ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Vasanth Kaje ರವರ ಬ್ಲಾಗ್

ನಮ್ಮ ಬೆಕ್ಕು ಕಾಣೆಯಾಗಿದೆ !!

July 16, 2007 - 1:38am — Vasanth Kaje

ಇದೀಗ ಜಿ-ಟಾಕ್ ನಲ್ಲಿ ಅಮ್ಮ ಹೇಳಿದ ಸುದ್ದಿ. ’ನಮ್ಮ ಬೆಕ್ಕು ಕಾಣೆಯಾಗಿದೆ’.
ಇದಕ್ಕೆ ಎರಡು ಮುಖ್ಯ ಕಾರಣಗಳನ್ನು ಊಹಿಸಲಾಗಿದೆ.
ಪ್ರತೀ ಮೂರು ತಿಂಗಳಿಗೊಮ್ಮೆ ಕನಿಷ್ಟ ೨ ಮರಿಗಳನು ಈಯುವ ಅದು, ತನ್ನ ಕರ್ತವ್ಯವನ್ನು ಮುಂದುವರಿಸಲು ಉನ್ಮುಖವಾಗಿದೆ.
ಆಥವಾ Sad, ನಮ್ಮ ಕೆಲಸಕ್ಕೆ ಬಾರದ ನಾಯಿ ಅದನ್ನು ಹಿಡಿದು ಬಿಟ್ಟಿದೆ. ಇಲ್ಲಿಯವರೆಗೆ ಶವ ಪತ್ತೆಯಾಗಿಲ್ಲ. ಆದ್ದರಿಂದ ಈ ಯೋಚನೆಯನ್ನು ಸದ್ಯಕ್ಕೆ ಅವಾಯ್ಡ್ ಮಾಡಲಾಗುತ್ತಿದೆ.
ನನ್ನಮ್ಮನ  ಪ್ರೀತಿಯ ಬೆಕ್ಕಾದ ಅದು, ನೋಡಲು ಮೇಲ್ಕಾಣಿಸಿದಂತೆ ಇದೆ. ಅಂದ ಹಾಗೆ ಅದು ಕಂಡವರಿಗೆ ನಮಸ್ಕಾರ ಮಾಡುವಷ್ಟು ಬುದ್ಧಿವಂತಳಲ್ಲ. ಛಳಿಗಾಲದ ಮುಂಜಾವಿನಲ್ಲಿ ಮುಖ ಒರೆಸಿಕೊಳ್ಳುತ್ತಿದೆ ಅಷ್ಟೆ.
ಅದು ಬೇಗ ಸಿಗಲಿ ಎಂಬ ಸದಾಶಯದೊಡನೆ,
 ವಸಂತ್ ಕಜೆ.
  • ಬೆಕ್ಕು
~.~
  • Vasanth Kaje ರವರ ಬ್ಲಾಗ್
  • Login or register to post comments
  • 346 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 16, 2007 - 2:27am — hpn

ಉ: ನಮ್ಮ ಬೆಕ್ಕು ಕಾಣೆಯಾಗಿದೆ !!

hpn's picture

ಏನು ಹೆಸರಿಟ್ಟಿದ್ದಿರಿ? ನಾಯಿ ಹಿಡಿದಿರಲಿಕ್ಕಿಲ್ಲ ಎಂದು ಹಾರೈಸೋಣ.

ನನ್ನ ಜೊತೆ ಓದಿದ ಸ್ನೇಹಿತನೊಬ್ಬ ಇಂದಿಗೂ ತನ್ನ ಬೆಕ್ಕಿನ ನೆನಪಿಗೆ ತನ್ನ ವೆಬ್ಸೈಟನ್ನೇ ಮುಡುಪಾಗಿಟ್ಟುಬಿಟ್ಟಿದ್ದಾನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 3:56am — Vasanth Kaje

ಉ: ನಮ್ಮ ಬೆಕ್ಕು ಕಾಣೆಯಾಗಿದೆ !!

Vasanth Kaje's picture

ನಿಜ ಹೇಳಬೇಕೆಂದರೆ ಅದಕ್ಕೆ ಹೆಸರಿಲ್ಲ. ನಾನು ಯಾವತ್ತೂ ಅದನ್ನು ಹೆಸರು ಹಿಡಿದು ಕರೆಯದಿದ್ದರೂ, ಅದರ ಹೆಸರು 'ಮೃಣಾಲಿನಿ' ಅಂದುಕೊಂಡಿದ್ದೇನೆ.
ನಿಮ್ಮ ಹಾರೈಕೆಗೆ ವಂದನೆಗಳು.

ನಿಮ್ಮ ಸ್ನೇಹಿತನ ಬೆಕ್ಕನ್ನು ನೋಡಿದೆ. ಮುದ್ದಾಗಿದೆ.
ವಸಂತ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 8:15am — hamsanandi

ಉ: ನಮ್ಮ ಬೆಕ್ಕು ಕಾಣೆಯಾಗಿದೆ !!

hamsanandi's picture

ನಿಮ್ಮ ಬೆಕ್ಕು ಮರಳಿ ಸಿಗಲಿ.

ಚಿಕ್ಕಂದಿನಲ್ಲಿ ನಮ್ಮ ಜೊತೆಯಿದ್ದ ಬೆಕ್ಕು, ಅದರ ಮರಿಗಳನ್ನು ಕಳೆದುಕೊಂಡಾಗ ಅದಕ್ಕಾಗುತ್ತಿದ್ದ ದುಃಖ, ಜೊತೆಗೆ ನಮಗಾಗುತ್ತಿದ್ದ ದು:ಖ ಎಲ್ಲ ನೆನಪಿಗೆ ಬಂತು.

ಹಾಗೆಂದೇ, ನಂತರ ಯಾವ ಪ್ರಾಣಿಗಳನ್ನು ಸಾಕಬಾರದೆಂಬ ನಿರ್ಧಾರ ಮಾಡಿದ್ದು, ಇವತ್ತಿಗೂ ಪಾಲಿಸುತ್ತಿದ್ದೇನೆ Sad

-ಹಂಸಾನಂದಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 4:24pm — sb1966

ಉ: ನಮ್ಮ ಬೆಕ್ಕು ಕಾಣೆಯಾಗಿದೆ !!

sb1966's picture

ನಾನು ನಿಮ್ಮಂತೆ ಪ್ರಾಣಿಗಳನ್ನು ಸಾಕಬಾರದೆಂದೇನೂ ನಿರ್ಧಾರ ಮಾಡಿಲ್ಲ. ಚಿಕ್ಕಂದಿನಲ್ಲಿ ನಮ್ಮ ಹಳ್ಳಿಯಲ್ಲಿ ಪ್ರಾಣಿ, ಪಕ್ಷಿಗಳೊಂದಿಗೆ ಬೆಳೆದ ನಾನು, ಈಗಲೂ ಅವನ್ನು ಬೆಳೆಸಲು ಆಸೆಯಿದೆ. ಆದರೆ ನನ್ನ ಆಸೆಗೆ ಈ ಪಟ್ಟಣದ Flatಗಳು ಅವಕಾಶ ಕೊಡುತ್ತಿಲ್ಲ. ನೆರೆಹೊರೆಯವರಿಗೆ ತೊಂದರೆಯಾಗಬಾರದೆಂದು ನಾಯಿ ಬೆಕ್ಕನ್ನು ಸಾಕಲಾಗಲಿಲ್ಲ. ಈಗಲೂ ನನ್ನ ಮುಗುವಿನ ಆಸೆಯನ್ನು ಪೂರೈಸಲಾಗಲ್ಲಿಲ್ಲವಲ್ಲವೆಂಬ ಕೊರಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 17, 2007 - 1:53am — hpn

ಉ:

hpn's picture

ನಮಗೂ ಹಾಗೇ ಆಯ್ತು. ಶಿವಮೊಗ್ಗದಲ್ಲಿದ್ದಾಗಿನಿಂದ ಜೊತೆಗಿದ್ದ ನಾಯಿಮರಿ ಸೋನಿ, ಬೆಂಗಳೂರು ರೋಡಿನ ಟ್ರಾಫಿಕ್ಕು, ಜನಜಂಗುಳಿ, ಕೊನೆಗೆ (ಗಾರ್ಡನ್ ಇಲ್ಲದ) ಅತಿ ಚಿಕ್ಕ ಮನೆಗೆ ಒಗ್ಗಿಕೊಳ್ಳಲಾಗದೆ ತೀರ ಮಂಕಾಗಿಬಿಟ್ಟಿದ್ದಾಗ ನೋಡಿ ಬೇಸರವಾಗುತ್ತಿತ್ತು. ಕೊನೆಗೊಂದು ದಿನ ಅದರ ದುರ್ಮರಣ. Sad ಅದು ಪುಟ್ಟದಿದ್ದಾಗಿನಿಂದ ನಮ್ಮ ಜೊತೆಗೇ ಇತ್ತು. ಅಪ್ಪ ಅಮ್ಮ ಬಿಕ್ಕಿ ಅತ್ತಿದ್ದರು, ವಾರ ಪೂರ್ತ ಸರಿಯಾಗಿ ನಿದ್ರೆ ಮಾಡದೇ ಕಳೆದಿದ್ದರು.

ಹೀಗಾಗಿ ನಾವೂ ಕೂಡ ನಿಮ್ಮ ಹಾಗೆಯೇ ಯಾವ ಪ್ರಾಣಿಯನ್ನೂ ಸಾಕಬಾರದು ಅಂತ ನಿರ್ಧಾರ ಮಾಡಿಬಿಟ್ಟಿದ್ದೇವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 12:50pm — roshan_netla

ಉ: ನಮ್ಮ ಬೆಕ್ಕು ಕಾಣೆಯಾಗಿದೆ !!

roshan_netla's picture

ನಿಮ್ಮ ಬೆಕ್ಕು ನಿಮ್ಮ ಮನೆ ಅಥವ ಕೊಟ್ಟಿಗೆಯ ಅಟ್ಟ ದಲ್ಲಿ ಚಂದದ ಮರಿಗಳೊಂದಿಗೆ ಇರಲಿ ಅಂತ ನನ್ನ ಆಸೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 16, 2007 - 11:53pm — Vasanth Kaje

ಉ: ನಮ್ಮ ಬೆಕ್ಕು ಕಾಣೆಯಾಗಿದೆ !!

Vasanth Kaje's picture

ನಮ್ಮ ಬೆಕ್ಕಿನ ನೆಮ್ಮದಿಯನ್ನು ಹಾರೈಸಿದವರಿಗೆ ವಂದನೆಗಳು,

ಹಂಸಾನಂದಿಯವರೆ, ಅಗಲುವಿಕೆಯ ದು:ಖಕ್ಕಾಗಿ ಪ್ರಾಣಿಗಳನ್ನು ಸಾಕದೆ ಇರುವುದು ಸ್ವಲ್ಪ ನೆಗೆಟಿವ್ ಅಪ್ರೋಚ್ ಅನ್ನಬಹುದೇನೊ. ನಾನು ಹಲವು ಇಂಥ ಅನುಭವಗಳನ್ನು ಪಟ್ಟಿದ್ದೇನೆ. ನಮ್ಮಲ್ಲೊಂದು ಬೆಕ್ಕು ತನ್ನ ಚೊಚ್ಚಲ ಹೆರಿಗೆಯಲ್ಲಿ ಮರಿಗಳಿಗೆ ಹಾಲೂಡಿಸುವ ಗೋಜಿಗೆ ಹೋಗದೆ ತನ್ನ ಪಾಡಿಗೆ ಹೊರಟು ಹೋಯಿತು. ನಾನು, ಅಮ್ಮ, ಹಾಲು ಕುಡಿಸಲು ಕಷ್ಟ ಪಟ್ಟೆವು. ನಮಗೆ ಸಾಧ್ಯವಾಗಲಿಲ್ಲ. ಮರಿಗಳೆಲ್ಲ ತೀರಿ ಹೋದವು. ಕ್ಯಾನ್ಸರ್ ಆದ ನಾಯಿಯನ್ನು ಪ್ರತಿದಿನ ಟ್ರೀಟ್ ಮಾಡಿದ್ದೆ, ವಿಷ ತಿಂದ ನಾಯಿಯನ್ನು ಹೆಚ್ಚು ಕಮ್ಮಿ ಇಡೀ ದಿನ ಟ್ರೀಟ್ ಮಾಡಿದ್ದೆ (ಬದುಕಿಸಲು ಸಾಧ್ಯವಾಯಿತು). ಬಹುಶ: ನೀವನ್ನುವುದು ನಿಜವೇನೊ, ಬದುಕಿಸಿದ ಪ್ರಮಾಣ ಕಡಿಮೆ, ಸಾವನ್ನು ಮುಂದೆ ಹಾಕಿದ್ದೇನಷ್ಟೆ..

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಗಿಲು ಮುಟ್ಟುವ ತವಕ
  • ಶ್ವೇತ ಸುಂದರಿ
  • ಛಳಿಗಾಲದ ಚಿತ್ರಗಳು
  • ಪ್ರತಿಬಿಂಬದೊಳಕ್ಕೆ ಪ್ರವೇಶ
  • ಮತ್ತದೇ ಅನನ್ಯ(!) ಸೂರ್ಯಾಸ್ತ
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪುರಂದರದಾಸರ ಎರಡು ಪದಗಳು
  • IT - ಸಿಂಪ್ಟಮ್ಸ
  • ಬಿಟ್ಟು ಹೋದವಳಿಗಾಗಿ
  • ಶಾಲೆಗಳು, ಸ್ಪರ್ಧಾತ್ಮಕ ಜಗತ್ತು..
  • ನೀರವತೆ!
  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಪುರಂದರದಾಸರ ಎರಡು ಪದಗಳು
    September 5, 2008 - 9:17pm
  • cmariejoseph
    ಉ: ಚಂದಿರನ ನೋಡಿದವ
    September 5, 2008 - 8:56pm
  • cmariejoseph
    ಉ: IT - ಸಿಂಪ್ಟಮ್ಸ
    September 5, 2008 - 8:39pm
  • yogeshkrbhat1
    ಉ: ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
    September 5, 2008 - 8:04pm
  • hpn
    ಉ: IT - ಸಿಂಪ್ಟಮ್ಸ
    September 5, 2008 - 7:54pm
  • venkatesh
    ಉ: Splendours of Royal Mysore
    September 5, 2008 - 7:45pm
  • yogeshkrbhat1
    ಉ: ಜ್ಯೋತಿಷ್ಯ..ವೈಜ್ಞಾನಿಕ ?
    September 5, 2008 - 7:15pm
  • ಸಂಗನಗೌಡ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 7:02pm
  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 125 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator