ಮನದ ನಿನಾದ
ಮನದ ವೀಣೆ ಮೀಟಿದಾಗ ಕೇಳಿಸೋದು...
ನೆನಪು...
ನೆನಪ ಮಳೆಯಲಿ
ಮಿಂದಿದ್ದೆ ನಾನೂ ಅಂದು;
ಹಾಗೆ ಮುಂದೆ ಸಾಗುತಲಿ
ನೆನಪ ನೆನೆಗುದಿಗೆ ಬಿದ್ದಾಗ
ಅರಿವಾಯ್ತು,
ನಾನು ನೆನೆದದ್ದು
ಗಗನದಿಂದಿಳಿದ ಮಳೆಯಿಂದಲ್ಲ;
ಅಲ್ಲೆ ಮರದಲ್ಲೆ ಅವಿತಿದ್ದ
ಹನಿಗಳಿಂದ!
ನೆನಪೊಂದು ನೆಪ
ನೆನೆಯಲು,
ನೆನಪೊಂದು ನೆಪ
ಸಮಯ ಕಳೆಯಲು!---ಅಮರ್

- vbamaranath ರವರ ಬ್ಲಾಗ್
- Login or register to post comments
- 321 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: