May 26, 2010 - 9:56pm









ನಾ
ನೊಂ
ದು ಪ್ಲಾಸ್ಟಿಕ್ ಹೂ
ನನ್ನಲ್ಲಿ ಜೀವವಿಲ್ಲ
ವಾಸನೆಯಿಲ್ಲ
ನಾ! ಬಾಡುವುದೇ ಇಲ್ಲ.
ಹೂವ್ವಂತೆ ಕಂಡರೂ
ಚಿಟ್ಟೆಗಳು ಬಳಿ ಬರುವುದಿಲ್ಲ.
ಎಲ್ಲರಂತೆ ಬದುಕಲು ಆಸೆಯಿದೆ
ದೇಹದಲಿ ಉಸಿರಿಲ್ಲ.
ನನ್ನೂಳಗೆ ತೀರದಷ್ಟು ನೋವಿದೆ
ಹೇಳಿಕೊಳ್ಳುವುದಿಲ್ಲ.
ಶೋಷಣೆಗೆ ಬಲಿಯಾದ
ವಿಶಾದಕ್ಕೆ ಗುರಿಯಾದ
ಹೀನವಾದ ಬದುಕಿನ
ಪ್ಲಾಸ್ಟಿಕ್ ಹೂ ನಾ!.
ನಾ ಸಾಯುವುದಿಲ್ಲ
ಸಾಯಲು ಬಿಡುವುದಿಲ್ಲ.
ನನ್ನ ಆಸೆಗಳು ಆಗಾಧ
ಪೂರೈಕೆಯಿಲ್ಲ.
ಮಣ್ಣಲಿ ಬೆಳೆವ ಅಸಲಿ ಹೂಗಳ
ರೂಪ ಮಾತ್ರ ನಾ.
ಮಣ್ಣಲಿ ಹುಟ್ಟುವ ಭಾಗ್ಯ
ನನಗಿಲ್ಲ.
ಇರುವ ತನಕ
ಬಾಡಿಹೋದ
ಬಾಡಿ ಹೋಗದಂತ
ಪ್ಲಾಸ್ಟಿಕ್ ಹೂ ನಾ!…
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಪ್ಲಾಸ್ಟಿಕ್ ಹೂ ನಾ!…
ಮತ್ತೊ೦ದು ಉತ್ತಮ ಕವಿತೆ.
ಹುಸಿರಿಲ್ಲ-ಉಸಿರಿಲ್ಲ - usirilla
ಆಗಾದ-ಅಗಾಧ - agaadha
ನಮಸ್ಕಾರಗಳು.
ಉ: ಪ್ಲಾಸ್ಟಿಕ್ ಹೂ ನಾ!…
ಧನ್ಯವಾದಗಳು ksraghavendranavada ಸಾರ್.
ಉ: ಪ್ಲಾಸ್ಟಿಕ್ ಹೂ ನಾ!…
ಚೆನ್ನಾಗಿದೆ.
ಉ: ಪ್ಲಾಸ್ಟಿಕ್ ಹೂ ನಾ!…
ಧನ್ಯವಾದಗಳು kavinagaraj ಸಾರ್.