25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೌನದಲ್ಲೆ ಕೊನೆಯಾದ ಮಾತು..!.

July 31, 2010 - 9:37am
vasanth
 
ನಾನು ಮತ್ತು ನನ್ನ ಪ್ರೀತಿ
ಒಂದೇ ದಾರಿಯಲ್ಲಿ ನಡೆಯುತ್ತೇವೆ.

ಎಂದೂ ಮಾತನಾಡುವುದಿಲ್ಲ

ದಾರಿಯುದ್ದಕ್ಕೂ ಮೌನ

ಮೌನದಲ್ಲೆ ದಾರಿ ಸವೆಯುತ್ತದೆ.

ಅವಳನ್ನು ಬೆನ್ನಟ್ಟಿ ನಾನು

ಮೌನವನ್ನು ಬೆನ್ನಟ್ಟಿ ಅವಳು

ಮೌನವೇ ಮಾತಾಡಬೇಕು.

ಅವಳ ಮೌನ ಮುರಿಯಲು

ಮಾಡಿದ ಪ್ರಯತ್ನಗಳೆಲ್ಲವೂ

ಮೌನದಲ್ಲೇ ಮರೆಯಾದವು.

ಜೀವನದುದ್ದಕ್ಕೂ ಮೌನದಲ್ಲೇ

ಕಾಲವಾಗಲು ನನಗೆ ಇಷ್ಟವಿಲ್ಲ.

ಒಂದು ಬಾರಿಯಾದರೂ ಅವಳ

ಮೌನ ಮಾತಾಗಬೇಕು.

ನನ್ನ ಅಂತರಂಗದ ಭಾವವನ್ನು

ಅವಳಿಗೆ ತಿಳಿಸಬೇಕೆಂದುಕೊಳ್ಳುತ್ತೇನೆ.

ದೈರ್ಯವೇ ಸಾಲುತ್ತಿಲ್ಲ

ಒಂದು ಬಾರಿ ದೈರ್ಯ

ತಂದುಕೊಂಡು ಕೇಳಿದೆ !.

ಈ ಜಗತ್ತಿನಲ್ಲಿ ನಿಜವಾದ

ಪ್ರೀತಿ ಇರುವುದಾದರೆ

ನನ್ನ ಪ್ರೀತಿ ನನ್ನೊಂದಿಗೆ

ಮೌನಬಿಟ್ಟು ಮಾತನಾಡಲಿ !.

ಪ್ರೀತಿ ಮಾತನಾಡಲಿಲ್ಲ

ನನ್ನೆಡೆಗೆ ಮುಖಮಾಡಿ

ಭೂತಕಾಲದೆಡೆಗೆ ಕೈತೋರಿತು.

ರೋಮಿಯೋ ಜೂಲಿಯಟ್

ದೇವದಾಸ್ ಪಾರ್ವತಿ

ಷಾಹಜಹಾನ್ ಮುಮ್ತಾಜ್

ಇವರೆಲ್ಲರೂ ಪ್ರೀತಿಗಾಗಿ

ಪ್ರಾಣವನ್ನೇ ಬಲಿಕೊಟ್ಟರು

ಇವರ ಸಾಧನೆ...

ಮೌನದಲ್ಲೆ ಕೊನೆಗೊಂಡಿತು..

ಅಲ್ಲಿ ಮತ್ಯಾವ ಮಾತು ಇರಲಿಲ್ಲ.

                                                       ವಸಂತ್

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gopinatha on

ಪ್ರೀತಿಯ ಮೌನ ಚೆನ್ನಾಗಿದೆ ವಸಂತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasanth on

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಗೋಪಿನಾಥ್ ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

<<ಅಂಥರಂಗದ ಬಾವವನ್ನು>>ಅ೦ತರ೦ಗದ ಭಾವವನ್ನು
ಎ೦ದು ಸರಿಪಡಿಸಿ ವಸ೦ತ್, ಮೌನದ ಮಾತಿನ ಕವನ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasanth on

ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಮಂಜು ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಸೊಗಸಾಗಿದೆ.
ನಮಸ್ಕಾರಗಳೊ೦ದಿಗೆ,

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vasanth on

ನಿಮ್ಮ ಪ್ರತಿಕ್ರಿಯೆಗೂ ತುಂಬಾ ಧನ್ಯವಾದಗಳು ksraghavendranavada ಸರ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by naranamani on

ಸುಂದರ ಕವನ ವಸಂತ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ವಸಂತ್ ಕವನ ತುಂಬಾ ಇಷ್ಟವಾಯಿತು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.