ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Vasanth Kaje ರವರ ಬ್ಲಾಗ್

ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

August 26, 2007 - 10:25pm — Vasanth Kaje


ಕಳೆದ ವಾರ ನಾನು ಸಪೋಸೆಡ್ಲಿ ಯುರೋಪ್ ನ ಅತ್ಯಂತ ರಸ್ತೆ ಶಿಸ್ತು ಪಾಲಿಸುವ ದೇಶವಾದ ಇಂಗ್ಲೆಂಡಿನಲ್ಲಿ ಸಾಕಷ್ಟು ಡ್ರೈವ್ ಮಾಡಿದೆ (ಮೊದಲ ಬಾರಿಗೆ). ಗೆಳೆಯರೊಂದಿಗೆ ಇಪ್ ಸ್ವಿಚ್, ಕೇಂಬ್ರಿಜ್ ಮತ್ತು ಲಂಡನ್ ಸುತ್ತಾಡಿ ಬಂದೆ. ನಮ್ಮ ಕೊನೆಯ ಆಕರ್ಷಣೆ ಲಂಡನ್ ನ ಈಸ್ಟ್ ಹ್ಯಾಮ್ ಆಗಿತ್ತು.

ಈಸ್ಟ್ ಹ್ಯಾಮ್ ಯಾವುದೇ ಯುರೋಪೀಯನಿಗಾದರೂ ಆಘಾತವಾಗುವಷ್ಟು ಭಾರತೀಯರ ನಿಬಿಡತೆಯಿರುವ ಪ್ರದೇಶ. ಬೀದಿಯಲ್ಲಿ ಕಾರು ನಿಲ್ಲಿಸಿ - (ರಸ್ತೆಗಳು ಇಕ್ಕಟ್ಟಾಗಿ ವಾಹನಗಳಿಂದ ತುಂಬಿ ನಮ್ಮ ಬಂಟ್ವಾಳದ ಗಲ್ಲಿಗಳಂತೆ ಇವೆ) - 'ಚೆನ್ನೈ ದೋಸಾ' ವನ್ನು ಹುಡುಕಿಕೊಂಡು ಬರುತ್ತಿದ್ದಂತೆ ಇಬ್ಬರು ವಾದ್ಯಗಾರರು (ಬಹುಶ: ತಮಿಳರು - ಕಡು ಕಪ್ಪು ಬಣ್ಣದಿಂದ ಹೇಳುವುದಾದರೆ) ಹೆಗಲಿಗೆ ಚಂಡೆಯಂತಹ ವಾದ್ಯವನ್ನೇರಿಸಿ, ಬಿಳಿಪಂಚೆಯ ಚುಂಗನ್ನು ಹಿಡಿದುಕೊಂಡು ನಡೆಯುತ್ತಾ ಹಾದು ಹೋದರು. ನಾನು ಒಂದು ದೊಡ್ಡ '!' ನ್ನು ಅವರ ಮೇಲೆ ಬಿಸಾಡಿ ಮುಂದುವರೆದೆ.
'ಚೆನ್ನೈ ದೋಸಾ' ವನ್ನು ಹೊಕ್ಕದ್ದಾಯಿತು. ನಿಂತು ತಿನ್ನುವ ವ್ಯವಸ್ತೆ ಇಲ್ಲ ಎನ್ನುವುದನ್ನು ಬಿಟ್ಟರೆ, ಅದು ಬೆಂಗಳೂರಿನ ದರ್ಶಿನಿ ಹೋಟೆಲ್ ಗಳಿಗಿಂತ ಭಿನ್ನವಾಗೇನೂ ಇಲ್ಲ. 3 ಮಸಾಲೆ ದೋಸೆಗಳಿಗೆ ಆರ್ಡರ್ ಕೊಟ್ಟು ಕಾಯುತ್ತಾ ಕುಳಿತೆವು.
ಅದೇ ಬೀದಿಯಲ್ಲಿ ದೇವಸ್ಥಾನವೊಂದು ಇದೆ. ಶುದ್ಧ ಅನುಕೂಲಸಿಂಧು ಆಸ್ತಿಕರಾದ ನಾವು 'ಮಸಾಲೆ ದೋಸೆ' ಯಲ್ಲೇ ದೇವರನ್ನು ಕಾಣುವ ನಿರ್ಧಾರ ಮಾಡಿದ್ದರಿಂದ ದೇವಸ್ಥಾನಕ್ಕೆ ಹೋಗುವ ಆಲೋಚನೆಯನ್ನು ಕೈಬಿಟ್ಟು ಮುಂದುವರೆದು ಬಂದಿದ್ದೆವು. ದೋಸೆಗೆ ಕಾಯುತ್ತಿದ್ದಂತೆ ಆದಿತ್ಯವಾರವಾಗಿದ್ದರಿಂದ ಒಂದೊಂದಾಗಿ ದೇವಸ್ಥಾನಕ್ಕೆ ಹೋಗಿ ಬಂದ ಸಂಸಾರಗಳು, ಹೋಟೆಲನ್ನು ಹೊಕ್ಕವು.
ಅವುಗಳಲ್ಲಿ ಕೆಲವರು ಮುದ್ದಾದ, ಸ್ವಲ್ಪ ಸ್ಥೂಲಕಾಯದವರೇ ಎನ್ನಬಹುದಾದ ಅಮ್ಮಂದಿರು, ಹಣೆಯ ಮೇಲೆ ದೇವಸ್ಥಾನದ ಕುಂಕುಮವನ್ನೂ ಧರಿಸಿ, ಸೀರೆಯ ಮೇಲೆ ಸ್ವೆಟರ್ ತೊಟ್ಟುಕೊಂಡು, ಅಲ್ಲಿನ ಇಡಿಯ 'ಸೆಟಪ್' ನ ಬಗ್ಗೆ ಮುಖ, ಕಣ್ಣುಗಳಲ್ಲಿ ಒಂದು ಅಪರಿಚಿತತೆಯನ್ನು ತುಂಬಿಕೊಂಡು ಒಳ ಹೊಕ್ಕರು. ನನಗೆ ಅಮ್ಮನ ನೆನಪು...

ಅಮ್ಮ ಕ್ರಿಕೆಟ್ ನೋಡುತ್ತಾ ಹೂಕಟ್ಟುತ್ತಿರುವಾಗ ಬೆಕ್ಕಿನಂತೆ ಕುರ್ರ್, ಕುರ್ರ್ ಎಂದು ಶಬ್ದ ಮಾಡುತ್ತಾ ಅಮ್ಮನಿಗೆ ಅಂಟಿ ಮಲಗಿಕೊಂಡಂತೆ... ಅದನ್ನು ಒಳಗೊಳಗೆ ಎಂಜಾಯ್ ಮಾಡುತ್ತಾ, ನಿರ್ಲಕ್ಷ್ಯವನ್ನು ಪ್ರದರ್ಶಿಸುತ್ತಾ 'ಏಯ್, ನೀನೆಂತ ಸಣ್ಣ ಮಾಣಿಯ ತಮ್ಮ?' ಎಂದು ನನ್ನನ್ನು ಅಮ್ಮ ಗದರಿದಂತೆ ಕನಸು.

ಮನೆಯಿಂದ ಸಾವಿರಾರು ಮೈಲಿ ದೂರ ಬಂದಿದ್ದು ಉದ್ಯೋಗಾರ್ಥ ನೆಲೆಸಿರುವುದರಿಂದ ಪಡೆಯುವುದೇನು, ಕಳೆದುಕೊಳ್ಳುವುದೇನು ಎನ್ನುವುದು ಸದಾ ಅಂತರಂಗದಲ್ಲಿ ತಿರುಗುತ್ತಿರುವ ಪ್ರಶ್ನೆ. 'ಯಾವಗ ಬತ್ತೆ?', 'ನೀನು ಬಂದರೆ ಪುನ ಹೋಪಲಿದ್ದ? (ನೀನು ಬಂದರೆ ಪುನ: ಹೋಗಲಿಕ್ಕಿದೆಯ?)' ಎಂದು ಆತಂಕದಿಂದ ಪ್ರಶ್ನಿಸುವ ಅಪ್ಪ, ಅಮ್ಮ; ಆನ್ ಸೈಟು, ಪ್ರಾಜೆಕ್ಟು, ಬಯಿಂಗ್ ಪವರ್, ಕಳೆದುಕೊಳ್ಳುತ್ತಿರುವ ಬೆಂಗಳೂರಿನ ವಯಲಿನ್ ಕ್ಲಾಸ್ ಗಳು, ಸಂಬಂಧ ಬೆಸೆಯುವ ಗೂಗಲ್ ಟಾಕುಗಳೆಲ್ಲ ಜೊತೆ ಸೇರಿ ಕಲಸು ಮೇಲೋಗರವಾಗಿ, ಒಂದನ್ನು ಇನ್ನೊಂದರಿಂದ ಪ್ರತ್ಯೇಕಿಸಲಾಗದೆ, ಯಾವುದನ್ನೂ prioritize ಮಾಡಲಾಗದೆ, ಯಾವುದನ್ನೂ ಬಿಡಲಾಗದೆ ಇರುವ ಒಂದು infinite ಲೂಪಿನ ಯೋಚನೆಗೆ ಸಿಕ್ಕಿ ಹಾಕಿಕೊಂಡೆ.

'ಬಟರ್ ಮಸಾಲೆ' ಹೇಳಿದ್ದು ಯಾರು? ಎಂಬ ಪ್ರಶ್ನೆ, ಯೋಚನೆಗಳಿಗೆಲ್ಲ ಬ್ರೇಕ್ ಹಾಕಿದಂತಾಗಿ, ಮತ್ತೆ ಚೆನ್ನೈ ದೋಸಾಕ್ಕೆ ಹಿಂದಿರುಗಿದೆ. ಗರಿಗರಿಯಾದ ದೋಸೆ, ಜೊತೆಗೆ ಬಿಳಿ ಚಟ್ನಿ, ಕೆಂಪು ಚಟ್ನಿ ಮತ್ತು ಸಾಂಭಾರ್. ಮೂರೂ ಜನ ಹೊಟ್ಟೆ ತುಂಬ ತಿಂದರೂ ಬಿಲ್ಲು 9 ಪವುಂಡು. 'ಚೆನ್ನೈ ದೋಸ'ಕ್ಕೆ ವಂದನೆಗಳನ್ನು ಹೇಳಿ ಹೊರಟೆವು..

ವಸಂತ್ ಕಜೆ

  • ಮಸಾಲೆದೋಸೆ ಲಂಡನ್
~.~
  • Vasanth Kaje ರವರ ಬ್ಲಾಗ್
  • Login or register to post comments
  • 493 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 26, 2007 - 11:39pm — hpn

ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

hpn's picture

ಮುಂದೊಂದು ದಿನ ಬೆಂಗಳೂರಿನಲ್ಲಿದ್ದೂ ಬೆಂಗಳೂರಿನಲ್ಲಿರುವವರ ಜೊತೆಗೆ ಗೂಗಲ್ ಟಾಕ್ ನಲ್ಲಿ ಮಾತ್ರ ಅಥವ ಫೋನಿನಲ್ಲಿ ಮಾತಾಡಲು ಆಗೋ ಅಂತ ಸಂದರ್ಭ ಬರಬಹುದು (ಈಗಾಗಲೇ ಕೆಲ ಮಟ್ಟಿಗೆ ಇದು ಆಗಿ ಹೋಗಿದೆ). ಇಲ್ಲಿ ಕೆಲಸ ಮಾಡುವವರಿಗೂ ಬಹುಶಃ ಅಪ್ಪ ಅಮ್ಮನೊಂದಿಗೆ ಕಳೆಯಲು ಸಿಗುವ ಸಮಯ ಕಡಿಮೆ (ರಾತ್ರಿ ಸುಸ್ತು, ವೀಕೆಂಡು ಟೈಟು). priority ಮತ್ತು desire ನಡುವಿನ infinite loop ಎಲ್ಲೆಡೆಯೂ ಇದ್ದದ್ದೆ.

ನನಗೆ ಗೊತ್ತಿರುವಂತೆ ಚೆನ್ನೈನಲ್ಲಿ ಬಹುಪಾಲು ದೋಸೆ ಚೆನ್ನಾಗಿರುವುದಿಲ್ಲ (ಅಥವ ನನಗಿಷ್ಟವಾದದ್ದಿಲ್ಲ). ತಮಿಳುನಾಡಿನ ಕೆಲವೆಡೆ ದೋಸೆ ಚೆನ್ನಾಗಿದ್ದದ್ದುಂಟು. ಯಾವತ್ತಿದ್ರೂ ಬಸವನಗುಡಿಯ ಹೋಟೆಲುಗಳ ದೋಸೇನೆ ಚೆಂದ. ಚೆನ್ನೈ ದೋಸೆಯ ಬಿಳಿ ಚಟ್ನಿ ಏನೋ ಕಳಕೊಂಡಂತೆ ಇರತ್ತೆ. ಆಂಧ್ರದ ಹಚ್ಚ ಹಸಿರು ಚಟ್ನಿ ಏನೋ ಹೆಚ್ಚು ಪಡಕೊಂಡಂತಿರತ್ತೆ.

ಇದನ್ನೋದುವಾಗ ದಾಶರಥಿ ದೀಕ್ಷಿತರ ಹಾಸ್ಯ ಪುಸ್ತಕವೊಂದರಲ್ಲಿ ಓದಿದ್ದ ಮಸಾಲೆ ದೋಸೆ ಎಪಿಸೋಡ್ ನೆನಪಾಯ್ತು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 5:41am — Vasanth Kaje

ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

Vasanth Kaje's picture

ನೀವನ್ನುವುದು ನಿಜ ಹರಿಪ್ರಸಾದ್. ಬೆಂಗಳೂರಿನಲ್ಲಿದ್ದು 3 ತಿಂಗಳಿಗೊಮ್ಮೆ ಊರಿಗೆ ಹೋಗುವ ನನ್ನ ಗೆಳೆಯರೂ ಇದ್ದರು.

ತಮಿಳ್ನಾಡಿಗೆ ನಾನು ಇಷ್ಟರವರೆಗೆ ಹೋಗಿಲ್ಲ. ಆದ್ದರಿಂದ ನನಗೆ ನೀವು ಬರೆದ ಮಟ್ಟಿಗೆ ದೋಸೆಗಳ ವ್ಯತ್ಯಾಸ ತಿಳಿದಿಲ್ಲ. ನಮಗೆ ಇಲ್ಲಿನ ದೋಸೆ ಅಪ್ಯಾಯಮಾನವಾಗುವುದು ಅಭಾವದ ಕಾರಣದಿಂದ ಇರಬಹುದು. ಆದರೆ ನಾನು ಯಮ್.ಟಿ.ಆರ್ ಅಥವ ಪ್ರಿಯಾ ದೋಸೆ ಪುಡಿಗಳನ್ನು ಉಪಯೋಗಿಸಿ ವಾರಕ್ಕೆ ಎರಡು ಬಾರಿಯಾದರೂ ದೋಸೆ ಮಾಡುತ್ತೇನೆ!
ವಸಂತ್.

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 6:08pm — anivaasi

ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

anivaasi's picture

ವಸಂತ್,
ನೀವು ತುಳಿದ ಕಾಲುದಾರಿಯ ಹುಲ್ಲಿಂದ ಹಿಡಿದು, ಅಮ್ಮ ಕಾಲಿಗೆ ದಾರ ಸಿಕ್ಕಿಸಿಕೊಂಡು ಹೂ ಸುರಿಯುತ್ತಿರುವುದು ತುಂಬಾ ಸುಂದರವಾಗಿದೆ ಮೂಡಿ ಬಂದಿದೆ.
ನಮ್ಮ ಬದುಕಗಳು ನಮ್ಮನ್ನು ಎಲ್ಲೆಲ್ಲಿಗೋ ಎಳೆದುಕೊಂಡು ಹೋದಾಗ ಬಂದು ಸೇರಿಕೊಳ್ಳುವ ಈ ಜಟಿಲತೆ, ಲೂಪುಗಳು ವಿಸ್ಮಯಕಾರಿ ಅಲ್ಲವೆ?
ಬರಹ ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 27, 2007 - 7:54pm — ASHOKKUMAR

ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

ASHOKKUMAR's picture

Quote:
ಅಮ್ಮ ಕಾಲಿಗೆ ದಾರ ಸಿಕ್ಕಿಸಿಕೊಂಡು ಹೂ ಸುರಿಯುತ್ತಿರುವುದು

ದಾರ ಸಿಕ್ಕಿಸಿಕೊಂಡಿರುವುದು ಹೂ ಸುರಿಯಲು ಅಲ್ಲವೇನೋ...ಹೂಕಟ್ಟಲು ಇರಬೇಕು.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2007 - 12:31am — Vasanth Kaje

ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

Vasanth Kaje's picture

ಪ್ರತಿಕ್ರಿಯೆಗಾಗಿ ವಂದನೆಗಳು ಎಲ್ಲರಿಗೂ. ಅಶೋಕ್ ಕುಮಾರ್, ಈ ರೀತಿ ಹೂಕಟ್ಟುವ ಕ್ರಮ ಬಹುಶ: ದಕ್ಷಿಣ ಕನ್ನಡದಲ್ಲಿ ಮಾತ್ರ ಇದೆ. ಅದು ಹೂ ಮಾಲೆ ಮಾಡುವುದೆಂದು ಅನಿವಾಸಿಯವರು ಗ್ರಹಿಸಿದ್ದು ಸರಿಯಾಗಿಯೇ ಇದೆ, ಒಂದೊಂದು ಊರಿನಲ್ಲಿ ಒಂದೊಂದು ಕ್ರಮ..
ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2007 - 2:15am — anivaasi

ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

anivaasi's picture

ಅಶೋಕ್,
ಇಲ್ಲಿ "ಸುರಿ" - ನಿಮಗೆ ಗೊತ್ತಿರಬಹುದು ಪೋಣಿಸು ಎಂಬ ಅರ್ಥದಲ್ಲಿ ಬಳಕೆ ಆಗಿದೆ. ಹೂ "ಪೋಣಿಸು". ಮತ್ತು ಹಾಗೆ ಹೂ ಸುರಿಯುವುದು ದಕ್ಷಿಣ ಕನ್ನಡದವರ ಮನೆಗಳಲ್ಲಿ ಯಾವಾಗಲೂ ಕಾಣುವ, ಮರೆಯಲಾಗದ ನೋಟ. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 28, 2007 - 2:47am — Vasanth Kaje

ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

Vasanth Kaje's picture

ಅನಿವಾಸಿಯವರೇ,
ನಾನು ನನ್ನ ಕಮೆಂಟನ್ನು ಬರೆದು, ಅದರ ಬಗ್ಗೆ ಯೋಚಿಸುತ್ತಾ ಊಟಮಾಡುತ್ತಿದ್ದಾಗ ನಿಮ್ಮ 'ಸುರಿ' ಎಂಬ ಪ್ರಯೋಗದ ಬಗ್ಗೆ ಆಶ್ಚರ್ಯ ಪಟ್ಟೆ. ಏಕೆಂದರೆ ಇದು ದಕ್ಷಿಣ ಕನ್ನಡದ ಕನ್ನಡ ಮತ್ತು ತುಳುವಿನಲ್ಲಿ ಬಳಕೆಯಲ್ಲಿರುವ ಪದ. ಇದು ನಿಮಗೆ ಹೇಗೆ ಗೊತ್ತಾಯಿತು? ನೀವು ದ.ಕ. ದವರೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 29, 2007 - 10:38pm — kishorpatwardhan

ಉ: ಈಸ್ಟ್ ಹ್ಯಾಮ್ ನಲ್ಲಿ ಮಸಾಲೆದೋಸೆ

kishorpatwardhan's picture

ಚಿತ್ರ, ಬರಹ - ಎರಡೂ ತುಂಬ ಚೆನ್ನಾಗಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 27, 2007 - 4:33pm — hegdedinesh

ಉ:

hegdedinesh's picture

your writing skill is too simple and really it gave so much happiness you know.
nimma photo (inserted ) samayakke takka haagide Smiling

ಹೆಗ್ಗಡೆದಿನೇಶ್ ರವರೆ, ದಯವಿಟ್ಟು ಕನ್ನಡದಲ್ಲಿ ಬರೆಯಿರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶ್ವೇತ ಸುಂದರಿ
  • ಪ್ರತಿಬಿಂಬದೊಳಕ್ಕೆ ಪ್ರವೇಶ
  • ಮುಗಿಲು ಮುಟ್ಟುವ ತವಕ
  • ಸಂಜೆ ಬೆಳಕಲ್ಲಿ ಹಳೆಮನೆ, ಓಣಿ, ಒಳದಾರಿಗಳು
  • ಮೀಸೆ ಹೂವುಗಳು
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
  • ishwar.shastri
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:00pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:54pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:52pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 7:51pm
  • csomsekraiah
    ಉ: ಕೊಲಂಬಿಯ ಪಟ್ಟಣದ ಸಂತೆ !
    September 8, 2008 - 7:28pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 145 ಅತಿಥಿಗಳು ಆನ್ಲೈನ್ ಇರುವರು.


ಜಗತ್ತಿನಲ್ಲಿ ಗ್ರಹಿಸಲು ಅತ್ಯಂತ ಕಷ್ಟಕರವಾದ ವಿಷಯವೆಂದರೆ ಆದಾಯ ತೆರಿಗೆ!

- ಆಲ್ಬರ್ಟ್ ಐನ್‍ಸ್ಟೈನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator