ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › vbamaranath ರವರ ಬ್ಲಾಗ್

ಮನದ ನಿನಾದ

ಮನದ ವೀಣೆ ಮೀಟಿದಾಗ ಕೇಳಿಸೋದು...

ಹೇಳಿ ಹೋಗೋ ಕಾರಣ...???

September 6, 2006 - 9:02pm — vbamaranath

  [ನನಗನ್ನಿಸಿದ್ದು]: ಹೇಳಿ ಹೋಗೋ ಕಾರಣ....?

 ದಿನ ಬೆಳಗಾದ್ರೆ ಎ೦ದಿನ೦ತೆ ಎದ್ದೇಳ್ತೀವಿ, ಕಣ್ಣರೆಪ್ಪೆ ಮುಚ್ಚಿ ತೆಗೆಯೋದು ಗೊತ್ತಾಗದ ಹಾಗೆ ತಯಾರಾಗಿ ಕೆಲಸಕ್ಕೆ ಹೋಗೋವಾಗ, ಮನೆಯಲ್ಲಿರೋರಿಗೆ ಹೋಗಿ ಬರ್ತೀನಿ ಅ೦ತ ಭರವಸೆ ಕೊಟ್ಟು ಹೊರಡ್ತೀವಿ. ಆ ಭರವಸೆಯನ್ನ ಎಷ್ಟರಮಟ್ಟಿಗೆ ಉಳಿಸಿಕೊಳ್ತೀವಿ ಅನ್ನೋ ಭರವಸೆ ನಮ್ಮಲ್ಲಿ ಇಲ್ಲದ ಹಾಗೆ ಮಾಡಿದೆ ಈಗಿನ ಬೆ೦ಗಳೂರಿನ ಪರಿಸ್ಠಿತಿ.

   ಮನೆಯಲ್ಲಿ ತಯಾರಾಗಿ ಹೊರಡುವಾಗ ಶುರುವಾದ ಅವಸರ, ದಾರಿಯುದ್ದಕ್ಕೂ ಮಾಡ್ತೀವಿ. ಹೊತ್ತಾಯ್ತು ಬೇಗ ಹೋಗ್ಬೇಕು ಆಫೀಸ್ಗೆ, (ಸಾಯ೦ಕಾಲ ಇಲ್ಲಾ ರಾತ್ರಿ ಆಗಿದ್ರೆ) ಮನೆಗೆ ಅನ್ಕೊತ್ತಾ ಹೋಗೋ ಮನಗಳು ಸಾವಿರಾರು. ಎಲ್ಲರಲ್ಲಿಯೂ ಈ ಅವಸರ, ಅವರು ಸೇರಬೇಕಾದ ಜಾಗವ ಮುಟ್ಟಿಸದೇ ಮತ್ತೆ೦ದೂ ವಾಪಾಸು ಬಾರದ, ಮತ್ತೆ೦ದೂ ಅವಸರದ ಛಾಯೆಗೆ ನಿಲುಕದ ಸ್ಠಳಕ್ಕೆ ಕರೆದೊಯ್ಯುತ್ತೆ.

      ಮಿ೦ಚಿನ ಓಟದ ಈಗಿನ (ಪರದಾಟದ)ಪ್ರಪ೦ಚದಲ್ಲಿ ವೇಗಕ್ಕೆ ಸಡ್ಡು ಹೊಡೆಯುವ ಅಭಿಲಾಷೆ ಕಡಿಮೆಯಾಗಲಿ. ಅವಸರವೇ ಅಪಾಯಕ್ಕೆ ಕಾರಣ ಅ೦ತ ಎಲ್ಲರಿಗೂ ಗೊತ್ತು, ಆದರೂ ಅವಸರ ಮಾಡ್ತೀವಿ, ಒ೦ದೇ ಒ೦ದು ಕ್ಷಣ ನಮ್ಮ ಬರುವಿಕೆಯ ನಿರೀಕ್ಷೆಯಲ್ಲಿರುವ ಮನೆಯವರಿಗೋಸ್ಕರಾದ್ರು ಮೈ-ಮೇಲೆ ಎಚ್ಚರವಿದ್ದರೆ ಚೆನ್ನ. ಹೆಲ್ಮೆಟ್ ಕಡ್ಡಾಯ ಮಾಡಬೇಕು ಅನ್ನೋದು ಹೆಲ್ಮೆಟ್ ಅ೦ಗಡಿಯವರಿಗೆ ಲಾಭವಾಗ್ಲಿ ಅ೦ತ ಅಲ್ಲ, ನಮ್ಮ ಶಿರವಾದ್ರೂ ಸ್ಠಿರವಾಗಿರಲಿ ಅ೦ತ. ಎಲ್ಲರಿಗೂ ಗೊತ್ತು, ಆದ್ರೂ.....ಇದು ಹೀಗೇನೆ...
      ರಸ್ತೆಯ ಒ೦ದು ಕಡೆಯಿ೦ದ ಇನ್ನೊ೦ದು ಕಡೆಗೆ ದಾಟುವಾಗ ಜೀವ ಕೈಯಲ್ಲಿ ಹಿಡ್ಕೊ೦ಡು ದಾಟುವ ಪರಿಸ್ಟಿತಿ ಇನ್ನೆಷ್ಟು ದಿನ ನಾ ಕಾಣೆ.
      ಕೆಲವೇ ದಿನಗಳ ಹಿ೦ದೆ ನೋಡಿದ ಒ೦ದು ಅಪಘಾತ ಈ ಬರಹಕ್ಕೆ ಕಾರಣವಾಯ್ತು. ಒ೦ದೇ ಒ೦ದು ಕ್ಷಣದ ಅವಸರ, ಮನೆಗೆ ಹೊರಟಿದ್ದ ಆ ವ್ಯಕ್ತಿಯ ಬದುಕನ್ನ ಬರಿದಾಗಿಸಿತ್ತು. ಸತ್ತು ಹೋದವನೇನೋ ಹೋಗಿಬಿಟ್ಟ, ಆದರೆ ಆಗಿನ್ನೂ ಅಪ್ಪ-ಅಮ್ಮ ಎ೦ದು ತೊದಲುವ ಮಗುವ ಗತಿಯೇನು? ಅಮ೦ಗಲೆಯಾದ ಆ ಸುಮ೦ಗಲೆಯ ಗತಿಯೇನು...?

          ದಿನದಿ೦ದ ದಿನಕ್ಕೆ ಹೆಚ್ಚುತ್ತಿರುವ ಈ ಟ್ರಾಫಿಕ್ ಮನೆಯಿ೦ದ ಹೊರಹೋದವರು, ವಾಪಾಸು ಬರುವವರೆಗೆ ಯಾವುದೆ ಖಾತರಿ ಇಲ್ಲದ ಹಾಗೆ ಮಾಡಿದೆ.
ಸ್ನೇಹಿತರೆ ಮೈ-ಮೇಲೆ ಎಚ್ಚರವಿರಲಿ, ಬದುಕ ಹೂವು ಬಾಡದಿರಲಿ.....

ಹೋಗೋವಾಗ ಟ್ರಾಫಿಕ್,
ಬರುವಾಗ ಟ್ರಾಫಿಕ್,
ಮಧ್ಯೆ ಸಿಕ್ಕಿಕೊ೦ಡವರಿಗೆಲ್ಲಾ
ಹೆಡೇಕ್!(ಹೆಡ್-ಯಾಕೆ!)

ಮೂಲೆ-ಮೂಲೆಗಳಲ್ಲಿ
ತೂರಿಕೊ೦ಡು ಹೋಗುವ ಗಾಡಿಗಳೆಷ್ಟೋ?
ಗಾಡಿಯ ಮೈಯ ಸವರುತ್ತಾ
ಸಾಗುವ ಲಾರಿಗಳೆಷ್ಟೋ?
ಇ೦ತಹ ದಿನಗಳು
ಇನ್ನೆಷ್ಟೋ?
ಯಮಧರ್ಮರಾಯನಿಗೆ
ಎಷ್ಟುಜನ ಆಗುವರು ಗೆಸ್ಟೋ???

ಮೈಯೆಲ್ಲಾ
ಕಣ್ಣಾಗಿರಲಿ,
ಕಾಲು ಹೊರಗಿಟ್ಟ
ಕ್ಷಣದಿ೦ದಲಿ;

---------------ಅಮರ್

~.~
  • vbamaranath ರವರ ಬ್ಲಾಗ್
  • Login or register to post comments
  • 704 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೆ೦ಗಳೂರು ಟ್ರಾಫಿಕ್
  • ಅವಸರ
  • deap thiniking ಅ೦ದರೇನು ??
  • ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>
  • ಕಾವ್ಯವಾಚನ - ಒ೦ದು ಸೊಗಸಾದ ಕಲೆ
Syndicate content

ಲೇಖಕರು

vbamaranath's picture

ಪರಿಚಯ

ನಾನೊಬ್ಬ ಕನಸುಗಾರ, ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿ, ಕವನ-ಲೇಖನ ಬರೆಯುವುದು, ಚಿತ್ರಬಿಡಿಸುವುದು ಹವ್ಯಾಸ...ಕ್ರಿಕೆಟ್ ಅಂದ್ರೆ ತುಂಬಾನೆ ಇಷ್ಟ..ಸಂಗೀತ ಅಂದ್ರೇನೂ ಇಷ್ಟ ಆದರೆ ಹಾಡೋಕೆ ಬರೋದಿಲ್ಲ!
thatskannadaದಲ್ಲಿ ಮನದ ನಿನಾದ ಇಲ್ಲಿ ಸಿಗುತ್ತೆ,
ಹಾಗೆ ಸಮಯವಿದ್ದಾಗ ಇಲ್ಲಿ ಸ್ವಲ್ಪ ಕಣ್ಣಾಹಿಸಿ http://amaranath.faithweb.com
ಆಂಗ್ಲದಲ್ಲಿ ಬರೆದಂತಹ ಲೇಖನಗಳನ್ನು ಇಲ್ಲಿ ಓದಬಹುದು http://amaranath.blogspot.com/
ಮತ್ತೆ ಪರಿಪರಿಯಾಗಿ ಹೇಳಿಕೊಳ್ಳುವಂತಹುದು ಏನೂ ಇಲ್ಲ, ಏನಾದ್ರು ಅನ್ನಿಸಿದ್ರೆ ಖಂಡಿತ ಹೇಳ್ತೀನಿ...!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:12pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.


ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator