ಚಿತ್ರ-ಚೌಕಟ್ಟು

ನಮ್ಮ ಪ್ರಾಜೆಕ್ಟ್ ಟೀಮಿನಲ್ಲಿ ಒಂದು ಸಂಪ್ರದಾಯ ಇಟ್ಟುಕೊಂಡಿದ್ದೇವೆ. ಯಾರಿಗೇ ಆದರೂ ಮದುವೆ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಕ್ರಮ ಇರಲಿ, ಒಂದು ಒಳ್ಳೆಯ ಚಿತ್ರದ ಮೇಲೆ ಕವನವೊಂದನ್ನು ಬರೆದು, ಎ4 ಸೈಜಿಗೆ ಪ್ರಿಂಟ್ ತೆಗೆದು, ಡಬಲ್ ಗ್ಲಾಸ್ ಫ್ರೇಮ್ ಹಾಕಿ ಉಡುಗೊರೆಯಾಗಿ ಕೊಡುತ್ತೇವೆ. ಚಿತ್ರದ ಖಾಯಮ್ ಜವಾಬ್ದಾರಿ ನನಗೆ. ಕವನದ್ದು ನನ್ನ ಸಹೋದ್ಯೋಗಿಣಿ ಶ್ರೀಮತಿ| ಮಾನಸ ಅವರಿಗೆ. ಪ್ರಾಸಬದ್ಧವಾಗಿ ಆಶಯ ಕವಿತೆಗಳನ್ನು ಬರೆಯುವುದರಲ್ಲಿ ಅವರದು ಎತ್ತಿದ ಕೈ.
ಈ ಚಿತ್ರವನ್ನು ಇತ್ತೀಚಿನ ಮದುವೆಗೆ ತೆಗೆದೆ. ವರ, ವಧು ಕನ್ನಡದವರಲ್ಲದುದರಿಂದ ಕವನವನ್ನು ಇಂಗ್ಳಿಷಿನಲ್ಲಿ ಬರೆಸಬೇಕಾಯಿತು.
ನೀವು ಯಾವತ್ತಾದರೂ ಫೊಟೊಕ್ಕೆ ಫ್ರೇಮ್ ಹಾಕುವ ಸಂದರ್ಭವಿದ್ದರೆ, ಡಬಲ್ ಗ್ಲಾಸ್ ಫ್ರೇಮ್ ಹಾಕಿಸಿ ನೋಡಿ. ಸ್ವಲ್ಪ ಕಾಸ್ಟ್ಲಿ. ಆದರೆ ರಿಸಲ್ಟ್ ಅದ್ಭುತವಾಗಿರುತ್ತದೆ..
ವಂದನೆಗಳು,
ವಸಂತ್.

- Vasanth Kaje ರವರ ಬ್ಲಾಗ್
- Login or register to post comments
- 373 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಚಿತ್ರ-ಚೌಕಟ್ಟು
ವಸಂತ್ ಕಜೆ, ನಿಮ್ಮ "ಪಾಪೆ ಹಿಡಿ"ಯಲ್ಲಿನ ಚಾಕಚಕ್ಯತೆ ನಿಜಕ್ಕೂ ನನ್ನನ್ನು ನಿಬ್ಬೆರಗಾಗಿಸುತ್ತದೆ. ನೀವು ನೀಡಿದ ಎರಡು ಸಲಹೆಗಳೂ ಕೂಡ ನನಗೆ ತುಂಬಾ ಇಷ್ಟವಾಯಿತು.
೧. ಉಡುಗೊರೆಯಾಗಿ ಪಾಪೆಯ ಜೊತೆ ಕವನವನ್ನು ಬರೆದುಕೊಡುವುದು.
೨. ಪಾಪೆಗೆ ಡಬಲ್ ಫ್ರೇಮ್ ಗ್ಲಾಸ್ ಹಾಕಿಸುವುದು.
ಉಡುಗೊರೆಯಾಗಿ ಪಾಪೆಯನ್ನು ನೀಡುವ ಸಂಪ್ರದಾಯವಿತ್ತಾದರೂ, ಅದರೊಡನೆ ಕವನ ಸೇರಿಸುವ ಯೋಚನೆ ಅಷ್ಟು ಬಲವಾಗಿ ನನ್ನಲ್ಲಿ ಇರಲಿಲ್ಲ. ಇನ್ನುಮುಂದೆ ಈ ಸಂಪ್ರದಾಯ ನಮ್ಮ ಕಡೆಯಲ್ಲಿಯೂ ಸಾಧ್ಯವೇ ನೋಡಬೇಕು. ನಿಮ್ಮ ಚಿತ್ರ-ಚೌಕಟ್ಟು ಮತ್ತು ಸಲಹೆಗಳಿಗಾಗಿ ನನ್ನಿ.
ಉ: ಚಿತ್ರ-ಚೌಕಟ್ಟು
ವಂದನೆಗಳು ಸುನಿಲ್,
ಡಬಲ್ ಗ್ಲಾಸ್ ಫ್ರೇಮ್ ಅಂದರೆ ಏನು ಎಂದು ವಿವರವಾಗಿ ಬರೆಯಬೇಕಾಗಿತ್ತೇನೋ ಎಂದು ನನಗೆ ಆಮೇಲೆ ಅನಿಸಿತು. ಸ್ವಲ್ಪ ತಡವಾಗಿಯೇ ಅದರೂ ಬರೆದು ಬಿಡುತ್ತೇನೆ...
ಮಾಮೂಲಿ ಫ್ರೇಮಿಂಗ್ ನಲ್ಲಿ ಎದುರು ಬದಿಗೆ ಗಾಜು, ಹಿಂಬದಿಗೆ ರಟ್ಟು ಇರುತ್ತದೆಯಷ್ಟೆ?. ಡಬಲ್ ಗ್ಲಾಸ್ ನಲ್ಲಿ ಎರಡೂ ಕಡೆಗೆ ಗಾಜು ಇರುತ್ತದೆ.
ವಂದನೆಗಳು..
ವಸಂತ್.
ಉ: ಚಿತ್ರ-ಚೌಕಟ್ಟು
Kavanavanna namge kanise illa?
photo adbhuta
ಉ: ಚಿತ್ರ-ಚೌಕಟ್ಟು
ವಸಂತ ಕಜೆ ಇವರಿಗೆ
ನಮಸ್ಕಾರ
ನೆನಕೆಗಳು
ಇದನ್ನ ನಾನೂ ಮಾಡಿ ನೋಡ್ತೀನಿ
ಅಂದ ಹಾಗೆ ತುಳುವಿನಲ್ಲಿ ಕಜೆಯ ಅರ್ಥ
ಕಸ ಅಲ್ಲವಾ
ತಮಾಶೆಗೆಂದೆ
ಇಂತೀ ತಮ್ಮ ಆಪ್ತ
ಗೋಪಿನಾಥ
ಉ: ಚಿತ್ರ-ಚೌಕಟ್ಟು
ಸಂತೋಷ,
ಕಜೆ ಎಂದರೆ ಏನು ಎನ್ನುವುದು ಸ್ವಲ್ಪ ಕಷ್ಟ.
ಕುಸುಬಲಕ್ಕಿ ಹೆಚ್ಚು ಕೆಂಪಾಗಿದ್ದರೆ, ’ತುಂಬಾ ಕಜೆ ಇದೆ’ ಎನ್ನುತ್ತಾರೆ ಬಹುಶ:.
ನನ್ನ ಪಾಲಿಗೆ ಅದು ಅಭಿಮಾನದ ನಮ್ಮ ಮನೆತನದ ಹೆಸರು (ಸರ್ ನೇಮ್ ಅಲ್ಲ; ನನ್ನ ಸರ್ ನೇಮ್ ಭಟ್).
ವಸಂತ್ ಕಜೆ