ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Vasanth Kaje ರವರ ಬ್ಲಾಗ್

ಭಾವನಾ, ಹಂಗಾಮ, ಜಯಂತ್ ಇತ್ಯಾದಿ

August 1, 2007 - 4:50am — Vasanth Kaje

ಅವಧಿಯಲ್ಲಿ(avadhi.wordpress.com) ಹಂಗಾಮ ಎನ್ನುವ ಪತ್ರಿಕೆಯ ಬಗ್ಗೆ, ಅದು ನಿಂತು ಹೋದುದರ ಬಗ್ಗೆ ಆಗಾಗ್ಗೆ ಪ್ರಸ್ತಾಪ ಆಗುತ್ತಿರುತ್ತದೆ. ಭಾವನಾ ಬರುತ್ತಿದ್ದ ಕಾಲದಲ್ಲಿ ಅದರ ಬಗ್ಗೆ ಮತ್ತೆ ಮತ್ತೆ ಚರ್ಚಿಸುತ್ತಿದ್ದ ನನಗೆ, ನನ್ನ ರಾಜಣ್ಣ ಮಾವನಿಗೆ ಮತ್ತು ನಮ್ಮಂತಹ ಸಾವಿರಾರು ಭಾವನಾಭಿಮಾನಿಗಳಿಗೆ ಹೀಗೆಯೇ ನೀರಿನಿಂದ ತೆಗೆದ ಮೀನಿನಂತೆ ಆಗಿತ್ತು. ಮತ್ತೆ ಮತ್ತೆ ಪುಸ್ತಕದಂಗಡಿಗಳಲ್ಲಿ ಕೇಳುತ್ತಿದ್ದೆವು ಭಾವನಾದ ಬಗ್ಗೆ. ಕೊನೆಗೊಮ್ಮೆ ನಿರಾಶೆ ಹೆಚ್ಚಿ ಹುಬ್ಬಳ್ಳಿಯಲ್ಲಿ ಭಾವನಾದ ಕಛೇರಿಗೆ ಫೋನ್ ಮಾಡಿ, ಕಾಯ್ಕಿಣಿಯವರಿಗಾಗಿ ವಿಚಾರಿಸಿದೆವು. ಅವರು ಈಗ ಅಲ್ಲಿರುವುದಿಲ್ಲ ಎಂದು ತಿಳಿದು ಬಂದ ಮೇಲೆ ಸುಮ್ಮನಾದೆವು. ಆಮೇಲೆ ಕೆಲಸಕ್ಕೆ ಸೇರಿದ ಮೇಲೆ ನಾನೊಮ್ಮೆ ಕಾಯ್ಕಿಣಿಯವರಿಗೆ ಮೈಲ್ ಮಾಡಿ, ಭಾವನಾ ನಿಂತದ್ದೇಕೆ, ಓದುಗರ ಕೊರತೆಯಿಂದಲೋ, ಮ್ಯಾನೇಜ್ ಮೆಂಟ್ ಪ್ರೋತ್ಸಾಹವಿಲ್ಲದೆಯೋ ಎಂದು ವಿಚಾರಿಸಿದೆ. ಕಾಯ್ಕಿಣಿಯವರು ಉತ್ತರಿಸಿ ಓದುಗರ ಕೊರತೆ ಭಾವನಾಕ್ಕೆ ಇರಲೇ ಇಲ್ಲ ಎಂದು ಸ್ಪಷ್ಟಪಡಿಸಿದರು.. ನನ್ನಲ್ಲಿ ಇದೆ ಆ ಮೈಲ್ ಬಹುಶ:..

ಭಾವನಾ ಅದ್ಭುತವಾಗಿತ್ತು. ಸುಮಂಗಲಾ ಬಾದರದಿನ್ನಿ, ರೇಖಾ ಕುಂದಾರು ಮುಂತಾದವರೆಲ್ಲ ಅದರಲ್ಲಿ ಚೆನ್ನಾದ ಕಥೆಗಳನ್ನು ಬರೆಯುತ್ತಿದ್ದರು. ನನ್ನಲ್ಲಿ ಭಾವನಾದ ಹೆಚ್ಚಿನ ಎಲ್ಲ ಪ್ರತಿಗಳೂ ಇವೆ. ಈಗಲೂ ಅದರ ಕೆಲವು ಕತೆಗಳನ್ನು ಓದುತ್ತಿರುತ್ತೇನೆ.. 

ವಸಂತ್ ಕಜೆ

  • ಭಾವನಾ ಹಂಗಾಮ ಜಯಂತ್
~.~
  • Vasanth Kaje ರವರ ಬ್ಲಾಗ್
  • Login or register to post comments
  • 438 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 14, 2007 - 10:17pm — jaiguruji

ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ

jaiguruji's picture

ಭಾವನಾ ನೆನಪಿಸಿದ್ದಕ್ಕೆ ಧನ್ಯವಾದಗಳು,

ನನ್ನ ಹತ್ತಿರ ಕೂಡ ಈಗಲೂ ಭಾವನಾದ ಎಲ್ಲ ಸಂಚಿಕೆಗಳು ಇವೆ. ಕೊನೆಯ ಸಂಚಿಕೆ ಮಾತ್ರ ನಾನು ಆ ಕ್ಷಣ ವಿದೇಶದಲ್ಲಿ ಇದ್ದದ್ದರಿಂದ ಸಿಗಲಿಲ್ಲ. ಇಷ್ಟಾಗಿಯೂ ನನ್ನ ಸಹೋದ್ಯೋಗಿಗೆ ಅದನ್ನ ಖರೀದಿಸಿಡಲು ಹೇಳಿದ್ದೆ, ಆದರೆ ಕೊನೆಗೂ ಅದೊಂದು ಸಿಗಲಿಲ್ಲ.

ಭಾವನಾದಲ್ಲಿ ಒಂದು ತರದ ಹೊಸತನವಿತ್ತು. ಅಲ್ಲಿ ಬಂದಂತಹ ಜಲವರ್ಣ ಚಿತ್ರಗಳು, ಮುಖಪುಟಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದವು. ಮುಖ್ಯವಾಗಿ ಲೇಖಕರ ಹಸ್ತಪ್ರತಿಯ ತುಣುಕೊಂದು ಪ್ರಿಂಟಾಗಿರುತ್ತಿತ್ತಲ್ಲ. ಅದು ನನಗೆ ತುಂಬಾ ಹಿಡಿಸಿತ್ತು ! ಈಗ ಮಯೂರ ಭಾವನಾದ ಕೆಲವು ಅಂಶಗಳನ್ನ ಅಳವಡಿಸಿಕೊಂಡಂತೆ ಭಾಸವಾಗುತ್ತದೆ..ನನಗಂತೂ ಹಾಗನಿಸಿದೆ.

ಈಗಲೂ ಕೂಡ ಆಗಾಗ ಏಪ್ರಿಲ್ ೨೦೦೧ ರ ಭಾವನಾ ಹುಟ್ಟು ಹಬ್ಬ-ಯುಗಾದಿ ವಿಶೇಷಾಂಕವನ್ನ ತಿರುವಿ ಹಾಕುವೆ. ಅಂಥ ಪತ್ರಿಕೆ ಇನ್ನೊಂದು ಬರಬಾರದೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 14, 2007 - 10:21pm — jaiguruji

ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ

jaiguruji's picture

ನನ್ನ ದುರಾದೃಷ್ಟ, ’ಹಂಗಾಮ’ ನನ್ನ ಕಣ್ಣಿಗೆ ಬೀಳಲೇ ಇಲ್ಲ! ಯಾವಾಗ ಬಂತು? ಯಾವಾಗ ನಿಂತು ಹೋಯಿತು? ಪಾಪ ನಮ್ಮ ಉತ್ತಮ ಲೇಖಕರಿಗೆ ಸರಿಯಾದ ಮಾರ್ಕೆಟಿಂಗ್ ತರಬೇತಿ ನೀಡಬೇಕು ! ಸರಿಯಾದ ಯೋಜನೆ ಇಲ್ಲದೆ ಒಳ್ಳೆಯ ಕೆಲಸಗಳನ್ನ ಅರ್ಧದಲ್ಲಿ ಬಿಟ್ಟು ನಿರಾಶೆ ಪಡಿಸುತ್ತಾರೆ.. Sad

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2007 - 2:21am — Vasanth Kaje

ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ

Vasanth Kaje's picture

ಜೈಗುರೂಜಿಯವರೆ,
ದೇಶ-ಕಾಲ ಅಂತೊಂದು ಪತ್ರಿಕೆ ಇದೆ. ಅದನ್ನು ಓದಲಾಗಿಲ್ಲ. ಸಾಧ್ಯವಾದರೆ ಚಂದಾದಾರರಾಗಿ. ಅದರ ಬಗ್ಗೆ ವಿವರ ನಿಮಗೆ ಶ್ರೀರಾಮ್ ಅವರ ಬ್ಲಾಗ್ ನಲ್ಲಿ ಸಿಗುತ್ತದೆ.
kannada-kathe.blogspot.com

ವಸಂತ್ ಕಜೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2007 - 2:36am — hpn

ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ

hpn's picture

deshakaala@gmail.com - ಗೆ ಮೇಯ್ಲ್ ಮಾಡಿ ಕೂಡ ಚಂದಾದಾರರಾಗಬಹುದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 15, 2007 - 2:39am — hpn

ಉ: ಭಾವನಾ, ಹಂಗಾಮ, ಜಯಂತ್ ಇತ್ಯಾದಿ

hpn's picture

ಹೇಳುವುದು ಸುಲಭ. ನಡೆಸಿಕೊಂಡು ಹೋಗುವುದು ಕಷ್ಟ. ಮಾರ್ಕೆಟಿಂಗ್ ಒಂದೇ ತೊಂದರೆಯಾಗಬೇಕಿಲ್ಲ.

ಸಂಪಾದನೆಯ ಕಾರ್ಯಗಳು ಹೆಚ್ಚಿಲ್ಲದ ಸಂಪದವನ್ನೇ ನಡೆಸಿಕೊಂಡು ಹೋಗುವಾಗ ನಿತ್ಯ ತೊಡಕುಗಳು, ತಾಪತ್ರಯಗಳು. ಇನ್ನು ಪತ್ರಿಕೆಯೊಂದನ್ನು ನಡೆಸೋದು ಎಷ್ಟು ಕಷ್ಟವಿರಬಹುದೋ ತಿಳಿಯದು.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸವರ್ಷದ ಚಿತ್ರಗಳು..
  • ರಿಮೋಟ್ ಅರಣ್ಯೀಕರಣ
  • ಮೀಸೆ ಹೂವುಗಳು
  • ನೆಲ ನೆಲ್ಲಿ
  • ಮುಗಿಲು ಮುಟ್ಟುವ ತವಕ
Syndicate content

ಲೇಖಕರು

Vasanth Kaje's picture

ಪೂರ್ಣ ಹೆಸರು
Vasanth Kaje

ಪರಿಚಯ

ವೃತ್ತಿಯಿಂದ ಕಂಪ್ಯೂಟರ್ ಪ್ರೋಗ್ರಾಮ್ಮರ್.
ಪ್ರವೃತ್ತಿಯಿಂದ ಛಾಯಾಚಿತ್ರಗ್ರಾಹಕ, ಪರಿಸರಾಸಕ್ತ.
ಕೃಷಿ ಹಿನ್ನೆಲೆಯಿಂದ ಬಂದವನು ಮತ್ತು ಕೃಷಿಯ ಬಗ್ಗೆ ಒಲವುಳ್ಳವನು.
http://www.kaje.in/ (ಸದ್ಯಕ್ಕೆ Mozilla ಬಳಸಿ!)

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-9
  • ಓ, ಬನ್ನಿ, ಸೋದರರೆ, ಬೇಗ ಬನ್ನಿ!
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ನಿನ್ನ ಕನಸಿನ ಸಿನೆಮಾದಲ್ಲಿ ಹಾರ ಹಾಕಿಸಿಕೊಂಡ ಫೋಟೋವಿನ ಪಾತ್ರ..!
  • ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
  • ಲಿನಕ್ಸಾಯಣ - ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?
  • ಜಗದೊಳಿರದಿರೆ ಹಸಿದ ಕೂಸು, ಜಗಕೆ ಹಬ್ಬವದಾವುದಿದಕಿಂತ ಲೇಸು?
  • ನಿನ್ನ ಮರೆಯಲು ಪ್ರಯತ್ನಿಸಿ ಸೋತಿದ್ದೀನಿ..:(
  • ಓದಿದ್ದು ಕೇಳಿದ್ದು ನೋಡಿದ್ದು-8
  • ಹೀಗೆ ಹೋಗಿ ಹಾಗೇ ಬಂದೆ: "ಯು ಆರ್ ಸೇಯಿಂಗ್ ಬರೀ ಸುಳ್ಳೇ": ಜೈ ಕರ್ನಾಟಕ ಮಾತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 9:40am
  • anil.ramesh
    ಉ: ಹೊಗಳುವದಿಲ್ಲ ನಾ ನಿನ್ನ, ಕೇಳು ಒಮ್ಮೆ ಈ ಸಲಹೆಯನ್ನ.
    September 5, 2008 - 9:37am
  • Sunil Jayaprakash
    ಉ: ಗಣಪನ ಗಂಡಾಂತರಗಳು ಅನೇಕ
    September 5, 2008 - 9:27am
  • Sunil Jayaprakash
    ಉ: ವಿಮಾನದಿಂದ ಕೆಳಗೆ ಕಾಣುವ ದೃಷ್ಯ !
    September 5, 2008 - 8:54am
  • Sunil Jayaprakash
    ಉ: ’ಕೊಲಂಬಿಯ ಪೋಸ್ಟ್ ಆಫೀಸ್’
    September 5, 2008 - 8:53am
  • savithasr
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 8:00am
  • savithasr
    ಉ: ವಿನಾಯಕನ ಇ-ಮೇಲ್!
    September 5, 2008 - 7:48am
  • skakkilaya
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 7:39am
  • hpn
    ಉ: ಬಾನಿಗೇರಲಾಗದ ಗಾಳಿಪಟ
    September 5, 2008 - 3:11am
  • nekkar_guru
    ಉ: "ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"
    September 5, 2008 - 2:34am
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 70 ಅತಿಥಿಗಳು ಆನ್ಲೈನ್ ಇರುವರು.


ನಿನ್ನ ದೊಡ್ಡ ನೆರಳನ್ನು ನೋಡಿ ಹೆದರುವ ಅಥವಾ ಭಯ ಪಡುವ ಕಾರಣವಿಲ್ಲ. ಅದು ನಿನ್ನ ಗುಲಾಮ. ನಿನ್ನ ಆಜ್ಞೆಯಂತೆ ನಡೆಯುತ್ತದೆ. ನೀನು ನಿಂತರೆ ಅದೂ ನಿಲ್ಲುವುದು, ನೀನು ಕುಳಿತರೆ ಅದೂ ಕುಳಿತುಕೊಳ್ಳುವುದು.

— --- ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator