್ ಚರ್ಚಿಲ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator