ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಭಗವದ್ಗೀತೆಯಲ್ಲೇನಿದೆ !!!!

ಒಬ್ಬ ವಯಸ್ಸಾದ ರೈತ ಬೆಟ್ಟದ ತಪ್ಪಲಿನಲ್ಲಿ ಜಮೀನು ನೋಡಿಕೊಂಡು ತನ್ನ ಮೊಮ್ಮಗನ ಜೊತೆ ವಾಸವಾಗಿದ್ದನು. ದಿನ ಬೆಳಗ್ಗೆ ಮುದುಕ ಬೇಗ ಎದ್ದು ಅಡಿಗೆ ಕೋಣೆಯಲ್ಲಿ ಭಗವದ್ಗೀತೆ ಓದುತ್ತಿದ್ದನು. ಒಂದು ದಿನ ಮೊಮ್ಮಗ ಮುದುಕನನ್ನು ಕುರಿತು ಈ ರೀತಿ ಕೇಳಿದನು. "ಅಜ್ಜ ನಾನು ನಿನ್ನ ಹಾಗೆ ಭಗವದ್ಗೀತೆಯನ್ನು ಓದಲು ಪ್ರಯತ್ನಿಸುತ್ತೇನೆ ಆದರೆ ನನಗೆ ಅದು ಅರ್ಥ ಆಗುವುದಿಲ್ಲ, ಸ್ವಲ್ಪ ಅರ್ಥ ಆಗಿರುವುದು ಸಹ ಪುಸ್ತಕ ಮುಚ್ಚಿದೊಡನೆಯೆ ಮರೆತು ಹೋಗುವುದು. ಭಗವದ್ಗೀತೆಯನ್ನು ಓದುವುದರಿಂದ ಆಗುವ ಪ್ರಯೋಜನವಾದರು ಏನು?
ಮುದುಕ ಕೆಂಡವನ್ನು ಒಲೆಗೆ ಹಾಕುತ್ತಿದ್ದವನು ಹಿಂತಿರುಗಿ ಮೊಮ್ಮಗನಿಗೆ ಹೀಗೆ ಹೇಳಿದನು "ಈ ಇದ್ದಿಲನ್ನು ತೊಡುವ ಬೆತ್ತದ ಬುಟ್ಟಿಯತ್ತ ಕೈ ತೋರಿಸಿ ಮಗೂ ನದಿಗೆ ಹೋಗು, ಬರುವಾಗ ಬುಟ್ಟಿಯ ತುಂಬಾ ನೀರು ತುಂಬಿಸಿಕೊಂಡು ಬಾ, ನೀನು ಬಂದನಂತರ ಹೇಳುವೆ" ಎಂದನು.
ಹುಡುಗನು ಅಜ್ಜ ಹೇಳಿದ ಹಾಗೆ ಮಾಡಿದನು ಆದರೆ ಅವನು ಮನೆಗೆ ಬರುವುದರಲ್ಲಿ ನೀರು ಎಲ್ಲಾ ಬುಟ್ಟಿಯಿಂದ ಸೋರಿಹೋಗಿತ್ತು. ಮುದುಕನು ನಕ್ಕು "ನೀನು ಮುಂದಿನ ಸಲ ಇನ್ನೂ ವೇಗವಾಗಿ ಬರಬೇಕು" ಅಂತ ಹೇಳಿ ಮತ್ತೆ ಹುಡುಗನನ್ನು ನದಿಗೆ ಬುಟ್ಟಿಯೊಂದಿಗೆ ಕಳಿಸಿಕೊಟ್ಟನು. ಈ ಬಾರಿ ಹುಡುಗ ವೇಗವಾಗಿ ಮನೆಗೆ ಓಡಿ ಬಂದನು, ಅದರೆ ಪುನಃ ಬುಟ್ಟಿ ಕಾಲಿಯಾಗಿತ್ತು. ಏದುಸಿರು ಬಿಡುತ್ತ, ಅವನು ಅಜ್ಜನಿಗೆ ಬುಟ್ಟಿಯಲ್ಲಿ ನೀರು ತರಲು ಸಾಧ್ಯವೇ ಇಲ್ಲ ಅಂತ ಹೇಳಿ ಕೊಡ ತರಲು ಹೋದನು.
ಅಜ್ಜ "ನನಗೆ ಕೊಡದಲ್ಲಿ ನೀರು ಬೇಡ , ನನಗೆ ಬುಟ್ಟಿಯಲ್ಲಿಯೆ ನೀರು ಬೇಕು , ನೀನು ಸರಿಯಾಗಿ ಪ್ರಯತ್ನ ಪಡುತ್ತಾ ಇಲ್ಲ" ಎಂದು ಹೇಳಿ ಹುಡುಗ ಏನು ಮಾಡುತ್ತಾನೆ ಅಂತ ನೋಡಲು ಬಾಗಿಲಿನ ಬಳಿ ನಿಂತನು.
ಆ ಸಮಯಕ್ಕೆ ಹುಡುಗನಿಗೆ ಇದು ಸಾದ್ಯವೇ ಇಲ್ಲ ಎಂದು ತಿಳಿದರು ತನ್ನ ಅಜ್ಜನಿಗೆ ತೋರಿಸುವ ಸಲುವಾಗಿ ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಬುಟ್ಟಿಯಲ್ಲಿ ನೀರು ತುಂಬಿಸಿಕೊಂಡು ಓಡಿ ಬಂದನು, ಆದರೆ ಈ ಬಾರಿಯು ಮನೆಗೆ ಹಿಂತಿರುಗುವ ಮುನ್ನವೇ ನೀರೆಲ್ಲ ಬುಟ್ಟಿಯಿಂದ ಸೋರಿ ಹೋಗಿತ್ತು.
ಎದುಸಿರು ಬಿಡುತ್ತ "ತಾತಾ ಇನ್ನು ನನ್ನಿಂದ ಆಗುವುದಿಲ್ಲ, ನಾನು ನದಿಗೆ ಹೊಗುವುದಿಲ್ಲ" ಅಂತ ಹೇಳಿದನು.
ಮುದುಕ ಹೇಳಿದನು "ನೀನು ಈವರೆಗೆ ಮಾಡಿದ್ದು ಉಪಯೊಗವಿಲ್ಲದ್ದು ಎಂದು ಯೋಚಿಸುತ್ತಿದ್ದೀಯ, ಈ ಬುಟ್ಟಿಯನ್ನು ನೋಡು". ಹುಡುಗ ಬುಟ್ಟಿಯನ್ನು ನೋಡಿದನು, ಮೊದಲ ಬಾರಿಗೆ ಅವನಿಗೆ ಬುಟ್ಟಿಯಲ್ಲಾದ ಬದಲಾವಣೆಯು ಕಂಡಿತು. ಇದ್ದಿಲಿನಿಂದ ಕಪ್ಪಾಗಿದ್ದ ಬುಟ್ಟಿಯು ಈಗ ಒಳಗು ಹೊರಗು ಸ್ವಚ್ಚವಾಗಿರುವುದು ಕಂಡಿತು.
"ಮಗೂ ಭಗವದ್ಗೀತೆ ಓದುವುದರಿಂದ ಹೀಗೆಯೇ ಆಗುವುದು. ನಿನಗೆ ಎಲ್ಲವೂ ಅರ್ಥ ಆಗದೆ ಇರಬಹುದು ಅಥವ ಮರೆತು ಹೋಗಬಹುದು, ಆದರೆ ಓದುವುದರಿಂದ ನೀನು ಒಳಗು ಹೊರಗು ಬದಲಾವಣೆ ಹೊಂದುತ್ತೀಯ" ಎಂದು ಹೇಳಿದನು.

ಮೂಲ: ಇ-ಮೇಯ್ಲ್

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಭಗವದ್ಗೀತೆಯಲ್ಲೇನಿದೆ !!!!

hariharapurasridhar's picture

ಹಿರಿಯರು ಒಮ್ಮೊಮ್ಮೆ ಹೇಳುತ್ತಿದ್ದ ಮಾತುಗಳು ನಿಮ್ಮ ಕಥೆಯಿಂದ ಅರ್ಥವಾಗುತ್ತದೆ. ಹೊಳೇನರಸೀಪುರದಲ್ಲಿ ವೇ.ಬ್ರ.ಶ್ರೀ ಪಂಡಿತ ಲಕ್ಷ್ಮೀನಸಿಂಹಮೂರ್ತಿ ಎಂಬುವರು ಅಲ್ಲಿನ ಅಧ್ಯಾತ್ಮ ಪ್ರಕಾಶ ಕಾರ್ಯಾಲಯದಲ್ಲಿ ಅಧ್ಯಾತ್ಮ ಪ್ರಕಾಶ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಶ್ರೀಯುತರು ಹೋದೆಡೆಗಳಲ್ಲೆಲ್ಲಾ ಹೀಗೆ ಹೇಳುತ್ತಿದ್ದರು" ಅರ್ಥ ತಿಳಿಯಲಿಲ್ಲವೆಂದು ಸುಮ್ಮನಾಗಬೇಡಿ" ಗೀತೆ ಕಂಠಪಾಠ ಮಾಡಿ. ಮುಂದೆ ತಿಳಿಯುತ್ತೆ, ಎಂದು. ನಿಜವಾಗಿ ನನಗೀಗ ಅರ್ಥವಾಗುತ್ತಿದೆ. ನಾನು ನನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಒಂದು ವರ್ಷ ಹಾಸನದ ಆರ್.ಎಸ್.ಎಸ್. ಕಾರ್ಯಾಲಯದಲ್ಲಿ ವಾಸವಿದ್ದೆ. ಪ್ರತಿದಿನ ಪ್ರಾಥ: ಕಾಲದಲ್ಲಿ ತಪ್ಪದೆ ಭಗವದ್ಗೀತೆ, ಪ್ರಾಥ:ಸ್ಮರಣೆ ಹೇಳುತ್ತಿದ್ದೆವು. ಆಗ ಒಂದು ವರ್ಷದಲ್ಲಿ ಕಲಿತ ಭಗವದ್ಗೀತೆಯ ಮೂರು ಅಧ್ಯಾಯಗಳನ್ನು ಇಂದಿಗೂ ಮರೆತಿಲ್ಲ. ಆಗ ಕಲಿತ ಸಂಘದ ಪ್ರಾಥ: ಸ್ಮರಣೆಯಲ್ಲಿ ಹಲವು ಮಾರ್ಪಾಡುಗಳನ್ನು ಈಗ ಮಾಡಿದ್ದಾರೆ. ಆದರೆ ನನಗೆ ಬದಲಾವಣೆ ಅಳವಡಿಸಿಕೊಳ್ಳಲು ಸಾಧ್ಯವಾಗಿಯೇ ಇಲ್ಲ. ಹಳೆಯದನ್ನು ಮರೆತಿಲ್ಲ. ನಿಜವಾಗಿ ರಾಮಾಯಣ, ಮಹಾಭಾರಥ, ಭಗವದ್ಗೀತೆ ಗಳನ್ನು ಅರ್ಥವಾಗದಿದ್ದರೂ ಚಿಂತೆಯಿಲ್ಲ. ಮಕ್ಕಳಿಗೆ ಕಂಠಪಾಠ ಮಾಡಿಸಬೇಕು, ಮುಂದೆ ಅದು ಅವರಿಗೆ ಆಸ್ಥಿಯಾಗುವುದರಲ್ಲಿ ಸಂಶಯವಿಲ್ಲ. ನಮ್ಮಮ್ಮನೊಡನೆ ಚಿಕ್ಕ ವಯಸ್ಸಿನಲ್ಲಿ ಹಾಡಿನರೂಪದಲ್ಲಿ ಹೇಳುತ್ತಿದ್ದ ಶ್ರೀರಾಮಕಥೆ, ಶನಿಕಥೆ ಈಗಲೂ ನುಡಿ ಪ್ರಾರಂಭವಾದರೆ ಅರ್ಧಗಂಟೆ -ಒಂದು ಗಂಟೆ ನಿರಾಳವಾಗಿ ಹಾಡಬಲ್ಲೆ, ಮಧ್ಯೆ ಮಧ್ಯೆ ಮರೆತರೆ ನನ್ನ ಅಕ್ಕ ಒಂದು ಪದ ನೆನಪಿಸಿದರೆ ಮತ್ತೆ ಮುಂದುವರೆಯುತ್ತೆ. ನಾವು ಚಿಕ್ಕ ವಯಸ್ಸಿನಲ್ಲಿ ಕಾಪಿ ರೈಟಿಂಗ್ ಬರೆಯುವಾಗ " ಶುದ್ಧಬ್ರಹ್ಮ ಪರಾತ್ಪರ ರಾಮ" ಬರೆಯುತ್ತಿದ್ದೆವು. ಇಡೀ ರಾಮಾಯಣ ಕಂಠ ಪಾಠವಾಗಿತ್ತು. ಈ ಬಗ್ಗೆ ಆಸಕ್ತಿ ಉಳ್ಳವರು ಸಂಪದದಲ್ಲಿ ಬರೆಯುತ್ತಾ ಹೋಗುವುದಲ್ಲದೆ ನಮ್ಮ ಮನೆಗಳಲ್ಲಿ ಮಕ್ಕಳಿಗೆ ಕಂಠಪಾಠ ಮಾಡಿಸಿದರೆ ನಮಗೂ ನೆನಪುಳಿಯುತ್ತೆ. ನಾಲಿಗೆ ಶುದ್ಧವಾಗುತ್ತೆ. ಮನಸ್ಸು-ಬುದ್ಧಿ ವಿಕಾಸವಾಗುತ್ತೆ.
ಪ್ರತಿಕ್ರಿಯೆಯೇ ಒಂದು ಬರಹವಾಯ್ತೇನೋ ಬೇಸರಿಸದಿರಿ.

ಉ: ಭಗವದ್ಗೀತೆಯಲ್ಲೇನಿದೆ !!!!

vasu565's picture

ಶ್ರೀಧರ್ ಅವರೆ,

ನಿಮ್ಮ ಮಾತು ನಿಜ ... ನಿಮ್ಮ ಪ್ರತಿಕ್ರಿಯೆ ನೋಡಿ ಕುಶಿಯಾಯಿತು.
ಧನ್ಯವಾದಗಳು.

ಉ: ಭಗವದ್ಗೀತೆಯಲ್ಲೇನಿದೆ !!!!

nkumar's picture

ಕಥೆ ಚೆನ್ನಾಗಿದೆ.

ಉ: ಭಗವದ್ಗೀತೆಯಲ್ಲೇನಿದೆ !!!!

vasu565's picture

ಧನ್ಯವಾದಗಳು

ಉ: ಭಗವದ್ಗೀತೆಯಲ್ಲೇನಿದೆ !!!!

Seetharmorab's picture

ದೊಡ್ಡವರು ಹೇಳಿದ್ದು ತಕ್ಷಣಕ್ಕೆ ಉಪಯೋಗವಿಲ್ಲವೆಂದು ಅನಿಸಿದರೂ ಮುಂದೆ ಉಪಯೋಗವಾಗುತ್ತದೆ. ಅವರು ಬಹಳ ಶಿಸ್ತುಬದ್ದ ಜೀವನ ನಡೆಸುತ್ತಿದ್ದರು.ಬರಹ ಚನ್ನಾಗಿದೆ
ಸೀತ ಆರ್ ಮೊರಬ್.

ಉ: ಭಗವದ್ಗೀತೆಯಲ್ಲೇನಿದೆ !!!!

vasu565's picture

ಧನ್ಯವಾದಗಳು

ಉ: ಭಗವದ್ಗೀತೆಯಲ್ಲೇನಿದೆ !!!!

vasu565's picture

ಧನ್ಯವಾದಗಳು

ಉ: ಭಗವದ್ಗೀತೆಯಲ್ಲೇನಿದೆ !!!!

ಅರವಿಂದ್'s picture

ವಾಸು

ಇದು ವಿಜಯ ಕರ್ನಾಟಕದಲ್ಲಿ ಷಡಕ್ಷರಿಯವರು ಬರೆದ ಲೇಖನ ಯಥಾವತ್ತಾಗಿ ಇಳಿಸಿ, ನೆನಪಿಸಿದ್ದೀರಿ,
:)

ಅರವಿಂದ್

ಉ: ಭಗವದ್ಗೀತೆಯಲ್ಲೇನಿದೆ !!!!

vasu565's picture

ಹೌದಾ ನನಗಿದು ಮೈಲ್ ನಲ್ಲಿ ಸಿಕ್ಕಿತ್ತು ... ಕನ್ನಡಕ್ಕೆ ಹಾಕಿದೆ ...
ನೆನಪಿಸಿದ್ದಕ್ಕೆ ಧನ್ಯವಾದಗಳು :-)

ಉ: ಭಗವದ್ಗೀತೆಯಲ್ಲೇನಿದೆ !!!!

anivaasi's picture

ವಾಸು-
ಕತೆಯನ್ನು ಬೇರೆ ಕಡೆಯಿಂದ ತೆಕ್ಕೊಂಡಿದ್ದರೆ ಎಲ್ಲಿಂದ ಎಂದು ಹೇಳುವುದು ಸೂಕ್ತ.
ಅದು ಹೇಳದೆ, ತಮ್ಮದೇ ಎಂಬಂತೆ ಬರೆದರೆ - ಅದು ಕೃತಿಚೌರ್ಯ ಅಂತ ಆಗತ್ತೆ.

ಇನ್ನು, ಈ ಕತೆ ಓದಿ ಸಿಕ್ಕಾಪಟ್ಟೆ ನಗು ಬಂತು. ಇದರ ಬಗ್ಗೆ ಕೆಳಗಿನ ಕೊಂಡಿಯಲ್ಲಿ ಚೆನ್ನಾಗಿ ಬರೆದಿದ್ದಾರೆ.
http://cluelessness....

ಉ: ಭಗವದ್ಗೀತೆಯಲ್ಲೇನಿದೆ !!!!

vasu565's picture

ಅನಿವಾಸಿರವರೆ,
ಕಥೆಗೆ ಮೂಲವನ್ನು ಹಾಕಿದ್ದೇನೆ ...

ಉ: ಭಗವದ್ಗೀತೆಯಲ್ಲೇನಿದೆ !!!!

muralihr's picture

ಈ ಕೆಟ್ಟ ಕತೆಗೂ ಗೀತೆಗೂ ಸ೦ಬ೦ಧ ಅಷ್ಟಾಗಿ ಕೂಡೋದಿಲ್ಲಾ .

ಉ: ಭಗವದ್ಗೀತೆಯಲ್ಲೇನಿದೆ !!!!

vasu565's picture

ಅನಿವಾಸಿರವರೆ,
ಕಥೆಗೆ ಮೂಲವನ್ನು ಹಾಕಿದ್ದೇನೆ ...