ಮನದ ನಿನಾದ
ಮನದ ವೀಣೆ ಮೀಟಿದಾಗ ಕೇಳಿಸೋದು...
ನೀನಿಲ್ಲದೆ...
ನನ್ನ ಬಾಳಲಿ ಎಂದು;
ಏನೋ ಕಳೆದುಕೊಂಡವ
ನಾ ಆಗಿರುವೆ ಇಂದು;
ತಳಮಳ... ನೀ ದೂರ
ಅಂತ ತಿಳಿದ ಕ್ಷಣದಿಂದ;
ಉಲ್ಲಾಸವಾಗಿದೆ ಮಾಯ
ನನ್ನಿಂದ;
ಎದೆಯಲಿ ಬರಿ
ಬೇಸರದ ಉಸಿರಿದೆ;
ಕಣ್ಣಲಿ ಬರಿ ನಿನ್ನ
ಬಿಂಬವೇ ತುಂಬಿದೆ;
ಮನದಲ್ಲಿ ನಿನ್ನ ನೆನಪ
ಮಳೆಯಿದೆ;
ಮತ್ತೆ ಮತ್ತೆ ಕಣ್ಣೀರಾಗಿ
ಹೊರ ಬರುತಲಿದೆ;
ಎಲ್ಲಿ ನೋಡಿದರೂ
ನಿನ್ನ ಮೊಗವ ಕಾಣುತ,
ಇಹವ
ನಾ ಮರೆಯುತಿರುವೆ;
ಮರಳಲಿ
ಎಂದು ಅರಿಯಲು ತಡವಾಯಿತಲ್ಲ;
ಹೃದಯವೀಗ
ಕಲ್ಲಾಗವೊಲ್ಲದಲ್ಲ?
ಸಾಗರ ಸೇರಿದ ನದಿಯು
ಎಂದಾದರೂ ಬೇರೆಯಾದುದುಂಟೆ?
ಅರಳಿನಿಂತ ಹೂವು
ಮರಳಿ ಮೊಗ್ಗಾಗಿದ್ದುಂಟೆ?
ಬೀಜವಾಗಿದ್ದುಂಟೆ?
ಅಳಿಸಲಾದೀತೆ?
ಪ್ರೇಮಕ್ಕೆ ಮಿಡಿದ ಹೃದಯ
ಮಡಿಯದೆ ಮರೆಯದೆ ಮೂಡಿದೊಲವ;
ಕಣ್ಣರೆಪ್ಪೆಯಲಿ ನೀ ಬಂಧಿಯಾದೆ;
ನೋಡುವ ಮುಂಚೆ
ಹೀಗೇಕೆ ಮಂಜಾಯಿತೆ...?
ಕಣ್ಣು ಹೀಗೇಕೆ ಮಂಜಾಯಿತೆ...?
ಕರೆದು,
ವಿಧಿ ನನ್ನೇಕೆ ಹೀಗೆ ಜಾರಿಸಿತೆ?
ವಿಧಿ ನನ್ನೇ-ಏಕೆ ಹೀಗೆ ಜಾರಿಸಿತೆ?

- vbamaranath ರವರ ಬ್ಲಾಗ್
- Login or register to post comments
- 437 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನೀನಿಲ್ಲದೆ...
ಚನ್ನಾಗಿದೆ!
"ಸಾಗರ ಸೇರಿದ ನದಿಯು
ಎಂದಾದರೂ ಬೇರೆಯಾದುದುಂಟೆ?
ಅರಳಿನಿಂತ ಹೂವು
ಮರಳಿ ಮೊಗ್ಗಾಗಿದ್ದುಂಟೆ?"
ಸಾಗರ ಸೇರಿದ ಮೇಲೇ ಸಿಹಿನೀರ ನದಿ ಉಪ್ಪಾಗುವುದು.
ಅರಳಿ ನಿಂತ ಹೂವೇ ಬಾಡಿ ಬೀಳುವುದು!
ಉ: ನೀನಿಲ್ಲದೆ...
ಧನ್ಯವಾದಗಳು ಮಹೇಶ್ ರವರೆ ಪ್ರತಿಕ್ರಿಯೆಗೆ...
ಅಮರ್