ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › Vasanth Kaje ರವರ ಬ್ಲಾಗ್

ಸ್ತಬ್ಧಗೊಂಡ ಕ್ಷಣಗಳು..

March 10, 2007 - 1:05am — Vasanth Kaje

stand still

ಈ ತರಹದ experiment ಗಳನ್ನು ಮಾಡಬೇಕೆಂದು ಬಹಳ ಹಿಂದೆಯೇ ಅಂದು ಕೊಂಡಿದ್ದೆ. ಆದರೆ ನನ್ನ ಹಳೆಯ vivitar (non- digital) ನಲ್ಲಿ ಇದನ್ನು ಮಾಡಲು ಕಷ್ಟವಿತ್ತು.

ಡಿಜಿಟಲ್ ಮಾಧ್ಯಮ ಛಾಯಾಗ್ರಾಹಕರಿಗೆ ಪುನರ್ಯತ್ನದ (iterative attempts) ಮತ್ತು ಆಯ್ಕೆಯ ಹೊಸ ಯುಗವನ್ನು ತೆರೆದಿದೆ. ಇದನ್ನು ಹೊಗಳುವವರೂ ಇದ್ದಾರೆ ಮತ್ತು ಜರೆಯುವವರೂ ಇದ್ದಾರೆ. ಮೊದಲಿನಿಂದ ಫಿಲ್ಮ್ ಕ್ಯಾಮೆರ ಉಪಯೋಗಿಸಿಕೊಡಿದ್ದು, ಇತ್ತೀಚೆಗಷ್ತೆ Digi SLR ಗೆ ಶಿಫ್ಟ್ ಆಗಿರುವ professional photographers ಗಳಲ್ಲಿ ಹೆಚ್ಚಿನವರು ಡಿಜಿಟಲ್ ಗಿಂತ ಫಿಲ್ಮ್ ಕ್ಯಾಮೆರವನ್ನು ಹೆಚ್ಚು ಇಷ್ಟ ಪದುತ್ತಾರೆ. ಆದರೆ ಡಿಜಿಟಲ್ ಗಾಳಿಯ ವಿರುದ್ಧ ಕೊಡೆ ಹಿಡಿಯುವುದು ಇಂದಿನ ಮಟ್ಟಿಗೆ ಅಸಾಧ್ಯವೇ ಸರಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.

ವಸಂತ್ ಕಜೆ.

~.~
  • Vasanth Kaje ರವರ ಬ್ಲಾಗ್
  • Login or register to post comments
  • 743 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 10, 2007 - 5:53pm — rajeshks

Re: ಸ್ತಬ್ಧಗೊಂಡ ಕ್ಷಣಗಳು..

rajeshks's picture

ಕಜೆಯವರೇ,

ನಿಮ್ಮ ಈ ಚಿತ್ರ ಬಹು ಸುಂದರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2007 - 6:56pm — Vasanth Kaje

Re: ಸ್ತಬ್ಧಗೊಂಡ ಕ್ಷಣಗಳು..

Vasanth Kaje's picture

ವಂದನೆಗಳು ರಾಜೇಶ್.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 10, 2007 - 6:56pm — Vasanth Kaje

Re: ಸ್ತಬ್ಧಗೊಂಡ ಕ್ಷಣಗಳು..

Vasanth Kaje's picture

ಧನ್ಯವಾದಗಳು ರಾಜೇಶ್.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 12, 2007 - 6:52pm — Rohith

Re: ಸ್ತಬ್ಧಗೊಂಡ ಕ್ಷಣಗಳು..

Rohith's picture

ವಸಂತ್‍ಅವರೆ,

ನೀವು ತೆಗೆದ ಚಿತ್ರ ತುಂಬಾ ಚೆನ್ನಗಿ ಮೂಡಿಬಂದಿದೆ. ಕೆಲವು ವರುಷಗಳ ಹಿಂದಿನ ಮಾತು, National Geographicನ ಒಂದು documentaryಯಲ್ಲಿ ಇದೇ ತರಹ speed ಮತ್ತು slow photographyಯ ಬಗ್ಗೆ ಬಹಳ ಚೆನ್ನಾಗಿ ತೊರಿಸಿದ್ದರು. ನಿಜ ಹೇಳಬೇಕೆಂದರೆ, ನನಗೆ ಛಾಯಾಚಿತ್ರಗ್ರಹಣದ ಮೇಲೆ ಪ್ರೇಮ ಹುಟ್ಟಿದ್ದು ಅಲ್ಲಿಂದಲೆ. ದಯವಿಟ್ಟು shutter ವೇಗ ಮತ್ತು ಇತರೇ ಮಾಹಿತಿಯನ್ನು ನೀಡಿದರೆ ತುಂಬಾ ಉಪಕಾರವಾಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 13, 2007 - 2:50pm — Vasanth Kaje

Re: ಸ್ತಬ್ಧಗೊಂಡ ಕ್ಷಣಗಳು..

Vasanth Kaje's picture

ನಮಸ್ತೆ ರೋಹಿತ್,

  ಇಂತಹ ಚಿತ್ರಗಳನ್ನು ತೆಗೆಯುವವರು flickr ನಲ್ಲೂ ಒಂದಾಗಿ group ರಚಿಸಿಕೊಂಡಿದ್ದಾರೆ. ಅದ್ಭುತ ಎನಿಸುವಂತ ಚಿತ್ರಗಳು ಅಲ್ಲಿ post ಆಗುತ್ತವೆ. ನಾನು ಇತ್ತೀಚೆಗೆ ನೋಡಿಲ್ಲವಾದ್ದರಿಂದ, ನನಗೆ group ನ ಹೆಸರು ನೆನಪಿಲ್ಲ...

ನಾನು sports mode ನಲ್ಲಿ ಇಟ್ಟಿದ್ದೆ. ISO ಬಹುಶ: ೧೬೦೦ ಇತ್ತು. ಸಹಜವಾಗಿ ಇದರಿಂದ shutter speed ಸುಮಾರು ೧/೧೫೦೦ ನಷ್ಟಾದರೂ ಇದ್ದಿರಬಹುದು. ನಿಮಗೆ ಖಚಿತ ಸಂಖ್ಯೆಗಳನ್ನು ಇನ್ನೊಮ್ಮೆ ನನ್ನ DVD ಯಲ್ಲಿರುವ ಈ ಫೊಟೊವನ್ನು ನೋಡಿ ಹೇಳುತ್ತೇನೆ. ನಿಮ್ಮ ಆಸಕ್ತಿಗೆ ಧನ್ಯವಾದಗಳು.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 13, 2007 - 11:38am — venkatesh

ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?

venkatesh's picture

’ಎದೆ ಬಡ್ತ ಒಂದ್ ಚಣ, ನಿಂತೇ ಓಯ್ತು ಅಂತಿಟ್ಗ” ! ರಾಮಾಯಣ್ದಾಗೊ, ಮಾಬಾರ್ತ್ದಾಗೊ ಎಲ್ಲೊ ಒದಿದ್ ನೆಪ್ಪು ಕಣಪೊ. ಇಂತಾದೆ ಮಾತು ಅಲ್ಲು ಬತ್ತದ್ ನೋಡು.

ವಸಂತಣ್ಣೋರೆ, ನೀವೇಳೋದ್ ದಿಟ ಕಣಣ್ಣಾ. ಅದಕ್ಕಲ್ವಾ ಬಣ್ಣದ್ ಚಿಟ್ಟೇ ಅನ್ನೊದು. ಈ ಜಗತ್ನಾಗೆ ಬಣ್ಣ ಇಲ್ಲಾಂತನ್ನು ಏನೈತೆ ಅದ್ರಾಗೆ ಒಸಿ ಯೊಸ್ನೆ ಮಾಡ್ವ ! ಒತ್ತಾರೆ ಆ ನಮ್ ತಂದೆ ಬಂಗಾರ್ದ್ ಕಿರ್ಣಾ ಚೆಲ್ಕೊಂಡ್ ಪರ್ ಪಂಚ್ ದ ಗೂಟ ಒಂಟೋಯ್ತನಲ್ಲ, ಆದರ್ ಸೊಬಗ್ ಯಾವ್ ನಮ್ ನಕ್ಲಿ ಬಣ್ಗಳಲ್ ಐತೆ ನೀವೆ ಏಳಿ ಒಸಿ ? "ಅರ ಕ್ ಸೀರೆ ಉಟ್ಕೊಂಡ್ರು ಬಣ್ಣದ್ ಮಾಟ ಏನಂತೀನಿ". ನಾನ್ ಏಳೋದ್ ದಿಟ ಅಲ್ವ್ರ. ಏನಂತಿರಿ ಸೊಮೆರು ?

ಚಿತ್ರ , ಬಲ್ ಪಾಡಾಗೈತೆ ಕಣಪೊ ! ಇಂಗೆ ಯಾವಾಗಾನ ಮನ್ಸ್ ಬಂದಾಗ್ ಗೀಚ್ರಿ , ನಾಡ್ಗಪ್ಪೊನ್ರಗೆ ಕಳಿಸೊದ್ ಮರ್ತೀರ ಜ್ವಾಕೆ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 13, 2007 - 2:55pm — Vasanth Kaje

Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?

Vasanth Kaje's picture

ವೆಂಕಟೇಶ್ ಅವರೆ,

 ನಿಮ್ಮ ಗ್ರಾಮೀಣ ಸೊಗಡಿನ ಭಾಷೆಯಲ್ಲಿ ಉತ್ತರಿಸುವುದು ನನಗೆ ಸ್ವಲ್ಪ ಕಷ್ಟವಾಗಬಹುದೇನೊ. ನಾನು ಸರಳ ಕನ್ನಡವನ್ನೇ ಆಯ್ದುಕೊಳ್ಳುತ್ತೇನೆ Smiling

ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು. "ನಾಡ್ಗಪ್ಪೊನ್ರಗೆ" ಅಂದರೆ, ನಾಳಿದ್ದಿನೊಳಗೆ (by day after tomorrow) ಅಂತಲೇ?.

ಇವತ್ತು ಮತ್ತೆ ಬ್ಲಾಗಿಸಲು ಪ್ರಯತ್ನಿಸುತ್ತೇನೆ..

ಪ್ರೀತಿ ಇರಲಿ,

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 13, 2007 - 3:09pm — srivathsajoshi

Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?

srivathsajoshi's picture

"ನಾಡ್ಗಪ್ಪೊನ್ರಗೆ" ಅಂದರೆ, ನಾಳಿದ್ದಿನೊಳಗೆ (by day after tomorrow) ಅಂತಲೇ?.

ಅಲ್ಲ, "ನಾಡ್ಗಪ್ಪೊನ್ರಗೆ" = ನಾಡಿಗಪ್ಪನವರಿಗೆ = ಹರಿಪ್ರಸಾದ್ ನಾಡಿಗ್ ಅವರಿಗೆ = hpn ಅವರಿಗೆ = ಸಂಪದ ಜಾಲಾಧಿಪತಿಗೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 13, 2007 - 3:16pm — Vasanth Kaje

Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?

Vasanth Kaje's picture

ಓ ಸರಿ, ಸರಿ, ಈಗ ತಿಳಿಯಿತು ಬಿಡಿ.

೨-೩ ಬಾರಿ ಓದಿ ನೋಡಿದೆ. ಆದರೂ ನನ್ನ ಬಡ್ಡು ಮಂಡೆಗೆ ಅದು ಹೊಳೆಯಲಿಲ್ಲ Smiling

ವಂದನೆಗಳು ವತ್ಸುಕಕ್ಕ.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 13, 2007 - 9:44pm — venkatesh

Re: ಅಂದ್ರೆ ನೀವ್ ಏಳೋದು -’ಒಂದ್ ನಿಮ್ಸ ಎಲ್ಲ ನಿಂತೊಯ್ತದೆ ಅಂತಾವ” ?

venkatesh's picture

ನಿಮ್ಮ ಪ್ರಶ್ನೆಗೆ ಶ್ರೀವತ್ಸರವರು ಸರಿಯಾಗಿ ಉತ್ತರಿಸಿದ್ದಾರೆ. ಗ್ರಾಮೀಣ ಸೊಗಡು ಈಗ ಸಿಗ್ತಿಲ್ಲ. ಬರಿ ಆ ಬೆಂಗ್ಳೂರ್ ಭಾಷೆ- ರವಷ್ಟು, ಕೊಂಚ, ಗೋರಿಕಾಯಿ, ಏನಕ್ಕೆ, ಇತ್ಯಾದಿಗಳನ್ನೇ, ಸ್ವಚ್ಛ ಕನ್ನಡ ಅನ್ಕೊಂಡಿದಿವಿ ನಾವು.ಎಲ್ರು ಇದೆ ಕನ್ನಡ ಮಾತಾಡಿದ್ರೆ, ಕನ್ನಡ ನಾಡಿನ ಬೇರೆ ಪ್ರದೇಶಗಳ [ಜಿಲ್ಲೆಗಳ] ಕನ್ನಡದ ಪ್ರಾಕಾರಗಳು ಅವಸಾನದ ಅಂಚಿಗೆ ಸೇರುವ ದಿಗಿಲು ನನಗೆ !

ಆಗಾಗ ನನ್ನ ಹುಟ್ಟಿದೂರಿನ ಜ್ಞಾಪಕ ಬಂದಾಗಲೆಲ್ಲಾ, ನನಗೆ ತಿಳಿಯದಂತೆ ಆ ಗ್ರಾಮ್ಯ ಭಾಷೆ ನನ್ನ ಬಾಯಿನಿಂದ ಹೊರಬೀಳುತ್ತೆ. ಕೆಲವು ತಪ್ಪು ಪ್ರಯೊಗಗಳೂ ನನ್ನಿಂದ ಆಗಿರಬಹುದು. ದಯಮಾಡಿ ಕ್ಷಮಿಸಿ. ನನಗೆ ಪ್ರಿಯವಾದದ್ದು ಬೇರೆಯವರಿಗೂ ಪ್ರಿಯವಾಗಬೇಕಾಗಿಲ್ಲ !

ನಮಸ್ಕಾರಗಳು.

ವೆಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 16, 2007 - 1:06am — benaka

ಸ್ತಬ್ಧವಾಯಿತು ಚಣವು!

benaka's picture

ಸ್ತಬ್ಧವಾಯಿತು ಚಣವು!
-----------

ಬಟ್ಟಲಿನ ಬಿಳಿ ಕಟ್ಟೆಯೊಡೆದು
ದಿಟ್ಟತನದಲಿ ಅಲೆಯನೆಬ್ಬಿಸಿ
ಪುಟ್ಟೆದೆಯುಬ್ಬಿಸಿ ಅಬ್ಬರಿಸುವ
ನೋಟಕಿದೋ ಸ್ತಬ್ಧವಾಯಿತು ಚಣವು!

ಹದಿಬದೆಯ ಶಾಪದಲಿ ಕಲ್ಲಾದ
ಕಡಲ ಬಟ್ಟಲಲಿಳಿದ ರವಿಯೋ!
ಸ್ವಾತಿಯಲಿ ಚಿಪ್ಪೊಳಗಿಳಿದು ಕೆಂಪಾದ
ಮುಕ್ತ ಭಾವನೆಗಳ ಕವಿಯೋ!

ತುಟಿಗಿಟ್ಟ ಪಾನೀಯದಲಿ ಬಿದ್ದ
ಸಡಿಲ ಮೂಗುತಿಯ ಹರಳೋ!
ಹಸಿದೊಡಲ ಸೇರಿಸೆ ತಂದ
ಅತಿಬೆಲೆಯ ಹಣ್ಣ ತಿರುಳೋ!

ಚಣವದುವೆ ತೀರಿತ್ತು!
ಕಣವದುವೆ ಜಾರಿತ್ತು!
ಕಣಕಣವ ಚಣಚಣದಿ
ಕವಿಗಣ್ಣು ಹಿಡಿದಿತ್ತು!

-ನಿಮ್ಮ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 16, 2007 - 1:35am — Vasanth Kaje

Re: ಸ್ತಬ್ಧವಾಯಿತು ಚಣವು!

Vasanth Kaje's picture

ಅರೆರೆ!!

ಈ ಚಿತ್ರವನ್ನು ನೋಡಿ ಕವನವನ್ನೇ ಬರೆದು ಬಿಟ್ಟಿದ್ದೀರಿ. ಚೆನ್ನಾಗಿದೆ Smiling

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 16, 2007 - 1:45am — mahesha

Re: ಸ್ತಬ್ಧವಾಯಿತು ಚಣವು!

mahesha's picture

ಹದಿಬದೆಯ ಶಾಪದಲ್ಲಿ ಕಲ್ಲಾದವರು ಯಾರು?

ಯಾವ ಪುರಾಣಕತೆಗೆ ನಂಟು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 18, 2007 - 2:27am — benaka

ಮಾರ್ಕಂಡೇಯಪುರಾಣದ ಕಥೆ

benaka's picture

ಮಹೇಶರೆ,

Quote:
ಹದಿಬದೆಯ ಶಾಪದಲ್ಲಿ ಕಲ್ಲಾದವರು ಯಾರು?

ಯಾವ ಪುರಾಣಕತೆಗೆ ನಂಟು?

ನೀವು ಕೇಳಿದ ಮೊದಲ ಪ್ರಶ್ನೆಗೆ ಉತ್ತರ ಕವನದ ಮುಂದಿನ ಸಾಲಿನಲ್ಲೇ ಇದೆ:

ಹದಿಬದೆಯ ಶಾಪದಲಿ ಕಲ್ಲಾದ
ಕಡಲ ಬಟ್ಟಲಲಿಳಿದ "ರವಿ"ಯೋ!

ಇರಲಿ; ಕೌಶಿಕನ ಪತ್ನಿ(ಕೌಶಿಕೀ/ಶೀಲವತೀ/ನಲಯನೀ/ಶಾಂಡಿಲೀ)ಯಿಂದ ಶಾಪಕ್ಕೀಡಾಗಿ ನಿಶ್ಚಲನಾದವನು ಸೂರ್ಯ. ಅನಂತರ ಅನಸೂಯಾದೇವಿಯ ದೆಸೆಯಿಂದ ಪಾರಾದನೆಂದು ಮಾರ್ಕಂಡೇಯಪುರಾಣದ ಕಥೆ ಹೇಳುತ್ತದೆ. ರಾಮಾಯಣದ ಅಯೋಧ್ಯಾಕಾಂಡದಲ್ಲೂ ಈ ಕಥೆಯ ಉಲ್ಲೇಖವಿದೆಯೆಂದು ಓದಿದ ನೆನಪು.

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 18, 2007 - 8:47am — mahesha

Re: ಮಾರ್ಕಂಡೇಯಪುರಾಣದ ಕಥೆ

mahesha's picture

ನನ್ನಿ(ನನ್ರಿ)

ಹದಿಬದೆಯ ಶಾಪದಲಿ ಕಲ್ಲಾದ
ಕಡಲ ಬಟ್ಟಲಲಿಳಿದ "ರವಿ"ಯೋ!

ಇಲ್ಲಿ ನಾನು ’ಕಲ್ಲಾದ ಕಡಲ’ ಎಂದು ಓದಿಕೊಂಡು ಕಲ್ಲಾದುದು ಕಡಲು ಅಂದುಕೊಂಡೆನು.

ನಿಮ್ಮ ಪೊಯೆಮ್ ತೆರದಂತೆ, ಹೀಗೆ ಯಾವುದೋ ಒಂದು ರೇರಾದ ಕತೆಯನ್ನು ರೆಪರ್‍ ಮಾಡಿದ ಪೊಯೆಮ್ನ ಲೈನನ್ನು ಡಿಸಿಪರ್‍ ಮಾಡೋದು ತುಂಬ ಕಸ್ಟ.

ಇಂತಹ ಪೊಯೆಮನ್ನು ಸರಿಯಾಗಿ ತಿಳಿಯಲು, ಹೆಚ್ಚು ಓದು, ಅರಿವುಬೇಕು.

ಒಂದು ಪುರಾಣಕತೆಯನ್ನು ಹೇಳಿದಕ್ಕೆ ಮರುನನ್ನಿ(ನನ್ರಿ )[thanks agains]

ನಿಮ್ಮ ಪೊಯೆಮ್ ಬಹಳ ನೀಟಾಗಿ ನೈಸಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೀಸೆ ಹೂವುಗಳು
  • ಮುಗಿಲು ಮುಟ್ಟುವ ತವಕ
  • ಸಿರಿ
  • ಛಾಪು
  • ಎಳಸು ಮನಸಿನ ಪರಾವಲಂಬನೆ..
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
ವಸಂತ್ ಕಜೆ (Vasanth Kaje)

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 113 ಅತಿಥಿಗಳು ಆನ್ಲೈನ್ ಇರುವರು.


ಧರ್ಮವಿಲ್ಲದ ವಿಜ್ಞಾನ ಹೇಗೆ ಕುಂಟೋ ಹಾಗೆಯೇ ವಿಜ್ಞಾನವಿಲ್ಲದ ಧರ್ಮ ಕುರುಡು.

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator