ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › Vasanth Kaje ರವರ ಬ್ಲಾಗ್

ನಮ್ಮ ಮನೆಯ ದೀಪಾವಳಿ

November 11, 2007 - 11:33pm — Vasanth Kaje

ಮತ್ತೊಂದು ದೀಪಾವಳಿ ಸಂದಿದೆ. ನಾವು ವರುಷದಂತೆ ಸರಳ ಸುಂದರವಾಗಿ ಆಚರಿಸಿಕೊಂಡೆವು. ನಮ್ಮಲ್ಲಿ ದೀಪಾವಳಿಯೆಂದರೆ ತುಳಸೀ ಪೂಜೆ, ಗೋಪೂಜೆ, ಊಟ.

ಗೋಪೂಜೆಗಾಗಿ ಬೆಳಗ್ಗೆಯೇ ಹಸುಕರುಗಳೆಲ್ಲವನ್ನು ಮೀಯಿಸಲಾಗುತ್ತದೆ. ಸಂಜೆ ತುಳಸೀ ಕಟ್ಟೆಯ ಸುತ್ತ ಸ್ವಲ್ಪ ಅಲಂಕಾರ ಮಾಡುತ್ತೇವೆ. ಮೊದಲೆಲ್ಲ ರಾತ್ರಿಯ ವೇಳೆ ಸ್ವಲ್ಪ ಪಟಾಕಿ ಸುಡುವುದಿತ್ತು. ವರುಷಗಳ ಹಿಂದೆಯೇ ಅದನ್ನು ತ್ಯಜಿಸಿ ನಾವು ಶಾಂತ ದೀಪಾವಳಿಯನ್ನು ನೆಚ್ಚಿಕೊಂಡಿದ್ದೇವೆ.

ದಶಕಗಳ ಹಿಂದೆ ಕೊಂಡು ತಂದಿದ್ದ ಮಣ್ಣಿನ ಹಣತೆಗಳು ಒಂದೊಂದಾಗಿ ಒಡೆದು ಹೋಗಿ, ಕೆಲವು ವರುಷಗಳ ಹಿಂದೆ ನಾನು ಕೈಯಿಂದ ತಯಾರಿಸಿದ ಸ್ವಲ್ಪ ಒರಟೊರಟಾದ ಹಣತೆಗಳು ಈಗ ಮೆಜಾರಿಟಿಯಲ್ಲಿವೆ. ಅವುಗಳನ್ನು ಅಮ್ಮ ಉರಿಸಿದ್ದೂ, ನಾನು ಚಿತ್ರಿಸಿದ್ದೂ ಆಯಿತು. ನಾನು ದೀಪಾವಳಿಯನ್ನು ಚಿತ್ರಿಸಲೆಂದೇ ಕಿಲೋಗ್ರಾಮ್ ನಷ್ಟು ಭಾರವಿರುವ ನನ್ನ ಟ್ರೈಪಾಡನ್ನು ಹೊತ್ತು ಊರಿಗೆ ತಂದಿದ್ದೇನೆ. ನಾನು ಪೂಜೆಯಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚು ಚಿತ್ರಿಸುವುದರಲ್ಲಿ ನಿರತನಾಗಿದ್ದೆ!.

ಎಂದಿನಂತೆ ತಂದೆ ತಮ್ಮ ಮಾಸಲು ಹಳೆಯ ಕಾಗದಗಳಿಂದ ಮಂತ್ರಗಳನ್ನೋದಿ ತುಳಸೀ ಪೂಜೆ ಮಾಡಿದರು. ಪ್ರತಿ ವರುಷದಂತೆ ಮಂತ್ರಗಳನ್ನು ಹೊಸ ಕಾಗದಕ್ಕೆ ಪ್ರತಿಯಿಳಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು Smiling

ಗೋಪೂಜೆಯ ಸಮಯದಲ್ಲಿ ಹೆಚ್ಚುಕಮ್ಮಿ ಅದು ಪೂಜಾವಿಧಿಯ ಅಂಗವೇನೋ ಎಂಬಂತೆ ನನ್ನಮ್ಮ/ಅಜ್ಜಿ ಪಾಲಿಸಿಕೊಂಡು ಬಂದಿರುವ ಕ್ರಮವೊಂದಿದೆ. ಅದೇನೆಂದರೆ, ತಂದೆಯ ಮಂಗಳಾರತಿಯ ಬಳಿಕ ಗೋವುಗಳನ್ನುದ್ದೇಶಿಸಿ 'ಕಾಡ ಸೊಪ್ಪು ತಿಂದು, ತೋಡ ನೀರು ಕುಡಿದು ಸುಖವಾಗಿ ಬಾಳಿರಿ' ಎಂದು ಹರಸುವುದು!. ನನಗೀಗಲೂ ನೆನಪಿದೆ, ನಾನು ಚಿಕ್ಕವನಿದ್ದಾಗ ದೀಪಾವಳಿ ಈ ಹಂತಕ್ಕೆ ಬರುತ್ತಲೂ ಡಿಪ್ರೆಶನ್ ಗೆ ಒಳಗಾಗುತ್ತಿದ್ದೆ. ಏಕೆಂದರೆ, ಆ ಹೊತ್ತಿಗೆ ಪಟಾಕಿಗಳೆಲ್ಲ ಮುಗಿದು, ಪೂಜಾಕಾರ್ಯಗಳೆಲ್ಲವೂ ಮುಗಿದು ಮರುದಿನದ ಶಾಲೆ ನೆನಪಾಗಲು ಶುರುವಾಗುತ್ತಿತ್ತು.

ಊಟದ ಬಳಿಕ ನಾನು ತೆಗೆದ ಚಿತ್ರಗಳನ್ನು ಕಂಪ್ಯೂಟರ್ ನಲ್ಲಿ ನೋಡುವ ಹೊಸ ಕಾರ್ಯಕ್ರಮ ೨ ವರ್ಷಗಳಿಂದ ಸೇರಿಕೊಂಡಿದೆ.

ನಮ್ಮ ನೆರೆಮನೆಯಿಂದ ಬಂದ ಸುದ್ದಿ: ಅವರಲ್ಲಿ ನಿನ್ನೆ ಪಟಾಕಿಯ ಭರಾಟೆ ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಆಘಾತಗೊಂಡು ಅವರ ನಾಯಿ ಅಸುನೀಗಿದೆ Sad ಸಶಬ್ದವಾದ ದೀಪಾವಳಿಯನ್ನು ನಾವೆಂದು ಕೈ ಬಿಡುವೆವೆಂದು ನನಗೆ ಅರ್ಥವಾಗುತ್ತಿಲ್ಲ.

ನಿಮಗೆಲ್ಲರಿಗೆ ಶಾಂತಿ, ನೆಮ್ಮದಿಯ ಬೆಳಕು ಬರಲೆಂದು ಹಾರೈಸುವ,
ವಸಂತ್ ಕಜೆ.

  • ದೀಪಾವಳಿ
~.~
  • Vasanth Kaje ರವರ ಬ್ಲಾಗ್
  • Login or register to post comments
  • 781 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 12, 2007 - 10:27am — Sunil Jayaprakash

ಉ: ನಮ್ಮ ಮನೆಯ ದೀಪಾವಳಿ

Sunil Jayaprakash's picture

ವಸಂತ ಕಜೆ, ನೀವು ಹಿಡಿಯುವ ಒಂದೊಂದು ಪಾಪೆಗಳೂ ತಮ್ಮದೇ ಕತೆಯನ್ನು ಹೇಳುತ್ತವೆ. ಈ ಪಾಪೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ನಿಮಗೆ ನನ್ನಿ. ಒಂದು ವಿಷಯ ಕೇಳಬೇಕಿತ್ತು. ಮೇಲಿನ ಬರಹದ, ನಾಲ್ಕನೆಯ ಪಾಪೆಯನ್ನು ಹಿಡಿಯುವುದಕ್ಕೆ, ಎಷ್ಟು ಸೆಕೆಂಡುಗಳ ಡಿಲೇ ಇಟ್ಟಿದ್ರಿ ? ಈ ಎಪೆಕ್ಟಿಗೆ ಏನೆಂದು ಹೆಸರು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2007 - 2:10pm — naasomeswara

ಉ: ನಮ್ಮ ಮನೆಯ ದೀಪಾವಳಿ

naasomeswara's picture

ಇದೊಂದು ದೃಶ್ಯ ಕಾವ್ಯ!

- ನಾಸೋ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2007 - 8:06pm — muralihr

ಉ: ನಮ್ಮ ಮನೆಯ ದೀಪಾವಳಿ

muralihr's picture

ಪೋಟೋ ಸರಿಯಾಗಿ ತೆಗಿಬೇಕಾಗಿತ್ತು ! ಕರು ಮುಖ ಪೂರ್ತಿ ಕಾಣಿಸ್ತಿಲ್ಲಾ..ಆಮೇಲೆ ಇನ್ನೂ ಚೆನ್ನಾಗಿ ಒಳ್ಳೆಳ್ಲೆ ಪೋಟೋ ಹಾಕಬಹುದಾಗಿತ್ತು..
ಆದರೂ ಚೆನ್ನಾಗಿದೆ.. ಇನ್ನೂ ಜಾಸ್ತಿ ಹಬ್ಬ ಮಾಡಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2007 - 10:16pm — hpn

ಉ: ನಮ್ಮ ಮನೆಯ ದೀಪಾವಳಿ

hpn's picture

ಇಲ್ವೋ ಮುರಳಿ, ಅದು ಸರಿಯಾಗಿಯೇ ಇದೆ. ಫೋಕಸ್ ಇರೋದು ಕರು ಮೇಲಲ್ಲ - ಅದರ ಮೇಲೆ ಸುರಿದಿರೋ ನೀರಿನ ಮೇಲೆ.

ಯೂರೋಪಿನ ಒಬ್ಬ ಸ್ನೇಹಿತನಿಗೆ ಕನ್ನಡದ ಬಗ್ಗೆ ತಿಳಿಸುತ್ತಾ ಇವತ್ತು ಈ ಪುಟ ತೋರಿಸಿದೆ. "ಇದೇನು ಜಿಂಕೆಯಾ" ಅಂತ ಕೇಳಿದ Eye-wink

ಫೋಟೋ ಮಾತ್ರ ಬಹಳ ಒಳ್ಳೆಯ ಕ್ವಾಲಿಟಿಯದ್ದು. ವಸಂತ್ ರವರಿಂದ ಫೋಟೋಗ್ರಫಿ ಕಲಿಯೋದು ಬಹಳಷ್ಟಿದೆ ಅನ್ಸತ್ತೆ Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 12, 2007 - 10:18pm — hpn

ಉ: ನಮ್ಮ ಮನೆಯ ದೀಪಾವಳಿ

hpn's picture

ಮೂರನೆಯ ಚಿತ್ರ ಜಾಸ್ತಿ exposure ಇಟ್ಟು ತೆಗೆದಿರೋದಲ್ವಾ?
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 13, 2007 - 9:21am — roshan_netla

ಉ: ನಮ್ಮ ಮನೆಯ ದೀಪಾವಳಿ

roshan_netla's picture

ತುಳಸಿ ಪೂಜೆಗೆ ಇನ್ನು ದಿನ ಇದೆ ಆಗಲೆ ನೀವು ಮಾಡಿ ಮುಗಿಸಿದ್ರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 13, 2007 - 10:49am — srinivasps

ಉ: ನಮ್ಮ ಮನೆಯ ದೀಪಾವಳಿ

srinivasps's picture

ತುಳಸೀ ಪೂಜೆ ದಿನಾ ಮಾಡ್ಬೇಕಲ್ವಾ?? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 13, 2007 - 11:13am — roshan_netla

ಉ: ನಮ್ಮ ಮನೆಯ ದೀಪಾವಳಿ

roshan_netla's picture

ಯಾವುದೇ ಪೂಜೆ ಕೂಡ ದಿನಾ ಮಾಡ್ಬಹುದು, ದೀಪ ದಿನಾ ಹಚ್ಚೋಲ್ವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 13, 2007 - 11:58am — kpbolumbu

ಉ: ನಮ್ಮ ಮನೆಯ ದೀಪಾವಳಿ

kpbolumbu's picture

ಶ್ರೀ ವಸ೦ತ ಕಜೆ ತಿಳಿಸಿರುವ೦ತೆ ಅವರ ಆಚಾರದ೦ತೆ ದೀಪಾವಳಿಯ೦ದೇ ತುಳಸೀಪೂಜೆ ಮತ್ತು ಗೋಪೂಜೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 13, 2007 - 12:13pm — savithru

ಉ: ನಮ್ಮ ಮನೆಯ ದೀಪಾವಳಿ

savithru's picture

ನಿಮ್ಮ ದೀಪಾವಳಿ ಸಂಬ್ರಮ ವನ್ನು ಹಂಚಿಕೊಂಡಿದ್ದಕ್ಕೆ ವಂದನೆಗಳು.

ಈ ಸರಿ ದೀಪಾವಳಿ ಅಂತೂ ಹೊಣಗಣೇಶ!.. ಬರೀ 3-4 ಕ್ಯಾಂಡಲ್ ಹಚ್ಚಿದ್ದಸ್ಟೇ ನಮ್ಮ ದೀಪಾವಳಿ.
ಊಟ .. ಮತ್ತೆ ಅದೇ ಅನ್ನ ಸಾರು!

youtube ನಲ್ಲಿ ಪಟಾಕಿ ಹೊಡೆದೆ!. Candle ಅಲ್ಲಿ ದೀಪ ಹಚ್ಚಿದೆ. ಹಚ್ಚಿದ್ದು 3-4 ಕ್ಯಾಂಡಲ್ ಆದ್ರೂ ತೆಗೊನ್ಡಿದ್ದು ಮೂವತ್ತು ಫೋಟೋಗಳು.!

ಆದ್ರೂ ನಮ್ಮ ಸೆಲೆಬ್ರೇಶನ್ ಬೊಮ್ಬಾಟ್ ಆಗಿತ್ತು.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 13, 2007 - 11:36pm — Vasanth Kaje

ಉ: ನಮ್ಮ ಮನೆಯ ದೀಪಾವಳಿ

Vasanth Kaje's picture

ಪ್ರತಿಕ್ರಿಯಿಸಿದವರಿಗೆಲ್ಲ ವಂದನೆಗಳು.

ಸುನಿಲ್ ಅವರೇ, ಇಂಥ ಚಿತ್ರಗಳಿಗೆ ಯಾವುದೇ ಹೆಸರಿರುವುದು ನನಗೆ ತಿಳಿದಿಲ್ಲ. ಇದು long exposure ನ ಮಹಿಮೆಯಷ್ಟೆ. ನಾನು ಈ ಚಿತ್ರಕ್ಕಾಗಿ ೮ ಸೆಕೆಂಡ್ exposure ಇಟ್ಟಿದ್ದೆ.

ಮುರಳಿಯವರೇ, ಕರುವಿನ ಮುಖ ಸಂಪೂರ್ಣ ಇದ್ದಿದ್ದರೆ ಒಳ್ಳೆಯದಿತ್ತು ಎನ್ನುವುದು ನಿಜ. hpn ಅವರಂದಂತೆ ನನ್ನ ಗಮನ ನೀರಿನ ಮೇಲಿತ್ತು ಎನ್ನ್ನುವುದೂ ಹೌದು.

ನಾನು ಸದ್ಯಕ್ಕೆ ೨೧ ರ ತನಕ ಡಯಲಪ್ ಕನೆಕ್ಶನ್ ನಲ್ಲಿರುವುದರಿಂದ ನನಗೆ ಹೆಚ್ಚು ಚಿತ್ರಗಳನ್ನು ನಿಮ್ಮೊಡನೆ ಹಂಚಿಕೊಳ್ಳಲಾಗುತ್ತಿಲ್ಲ Sad

ವಂದನೆಗಳು,

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 19, 2007 - 12:37am — hpn

ಉ: ನಮ್ಮ ಮನೆಯ ದೀಪಾವಳಿ

hpn's picture

ಸದ್ಯಕ್ಕೆ ನನ್ನದೂ ಡಯಲ್ ಅಪ್ ಪಾಡು Sticking out tongue

ಭಾರತದಲ್ಲಿದ್ದೀರಾ? ಸಿಗೋ ಚಾನ್ಸಸ್ ಉಂಟಾ? Smiling
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 14, 2007 - 7:46am — anivaasi

ಉ: ನಮ್ಮ ಮನೆಯ ದೀಪಾವಳಿ

anivaasi's picture

ವಸಂತರೆ,
ತುಂಬಾ ಸೊಗಸಾಗಿದೆ... ಲಾಂಗ್ ಎಕ್ಷಪೋಷರ್‍ ಪ್ರಯೋಗವೂ ಚೆನ್ನಾಗಿ ಕೆಲಸ ಮಾಡಿದೆ.
ಅಂದ ಹಾಗೆ, ಐ.ಎಸ್.ಓ ಜತೆ ಕೂಡ ಆಟವಾಡ ಬೇಕಾಯಿತೆ?
ಚಿತ್ರ-ಕತೆ ಹಂಚಿಕೊಂಡದ್ದಕ್ಕೆ ಥ್ಯಾಂಕ್ಸ್...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
November 16, 2007 - 8:50am — Vasanth Kaje

ಉ: ನಮ್ಮ ಮನೆಯ ದೀಪಾವಳಿ

Vasanth Kaje's picture

ಅನಿವಾಸಿಯವರೇ,
ವಂದನೆಗಳು. ISO ಹೆಚ್ಚು ಬದಲಾಯಿಸಬೇಕಾಗಿ ಬರಲಿಲ್ಲ. ನನಗೆ ಹೇಗೂ ಹಲವಾರು ಸೆಕೆಂಡುಗಳ ಎಕಿಸ್ಪೋಷರ್ ಬೇಕಿತ್ತಷ್ಟೆ?.
ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಛಳಿಗಾಲದ ಚಿತ್ರಗಳು
  • ಹೊಸವರ್ಷದ ಚಿತ್ರಗಳು..
  • ಕ್ರಿಸ್ಮಸ್ ದೀಪ ಮತ್ತು ಅಯ್ಯೋ ಪಾಪ
  • ಕ್ಯಾಬ್ರಾಮಟದ ಹಣ್ಣಿನಂಗಡಿ
  • ನಮ್ಮ ಮನೆಯ ದೀಪಾವಳಿ (ಭಾಗ 2)
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
ವಸಂತ್ ಕಜೆ (Vasanth Kaje)

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 493 ಅತಿಥಿಗಳು ಆನ್ಲೈನ್ ಇರುವರು.


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator