23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮನುಷ್ಯ ಎಂದರೆ ?.

May 27, 2010 - 4:23pm
vasanth

 

ಮನುಷ್ಯ ಎಂದರೆ ?
ಯೋಚಿಸುವ ತಿಳುವಳಿಕೆ
ಯುಳ್ಳವನು.

ಮನುಷ್ಯ ಎಂದರೆ ?
ರೋಗ ರುಜನೆಗಳ
ಮಾಂಸದ ಮುದ್ದೆ.

ಮನುಷ್ಯ ಎಂದರೆ ?
ಮೂಳೆ ಚರ್ಮಗಳ
ಮಿಶ್ರಣ.

ಮನುಷ್ಯ ಎಂದರೆ ?
ಪ್ರಾಣಿ ಪಕ್ಷಿಗಳಿಗಿಂತಲು
ಹೀನವಾದ ಮುಖವಾಡ.

ಮನುಷ್ಯ ಎಂದರೆ ?
ಮಾನವ ಸಂಭಂದಗಳ
ಸರಮಾಲೆ.

ಮನುಷ್ಯ ಎಂದರೆ ?
ಆಹಂಕಾರದ ಪರಮಾವದಿ.

ಮನುಷ್ಯ ಎಂದರೆ ?
ತನ್ನೋಳಗೆ ತಾನೆ ಕುದಿಯುವ
ಜ್ಯಾಲಾಮುಖಿ.

ಮನುಷ್ಯ ಎಂದರೆ ?
ತನ್ನ ನಾಶವನ್ನು ತಾನೇ
ಕಾಣದ ಅಂಧ....

                                               ವಸಂತ್

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by Harish Athreya on

ಆತ್ಮೀಯ
ರೀ ವಸ೦ತ್ ಒ೦ದೇ ದಿನ ಎಲ್ಲಾ ಕವನಗಳನ್ನು ಪೇರಿಸಬೇಡ್ರಿ.
ದಿನಾ ಒ೦ದೊ೦ದು ಹಾಕಿ.ಇನ್ನೊಬ್ಬರ ಬರಹಕ್ಕೆ ಜಾಗ ಬೇಕು.ಮತ್ತೆ ಕವನಗಳನ್ನು ಅಪ್ಲೋಡ್ ಮಾಡ್ತಾ ಮಾಡ್ತಾ ಅದು ಮುಖ್ಯ ಪುಟದಿ೦ದ ಮು೦ದಕ್ಕೆ ಮೂವ್ ಆಗಿಬಿಡುತ್ತೆ.
ಒಳ್ಳೇ ಕವನಗಳು ಮಿಸ್ ಆಗೋ ಛಾನ್ಸ್ ಇರುತ್ತೆ. ಇದು ಕೇವಲ ಸಲಹೆ
ಹರಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasanth on

ನೀವು ತಿಳಿಸಿದಂತೆ ಮಾಡುತ್ತೇನೆ Harish Athreya ಸಾರ್. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raji on

ಮನುಷ್ಯ ಎಂದರೆ
"ಕಾಮ,ಕ್ರೋಧ,ಮೋಹ ಮಿಶ್ರಣದ ಮಾಂಸ ಮುದ್ದೆ"
ಚೆನ್ನಾಗಿದೆ. ಮುಂದುವರೆಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.